Deepavali 2023; ಹಳ್ಳಿಗಳಲ್ಲಿ ಆಚರಿಸುವ ಪಾಂಡವರ ಪೂಜೆ

ಶೆಗಣಿಯಿಂದ ಕೋಟೆಯನ್ನು ಮಾಡಿ ಅದರಲ್ಲಿಐದು ಜನ ಪಂಚರನ್ನು ಪ್ರತಿಷ್ಠಾಪಿಸುತ್ತಾರೆ

Team Udayavani, Nov 13, 2023, 4:35 PM IST

Deepavali 2023; ಹಳ್ಳಿಗಳಲ್ಲಿ ಆಚರಿಸುವ ಪಾಂಡವರ ಪೂಜೆ

ದೀಪಾವಳಿ ಕೂಡ ತನ್ನದೇ ಆದ ವಿಶೇಷತೆ ಹೊಂದಿದೆ. ಹಿಂದೂಗಳು ತಮ್ಮ ಧಾರ್ಮಿಕ ನಂಬಿಕೆ ಮತ್ತು ತಣ್ತೀಗಳಿಗೆ ಅನುಸಾರವಾಗಿ ದೀಪಾವಳಿ ಆಚರಿಸುತ್ತಾರೆ. ಕತ್ತಲೆಯು ನಮ್ಮಲ್ಲಿ ಅಧೈರ್ಯ ತುಂಬುತ್ತದೆ. ನಮ್ಮ ಆತ್ಮವಿಶ್ವಾಸ ಕುಗ್ಗಿಸುತ್ತದೆ. ಆದ್ದರಿಂದ ಜನರು ಹಣತೆಗಳನ್ನು ಹಚ್ಚಿ ಭರವಸೆಯ ಬೆಳಕು ಸ್ವಾಗತಿಸುತ್ತಾರೆ.

ಹಬ್ಬಗಳ ಆಚರಣೆ ಒಂದು ಪ್ರದೇಶದಿಂದ ಮತ್ತೂಂದು ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಇಂದು ಹಳ್ಳಿಗಳಲ್ಲಿ ಕಾಣುವ ಈ ಪಾಂಡವರ ಪೂಜೆ ಇಂದು ಗ್ರಾಮೀಣ ಹೆಣ್ಣು ಮಕ್ಕಳ ಭಾಷೆಯಲ್ಲಿ ಅದು ಪಾಂಡ್ರವ್ವ ಪೂಜೆ ಎಂದು ರೂಢಿಯಲ್ಲಿ ಬಂದಿದೆ. ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಸಗಣಿಯಿಂದ ಪಾಂಡ್ರವ್ವರ ಮಾಡಿ ಪೂಜಿಸುವ ಹಿಂದಿರುವ ಕಾರಣ ಉತ್ತಮ ಬೆಳೆ ಬೆಳೆಯಲು ಅಗತ್ಯವಾಗಿರುವ ಗೊಬ್ಬರವನ್ನು ಪೂಜಿಸುವುದೇ ಆಗಿದೆ. ಸಗಣಿಯಿಂದ ಸಾಂಕೇತಿಕವಾಗಿ ಪಾಂಡವರನ್ನು ಮಾಡಿ ಪೂಜಿಸುವ ಸಂಪ್ರದಾಯ ಅನೇಕ ವರ್ಷಗಳಿಂದ ಆಚರಿಸಲ್ಪಡುತ್ತಿದೆ.

ಅಂತೆಯೇ ದೀಪಾವಳಿ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹಾಕುವ ಪಾಂಡವರು (ಪಾಂಡ್ರವ್ವ)ಗಳು ಆಚರಣೆ ನಾಗರೀಕತೆ
ಬೆಳೆದಂತೆ ಕಡಿಮೆಯಾಗುತ್ತ ಬರುತ್ತಿದೆ. ಇದು ಹಳ್ಳಿಗಳಲ್ಲಿ ಮಾತ್ರ ಹೆಚ್ಚಾಗಿ ಕಂಡು ಬರುವ ಆಚರಣೆಯಾಗಿದೆ.

