ಗ್ರೀನ್ ಕಾರ್ಡ್ ವಿತರಣೆ ಸ್ಥಗಿತ ನಿರ್ಧಾರವನ್ನು ಸಮರ್ಥಿಸಿಕೊಂಡ ಟ್ರಂಪ್
Team Udayavani, Jun 24, 2020, 4:41 PM IST
ವಾಷಿಂಗ್ಟನ್: ಕೋವಿಡ್-19 ಸೋಂಕು ಹರಡುವಿಕೆ ನಿಯಂತ್ರಣ ನೆಪ ಇಟ್ಟುಕೊಂಡು ಒಂದಲ್ಲ ಒಂದು ನಿಯಾಮವಾಳಿಗಳನ್ನು ಜಾರಿ ಮಾಡುತ್ತಿರುವ ಟ್ರಂಪ್ ಇದೀಗ ಗ್ರೀನ್ ಕಾರ್ಡ್ ವಿತರಣೆ ಸ್ಥಗಿತ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಏಪ್ರಿಲ್‌ನಲ್ಲಿ ಗ್ರೀನ್ಕಾರ್ಡ್ಗಳ ವಿತರಣೆಯನ್ನು ಕೇವಲ 90 ದಿನಗಳವರೆಗೆ ಸ್ಥಗಿತಗೊಳಿಸಿದ್ದ ಟ್ರಂಪ್ ಮುಂಬರುವ ಡಿಸೆಂಬರ್31, 2020ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದು, ಯುಸ್‌ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕೆಂಬ ಉದ್ಯೋಗಿಗಳ ಕನಸಿಗೆ ತಣ್ಣೀರು ಎರೆಚಿದ್ದಾರೆ.
ಮಂಗಳವಾರ ಅರಿಜೋನಾದ ಸ್ಯಾನ್ ಲೂಯಿಸ್‌ನಲ್ಲಿ ಈ ಕುರಿತು ಹೇಳಿಕೆ ನೀಡಿರುವ ಟ್ರಂಪ್ ದೇಶಿಯ ವಾಸಿಗಳಿಗೆ ಉದ್ಯೋಗ ನೀಡುವ ಅವಶ್ಯಕತೆಯಿದೆ ಎನ್ನುವ ಮೂಲಕ ಗ್ರೀನ್ ಕಾರ್ಡ್ ವಿತರಣೆಯನ್ನು ಈ ವರ್ಷಾಂತ್ಯದವರೆಗೆ ಸ್ಥಗಿತಗೊಳಿಸಿರುವ ತೀರ್ಮಾನವನ್ನು ಸಮರ್ಥಿಸಿಕೊಂಡಿದ್ದಾರೆ.
ನಾವು ಇದೀಗ ಅಮೆರಿಕನ್ನರಿಗೆ ಉದ್ಯೋಗ ನೀಡಲು ಬಯಸುತ್ತೇವೆ. ಇದೀಗ ಇಲ್ಲಿನ ಉದ್ಯೋಗಗಳು ಅಮೆರಿಕ ನಾಗರಿಕರಿಗೆ ಹೋಗಬೇಕೆಂದು ನಾವು ಬಯಸುತ್ತೇವೆ. ಕೋವಿಡ್ -19 ಸೃಷ್ಟಿಸಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಉದ್ಯೋಗ ಕಳೆದುಕೊಂಡಿರುವ ಲಕ್ಷಾಂತರ ಅಮೆರಿಕನ್ನರಿಗೆ ನೆರವಾಗಲು ಈ ಹೆಜ್ಜೆ ಅತ್ಯಂತ ಅಗತ್ಯವಾಗಿದೆ ಎಂದು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.