ಉಡುಪಿ : ನಗರದ ಎತ್ತರ ಪ್ರದೇಶಗಳಲ್ಲಿ ನೀರು ಪೂರೈಕೆ ವ್ಯತ್ಯಯ
Team Udayavani, Mar 8, 2022, 12:20 PM IST
ಉಡುಪಿ : ಬೇಸಗೆಯಲ್ಲಿ ನಗರಕ್ಕೆ ನೀರಿನ ಸಮಸ್ಯೆ ಉಂಟಾಗದಂತೆ ನಗರಸಭೆ ಮುಂಜಾಗ್ರತ ಕ್ರಮಗಳನ್ನು ಕೈಗೊಂಡರೂ ನಗರದ ಕೆಲವು ಎತ್ತರ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ಸಮಸ್ಯೆ ಉಂಟಾಗುತ್ತಿದೆ.
ಕುಡಿಯುವ ನೀರು ಪೂರೈಸುವ ಹಿರಿಯಡಕ ಸ್ವರ್ಣಾ ನದಿ ಬಜೆ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಮೇ ತಿಂಗಳ ಅಂತ್ಯದ ವರೆಗೆ ಲಭ್ಯವಿದೆ ಎಂದು ನಗರಸಭೆ ಆಡಳಿತ ತಿಳಿಸಿದೆ. ಪ್ರಸ್ತುತ ಬಜೆಯಲ್ಲಿ 5.85 ಮೀ. ನೀರಿನ ಮಟ್ಟವಿದೆ. ಕಳೆದ ವರ್ಷಕ್ಕಿಂತ ಈ ವರ್ಷ ನೀರಿನ ಪ್ರಮಾಣ ಉತ್ತಮವಾಗಿದ್ದರೂ, ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ.
ನಗರದ 35 ವಾರ್ಡ್‌ಗಳನ್ನು ಮೂರು ವಲಯಗಳಾಗಿ ವಿಂಗಡಿಸಿ ನಿತ್ಯ 8 ಗಂಟೆಗಳಂತೆ ನೀರು ಪೂರೈಕೆ ಮಾಡಲಾಗುತ್ತಿದೆ. ಮಣಿಪಾಲದ ಹುಡ್ಕೊ, ಅನಂತ ನಗರ, ಸರಳೇಬೆಟ್ಟು, ಚಿಟಾ³ಡಿ, ಕೊಳಂಬೆ, ಅಜ್ಜರಕಾಡು ಸಹಿತ ಕೆಲವು ಪ್ರದೇಶಗಳಲ್ಲಿ ನೀರು ಬರುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಕಳೆದ 15, 20 ದಿನಗಳಿಂದ ನೀರು ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ.
ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನ ವಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಶೀಘ್ರ ಪರಿಹಾರ
ಬಜೆ ಡ್ಯಾಂನಲ್ಲಿ 24 ಎಂಎಲ್‌ಡಿ ಸದ್ಯ ಪಂಪಿಂಗ್ ಆಗುತ್ತಿರುವ ಪ್ರಮಾಣ. ನಗರಕ್ಕೆ 32 ಎಂಎಲ್‌ಡಿ ಪ್ರಮಾಣ ನೀರಿನ ಅವಶ್ಯಕತೆ ಇದೆ. ಬೇಸಗೆಯಾದ್ದರಿಂದ ನೀರಿನ ಬಳಕೆ ಹೆಚ್ಚಾಗುತ್ತಿದೆ. ಕೆಎಂಸಿ ಆಸ್ಪತ್ರೆಗೆ ಪೂರೈಕೆಯಾಗುವ ನೀರಿನ ಅವಧಿಯನ್ನು ಕಡಿತಗೊಳಿಸಿ, ಈ ನೀರಿನ ಪ್ರಮಾಣವನ್ನು ನಗರಕ್ಕೆ ಬಳಕೆ ಮಾಡಿಕೊಳ್ಳಲಾಗುವುದು. ಎರಡು ಮೂರು ದಿನದ ಒಳಗೆ ಹೆಚ್ಚುವರಿ ಪಂಪ್ ಅಳವಡಿಸಿ ಹೆಚ್ಚುವರಿ ಪಂಪಿಂಗ್‌ಗೆ ಕ್ರಮವಹಿಸಲಾಗುವುದು.
