Dubai Miracle Garden: ಮರು ಭೂಮಿಯಲ್ಲಿ ಮೂಡಿ ಬಂದ ಪುಷ್ಪ ಸಿರಿ ವೈಭವ
ವಿದೇಶಗಳಿಂದ ಅತೀ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ತಾಣವಿದು
Team Udayavani, Oct 16, 2024, 12:31 PM IST
ದುಬೈಯ ಮಿರಾಕಲ್ ಗಾರ್ಡನ್ ಸುಮಾರು 150 ಮಿಲಿಯನ್ ಗೂ ಮಿಕ್ಕಿದ ವಿವಿಧ ತಳಿಯ ನೈಸರ್ಗಿಕ ಹೂ ಗಿಡಗಳನ್ನೆ ಬೆಳೆಸಿಕೊಂಡು ಬಳಸಿಕೊಂಡು ನಿರ್ಮಿತವಾದ ನಂದನ ವನ. ಪುಷ್ಪ ಸಸ್ಯಗಳ ಜೇೂಡಣೆ ಅತ್ಯಂತ ಶಿಸ್ತು ಬದ್ಧವಾಗಿ ಸೌಂದರ್ಯದ ವಿನ್ಯಾಸದೊಂದಿಗೆ ಸೃಷ್ಟಿಸುವುದೆ ಇಲ್ಲಿನ ವಿಶಿಷ್ಟ್ಯತೆ.
ಬಹು ವಿಸ್ತಾರವಾಗಿ ರೂಪಿತವಾದ ಕಾರಣ ವಿಶ್ವದಲ್ಲಿಯೇ ಈ ಹೂದೇೂಟಕ್ಕೊಂದು ವಿಶೇಷವಾದ ಸ್ಥಾನ ಪಡೆದ ಹೂದೇೂಟವೆಂಬ ಖ್ಯಾತಿ ಇದಕ್ಕಿದೆ. ವಿಶ್ವದ ಪ್ರಥಮ ಮಿರಾಕಲ್ ಗಾರ್ಡನ್ ಎಂದೇ ಪ್ರಸಿದ್ಧಿ ಪಡೆದ ಪ್ರವಾಸಿಗರ ನೆಚ್ಚಿನ ತಾಣವಿದು.
ಇದರ ಸೌಂದರ್ಯತೆಯನ್ನು ಕಣ್ಣು ತುಂಬಿಸಿಕೊಳ್ಳ ಬೇಕಾದರೆ ಕನಿಷ್ಠ ಮೂರು ಗಂಟೆಗಳ ಕಾಲ ಬೇಕು. ಬೇಸಿಗೆಯಲ್ಲಿ ಮುಚ್ಚಿರುವ ಈ ತೋಟ ಚಳಿಗಾಲದಲ್ಲಿ ವೀಕ್ಷಣೆಗಾಗಿ ಮತ್ತೆ ಪವಾಡ ಸದೃಶವಾಗಿ ಮೈದಳೆದು ಬಾಗಿಲು ತೆರೆದುಕೊಳ್ಳುತ್ತದೆ..ದೇಶ ವಿದೇಶಗಳಿಂದ ಅತೀ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ತಾಣವಿದು.
ದುಬೈಯ ಆರ್ಥಿಕ ಅಭಿವೃದ್ಧಿಗೆ ಇದರ ಕೊಡುಗೆ ಅನನ್ಯವಾದ ವರದಾನವೆಂದೇ ಪರಿಗಣಿಸಲಾಗುತ್ತಿದೆ. ಒಮ್ಮೆ ನೇೂಡಿದರೆ ಮತ್ತೆ ನೇೂಡಬೇಕು ಅನ್ನುವಷ್ಟು ಪುಷ್ಪ ಸಂಪತ್ತಿನ ಸೌಂದರ್ಯದ ಸಸ್ಯ ಹೂಗಳ ಕಾಶಿ ಎಂದೇ ಕರೆಯಬಹುದಾದ ಪ್ರವಾಸಿ ಸೌಂದರ್ಯದ ತಾಣವಿದು.
ದುಬೈ ಮಿರಾಕಲ್ ಗಾರ್ಡನ್ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಪ್ರವಾಸಿಗರ ವೀಕ್ಷಣೆಗೆ ಅವಕಾಶವಿದೆ. ಶನಿವಾರ ಮತ್ತು ಭಾನುವಾರ ಮಾತ್ರ ಪ್ರವಾಸಿಗರ ಸಂಖ್ಯೆ ಹೆಚ್ಚಿರುವುದರಿಂದ ಬೆಳಗ್ಗೆ 9ರಿಂದ ರಾತ್ರಿ 11ರವರೆಗೆ ವೀಕ್ಷಿಸಬಹುದಾಗಿದೆ. ದುಬೈ ಮಿರಾಕಲ್ ಗಾರ್ಡನ್ ಗೆ ಭೇಟಿ ನೀಡಲು ಟಿಕೆಟ್ ಗಳನ್ನು ಆನ್ ಲೈನ್ ನಲ್ಲಿ ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ.
*ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ(ಅಬುಧಾಬಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adventurous: ಹುಟ್ಟು ಹಾಕುತ್ತ ಏಕಾಂಕಿಯಾಗಿ ಅಟ್ಲಾಂಟಿಕ್ ದಾಟುವ ಸಾಹಸಿ ಕನ್ನಡತಿ
Azerbaijan: ಅಜರ್ಬೈಜಾನ್‌ನ ಪ್ರವಾಸಿ ಸ್ಥಳಗಳು- ಪುರಾತನ, ಪ್ರಾಕೃತಿಕ ತಾಣಗಳ ರಾಷ್ಟ್ರ
Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು
ಬೆಳಗಾವಿ: ಪ್ರಾಚೀನ ಕಾಲದ ಬಾವಿಗಳಿಂದ ಪ್ರಸಿದ್ಧಿ ಹೊಂದಿದ ಅರಭಾಂವಿ
ಜಗತ್ತಿನ ಐದು ನಿಷೇಧಿತ ಸ್ಥಳಗಳು…ಸಾರ್ವಜನಿಕರಿಂದ ದೂರ ಇರುವ ಈ ಪ್ರದೇಶಗಳ ವಿಶೇಷತೆ ಏನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.