ಕಣ್ಣೀರ ಸರದಿ ಈಗ ಡಿಕೆಶಿ
ದಿ.ಸಿ.ಎಸ್. ಶಿವಳ್ಳಿ ನೆನೆದು ಪ್ರಭಾವಿ ನಾಯಕ ಭಾವುಕ
Team Udayavani, May 10, 2019, 6:00 AM IST
ಹುಬ್ಬಳ್ಳಿ: ರಾಜ್ಯ ರಾಜಕೀಯದಲ್ಲಿ ಕಣ್ಣೀರು ಹಾಕುವ ಸರದಿ ಮುಂದುವರೆದಿದೆ. ಈ ಬಾರಿ ಸಚಿವ ಡಿ. ಕೆ. ಶಿವಕುಮಾರ ಅವರದ್ದು. ಕುಂದಗೋಳ ಉಪಚುನಾವಣೆಯ ಉಸ್ತುವಾರಿ ಹೊತ್ತಿರುವ ಸಚಿವರು, ಮಾಜಿ ಸಚಿವ ದಿ. ಸಿ.ಎಸ್. ಶಿವಳ್ಳಿ ಅವರನ್ನು ನೆನೆದು ಬಹಿರಂಗ ಸಭೆಯಲ್ಲಿ ಕಣ್ಣೀರು ಹಾಕಿದರು.
ಗುರುವಾರ ಇಂಗಳಗಿ ಗ್ರಾಮದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಡಿ.ಕೆ. ಶಿವಕುಮಾರ, ಗೆಳೆಯ ಶಿವಳ್ಳಿ ಅವರನ್ನು ನೆನೆದು ಕಣ್ಣೀರು ಹಾಕಿದರು. ”ಶಿವಳ್ಳಿಗೆ ಹೃದಯಾಘಾತವಾಗಿದೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಡಾ. ಮಂಜುನಾಥ ಅವರಿಗೆ ಕರೆ ಮಾಡಿ ಚಿಕಿತ್ಸೆ ಕುರಿತು ಮಾತನಾಡಿದೆ. ಮಾತು ಮುಗಿಸಿ ಒಂದೆರಡು ನಿಮಿಷ ಕಳೆದಿರಲಿಲ್ಲ. ಶಿವಳ್ಳಿ ಇನ್ನಿಲ್ಲ” ಎನ್ನುವ ಸುದ್ದಿ ಕೇಳಿ ಆಘಾತವಾಯಿತು ಎಂದು ಕಣ್ಣೀರು ಸುರಿಸಿದರು.
ಶಿವಳ್ಳಿಗಾಗಿ ನಾನು ಬಂದಿದ್ದೇನೆ. ಅವರಿಗೆ ಆಶೀರ್ವಾದ ಮಾಡಬೇಕು ಎಂದು ಬಂದಿದ್ದೀರಿ. ನಿಮ್ಮ ಪಾದಗಳಿಗೆ ನನ್ನ ನಮಸ್ಕಾರ ಹೇಳಲಿಕ್ಕೆ ನಿಮ್ಮ ಮುಂದೆ ನಿಂತಿದ್ದೇನೆ. ಈ ಚುನಾವಣೆ ಶಿವಳ್ಳಿ ಎಲೆಕ್ಷನ್ ಅಲ್ಲ. ಇದು ನಿಮ್ಮ ಚುನಾವಣೆ ಎಂದು ಹೇಳಲು ಬಂದಿದ್ದೇನೆ. ನೀವು ಹಗಲು-ರಾತ್ರಿ ಶಿವಳ್ಳಿ ಅವರೊಂದಿಗೆ ಬದುಕಿದ್ದೀರಿ, ಪರಸ್ಪರ ಕಷ್ಟ-ಸುಖ ಹೇಳಿಕೊಂಡಿದ್ದೀರಿ. ಪಂಚಾಯ್ತಿಯಿಂದ ಮಂತ್ರಿಯಾಗಿ ಮಾಡಿದ ಕೀರ್ತಿ ಈ ಕ್ಷೇತ್ರದ ಜನರಿಗೆ ಸಲ್ಲುತ್ತದೆ ಎಂದರು.
