2 ವರ್ಷದಿಂದ ಮಿನಿ ಅಂಗನವಾಡಿ ಕೇಂದ್ರಕ್ಕೆ ಬೀಗ: ಮಕ್ಕಳ ಆರೋಗ್ಯ, ಪೌಷ್ಠಿಕ ಮಟ್ಟ ಕುಂಠಿತ
Team Udayavani, Apr 15, 2022, 6:54 PM IST
ದೋಟಿಹಾಳ: ಮಕ್ಕಳ ಉತ್ತಮ ಭವಿಷ್ಯವೇ.. ದೇಶದ ಭವಿಷ್ಯ ಎಂಬ ದೂರದೃಷ್ಠಿಯ ಹಿನ್ನೆಲೆಯಲ್ಲಿ, ಮಹಿಳಾ ಮತ್ತು ಮಕ್ಕಳ ಇಲಾಖೆಯು ಮಕ್ಕಳ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಡಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಅವುಗಳ ನೀತಿ ಮತ್ತು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಸರಕಾರ ಹೆಚ್ಚು ಒತ್ತು ನೀಡಿ ಶ್ರಮಿಸುತ್ತಿದೆ. ಆದರೆ ಈ ಗ್ರಾಮದ ಮಿನಿ ಅಂಗನವಾಡಿ ಕೇಂದ್ರ ಎರಡು ವರ್ಷಗಳಿಂದ ಬೀಗ ಹಾಕಿದ ಕಾರಣ ಮಕ್ಕಳ ಅಭಿವೃದ್ಧಿಗೆ ಇಲ್ಲಿ ಮಾರಕವಾಗುತ್ತಿದೆ.
ಸಮೀಪದ ಮುದೇನೂರು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಕೆ.ಬೆಂಜಮಟ್ಟಿ ಗ್ರಾಮದ ಮಿನಿ ಅಂಗನವಾಡಿ ಕೇಂದ್ರದ ಕಥೆ ಇದು. ಈ ಮೀನಿ ಕೇಂದ್ರದ ಒಂದು ಹುದ್ದೆ ಇರುವದರಿಂದ ಅಂಗನವಾಡಿ ಕಾರ್ಯಕರ್ತೆ ಮಕ್ಕಳಿಗೆ ಶಿಕ್ಷಣ ಮತ್ತು ಊಟವನ್ನು ನೀಡುತ್ತಿದರು. ಕಳೆದ ಎರಡು ವರ್ಷಗಳ ಹಿಂದೆ ಈ ಮಿನಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಬೇರೆ ಕಡೆಗೆ ವರ್ಗಾವಣೆಯಾಗಿ ಹೋದ ಮೇಲೆ ಇಲ್ಲಿಯವರಗೆ ಈ ಕೇಂದ್ರಕ್ಕೆ ಬೀಗ ಹಾಕಲಾಗಿದೆ. ಇದರಿಂದ ಮಗುವಿನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕಬೇಕಾಗಿದೆ ಅಂಗನವಾಡಿ ಕೇಂದ್ರ ಬೀಗ ಹಾಕಿದರಿಂದ ಮಕ್ಕಳ ಶಿಕ್ಷಣ, ದೈಹಿಕ, ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದರು.
