ದಿನೇಶ್ ಕಾರ್ತಿಕ್ ಕಮೆಂಟೇಟರ್! ಐಸಿಸಿ ವಿಶ್ವಕಪ್ ಟೆಸ್ಟ್ ಫೈನಲ್ ವೇಳೆ ವೀಕ್ಷಕ ವಿವರಣೆ
Team Udayavani, May 24, 2021, 11:34 PM IST
ಹೊಸದಿಲ್ಲಿ: ಇನ್ನೂ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿರುವಾಗಲೇ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕಮೆಂಟ್ರಿ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಮುಂಬರುವ ಭಾರತ-ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ವಿಶ್ವಕಪ್ ಟೆಸ್ಟ್ ಫೈನಲ್ ವೇಳೆ ಕಾರ್ತಿಕ್ ವೀಕ್ಷಕ ವಿವರಣೆ ನೀಡಲಿದ್ದಾರೆ.
ಈ ಪಂದ್ಯದ ಕಮೆಂಟ್ರಿ ತಂಡವನ್ನು ಪ್ರಕಟಿಸಲಾಗಿದ್ದು, ಲೆಜೆಂಡ್ರಿ ಬ್ಯಾಟ್ಸ್‌ಮನ್ ಸುನೀಲ್ ಗಾವಸ್ಕರ್ ಭಾರತದ ಮತ್ತೋರ್ವ ವೀಕ್ಷಕ ವಿವರಣಕಾರರಾಗಿದ್ದಾರೆ. ನ್ಯೂಜಿಲ್ಯಾಂಡ್ ಕಡೆಯಿಂದ ಸೈಮನ್ ಡೂಲ್ ಇದ್ದಾರೆ. ತಟಸ್ಥ ಕಮೆಂಟೇಟರ್‌ಗಳಾಗಿ
ಇಂಗ್ಲೆಂಡಿನ ಮೈಕ್ ಆಥರ್ಟನ್ ಮತ್ತು ನಾಸಿರ್ ಹುಸೇನ್ ಕರ್ತವ್ಯ ನಿಭಾಯಿಸಲಿದ್ದಾರೆ.
ಇಂಗ್ಲೆಂಡಿಗೆ ಬಂದ ಬಳಿಕ 10 ದಿನಗಳ ಕಠಿನ ಕ್ವಾರಂಟೈನ್‌ಗೆ ಒಳಗಾಗಬೇಕಿದ್ದರಿಂದ ಅನೇಕ ವೃತ್ತಿಪರ ವೀಕ್ಷಕ ವಿವರಣಕಾರರು ಈ ಪಂದ್ಯದಿಂದ ದೂರ ಸರಿಯಲು ನಿರ್ಧರಿಸಿದರು ಎಂದು ತಿಳಿದು ಬಂದಿದೆ. ಹೀಗಾಗಿ ದಿನೇಶ್ ಕಾರ್ತಿಕ್ ಅವರಿಗೆ ಅವಕಾಶ ಒಲಿದು ಬಂತು.
35 ವರ್ಷದ ದಿನೇಶ್ ಕಾರ್ತಿಕ್ ಅನಂತರದ “ದಿ ಹಂಡ್ರೆಡ್’ ಕ್ರಿಕೆಟ್ ಸರಣಿಯಲ್ಲೂ ಕಮೆಂಟ್ರಿ ನೀಡಲಿದ್ದಾರೆ. ಹೀಗಾಗಿ ಅವರು ಮುಂಬರುವ ಶ್ರೀಲಂಕಾ ಪ್ರವಾಸದ ವೇಳೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ದೂರಗೊಂಡಂತಾಯಿತು.
ದಿನೇಶ್ ಕಾರ್ತಿಕ್ 2018ರ ಇಂಗ್ಲೆಂಡ್ ಪ್ರವಾಸದ ವೇಳೆ ಲಾರ್ಡ್ಸ್‌ನಲ್ಲಿ ಕೊನೆಯ ಟೆಸ್ಟ್ ಆಡಿದ್ದರು. ಅನಂತರ ಇವರ ಸ್ಥಾನಕ್ಕೆ ರಿಷಭ್ ಪಂತ್ ಲಗ್ಗೆ ಇರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.