– ಸುಮಿತ್ರಾ ನಾಯಕ್, ಅಧ್ಯಕ್ಷರು, ಉಡುಪಿ ನಗರಸಭೆ
ಇದನ್ನೂ ಓದಿ : ಪದೇ ಪದೆ ವಿದ್ಯುತ್ ಕಡಿತದಿಂದ ರೋಸಿ ಹೋದ ಜನತೆ : ಬಗೆಹರಿಯದ ವಿದ್ಯುತ್ ಸಮಸ್ಯೆ
ನಿತ್ಯ ಫೋನ್ ಕರೆ
ಅಧಿಕಾರಿಗಳು ಬಜೆಯಲ್ಲಿ ನೀರಿನ ಸಂಗ್ರಹವಿದೆ ಎನ್ನುತ್ತಿದ್ದಾರೆ. ಆದರೆ 15 ದಿನಗಳಿಂದ ನಮ್ಮ ವ್ಯಾಪ್ತಿಯ ಕೊಳಂಬೆ, ಸ್ಟೇಟ್ ಬ್ಯಾಂಕ್ ಲೇನ್, ಐಟಿಐ ಕಾಲೇಜು, ಶಾರಾದಾ ಟೆಂಪರ್ ಕಡೆಗಳಲ್ಲಿ ನೀರು ಸರಿಯಾಗಿ ಬರುತ್ತಿಲ್ಲ. ದಿನ ಬೆಳಗಾದರೆ ನೀರಿನ ಸಮಸ್ಯೆ ಹೇಳಿಕೊಂಡು 10 ರಿಂದ 15 ಕರೆಗಳು ಬರುತ್ತಿವೆ. ಬಹುತೇಕ ವಾರ್ಡ್‌ಗಳಲ್ಲಿಯೂ ಸಮಸ್ಯೆ ಇದೆ ರೀತಿಯಲ್ಲಿದೆ. ಅಧಿಕಾರಿಗಳು ಇದನ್ನು ಸಮರ್ಥವಾಗಿ ನಿರ್ವಹಿಸಬೇಕು.
– ರಮೇಶ್ ಕಾಂಚನ್, ವಿಪಕ್ಷ ನಾಯಕ, ಉಡುಪಿ ನಗರಸಭೆ.
ಇಂದು ನೀರಿಲ್ಲ
ಬಜೆ ಡ್ಯಾಂ ವ್ಯಾಪ್ತಿ ವಿದ್ಯುತ್ ವಿಭಾಗಕ್ಕೆ ಸಂಬಂಧಿಸಿ ಮೆಸ್ಕಾಂ ದುರಸ್ತಿ ಕಾರ್ಯ ಕೈಗೊಂಡ ಹಿನ್ನೆಲೆಯಲ್ಲಿ ಮಾ.8ರ ಇಡೀ ದಿನ ನೀರಿನ ಪೂರೈಕೆ ಇರುವು ದಿಲ್ಲ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಮಿತ ಬಳಕೆ ಅನಿವಾರ್ಯ
ಬಜೆ ಡ್ಯಾಂ ನೀರಿನ ಪ್ರಮಾಣ ಉತ್ತಮವಾಗಿದೆ. ಪ್ರಸ್ತುತ ಬೇಸಗೆಯಲ್ಲಿ ನೀರಿನ ಬಳಕೆ ಹೆಚ್ಚುತ್ತಿರುವುದರಿಂದ ವೇಗ ಕಡಿಮೆಯಾಗಿ ಎತ್ತರ ಪ್ರದೇಶದ ಕೆಲವು ಮನೆಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಜನರು ಸಾಧ್ಯವಾದಷ್ಟು ನೀರು ಮಿತವಾಗಿ ಬಳಕೆ ಮಾಡಬೇಕು. ತೋಟಕ್ಕೆ ಬಿಡುವುದು, ವಾಹನ ತೊಳೆಯಲು ನೀರನ್ನು ಬಳಸಬಾರದು.
– ಡಾ| ಉದಯ ಶೆಟ್ಟಿ, ಪೌರಾಯುಕ್ತರು, ನಗರಸಭೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.