ಪರಸ್ಪರ ಅರವತ್ತು ಪ್ರಕರಣ ದಾಖಲಿಸಿದ ವಿಚ್ಛೇದಿತ ದಂಪತಿ; ಸುಪ್ರೀಂಕೋರ್ಟ್‌ಗೆ ಅಚ್ಚರಿ
ಅವರು ಯಾವಾಗಲೂ ಕೋರ್ಟ್ ಲ್ಲಿರುವುದನ್ನು, ಕೋರ್ಟಿಗೆ ಅಲೆದಾಡುವುದನ್ನೇ ಬಯಸುತ್ತಿರುತ್ತಾರೆ.
Team Udayavani, Apr 7, 2022, 11:59 AM IST
ನವದೆಹಲಿ: 30 ವರ್ಷ ಸಂಸಾರ ನಡೆಸಿ, 11 ವರ್ಷಗಳಿಂದ ಬೇರ್ಪಟ್ಟಿರುವ ದಂಪತಿ ಪರಸ್ಪರ 60 ಪ್ರಕರಣಗಳನ್ನು ದಾಖಲಿಸಿಕೊಂಡು, ಸುಪ್ರೀಂ ಕೋರ್ಟ್‌ಗೆ ಅಚ್ಚರಿ ಮೂಡಿಸಿದ್ದಾರೆ.
ಇದನ್ನೂ ಓದಿ:ತಂದೆ ಹೊಡೆಯಬಹುದು ಎಂಬ ಭಯದಲ್ಲಿ ಕೊಡಲಿಯಿಂದ ತಂದೆಯನ್ನ ಹತ್ಯೆಗೈದ 10ನೇ ತರಗತಿ ವಿದ್ಯಾರ್ಥಿ!
ದಂಪತಿಯ ಪ್ರಕರಣವನ್ನು ಕೈಗೆತ್ತಿಕೊಂಡ ತ್ರಿಸದಸ್ಯ ಪೀಠದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, “ಇದೊಂದು ವಿಸ್ಮಯಕಾರಿ ಪ್ರಕರಣ’ ಎಂದಿದ್ದಾರೆ. “ಏನು ಮಾಡುವುದು? ಕೆಲವು ಜನರಿಗೆ ಫೈಟಿಂಗ್ ಮಾಡುವುದೇ ಇಷ್ಟ. ಅವರು ಯಾವಾಗಲೂ ಕೋರ್ಟ್ ಲ್ಲಿರುವುದನ್ನು, ಕೋರ್ಟಿಗೆ ಅಲೆದಾಡುವುದನ್ನೇ ಬಯಸುತ್ತಿರುತ್ತಾರೆ.
ಅವರಿಗೆ ಕೋರ್ಟ್ ನೋಡದೇ ಇದ್ದರೆ, ಸಮಾಧಾನವೇ ಆಗುವುದಿಲ್ಲ. ರಾತ್ರಿ ನಿದ್ದೆಯೂ ಕಣ್ಣಿಗಿಳಿಯುವುದಿಲ್ಲ’ ಎಂದು ಪರೋಕ್ಷವಾಗಿ ಬುದ್ಧಿ ಹೇಳಿದ್ದಾರೆ. “ದಂಪತಿಯ ಈ ಪ್ರಕರಣದಲ್ಲಿ ವಕೀಲರ ಜಾಣ್ಮೆ ದಾಖಲಿಸುವಂಥದ್ದೇ’ ಎಂದಿದೆ ನ್ಯಾಯಪೀಠ.
ದಾಂಪತ್ಯ ವಿವಾದವನ್ನು ಆಪ್ತಸಮಾಲೋಚನೆ ಮೂಲಕ ಪರಿಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಪೀಠದಲ್ಲಿದ್ದ ಇತರ ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಪತಿ ಮತ್ತು ಪತ್ನಿಯನ್ನು ಪ್ರತಿನಿಧಿಸುವ ವಕೀಲರಿಗೆ ಸಲಹೆ ನೀಡಿ “ಇಬ್ಬರೂ ಕೂಡ ಧ್ಯಾನ ತರಬೇತಿ ಪಡೆದು ಕೊಂಡು, ಸಹಮತದಿಂದ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬೇಕು’ ಎಂದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.