Dharwad: ಪರ್ಸ್ ಮಾರಾಟ ನೆಪದಲ್ಲಿ ಡ್ರಗ್ಸ್ ಸಾಗಾಟ; ನೈಜೀರಿಯಾ ಪ್ರಜೆ ಬಂಧನ
ದೇಶದ ವಿವಿಧೆಡೆ ಕೊಕೇನ್ ಮಾರಾಟ ಜಾಲ ಹೊಂದಿದ್ದ ವ್ಯಕ್ತಿ, ರೈಲ್ವೆ ನಿಲ್ದಾಣ ಬಳಿಯಲ್ಲೇ ಬಾಡಿಗೆ ಮನೆಯಲ್ಲಿ ವಾಸ
Team Udayavani, Sep 14, 2024, 10:53 PM IST
ಧಾರವಾಡ: ಮಾದಕ ವಸ್ತು ಮಾರಾಟ ಜಾಲದ ಕೊಂಡಿಯಾಗಿ ಕೆಲಸ ಮಾಡುತ್ತಿದ್ದ ನೈಜೀರಿಯಾ ಪ್ರಜೆಯೊಬ್ಬನನ್ನು ಧಾರವಾಡದ ಮಾಳಮಡ್ಡಿಯಲ್ಲಿ ಕೇಂದ್ರ ಗೃಹ ಇಲಾಖೆ ಅಧೀನದ ನಾರ್ಕೋಟಿಕ್ ಕಂಟ್ರೊಲ್ ಬೆಂಗಳೂರು ಬ್ಯುರೋದ ಅಧಿಕಾರಿಗಳು ಬಂಧಿಸಿದ್ದಾರೆ.
ಧಾರವಾಡ ಮಾಳಮಡ್ಡಿ 3ನೇ ಕ್ರಾಸ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನೈಜೀರಿಯಾ ಪ್ರಜೆ, ಬಾಡಿಗೆ ಮನೆಯಲ್ಲಿದ್ಧೇ ಕೊಕೇನ್ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ದೇಶದ ವಿವಿಧೆಡೆ ಕೊಕೇನ್ ಮಾರಾಟ ಜಾಲ ಹೊಂದಿದ್ದ ವ್ಯಕ್ತಿ ರೈಲ್ವೆ ನಿಲ್ದಾಣ ಬಳಿಯಲ್ಲಿಯೇ ಬಾಡಿಗೆ ಮನೆ ಮಾಡಿದ್ದ. ಅಧಿಕಾರಿಗಳಿಗೆ ಈತನ ಮನೆಯಲ್ಲಿ ಅಪಾರ ಪ್ರಮಾಣದ ಲೇಡಿಸ್ ವ್ಯಾನಿಟಿ ಬ್ಯಾಗ್, ಪರ್ಸ್ ಗಳು ಪತ್ತೆಯಾಗಿವೆ.
ಪರ್ಸ್ ಮಾರಾಟದ ನೆಪದಲ್ಲಿ ಕೊಕೇನ್ ಸಾಗಿಸುತ್ತಿದ್ದ ಶಂಕೆ ತೂಕದ ಯಂತ್ರ, ಪ್ಯಾಕಿಂಗ್ ಯಂತ್ರಗಳೂ ಪತ್ತೆಯಾಗಿವೆ. ಬಾಡಿಗೆ ಮನೆಯಲ್ಲಿಯೇ ಕೊಕೇನ್ ಪ್ಯಾಕ್ ಮಾಡಿ, ಪರ್ಸ್ ಗಳಲ್ಲಿ ಹಾಕಿ ಸಾಗಿಸುತ್ತಿದ್ದ ಶಂಕೆ ಇದ್ದು, ಕಳೆದ ಐದಾರು ವರ್ಷಗಳಿಂದ ಧಾರವಾಡದಲ್ಲಿ ವಾಸವಾಗಿದ್ದರೂ ಕೊಕೇನ್ ಸಾಗಾಟ ಗೋಪ್ಯವಾಗಿ ನಡೆಸುತ್ತಿದ್ದ ಎನ್ನಲಾಗಿದೆ.
ಮಾರ್ಟಿನ್, ಮ್ಯಾಥೂ, ಟೀಮ್ ಎಂದು ವಿವಿಧ ಹೆಸರುಗಳಲ್ಲಿ ಗುರುತಿಸಿಕೊಂಡಿದ್ದ ವ್ಯಕ್ತಿ, ಉನ್ನತ ವ್ಯಾಸಂಗಕ್ಕಾಗಿ ಬಂದಿರೋದಾಗಿ ಹೇಳಿ ಬಾಡಿಗೆ ಮನೆ ಪಡೆದಿದ್ದ. ಬೇರೆ ಬೇರೆ ರಾಜ್ಯಗಳಲ್ಲಿ ಕೊಕೇನ್ ಮಾರಾಟ ಜಾಲದ ತನಿಖೆ ನಡೆಸುವಾಗ ನೈಜೀರಿಯಾ ಪ್ರಜೆಯ ಪಾತ್ರ ಪತ್ತೆಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
Waqf issue: ಕಾಂಗ್ರೆಸ್ ಸರ್ಕಾರದಿಂದ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ: ಸಚಿವ ಸಂತೋಷ ಲಾಡ್
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
ಕುರಿ ಕಾಯುತ್ತಲೇ ಹಾಡು ಕಲಿತ ಇಮಾಮಸಾಬಗೆ ರಾಜ್ಯೋತ್ಸವ ಪ್ರಶಸ್ತಿ ಗರಿ; ಡೊಳ್ಳಿನ ಭಾವೈಕ್ಯತೆ
ಹುಬ್ಬಳ್ಳಿ ಟೆಕ್ಕಿ 24 ತಾಸು ಡಿಜಿಟಲ್ ಅರೆಸ್ಟ್! ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.