ಪ್ರವಾಹ ಪೀಡಿತ ಕೇರಳಕ್ಕೆ ದುಬೈನಿಂದ ಸಹಾಯ ಹಸ್ತ
Team Udayavani, Aug 12, 2019, 11:03 PM IST
ದುಬೈ: ಯುಎಇನಲ್ಲಿರುವ ಅಂತಾರಾಷ್ಟ್ರೀಯ ಸಂಸ್ಥೆಯೊಂದು ಭಾರತದ ಪ್ರವಾಹ ಪೀಡಿತ ರಾಜ್ಯ ಕೇರಳಕ್ಕೆ ತನ್ನ ಸ್ವಯಂ ಸೇವಕರನ್ನು ಕಳುಹಿಸಿಕೊಟ್ಟಿದೆ. ಈ ಮೂಲಕ ಮನೆ ಹಾಗೂ ತಮ್ಮ ನೆಲೆ ಕಳೆದುಕೊಂಡಿರುವ ಜನರ ಸಹಾಯಕ್ಕೆ ದುಬೈ ನೆರವಾಗಿದೆ.
ದುಬೈನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂತಾರಾಷ್ಟ್ರೀಯ ಸಂಘಟನೆ ಕೇರಳ ಮುಸ್ಲಿಂ ಕಲ್ಚರಲ್ ಸೆಂಟರ್ ಕೇರಳಕ್ಕೆ ನೆರವಾದ ಸಂಸ್ಥೆಯಾಗಿದೆ. ಇತ್ತೀಚೆಗೆ ಪ್ರವಾಹಕ್ಕೆ ತುತ್ತಾಗಿರುವ ಕೇರಳದ ಜನರಿಗೆ ತುರ್ತಾಗಿ ಬೇಕಾಗಿರುವ ಸೌಲಭ್ಯಗಳನ್ನು ಹೊಂದಿಸಲು ಈ ಸಂಸ್ಥೆ ಸಹಾಯ ಮಾಡುತ್ತಿದೆ.
ಅಬುಧಾಬಿಯಲ್ಲಿರುವ ಕೆ.ಎಂ.ಸಿ.ಸಿ.ಯಲ್ಲಿ 90 ಸಾವಿರ ಸದಸ್ಯರಿದ್ದು, ಅವುಗಳಲ್ಲಿ 40 ಸಾವಿರ ಮಂದಿ ದುಬೈನಲ್ಲಿ ಇದ್ದಾರೆ. ಗಲ್ಫ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ ಕೆ.ಎಂ.ಸಿ.ಸಿ.ಯ ಮುಖ್ಯ ಕಾರ್ಯದರ್ಶಿ ಮುಸ್ತಫಾ ವೆಂಗಾರಾ, ಸಂಸ್ಥೆಯ ಒಂದು ತಂಡ ಈಗಾಗಲೇ ಅತೀ ಹೆಚ್ಚು ಹಾನಿಯಾಗಿರುವ ವಯನಾಡ್, ಮಲಪುರಂ, ಕ್ಯಾಲಿಕಟ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಸೇವೆ ನೀಡುತ್ತಿದೆ. ಈ ರಾಜ್ಯಗಳ ಸ್ಥಳೀಯ ಸಂಘಟನೆಗಳ ಜತೆ ಸೇರಿಕೊಂಡು ಕರ್ತವ್ಯ ನಿರ್ವಹಿಸುತ್ತಿದೆ ಎಂದಿದ್ದಾರೆ.
ದೇಣಿಗೆ ಸಂಗ್ರಹ
ಈಗಾಗಲೇ ದುಬೈನಲ್ಲಿರುವ ಸಂಸ್ಥೆ ಇಲ್ಲಿರುವ ಕೇರಳಿಗರು ಸೇರಿದಂತೆ ದೇಶದ ನಾನಾ ರಾಜ್ಯಗಳ ಪ್ರಜೆಗಳಿಂದ ದೇಣಿಗೆಯನ್ನು ಸಂಗ್ರಹಿಸುತ್ತಿದ್ದಾರೆ. ಇದರಲ್ಲಿ ಮುಖ್ಯವಾಗಿ ಆಹಾರ ಮತ್ತು ಬಟ್ಟೆಯನ್ನು ನೀಡಲಾಗುತ್ತದೆ. ಇದರ ಭಾಗವಾಗಿ ಈಗಾಗಲೇ 5000 ಡ್ರೈ ಫ್ರುಟ್ಸ್‌ಗಳನ್ನು ಪೂರೈಸಲಾಗಿದ್ದು, ಸಂತ್ರಸ್ತರ ಕೈ ಸೇರಿದೆ ಎಂದು ಮಾಹಿತಿ ನೀಡಿದ್ದಾರೆ. ಕೇರಳಕ್ಕೆ ತೆರಳಿರುವ ತಂಡ ಪ್ರವಾಹ ಪೀಡಿತ 4 ಜಿಲ್ಲೆಗಳಿಗೆ ಅಗತ್ಯ ವಸ್ತುಗಳಾದ ಸಕ್ಕರೆ, ಕಾಫಿ, ಚಹಾ ಮತ್ತು ಅಕ್ಕಿಯನ್ನು ವಿತರಿಸುತ್ತಿದ್ದಾರೆ.
ಕಳೆದ ವರ್ಷ ಪ್ರವಾಹ ಸಂದರ್ಭ ನಿರ್ಮಾಣವಾದಗಲೂ ದಯಬೈನ ಈ ಸಂಸ್ಥೆ ಸಹಾಯ ಹಸ್ತ ಚಾಚಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
85 ಮಂದಿ ಸಾವು
ಕೇರಳದಲ್ಲಿನ ಭಾರೀ ಪ್ರವಾಹಕ್ಕೆ 85 ಮಂದಿ ಜೀವ ಕಳೆದುಕೊಂಡಿದ್ದು, 58 ಮಂದಿ ಕಾಣೆಯಾಗಿದ್ದಾರೆ. ರಾಜ್ಯದಲ್ಲಿ 1,654 ಪುನರ್‌ವಸತಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ 83,274 ಕುಟುಂಬಗಳು ಆಶ್ರಯ ಪಡೆದುಕೊಳ್ಳುತ್ತಿದ್ದು, 2,87,585 ಮಂದಿ ಇದ್ದಾರೆ. ಪ್ರವಾಹದಲ್ಲಿ 2,966 ಮನೆಗಳು ನಾಶವಾಗಿದ್ದು, 280 ಮನೆಗಳು ಭಾಗಶಃ ಹಾನಿಗೆ ತುತ್ತಾಗಿದೆ.
A high-level review meeting was held to assess the relief efforts. The Chief Minister also held a video conferencing session with the district collectors. In the meeting, CM instructed collectors to ensure that enough facilities are provided for those in the relief camps. pic.twitter.com/l0RQ5JS5ZP
— CMO Kerala (@CMOKerala) August 12, 2019
Update on #KeralaFloods Calamity (08/08/2019 to 12/08/2019 11:00AM): 76 lives have been lost; 58 are missing. There are now 1654 flood relief camps spread across the State. These camps host 287585 persons from 83274 families. pic.twitter.com/kKSKEEPr8r
— CMO Kerala (@CMOKerala) August 12, 2019
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.