ಇ- ಫೈಲಿಂಗ್: ಮಂಗಳೂರು ಪೊಲೀಸ್ ಕಮಿಷನರ್ ಕಚೇರಿ ನಂ. 1
Team Udayavani, Jun 12, 2020, 5:30 AM IST
ವಿಶೇಷ ವರದಿ- ಮಹಾನಗರ: ಮಂಗಳೂರು ಪೊಲೀಸ್ ಕಮಿಷನರ್ ಕಚೇರಿ ಕಡತ ನಿರ್ವಹಣೆಯನ್ನು ಇ- ತಂತ್ರಾಂಶದ ಮೂಲಕ ಹಸ್ತ ಚಾಲಿತ (ಮ್ಯಾನ್ಯುವಲ್) ವ್ಯವಸ್ಥೆ ಯಿಂದ ಎಲೆಕ್ಟ್ರಾನಿಕ್ ವ್ಯವಸ್ಥೆಗೆ ಬದಲಾವಣೆ ಮಾಡಿಕೊಂಡು 8 ತಿಂಗಳಾಗುತ್ತಿದ್ದು, ಇದೀಗ ಇ-ಫೈಲಿಂಗ್ ವ್ಯವಸ್ಥೆ ಯಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ.
ಪೊಲೀಸ್ ಇಲಾಖೆಯಲ್ಲಿ 2019ರ ಜುಲೈನಲ್ಲಿ ಇ- ಫೈಲಿಂಗ್ ವ್ಯವಸ್ಥೆ ಅನು ಷ್ಠಾನಕ್ಕೆ ಬಂದಿತ್ತು. ಕೇಂದ್ರ ಸಿಐಡಿ ಕಚೇರಿ ಮತ್ತಿತರ ಕೆಲವು ಕಚೇರಿಗಳು ತತ್ ಕ್ಷಣದಿಂದಲೇ ಇ-ಫೈಲಿಂಗ್ ವ್ಯವಸ್ಥೆ ಆರಂಭಿಸಿದ್ದವು. ಮಂಗಳೂರು ಕಮಿ ಷನರ್ ಕಚೇರಿಯು 2019ರ ಅಕ್ಟೋಬರ್‌ನಿಂದ ಅದ್ಭುತ ಸಾಧನೆ ಇ-ಫೈಲಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಕೆಲವೇ ತಿಂಗಳಲ್ಲಿ ಮಂಗಳೂರು ಕಚೇರಿಯು ರಾಜ್ಯದ ಇತರ ಎಲ್ಲ ಪೊಲೀಸ್ ಕಚೇರಿಗಳನ್ನು ಹಿಂದಿಕ್ಕಿ ಅದ್ಭುತ ಸಾಧನೆ ಮಾಡಿದೆ. ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯ ಸಿಎಸ್‌ಬಿ (ಸಿಟಿ ಸ್ಪೆಷಲ್ ಬ್ರ್ಯಾಂಚ್) ವಿಭಾಗವನ್ನು ಹೊರತುಪಡಿಸಿ ಉಳಿದಂತೆ ಎಲ್ಲ ವಿಭಾಗಗಳನ್ನು ಇ- ಫೈಲಿಂಗ್ ವ್ಯಾಪ್ತಿಗೆ ತರಲಾಗಿದೆ.
ಬಹುತೇಕ ಪೇಪರ್‌ಲೆಸ್ ಆಗಿವೆ. (ಸಿಎಸ್‌ಬಿ ವಿಭಾಗವನ್ನು ಗೌಪ್ಯತೆ ಕಾಪಾಡುವ ಕಾರಣಕ್ಕಾಗಿ ಪೂರ್ಣ ಪ್ರಮಾಣದಲ್ಲಿ ಇ-ಆಡಳಿತ ವ್ಯಾಪ್ತಿಗೆ ಒಳಪಡಿಸಿಲ್ಲ.) 2019ರ ಅಕ್ಟೋಬರ್‌ನಲ್ಲಿ ಕಚೇರಿಯಲ್ಲಿ ಇ- ಫೈಲಿಂಗ್ ವ್ಯವಸ್ಥೆ ಅನುಷ್ಠಾನಕ್ಕೆ ಬಂದ ಬಳಿಕ ಕಡತಗಳ ವಿಲೇವಾರಿ ತ್ವರಿತಗತಿಯಲ್ಲಿ ಆಗುತ್ತಿದೆ. ಮುಂದಿನ ಹಂತದಲ್ಲಿ ಕಮಿಷನರೆಟ್ ವ್ಯಾಪ್ತಿಯ ಎಸಿಪಿ ಕಚೇರಿಗಳನ್ನು (ಉತ್ತರ, ದಕ್ಷಿಣ, ಕೇಂದ್ರೀಯ, ಸಂಚಾರ ವಿಭಾಗ) ಇ- ಫೈಲಿಂಗ್ ವ್ಯಾಪ್ತಿಗೆ ಒಳ ಪಡಿಸುವ ಉದ್ದೇಶವನ್ನು ಕಮಿಷನರೆಟ್ ಹೊಂದಿದೆ.
