Karnataka ರಾಜ್ಯ ಹಾಳು ಮಾಡದೇ, ಅಭಿವೃದ್ಧಿಗೆ ಸಹಕಾರ ಕೊಡಿ: ಕೇಂದ್ರ ಸಚಿವ ಕುಮಾರಸ್ವಾಮಿ
ಸರ್.ಎಂ. ವಿಶ್ವೇಶ್ವರಯ್ಯನವರ ಕನಸಿನ ಕಾರ್ಖಾನೆ ವಿಐಎಸ್‌ಎಲ್ ಉಳಿಸಬೇಕೆಂದು ನನ್ನ ರೀತಿಯಲ್ಲೇ ಶ್ರಮ ಹಾಕುತ್ತಿದ್ದೇನೆ
Team Udayavani, Aug 13, 2024, 7:54 PM IST
ಬೆಂಗಳೂರು: ನನ್ನ ಮೇಲೆ ದ್ವೇಷ ಮಾಡಿ ರಾಜ್ಯ ಹಾಳು ಮಾಡಿಕೊಳ್ಳಬೇಡಿ. ನಾನು ರಾಜ್ಯದ ಕಾರ್ಖಾನೆಗೆ ಜೀವ ಕೊಡಬೇಕೆಂದು ಶ್ರಮ ಪಡುತ್ತಿದ್ದೇನೆ. ಸಾಕು ಲೂಟಿ ಮಾಡಿದ್ದು, ಸಹಕಾರ ಕೊಡಿ, ಸಣ್ಣತನ ಬಿಡಿ ಎಂದು ಕಾಂಗ್ರೆಸ್ ಸರಕಾರದ ವಿರುದ್ಧ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಎಚ್‌ಎಂಟಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ ಬೆಂಗಳೂರು ನಗರದ ಪುಟ್ಟೇನಹಳ್ಳಿ ಕೆರೆ ಮುಚ್ಚಿ 53 ಎಕರೆ ಮುಚ್ಚಿ ಹಾಕಿ ಡಾಲರ್ಸ್ ಕಾಲನಿ ಮಾಡಿದ್ರು. ಮಳೆಗೆ 3-4 ಅಡಿ ನೀರು ನಿಲ್ಲುತ್ತಿತ್ತು. 2006ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ನಾನು ಅಲ್ಲಿ ಮನೆಗಳಿಗೆ ನೀರು ನುಗ್ಗದಂತೆ ಕ್ರಮ ಕೈಗೊಂಡು ಕೆಲಸ ಮಾಡಿ ತೋರಿಸಿದೆ. ಆದರೆ ನೀವು ದಿನ ರೌಂಡ್ಸ್ ಮಾಡ್ತೀರಲ್ಲಾ, ಜನರಿಗೆ ಏನ್ ಮಾಡಿದ್ದೀರಾ? ನನಗೆ ಪ್ರತಿ ಬಾರಿಯೂ ಲಾಟರಿ ಸಿಸ್ಟಮ್ನಲ್ಲೇ ಅಧಿಕಾರ ಸಿಕ್ಕಿದೆ. ಆ ಲಾಟರಿ ಅಧಿಕಾರದಲ್ಲೇ ಜನರಿಗೆ ಆದಷ್ಟು ಒಳ್ಳೆಯ ಕೆಲಸ ಮಾಡ್ತಿದ್ದೇನೆ. ಆದರೆ ನೀವೇನು ಮಾಡಿದ್ದೀರಿ ಎಂದು ಡಿ.ಕೆ.ಶಿವಕುಮಾರ್ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ನನ್ನ ಸರ್ಕಾರ ಅಧಿಕಾರದಲ್ಲಿದ್ದಾಗ ನಾಡಿನ ಜನರು ಮೆಚ್ಚುವಂತಹ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಸೇಡಿನ ರಾಜಕಾರಣ ಬಿಟ್ಟು, ದೇಶ ಕಟ್ಟುವ ಕಾರ್ಯಗಳಿಗೆ ಸಹಕಾರ ನೀಡಿ..