ಕೆಲವು ಭಾಗದಲ್ಲಿ ಶೆಗಣಿಯಿಂದ ಕೋಟೆಯನ್ನು ಮಾಡಿ ಅದರಲ್ಲಿಐದು ಜನ ಪಂಚರನ್ನು ಪ್ರತಿಷ್ಠಾಪಿಸುತ್ತಾರೆ. ಇದು ಪಂಚರ ಪೂಜೆ ಹಾಗೂ ರಕ್ಷಣೆಯ ಸಂಕೇತ. ಜನರು ಪಂಚರ ರಕ್ಷಣೆ ಮಾಡಿದರೆ ಪಂಚರು ಜನರ ರಕ್ಷಣೆ ಮಾಡುತ್ತಾರೆ ಎಂಬುದು ವಿಶ್ವಾಸ. ಇನ್ನು ಪಂಚರು ಅಂದರೆ ಐದು ಜನ. ಪಾಂಡವರು ಕೂಡಾ ಐದು ಜನ ಆದ್ದರಿಂದ ಸಾಮಾನ್ಯವಾಗಿ ಯಾವುದೇ ಪ್ರದೇಶದಲ್ಲಿ ಐದು ಜನ ಇದ್ದರೆ ಅವರನ್ನು ಪಂಚ ಪಾಂಡವರು ಎಂದು ಕರೆಯುತ್ತಾರೆ. ಇದೇ ಕಾರಣಕ್ಕೆ ಇದಕ್ಕೆ ಪಾಂಡವರು (ಪಾಂಡ್ರವ್ವ) ಎಂಬ ಹೆಸರೂ ಬಂದಿರಬಹುದು.

ದೀಪಾವಳಿ ಹಬ್ಬಕ್ಕೂ ಪೂರ್ವ ಮೊದಲೆರಡು ದಿನ ಮಹಿಳೆಯರು ಕೈ ಬುಟ್ಟಿಯನ್ನು ತೆಗೆದುಕೊಂಡು ಹೋಗಿ ಆಕಳ ಸಗಣಿಯನ್ನು ತುಂಬಿಕೊಂಡು ಬಂದು ಅದನ್ನು ಮನೆಯಲ್ಲಿಟ್ಟು ಹಬ್ಬದ ಮೊದಲ ದಿನ ನರಕ ಚತುರ್ದಶಿಯಂದು 5, ಅಮಾವಾಸ್ಯೆಯಂದು 9 ಹಾಗೂ ದೀಪಾವಳಿ ಪಾಡ್ಯದಂದು 11 ಪಾಂಡವರನ್ನು ತಂದಿಟ್ಟ ಸೆಗಣಿಯಿಂದ ರೂಪಿಸಿ ಅದಕ್ಕೊಂದು ಮೂರ್ತಿ ರೂಪ ಕೊಟ್ಟು, ಮನೆಯ ಪಡಸಾಲೆಯ ಒಂದು ಕಡೆಗೆ ಪ್ರತಿಷ್ಠಾಪಿಸಲಾಗುತ್ತದೆ.

ನಂತರ ಅವುಗಳನ್ನು ಕಣಗಲದ ಹಳದಿ ಹೂಗಳನ್ನು ತಂದು ಇದಕ್ಕೆ ಪೂಜೆ ಸಲ್ಲಿಸುತ್ತಾರೆ. ಮೂರು ದಿವಸಗಳ ಕಾಲ ಮನೆಯಲ್ಲಿ
ಮಾಡಿದ ಸಿಹಿ ಅಡುಗೆಯನ್ನು ಇದಕ್ಕೆ ನೈವೇದ್ಯ ಮಾಡುತ್ತಾರೆ. ಪಾಡ್ಯದಂದು ಎಲ್ಲ ಪಾಂಡವರನ್ನು ಮತ್ತೊಮ್ಮೆ ಪೂಜಿಸಿ, ನೈವೇದ್ಯ ಮಾಡಿ ಸೂರ್ಯ ಮುಳಗುವ ಮುಂಚೆ ಮನೆಯ ಮಾಳಿಗೆಯ ಮೇಲಿಡುತ್ತಾರೆ. ಕೆಲವು ಕಡೆ ಪಾಡ್ಯದ ದಿನವೇ ಪಾಂಡವರನ್ನು ಪೂಜಿಸುವ ಸಂಪ್ರದಾಯವಿದೆ.

ಪಂಚರ ಪ್ರಾಮುಖ್ಯತೆ
ಪಾಂಡವರು ಎಂದರೆ ಗ್ರಾಮೀಣ ಭಾಗದಲ್ಲಿ ಗ್ರಾಮದ ಪ್ರಮುಖರು ಪಂಚರು. ಯಾವುದೇ ಕಾರ್ಯ ಮಾಡಬೇಕಾದರೂ ಈ ಪಂಚರು ಬೇಕೇ ಬೇಕು. ಯಾವುದೇ ಬೆಳೆಯನ್ನು ಕೊಯ್ಲು ಮಾಡಬೇಕೆಂದರೂ ಪಂಚ ಮುತ್ತೈದೆಯರಿಗೆ ಉಡಿ ತುಂಬುತ್ತಾರೆ. ರಾಶಿ ಮಾಡುವ ಸಂದರ್ಭದಲ್ಲಿ ಐದು ಜನರಿಗೆ ದವಸ- ಧಾನ್ಯಗಳನ್ನು ದಾನವಾಗಿ ನೀಡುತ್ತಾರೆ.

