ಕಾಡ್ಗಿಚ್ಚಿಗೆ ಕ್ಯಾಲಿಫೋರ್ನಿಯಾದ ‘ಗೋಲ್ಡ್ ರಶ್’ ಪಟ್ಟಣ ಸಂಪೂರ್ಣ ಭಸ್ಮ
Team Udayavani, Aug 6, 2021, 11:00 PM IST
ವಾಷಿಂಗ್ಟನ್: ಅಮೆರಿಕದ ಪಶ್ಚಿಮ ಭಾಗವನ್ನು ದಹಿಸುತ್ತಿರುವ ಭೀಕರ ಕಾಡ್ಗಿಚ್ಚಿಗೆ ಕ್ಯಾಲಿಫೋರ್ನಿಯಾದ ಗೋಲ್ಡ್ ರಶ್ ಪಟ್ಟಣ ಸಂಪೂರ್ಣವಾಗಿ ಭಸ್ಮವಾಗಿದೆ.
ಕಾಡ್ಗಿಚ್ಚು ಆವರಿಸುವ ಮುನ್ನ ಅಲ್ಲಿದ್ದ ಸುಮಾರು 800 ನಾಗರಿಕರಿಗೆ ಸಂದೇಶ ರವಾನಿಸಿದ್ದ ಸ್ಥಳೀಯಾಡಳಿತ, ಆದಷ್ಟೂ ಬೇಗನೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿತ್ತು. ಆದರೂ, ಹಲವಾರು ಜನರು ತಮ್ಮ ಮನೆಗಳನ್ನು ತೊರೆಯಲು ನಿರಾಕರಿಸಿದ್ದರಿಂದ, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸ ಮಾಡಿ ಅವರನ್ನು ಅಲ್ಲಿಂದ ತೆರವುಗೊಳಿಸಿದರು.
ಪೊಲೀಸರ ಪರಿಪರಿ ಮನವಿಗಳಿಗೆ ಜಗ್ಗದವರನ್ನು ಬಲವಂತವಾಗಿ ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ಕಾಡ್ಗಿಚ್ಚು ಪಟ್ಟಣವನ್ನು ಸಲ್ವ ದಿಕ್ಕುಗಳಿಂದ ಆವರಿಸಿತು. ಬೆಂಕಿಯನ್ನು ನಂದಿಸಲು ಮಾಡುವ ಎಲ್ಲಾ ಪ್ರಯತ್ನಗಳು ವಿಫಲವಾದವು.
ಇದನ್ನೂ ಓದಿ :ಹೆಸರಲ್ಲಿ ತಂದೆಯ ಸರ್‌ನೇಮ್ ಕಡ್ಡಾಯವಲ್ಲ: ದೆಹಲಿ ಹೈಕೋರ್ಟ್
ಶುಕ್ರವಾರ ರಾತ್ರಿ ಹೊತ್ತಿಗೆ ಗೋಲ್ಡ್ ರಶ್‌ನ ಬಹುತೇಕ ಭಾಗ ಭಸ್ಮವಾಗಿದ್ದು, ಬೆಂಕಿ ನಂದಿಸುವ ಕಾರ್ಯ ಮುಂದುವರಿದಿತ್ತು ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.