ಇ-ಕೋರ್ಟ್ ಜತೆ ಆಸ್ತಿ ದಾಖಲೆ ವಿಲೀನ ಶೀಘ್ರ
Team Udayavani, Jun 28, 2021, 7:10 AM IST
ಹೊಸದಿಲ್ಲಿ : ಇ-ಕೋರ್ಟ್ ಹಾಗೂ ಭೂದಾಖಲೆಗಳು, ಭೂನೋಂದಣಿ ದತ್ತಾಂಶಗಳನ್ನು ಪರಸ್ಪರ ಜೋಡಿಸಲು ಕೇಂದ್ರ ಸರಕಾರ ನಿರ್ಧರಿಸಿದ್ದು, ಭೂಮಿ ಖರೀದಿಸುವವರು ಅದು ಯಾವುದೇ ಕಾನೂನು ವಿವಾದದಲ್ಲಿ ಇದೆಯೇ ಎಂಬುದನ್ನು ಸುಲಭವಾಗಿ ತಿಳಿಯಬಹುದಾಗಿದೆ.
ಈ ಯೋಜನೆ ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಹರಿಯಾಣಗಳಲ್ಲಿ ಯಶಸ್ವಿಯಾಗಿ ಅನು ಷ್ಠಾನಗೊಂಡಿದೆ. ಇ-ಕೋರ್ಟ್ ಹಾಗೂ ಭೂ ದಾಖಲೆಗಳು ಮತ್ತು ನೋಂದಣಿ ದತ್ತಾಂಶ ಗಳ ಜೋಡಣೆಯಿಂದ ಅಕ್ರಮ ಭೂವ್ಯವಹಾರಗಳು ಕಡಿಮೆ ಯಾಗ ಲಿದ್ದು, ಭೂವಿವಾದ ಪರಿಹಾರ ಸುಲಭ ವಾಗಲಿದೆ, ನ್ಯಾಯಾಲಯಗಳ ಮೇಲೆ ದಾವೆಗಳ ಹೊರೆಯೂ ತಗ್ಗಲಿದೆ ಎಂದು ಸರಕಾರ ಪ್ರತಿಪಾದಿಸಿದೆ.
ಹೈಕೋರ್ಟ್‌ಗಳಿಗೆ ಪತ್ರ
ಕೇಂದ್ರ ಕಾನೂನು ಸಚಿವಾಲಯವು ಎಲ್ಲ ರಾಜ್ಯ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಗಳಿಗೆ ಪತ್ರ ಬರೆದು ಆಸ್ತಿಗಳ ನೋಂದಣಿ ದಾಖಲೆಗಳನ್ನು ಇ- ಕೋರ್ಟ್ ದಾಖಲೆಗಳೊಂದಿಗೆ ಮತ್ತು ರಾಷ್ಟ್ರೀಯ ನ್ಯಾಯಾಂಗ ದಾಖಲೆಗಳ ಗ್ರಿಡ್ (ಎನ್‌ಜೆಡಿಜಿ) ದಾಖಲೆಗಳೊಂದಿಗೆ ವಿಲೀನಗೊಳಿಸಲು ಎಲ್ಲ ರಾಜ್ಯ ಸರಕಾರಗಳಿಗೆ ಅನುಮತಿ ನೀಡಬೇಕು ಎಂದು ಸೂಚಿಸಿದೆ.
ಭೂ ವ್ಯಾಜ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಇದರಿಂದ ಆಸ್ತಿ ಖರೀದಿ ವೇಳೆ ಯಾರಿಗೂ ಕಾನೂನಾತ್ಮಕ ಅಡೆತಡೆಗಳು, ತೊಂದರೆಗಳು ಉಂಟಾಗದೆ ಸುಲಲಿತ ವ್ಯವಹಾರ ನಡೆಸಲು ಅನುಕೂಲ ವಾಗುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಕೇಂದ್ರದ ಪತ್ರಕ್ಕೆ ತ್ರಿಪುರಾ, ಮಧ್ಯ ಪ್ರದೇಶ, ರಾಜಸ್ಥಾನ, ಅಸ್ಸಾಂ, ಅರುಣಾಚಲ ಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಹಿಮಾಚಲ ಪ್ರದೇಶ ಹೈಕೋರ್ಟ್‌ಗಳು ಸ್ಪಂದಿಸಿವೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ವಿಶ್ವಸಂಸ್ಥೆಯ ಸಲಹೆಯ ಅನ್ವಯ ಜಾರಿ
ಜಗತ್ತಿನ ಎಲ್ಲ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆಹಾರ, ನೈರ್ಮಲ್ಯ, ಲಿಂಗ ಸಮಾನತೆ, ಶಿಕ್ಷಣ ಮತ್ತಿತರ ಸುಮಾರು 17 ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವಂತೆ ವಿಶ್ವಸಂಸ್ಥೆ ಸುಸ್ಥಿರ ಗುರಿಗಳನ್ನು ನೀಡಿದೆ. ಅದರಲ್ಲೊಂದು ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ. ಅದಕ್ಕಾಗಿ ಆಸ್ತಿ ನೋಂದಣಿ ವ್ಯವಸ್ಥೆಯನ್ನು ಪಾರದರ್ಶಕವಾಗಿಸುವಂತೆ ವಿಶ್ವಸಂಸ್ಥೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಈ ನಿರ್ಧಾರ ತೆಗೆದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.