Doctors Protest: ಇದು ನನ್ನ ಕಡೇ ಪ್ರಯತ್ನ, ನಿಮ್ಮ ಅಕ್ಕನಾಗಿ ಬಂದಿರುವೆ ಎಂದ ಸಿಎಂ ಮಮತಾ
ಟ್ರೈನಿ ವೈದ್ಯೆ ಹತ್ಯೆ ಪ್ರಕರಣ ಸಂಬಂಧ ಪ್ರತಿಭಟನಾನಿರತರಲ್ಲಿ ಮನವಿ ಮಾಡಿದ ಬ್ಯಾನರ್ಜಿ, ತುಂಬಾ ಅಗ್ಗದ 'ನಾಟಕ' ಬೇರೇನೂ ಅಲ್ಲ: ಬಿಜೆಪಿ ಟೀಕೆ
Team Udayavani, Sep 14, 2024, 6:48 PM IST
ಕೋಲ್ಕತಾ: ಇಲ್ಲಿನ ಆರ್ಜಿ ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಅತ್ಯಾಚಾರ-ಹತ್ಯೆ ಪ್ರಕರಣ ಸಂಬಂಧಿಸಿ ವ್ಯಾಪಕ ಪ್ರತಿಭಟನೆ ಮುಂದುವರಿದಿರುವಾಗಲೇ ತಮ್ಮ ಸರ್ಕಾರ ಮತ್ತು ಪ್ರತಿಭಟನಾನಿರತ ಕಿರಿಯ ವೈದ್ಯರ ನಡುವಿನ ಬಿಕ್ಕಟ್ಟು ಶಮನಗೊಳಿಸಿ ಅವರ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಚ್ಚರಿಯ ಹೆಜ್ಜೆ ಇಟ್ಟರು.
ಕಿರಿಯ ವೈದ್ಯರು ಧರಣಿ ನಡೆಸುತ್ತಿರುವ ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ಅವರ ಉದ್ದೇಶಿಸಿ ಮಾತನಾಡಿ ಬಹಿಷ್ಕಾರ ಕೊನೆಗೊಳಿಸಿ ಕೆಲಸಕ್ಕೆ ಮರಳಲು ಮನವಿ ಮಾಡಿದರು. “ನಾನು ನಿಮ್ಮ ಅಕ್ಕನಂತೆ (ನಿಮ್ಮ ದೀದೀಯಾಗಿ ಇಲ್ಲಿಗೆ ಬಂದಿರುವೆ) ಇಲ್ಲಿಗೆ ಬಂದಿದ್ದೇನೆ ಹೊರತು ಮುಖ್ಯಮಂತ್ರಿಯಾಗಿ ಬಂದಿಲ್ಲ” ನೀವು ಕೊಟ್ಟಿರುವ ಬೇಡಿಕೆಗಳ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ನಿಶ್ಚಿತವಾಗಿ ತೆಗೆದುಕೊಳ್ಳುವೆ. ಈ ಬಿಕ್ಕಟ್ಟು ಶಮನಗೊಳಿಸಲು ಇದು ನನ್ನ ಕೊನೆಯ ಪ್ರಯತ್ನ, ನೀವು ಇಲ್ಲದೆ ಹಿರಿಯರು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಕಿರಿಯ ವೈದ್ಯರ ಮನವೊಲಿಸಲು ಪ್ರಯತ್ನಿಸಿದರು.