ಇ-ಫೈಲಿಂಗ್ ವ್ಯವಸ್ಥೆಯನ್ನು ಅಳವಡಿ ಸುವುದಕ್ಕಾಗಿ ಸಿಬಂದಿಗೆ ರಾಜ್ಯದ ವಿವಿಧೆಡೆ ಕಳುಹಿಸಿ ತರಬೇತಿ ನೀಡಲಾಗಿದೆ. ಕಚೇರಿಯ ಸಹಾಯಕ ಆಡಳಿತಾಧಿಕಾರಿ ರವಿಚಂದ್ರ ಅವರು ಕಳೆದ ಫೆಬ್ರವರಿಯಲ್ಲಿ ಹೊಸದಿಲ್ಲಿಗೆ ತೆರಳಿ ರಾಷ್ಟ್ರಮಟ್ಟದ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಬಂದಿ ದ್ದಾರೆ ಎಂದು ಪೊಲೀಸ್ ಆಯುಕ್ತ ಡಾ | ಹರ್ಷ ಪಿ.ಎಸ್. ತಿಳಿಸಿದ್ದಾರೆ. ರಾಜ್ಯದ ಡಿಜಿಪಿ ಕಚೇರಿಯಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಇ-ಫೈಲಿಂಗ್ ವ್ಯವಸ್ಥೆ ಅನುಷ್ಠಾನಗೊಂಡಿಲ್ಲ. ಅದಿನ್ನೂ ಇ- ಫೈಲಿಂಗ್ ಪ್ರಕ್ರಿಯೆಯ ಹಂತದಲ್ಲಷ್ಟೇ ಇದೆ. ಮಂಗಳೂರು ಕಚೇರಿಯ ಸಿಬಂದಿ ಮಾಹಿತಿ ತಂತ್ರಜ್ಞಾನದಲ್ಲಿ ಎಷ್ಟೊಂದು ಪಳಗಿದ್ದಾರೆ ಎಂದರೆ, ಇತ್ತೀಚೆಗೆ ಆಯುಕ್ತರ ಕಚೇರಿಯ ಸಿಬಂದಿ ಅಲ್ಲಿನ ಶಾಖಾಧಿಕಾರಿ ಹಂಪಣ್ಣ ಅವರ ಹುಟ್ಟುಹಬ್ಬ ಆಚರಿಸುವಾಗ ವಿಶೇಷ ರೀತಿಯ ಕೇಕ್ ತಯಾರಿಸಿ, ಕೇಕ್‌ನ ಮೇಲ್ಭಾಗದಲ್ಲಿ ಪ್ರಶಂಸಾಪತ್ರವನ್ನು ಮುದ್ರಿಸಿ ಡಿಜಿಟಲ್ ಸಹಿ ಮಾಡಿ ಶುಭಾಶಯ ಕೋರಿದ್ದರು.