ಗ್ರಾಮದ ಗರ್ಭಿಣಿ ಹಾಗೂ ತಾಯಂದಿರು ಮಾತನಾಡಿ, ಪಕ್ಕದ ಗ್ರಾಮಗಳಲ್ಲಿ ಸಣ್ಣಮಕ್ಕಳ ಅಂಗನವಾಡಿ ಕೇಂದ್ರಗಳಿಗೆ ಹೋಗುತ್ತಾರೆ. ಆದರೆ ಇಲ್ಲಿ ಕೇಂದ್ರ ಬಂದ್ ಆದಕಾರಣ ಮಕ್ಕಳನ್ನು ಮನೆಯಲ್ಲಿ ಕೆಲಸ ಕರ‍್ಯಗಳನ್ನು ಬಿಟ್ಟು ಒಬ್ಬರು ಕರೆದುಕೊಂಡು ಕೂಡುವ ಸ್ಥಿತಿ ಇದೆ. ತಿಂಗಳಿಗೊಮ್ಮೆ ಮುದೇನೂರ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಬಂದು ನಾಲ್ಕು ಮೊಟ್ಟೆ, ಒಂದು ಬೊಗಸೆ ದವಸ ಧಾನ್ಯಗಳನ್ನು ನೀಡಿ ಹೋಗುತ್ತಾರೆ. ಅವರು ಮರಳಿ ಬರುವದು ತಿಂಗಳಿಗೊಮ್ಮೆ.. ಇಲ್ಲಿಯ ಮಿನಿ ಅಂಗನವಾಡಿ ಕೇಂದ್ರ “ಆಟಕ್ಕುಂಟು ಲೆಕ್ಕಕ್ಕಿಲ್ಲ” ಎಂಬAತೆ ಇದೆ.
ಕಳೆದ ಎರಡು ವರ್ಷದಿಂದ ಕೇಂದ್ರ ಬಂದ್ ಆದಕಾರಣ ಗ್ರಾಮದ ಗರ್ಭಿಣಿ ಮತ್ತು ತಾಯಂದಿರಿಗೆ, ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗುತ್ತಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ಸಿಗುವ ಸೌಲಭ್ಯಗಳು ಕೇಂದ್ರ ಬಂದ್ ಆದಕಾರಣ ಇಲ್ಲಿಯ ಜನರಿಗೆ ಸಿಗುತ್ತಿಲ್ಲ.
ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನಹರಿಸಿ ಬಂದಾದ ಮಿನಿ ಅಂಗನವಾಡಿ ಕೇಂದ್ರವನ್ನು ಆರಂಭಿಸಬೇಕೆAಬುದು ಸಾರ್ವಜನಿಕರ ಕಳಕಳಿಯಾಗಿದೆ.
ಕೆ.ಬೆಂಚಮಟ್ಟಿ ಗ್ರಾಮದ ಮಿನಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಕಳೆದ ಎರಡು ವರ್ಷಗಳ ಹಿಂದೇ ವರ್ಗಾವಣೆಗೊಂಡು ಬೇರೆ ಕಡೆಗೆ ಹೋದಕಾರಣ ಕೇಂದ್ರದಲ್ಲಿ ಸದ್ಯ ಯಾರು ಇಲ್ಲ. ಈ ಕೇಂದ್ರಕ್ಕೆ ಲಿಂಗಸಗೂರು ತಾಲೂಕಿನಿಂದ ಒಬ್ಬರು ಬರುತ್ತಿವೆ ಎಂದು ಖಾಲಿ ಹುದ್ದೆಯ ಮಾಹಿತಿ ಪಡೆದುಕೊಂಡು ಬೆಂಗಳೂರಿಗೆ ಹೋದ ಕಾರಣ ಅಲ್ಲಿಗೆ ಇದುವರೆಗೂ ಯಾರನ್ನು ನೇಮಕ ಮಾಡಿಲ್ಲ. ಹೀಗಾಗಲೇ ಲಿಂಗಸಗೂರುಗೆ ಪತ್ರ ಬರೆದ್ದಿದೇವೆ ವರ್ಗಾವಣೆಯಾಗಿ ಬರುವ ಬಗ್ಗೆ ಮಾಹಿತಿ ನೀಡಿ. ಇಲ್ಲವೇ ಅಲ್ಲಿಗೆ ಬೇರೆಯವರನ್ನು ನೇಮಕ ಮಾಡುತ್ತೇವೆ ಎಂದು ತಿಳಿಸಿದ್ದೇನೆ.
– ಅಮರೇಶ ಹಾವಿನ. ಸಿಡಿಪಿಒ ಕುಷ್ಟಗಿ.
– ಮಲ್ಲಿಕಾರ್ಜುನ ಮೆದಿಕೇರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.