ಕಣ್ಮರೆಯಾಗುತ್ತಿದೆ ಶನಿ ಗ್ರಹದ “ಉಂಗುರ”!- ಇನ್ನೆಷ್ಟು ವರ್ಷ ಉಳಿಯಲಿದೆ ಎಂಬ ಸಂಶೋಧನೆ
Team Udayavani, May 4, 2023, 7:47 AM IST
ವಾಷಿಂಗ್ಟನ್: ಭೂಮಿಯಿಂದ ಸುಮಾರು 1.5 ಶತಕೋಟಿ ಕಿಲೋಮೀಟರ್ ದೂರದಲ್ಲಿ ಸುಂದರವಾದ “ಉಂಗುರ”ದ ಜಗತ್ತೂಂದಿದೆ. ಅದು ನಮ್ಮ ಖಗೋಳ ವಿಜ್ಞಾನಿಗಳನ್ನು ಸಮ್ಮೊಹನಗೊಳಿಸಿರುವ ಅದಮ್ಯವಾದ ಲೋಕ! ಈ ಶನಿ ಗ್ರಹವು ಕೇವಲ ತನ್ನ ಬೃಹತ್ ಆಕಾರದಿಂದಷ್ಟೇ ಅಲ್ಲ, ಹಲವು ವೈಶಿಷ್ಟ್ಯಗಳಿಂದಲೂ ಹೆಸರು ಗಳಿಸಿದೆ. ವಿಶಿಷ್ಟವಾದ ಉಂಗುರಗಳಿಂದಲೇ ಹೆಸರಾಗಿರುವ ಶನಿ ಗ್ರಹದಲ್ಲಿ ಉಂಗುರಗಳೇ ಕಣ್ಮರೆಯಾದರೆ?!
ಹೌದು, ಶನಿ ಗ್ರಹದ ಉಂಗುರಗಳು ಅಪಾಯದಲ್ಲಿದ್ದು, ಅವುಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಬೃಹದಾಕಾರದ ಮಂಜುಗಡ್ಡೆಯಿಂದ ರೂಪುಗೊಂಡಿರುವ ಶನಿ ಗ್ರಹದ ಉಂಗುರಗಳು ಕ್ರಮೇಣವಾಗಿ ಸವೆಯುತ್ತಿದ್ದು, ಅವು ಎಷ್ಟು ಕಾಲ ಉಳಿಯಲಿವೆ ಎಂದು ಹೇಳಲಾಗದು ಎಂದಿದ್ದಾರೆ ಸಂಶೋಧಕರು.
ಗ್ರಹವನ್ನು ಸುತ್ತುತ್ತಿರುವ ಮಂಜುಗಡ್ಡೆಯ ಬ್ಲಾಕ್‌ಗಳು ಪರಸ್ಪರ ಡಿಕ್ಕಿಯಾಗುತ್ತಾ, ನಿಗೂಢ ರಿಂಗ್‌ಗಳು ತೆಳ್ಳಗಾಗಲು ಕಾರಣವಾಗುತ್ತಿವೆ. ಅವುಗಳು ಎಷ್ಟು ವೇಗವಾಗಿ ಸವೆದು ಹೋಗುತ್ತಿವೆ ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಈ ಬೆಳವಣಿಗೆಯು ನಮ್ಮೆಲ್ಲರನ್ನೂ ಅಚ್ಚರಿಗೆ ನೂಕಿದೆ ಎಂದು ಶನಿಗ್ರಹದ ಕಣ್ಮರೆಯಾಗುತ್ತಿರುವ ಉಂಗುರಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಸಂಶೋಧಕರ ತಂಡದ ಮುಖ್ಯಸ್ಥ ಡಾ.ಜೇಮ್ಸ್ ಓ ಡೊನೊಗ್ ಹೇಳಿದ್ದಾರೆ.
ಶನಿ ಗ್ರಹವು ಭೂಮಿಗಿಂತ 9 ಪಟ್ಟು ದೊಡ್ಡ ಗೃಹ. ಉಂಗುರಗಳು ಆರಂಭದಿಂದಲೂ ಶನಿ ಗ್ರಹದೊಂದಿಗೇ ಇವೆ ಎಂದೇ ಅನೇಕರು ನಂಬಿದ್ದಾರೆ. ಆದರೆ, ಕೇವಲ 100 ದಶಲಕ್ಷ ವರ್ಷಗಳಷ್ಟು ಹಿಂದೆಯಷ್ಟೇ ಶನಿ ಗ್ರಹದ ಉಂಗುರಗಳು ರೂಪುಗೊಂಡಿವೆ ಎನ್ನುತ್ತಾರೆ ಡಾ.ಜೇಮ್ಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.