ನಾನು ರಾತ್ರಿಯಿಡೀ ನಿದ್ದೆ ಮಾಡಲಿಲ್ಲ:
ನನ್ನ ಜೀವನದಲ್ಲಿ ನಾನು ಕೂಡ ಸಾಕಷ್ಟು ಹೋರಾಟ ಮಾಡಿದ್ದೇನೆ, ನಿಮ್ಮ ಹೋರಾಟ ನಾನು ಅರ್ಥಮಾಡಿಕೊಂಡಿದ್ದೇನೆ. ನನ್ನ ಸ್ಥಾನದ ಬಗ್ಗೆ ನನಗೆ ಚಿಂತೆಯಿಲ್ಲ. ನಿನ್ನೆ ರಾತ್ರಿಯಿಡೀ ಮಳೆ ಸುರಿಯಿತು, ನೀವು ಇಲ್ಲಿ ಪ್ರತಿಭಟನೆಗೆ ಕುಳಿತಿದ್ದೀರಿ, ನಾನು ರಾತ್ರಿಯಿಡೀ ನಿದ್ದೆ ಮಾಡಲಿಲ್ಲ. ನಿಮ್ಮ ಬೇಡಿಕೆಗಳ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಖಂಡಿತ ಪರಿಹಾರ ಕಂಡು ಕೊಳ್ಳುತ್ತೇನೆ. ತಪ್ಪಿತಸ್ಥರು ಯಾರೇ ಆಗಿರಲಿ ಅವರಿಗೆ ಖಂಡಿತ ಶಿಕ್ಷೆಯಾಗುತ್ತದೆ ಎಂದು ಹೇಳಿದರು.
VIDEO | Kolkata doctor rape-murder case: West Bengal CM Mamata Banerjee (@MamataOfficial) interreacts with junior doctors who are protesting in front of state health department headquarters in Salt Lake.
(Full video available on PTI Videos – https://t.co/n147TvqRQz) pic.twitter.com/0Tdzwrf3RR
— Press Trust of India (@PTI_News) September 14, 2024
“ನಾನು ನಿಮ್ಮಿಂದ ಸ್ವಲ್ಪ ಸಮಯ ಕೇಳುತ್ತಿದ್ದೇನೆ. ರಾಜ್ಯ ಸರ್ಕಾರವು ನಿಮ್ಮ ವಿರುದ್ಧ (ಪ್ರತಿಭಟಿಸುವ ವೈದ್ಯರು) ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಕೆಲಸಕ್ಕೆ ಮರಳಲು ನಿಮ್ಮನ್ನು ವಿನಂತಿಸುತ್ತೇನೆ. ಆಸ್ಪತ್ರೆಯ ಅಭಿವೃದ್ಧಿ, ಮೂಲಸೌಕರ್ಯ ಮತ್ತು ಭದ್ರತೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳ ಪ್ರಾರಂಭಿಸಲಾಗಿದೆ. ಮುಂದೆಯೂ ಮಾಡಲಾಗುತ್ತದೆ” ಎಂದು ಬಂಗಾಳ ಸಿಎಂ ಮಮತಾ ಭರವಸೆ ನೀಡಿದರು.
ತುಂಬಾ ಅಗ್ಗದ ‘ನಾಟಕ’ ಎಂದು ಜರಿದ ಬಿಜೆಪಿ
ಸಿಎಂ ಮಮತಾ ಬ್ಯಾನರ್ಜಿ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದರಿಂದ ಏನೂ ಬದಲಾಗಲಿಲ್ಲ. ಅವರ ಏನನ್ನೂ ಚರ್ಚಿಸಲಿಲ್ಲ. ಭೇಟಿಯಿಂದ ಯಾವುದೇ ವ್ಯತ್ಯಾಸವಿಲ್ಲ, ಮಮತಾ ಕೆಲವು ವಿಷಯಗಳ ಮುಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಇದು ತುಂಬಾ ಅಗ್ಗದ ‘ನಾಟಕ’ ಬಿಟ್ಟು ಬೇರೇನೂ ಅಲ್ಲ. ಏಕೆಂದರೆ ಪ್ರತಿಭಟನಾ ಸ್ಥಳಕ್ಕೆ ಬಂದು ಉಪನ್ಯಾಸ ನೀಡಿ ಹಿಂತಿರುಗಿದ್ದಾರೆ. ಅದರಿಂದ ಪ್ರಯೋಜನವೇನು? ಕನಿಷ್ಠ ಚರ್ಚೆಗಾದರೂ ಬರಬೇಕು ಎಂದು ಕೇಂದ್ರ ಸಚಿವ ಮತ್ತು ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ಸುಕಾಂತ ಮಜುಂದಾರ್ ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.