ನಾರಾಯಣ ಹೃದಯಾಲಯದ ವೈಟ್‌ಫೀಲ್ಡ್‌ನ ಘಟಕದ ಕಾರ್ಯ ಸ್ಥಗಿತ
Team Udayavani, Nov 9, 2019, 7:41 PM IST
ಹೃದಯ ಶಸ್ತ್ರ ಚಿಕಿತ್ಸೆಗೆ ಹೆಸರುವಾಸಿಯಾಗಿದ್ದ ನಾರಾಯಣ ಹೃದಯಾಲಯಕ್ಕೆ ಸಂಕಷ್ಟಕ್ಕೆ ಎದುರಾಗಿದ್ದು, ಬೆಂಗಳೂರಿನ ವೈಟ್‌ಫಿಲ್ಡ್‌ನಲ್ಲಿರುವ ಘಟಕವನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.
2013 ರಲ್ಲಿ ನಗರದ ವೈಟ್‌ಫೀಲ್ಡ್‌ನಲ್ಲಿ ನಾರಾಯಣ ಹೃದಯಾಲದ ಘಟಕವೊಂದನ್ನು ಸ್ಥಾಪನೆ ಮಾಡಿ ಉತ್ತಮ ದರ್ಜೆಗೆ ಏರಿಸಲಾಗಿತು. ಸುಮಾರು 9ಕ್ಕೂ ಹೆಚ್ಚು ಕಾರ್ಯಾಚರಣಾ ಹಾಸಿಗೆಗಳೊಂದಿಗೆ 1.1 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಘಟಕವನ್ನು ನಿರ್ಮಿಸಲಾಗಿತ್ತು.
ಆದರೆ ಹೃದಯ ಹಾಗೂ ಓಂಕಾಲಾಜಿ ವಿಭಾಗವನ್ನು ಹೊರತು ಪಡಿಸಿ ಜನರಲ್ ವಿಭಾಗ ಹಾಗೂ ಅಲ್ಪಾವಧಿಯ ಘಟಕಗಳಲ್ಲಿ ಜನಸಂದಣಿ ಇಳಿಕೆಯಾಗಿದೆ. ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲಗೊಂಡಿದ್ದು, ವಿವಿಧ ಕಾರಣಗಳಿಗಾಗಿ ಘಟಕವನ್ನು ಮುಚ್ಚುತ್ತಿರುವುದಾಗಿ ಸಂಸ್ಥೆ ತಿಳಿಸಿದೆ.
ಕಂಪನಿಯ ಹೂಡಿಕೆದಾರರು ನೀಡಿರುವ ಪ್ರಕಾರ ನಾರಾಯಣ ಹೃದಯಾಲಯ ಒಡೆತನದಲ್ಲಿ ಒಟ್ಟು 21 ಆಸ್ಪತ್ರೆಗಳನ್ನು ಹೊಂದಿದ್ದು, ಇದರ ಜೊತೆಗೆ ಇತರೆ ಎರಡು ಆಸ್ಪತ್ರೆಗಳನ್ನು ನಿರ್ವಹಿಸುತ್ತಿದೆ. ಇದರೊಂದಿಗೆ ಏಳು ಹೃದಯ ಕೇಂದ್ರಗಳು, 19 ಪ್ರಾಥಮಿಕ ಆರೋಗ್ಯ ಸೌಲಭ್ಯ ಕೇಂದ್ರಗಳು ಮತ್ತು ಕೇಮನ್ ದ್ವೀಪ ಪ್ರದೇಶದಲ್ಲಿ ಒಂದು ಆಸ್ಪತ್ರೆ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.