ಶ್ರೀ @hd_kumaraswamy ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರು#SaveHMT pic.twitter.com/GcHfVJ4Wju
— Janata Dal Secular (@JanataDal_S) August 13, 2024
ಸಿದ್ದರಾಮಯ್ಯ ಸರಕಾರ ಅನುಮತಿ ಕೊಟ್ಟಿತ್ತು:
ಕೇಂದ್ರ ಸಚಿವನಾಗಿ ದೇವದಾರ ಗಣಿಗಾರಿಕೆಗೆ ನಾನು ಕಡತಕ್ಕೆ ಸಹಿ ಹಾಕಿದಕ್ಕೆ ಗೊಂದಲ ಮಾಡಿದ್ರು. ಕುಮಾರಸ್ವಾಮಿ ಪರಿಸರ ಹಾಳು ಮಾಡೋಕೆ ಹೊರಟಿದ್ದಾರೆ ಎಂದು ಹೇಳಿದ್ದರು. ಇದೇ ಸಿದ್ದರಾಮಯ್ಯ ಸರ್ಕಾರ 2014, 15, 16ರಲ್ಲಿ ಸಂಡೂರಿನಲ್ಲಿ ದೇವದಾರದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ್ದಾರೆ. ಹಿಂದೆ ಸರ್ಕಾರದಲ್ಲಿ ಯಾವ ಭೂಮಿ ಅನುಮತಿ ನೀಡಲು ಶಿಫಾರಸ್ಸು ಮಾಡಿದ್ರು. ಅಲ್ಲಿ ದೊಡ್ಡ ಮಟ್ಟದ ಮರಗಳಿಲ್ಲ. ಕೆಐಒಸಿಎಲ್ ಪರಿಸರ ರಕ್ಷಣೆಗೆ 192 ಕೋಟಿ ವರ್ಗಾವಣೆ ಮಾಡಿದೆ. ಕೆಲವೊಂದು ತಾಂತ್ರಿಕ ತಪ್ಪುಗಳು ಆಗಿವೆ. ಅದನ್ನು ಸರಿಪಡಿಸಿಕೊಳ್ಳಲು ಸಂಸ್ಥೆ ರೆಡಿ ಇದೆ ಎಂದರು.
ಅಂದಿನ ಪ್ರಧಾನಿ ನೆಹರು ಅವರ ಕಾಲದಲ್ಲಿ ಎಚ್‌ಎಂಟಿ ಆರಂಭವಾಯ್ತು. ನೆಹರು ಕಾಲದಲ್ಲಿ ವಾಚ್ ಮತ್ತು ಬೆಲ್ಟ್ ತಯಾರು ಮಾಡಲು ಕಾರ್ಖಾನೆ ಆರಂಭವಾಗಿದ್ದು. ಪ್ರತಿ ವರ್ಷ ಹೊಸ ಯೂನಿಟ್ ಆರಂಭ ಮಾಡುತ್ತಿದ್ದರು. 1970ರಲ್ಲಿ ಎಚ್‌ಎಂಟಿ 270 ಕೋಟಿ ವಾರ್ಷಿಕ ಆದಾಯ ಇತ್ತು. ದೇಶದ ಮಾರುಕಟ್ಟೆಯಲ್ಲಿ ಶೇ.90ರಷ್ಟು ಹಿಡಿತ ಸಾಧಿಸಿತ್ತು ಎಂದು ಹೇಳಿದರು.
ಎಚ್‌ಎಂಟಿ ಜಾಗದ ಬಗ್ಗೆ ನಿನ್ನೆ ಸಚಿವರು ಟಿಪ್ಪಣಿ ಬರೆದಿದ್ದು ಯಾವ ಕಾರಣಕ್ಕೆ? ಸಚಿವರು ಸೂಚನೆ ಕೊಟ್ಟ ಕೂಡಲೇ ಎಚ್‌ಎಂಟಿ ಜಾಗ ವಶ ಪಡಿಸಿಕೊಳ್ಳಲು ಆಗುತ್ತಾ? 2020 ಡಿನೋಟಿಪೈ ಮಾಡಿದ್ದು ಯಾರು? ನಾನು ಎಚ್‌ಎಂಟಿ ಕಾರ್ಖಾನೆಗೆ ಭೇಟಿ ಕೊಟ್ಟು ಅದನ್ನು ಉಳಿಸಬೇಕು. ಹಾಗೆಯೇ ಸರ್.ಎಂ. ವಿಶ್ವೇಶ್ವರಯ್ಯರ ಕನಸಿನ ಕಾರ್ಖಾನೆ ಉಳಿಸಬೇಕೆಂದು ನನ್ನ ರೀತಿಯಲ್ಲಿ ಶ್ರಮ ಹಾಕುತ್ತಿದ್ದೇನೆ ಎಂದರು. ಕುಮಾರಸ್ವಾಮಿ ಎಚ್‌ಎಂಟಿ ಕಾರ್ಖಾನೆಗೆ ಭೇಟಿ ಕೊಟ್ಟ ಅನ್ನೋ ಕಾರಣಕ್ಕೆ ಈ ರೀತಿ ಅಡ್ಡಗಾಲು ಹಾಕಲಾಗಿದೆ. ಎಚ್‌ಎಂಟಿಗೆ ನಾನು ಜಸ್ಟ್ ಭೇಟಿ ಕೊಟ್ಟಿದ್ದಕ್ಕೆ 45 ರೂ. ಇದ್ದ ಶೇರ್ ವ್ಯಾಲ್ಯೂ 92ಕ್ಕೆ ಏರಿಕೆ ಯಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.