ನಿಮ್ಮ ಮಡಿಲಿಗೆ ಹಾಕಿದ್ದೇವೆ: ಆ ಹೆಣ್ಣು ಮಗಳು ಟಿಕೆಟ್ ಕೊಡಿ ಎಂದು ನಮ್ಮ ಮನೆಗಾಗಲಿ, ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾಯರ ಮನೆಗಾಗಲಿ ಬಂದವರಲ್ಲ. ಕುಸುಮಕ್ಕ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದಾರೆ.
ಶಿವಳ್ಳಿ ಸಾಹೇಬರ ಸ್ಥಾನ ತುಂಬಲಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ಒತ್ತಡ ಹಾಕಿದ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ನೀಡಲಾಗಿದೆ. ಕುಸುಮಾವತಿ ಅವರನ್ನು ನಿಮ್ಮ ಮಡಿಲಿಗೆ ಹಾಕಿದ್ದೇವೆ. ಅವರನ್ನು ವಿಧಾನಸೌಧಕ್ಕೆ ಕಳುಹಿಸುವ ಜವಾಬ್ದಾರಿ ನಿಮ್ಮ ಮೇಲಿದೆ. ಶಿವಳ್ಳಿ ಅವರ ಸ್ಥಾನ ತುಂಬಲು ನಮ್ಮ ಒತ್ತಡಕ್ಕೆ ಮಣಿದು ಸ್ಪರ್ಧಿಸಿರುವ ಕುಸುಮಾವತಿ ಅವರಿಗೆ ಈ ಕ್ಷೇತ್ರದ ಜನರು ಬೆಂಬಲಿಸಬೇಕು.
ನನ್ನ ಕ್ಷೇತ್ರದಂತೆ ಈ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು. ನನ್ನೊಂದಿಗೆ ನಿಕಟ ಸಂಪರ್ಕವಿದ್ದ ಶಿವಳ್ಳಿ ಎಂದಿಗೂ ತನ್ನ ವೈಯಕ್ತಿಕ ಬದುಕಿಗಾಗಿ ಏನನ್ನೂ ಮಾಡಿಕೊಂಡವನಲ್ಲ. ಕ್ಷೇತ್ರ, ಬಡವರು, ರೈತರ ಪರವಾಗಿ ಸಾಕಷ್ಟು ಕಾಳಜಿಯಿತ್ತು. ಕ್ಷೇತ್ರದ ಅಭಿವೃದ್ಧಿಗಾಗಿ ಸಚಿವರೆಲ್ಲರನ್ನೂ ಕಾಡಿ ಬೇಡಿಯಾ ದರೂ ಅನುದಾನ ತರುತ್ತಿದ್ದರು. ಅನುದಾನ ಮಂಜೂರು ಮಾಡದ ಹೊರತು ಕದಲುತ್ತಿರಲಿಲ್ಲ. ಅಷ್ಟೊಂದು ಕಾಳಜಿ ಅವರಲ್ಲಿತ್ತು. ಅವರಲ್ಲಿದ್ದ ಬದ್ಧತೆಯಿಂದ ಈ ಕ್ಷೇತ್ರ ಇಷ್ಟೊಂದು ಅಭಿವೃದ್ಧಿಯಾಗಿದೆ. ಅವರು ಬದುಕಿದ್ದರೆ ಅವರಲ್ಲಿದ್ದ ಚಿಂತನೆಯಿಂದ ಕ್ಷೇತ್ರದ ಚಿತ್ರಣವೇ ಬದಲಾಗುತ್ತಿತ್ತು. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಶಿವಳ್ಳಿ ಅವರು ಹೊಂದಿದ್ದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕುಸುಮಾವತಿಗೆ ಆಶೀರ್ವಾದ ಮಾಡಿ ಎಂದು ಭಾವುಕರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.