ಚರಂಡಿ ಶುಚಿಗೊಳಿಸಲೂ ಒಂದು ಸ್ಟಾರ್ಟಪ್!
ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿಯ ಪ್ಲಾನ್
Team Udayavani, Sep 19, 2019, 7:30 PM IST
ಬೆಂಗಳೂರು: ದೇಶಾದ್ಯಂತ ಯಾವುದೇ ನಗರಗಳಿಗೆ ಹೋದರೂ ಚರಂಡಿ, ಕೊಳಚೆ ಸಮಸ್ಯೆ ಬೃಹದಾಕಾರವಾಗಿ ಕಾಡುತ್ತಿದೆ. ಇಂತಹ ಪಿಡುಗಿಗೆ ಪರಿಹಾರ ಒದಗಿಸಲು ವಿದ್ಯಾರ್ಥಿನಿಯೊಬ್ಬರು ಮುಂದಾಗಿದ್ದಾರೆ. ಇದಕ್ಕಾಗಿ ಯಂತ್ರೋಪಕರಣಗಳನ್ನು ಆವಿಷ್ಕರಿಸಿದ್ದು, ಈ ಕುರಿತ ಸ್ಟಾರ್ಟ್ ಅಪ್ ಕೂಡ ಆರಂಭಿಸಿದ್ದಾರೆ.
ವಾಸನೆ ತಡೆಯಲಾರದೆ ಚರಂಡಿ ಸ್ವಚ್ಛ
ಕಾಲೇಜಿನ ಪಕ್ಕದಲ್ಲಿ ಚರಂಡಿ ತ್ಯಾಜ್ಯದಿಂದ ತುಂಬಿಕೊಂಡು ಬ್ಲಾಕ್ ಆಗಿದ್ದು, ದೂರ್ವಾಸನೆ ತಾಳಲಾರದೆ ನಾವು ಅದನ್ನು ಯಂತ್ರಗಳ ನೆರವಿನಿಂದ ಸ್ವಚ್ಛ ಮಾಡಿದ್ದೆವು. ಆದರೆ ಆರಂಭದ ಪ್ರಯತ್ನ ಫಲಕೊಟ್ಟಿರಲಿಲ್ಲ. ಮರುದಿನ ಅಷ್ಟೇ ಕಸ ತುಂಬಿಕೊಂಡಿತ್ತು. ಆದ್ದರಿಂದ ಈ ಸಮಸ್ಯೆಗೆ ಪರಿಹಾರಕ್ಕೆ ಶೋಧನೆಗೆ ಇಳಿದಿದ್ದೇವೆ ಎಂದು ವಿದ್ಯಾರ್ಥಿನಿ ನಿವೇಧಾ ಆರ್.ಎಂ. ಹೇಳಿದ್ದಾರೆ. ಎಂಜಿನಿಯರಿಂಗ್‌ನ ಅಂತಿಮ ಸೆಮಿಸ್ಟರ್‌ನಲ್ಲಿ ಪ್ರಾಜೆಕ್ಟ್ ಮಾಡಬೇಕಿತ್ತು. ಅಂದು ತ್ಯಾಜ್ಯಗಳಿಂದ ತುಂಬಿ ಹೋಗಿದ್ದ ಚರಂಡಿ ಈ ಯೋಜನೆ ಮಾಡುವುದಕ್ಕೆ ಪ್ರೇರಣೆಯಾಗಿದ್ದು, ತ್ಯಾಜ್ಯವಿಲೇವಾರಿ ಸಮಸ್ಯೆಗೆ ಸೂಕ್ತ ಪರಿಹಾರ ಸೂಚಿಸಬೇಕೆಂಬು ನನ್ನ ಅಂತಿಮ ಗುರಿಯಾಗಿತ್ತು ಅನ್ನುತ್ತಾರೆ ನಿವೇದಿತಾ.
ಆವಿಷ್ಕಾರವೇನು?
ತ್ಯಾಜ್ಯ ನೀರು ಕಸ ಸಂಗ್ರಹಿಸುವ ಜಾಲರಿ ಮಾದರಿ ಯಂತ್ರಕ್ಕೆ ಬಂದು ಬೀಳುತ್ತದೆ. ಅಲ್ಲಿ ಬ್ಲೋವರ್ ಮೂಲಕ ತ್ಯಾಜ್ಯವನ್ನು ಬೇರ್ಪಡಿಸಲಾಗುತ್ತದೆ. ಜಾಲರಿ ಮಧ್ಯೆ ನೀರು ಹರಿದುಹೋಗುವುದರಿಂದ ನೀರಿನೊಂದಿಗೆ ಯಾವುದೇ ಕಸ ಸೇರುವುದಿಲ್ಲ. ಈ ವ್ಯವಸ್ಥೆ ಒಂದು ಕೋಣೆಯ ಗಾತ್ರದಲ್ಲಿದ್ದು ನಿರ್ವಹಣೆಯೂ ಸುಲಭವಾಗಿದೆ. 7 ಎಂಜಿನಿಯರಿಂಗ್ ವಿದ್ಯಾರ್ಥಿಗಳು “ಟ್ರಾಶ್‌ಕಾನ್’ ವ್ಯವಸ್ಥೆಗಾಗಿ ಶ್ರಮಿಸಿದ್ದು, ಹತ್ತು ಮಂದಿಗೆ ಉದ್ಯೋಗವನ್ನೂ ಕೊಟ್ಟಿದೆ. ಸದ್ಯ ಈ ಯಂತ್ರ ಬಸವನಗುಡಿಯಲ್ಲಿ ಸ್ಥಾಪಿತವಾಗಿದ್ದು, ಹಸಿ, ಒಣಕಸವನ್ನೂ ಬೇರ್ಪಡಿಸುತ್ತದೆ.
ಸಮ್ಮಾನ-ಪುರಸ್ಕಾರ
ನಿವೇದಿತಾ ತಯಾರಿಸಿರುವ ಟ್ರಾಶ್‌ಕಾನ್, ಜೈವಿಕ ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ಆಯೋಜಿಸಿದ “ಎಲೆವೆಟ್ 100′ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಹತ್ತನೇ ಸ್ಥಾನ ಪಡೆದುಕೊಳ್ಳುವ ಮೂಲಕ ಹತ್ತು ಲಕ್ಷ ನಗದು ಬಹುಮಾನ ತನ್ನದಾಗಿಸಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.