ಆಧುನಿಕತೆಗೆ ತಕ್ಕಂತೆ ಆಚರಣೆ ಮಾಯ
ಪಂಚರನ್ನು ಪೂಜಿಸುವುದರ ಸಲುವಾಗಿ ಸೆಗಣಿಯಿಂದ ಮೂರ್ತಿಗಳನ್ನು ಮಾಡಿ ದೀಪಾವಳಿಯ ಸಂದರ್ಭದಲ್ಲಿಅವರನ್ನು ಗೌರವಿಸಲಾಗುತ್ತದೆ.ಇಂತಹ ಇತಿಹಾಸವಿರುವ ಈ ಆಚರಣೆ ಆಧುನಿಕತೆಗೆ ತಕ್ಕಂತೆ ಮಾಯವಾಗುತ್ತಿದೆ. ಇದರ ಆಚರಣೆ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿದ್ದು, ಗ್ರಾಮೀಣ ಪ್ರದೇಶದ ಸಂಪ್ರದಾಯಸ್ತ ಕುಟುಂಬಗಳಲ್ಲಿ ಮಾತ್ರ ಈ ಆಚರಣೆ ಇಂದಿಗೂ ಇದೆ.

ಟಾಪ್ ನ್ಯೂಸ್

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ

1-vij

Vijayapura;ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ: 184 ಗ್ರಾಂ ಚಿನ್ನ, 80 ಗ್ರಾಂ ಬೆಳ್ಳಿ ಜಪ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Deepavali 2023: ಬೆಳಕಿನ ಹಬ್ಬ…ನೀರು ತುಂಬುವ ಹಬ್ಬ

Deepavali 2023: ಬೆಳಕಿನ ಹಬ್ಬ…ನೀರು ತುಂಬುವ ಹಬ್ಬ

Deepavali: ಗೋಮಯದಿಂದ ಶುದ್ಧಿಗೊಂಡ ನೆಲದ ಮೇಲೆ ರಂಗೋಲಿ ಮಂಗಳದ ಚಿಹ್ನೆ

Deepavali: ಗೋಮಯದಿಂದ ಶುದ್ಧಿಗೊಂಡ ನೆಲದ ಮೇಲೆ ರಂಗೋಲಿ ಮಂಗಳದ ಚಿಹ್ನೆ

Deepavali 2023: ದೀಪಾವಳಿಯ ಬಲಿಪಾಡ್ಯಮಿ… ಪೂಜ್ಯನೀಯ ಗೋ ಪೂಜೆ

Deepavali 2023: ದೀಪಾವಳಿಯ ಬಲಿಪಾಡ್ಯಮಿ… ಪೂಜ್ಯನೀಯ ಗೋ ಪೂಜೆ

Deepavali 2023; ದೀಪಾವಳಿಗೂ ಲಕ್ಷ್ಮಿದೇವಿಗೂ ಅವಿನಾಭಾವ ಸಂಬಂಧ

Deepavali 2023; ದೀಪಾವಳಿಗೂ ಲಕ್ಷ್ಮಿದೇವಿಗೂ ಅವಿನಾಭಾವ ಸಂಬಂಧ

Deepavali: ಮತ್ತೆ ಮೂಡಿತು ಬೆಳಕು

Deepavali: ಮತ್ತೆ ಮೂಡಿತು ಬೆಳಕು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Siddapura: ಪತ್ನಿ ಮತ್ತು ತಂಡದಿಂದ ಹಲ್ಲೆ ಆರೋಪ

Siddapura: ಪತ್ನಿ ಮತ್ತು ತಂಡದಿಂದ ಹಲ್ಲೆ ಆರೋಪ

Mulki: ಮಾದಕ ವಸ್ತು ಸಾಗಾಟ ಆರೋಪಿಗಳ ಸೆರೆ

Mulki: ಮಾದಕ ವಸ್ತು ಸಾಗಾಟ ಆರೋಪಿಗಳ ಸೆರೆ

16

Ullal: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆ

15

Blind Chess World C’ships: ವಿಶ್ವ ಅಂಧರ ಚೆಸ್‌: ಪ್ರಶಸ್ತಿ ಸನಿಹಕ್ಕೆ ಲುಬೋವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.