42,803 ಕಡತ ಇ-ಫೈಲ್
2020ರ ಜೂ. 3ರ ವೇಳೆಗೆ ಮಂಗಳೂರು ಕಚೇರಿಯಲ್ಲಿ 42,803 ಕಡತಗಳನ್ನು ಇ-ಫೈಲ್ ಮಾಡಿ ಮೂವ್ ಮಾಡಲಾಗಿದೆ 46,162 ಕಡತಗಳಿಗೆ ಇ- ರಿಸಿಪ್ಟ್ ಮಾಡಲಾಗಿದೆ. ರಾಜ್ಯದ ಬೇರೆ ಯಾವುದೇ ಪೊಲೀಸ್ ಕಮಿಷನರ್ ಕಚೇರಿ, ಐಜಿಪಿ ಕಚೇರಿ ಅಥವಾ ಎಸ್‌ಪಿ ಕಚೇರಿಯಲ್ಲಿ ಇಷ್ಟೊಂದು ಪ್ರಮಾಣದ ಸಾಧನೆ ಆಗಿಲ್ಲ. ಪ್ರಥಮವಾಗಿ ಇ-ಫೈಲಿಂಗ್ ಆರಂಭಿಸಿದ ಬೆಂಗಳೂರಿನ ಸಿಐಡಿ ಕಚೇರಿ 2ನೇ ಸ್ಥಾನದಲ್ಲಿದೆ. ಸಿಐಡಿ ಕಚೇರಿಯಲ್ಲಿ ಜೂ. 3ರ ತನಕ 20,550 ಕಡತಗಳನ್ನು ಇ- ಫೈಲ್ ಮಾಡಿ ಮೂವ್ ಮಾಡಲಾಗಿದೆ ಹಾಗೂ 16,656 ಕಡತಗಳಿಗೆ ಇ-ರಿಸಿಪ್ಟ್ ಮಾಡಲಾಗಿದೆ. ಎಸ್‌ಪಿ ಕಚೇರಿಗಳ ಪೈಕಿ ಮಂಡ್ಯ ಜಿಲ್ಲೆ ಮುಂಚೂಣಿಯಲ್ಲಿದ್ದು, 14,311 ಕಡತಗಳನ್ನು ಇ- ಫೈಲ್ ಮಾಡಿ ಮೂವ್ ಮಾಡಲಾಗಿದೆ ಹಾಗೂ 6164 ಕಡತಗಳಿಗೆ ಇ-ರಿಸಿಪ್ಟ್ ಮಾಡಲಾಗಿದೆ. ದ್ವಿತೀಯ ಸ್ಥಾನದಲ್ಲಿರುವ ದ.ಕ. ಎಸ್‌ಪಿ ಕಚೇರಿಯಲ್ಲಿ 10,713 ಇ- ಫೈಲ್ ಮೂವ್ ಮಾಡಲಾಗಿದೆ ಹಾಗೂ 6,215 ಇ- ರಿಸಿಪ್ಟ್ ಮಾಡ ಲಾಗಿದೆ.
ಮಾದರಿ
ಇ-ಫೈಲಿಂಗ್ ವ್ಯವಸ್ಥೆಯ ಸಾಧನೆಯಲ್ಲಿ ಮಂಗಳೂರು ಕಮಿಷನರ್ ಕಚೇರಿ ರಾಜ್ಯದಲ್ಲಿಯೇ ಮುಂಚೂಣಿ ಯಲ್ಲಿದ್ದು, ಮಾದರಿಯಾಗಿದೆ. ಎಂಟ್ರಿಯಿಂದ ಹಿಡಿದು ಡಿಸ್‌ಪ್ಯಾಚ್‌ವರೆಗಿನ ಪ್ರಕ್ರಿಯೆ 6-7 ತಾಸುಗಳಲ್ಲಿ ಮುಗಿಯುತ್ತದೆ. ಇದರಿಂದ ಸಾರ್ವಜನಿಕರಿಗೂ ಅನುಕೂಲವಾಗಿದೆ. ಕೇಂದ್ರ ಕಚೇರಿಗೂ ಅವತ್ತವತ್ತೇ ಕಡತಗಳು ರವಾನೆಯಾಗುತ್ತವೆ.
-ಡಾ| ಹರ್ಷ ಪಿ.ಎಸ್.
ಪೊಲೀಸ್ ಕಮಿಷನರ್
ಸುಸಜ್ಜಿತ ವ್ಯವಸ್ಥೆ
ಮಂಗಳೂರು ಕಚೇರಿ ಇ-ಫೈಲಿಂಗ್‌ನ ಸಾಧನೆಯಲ್ಲಿ ಮುಂದೆ ಇದೆ. ಪೊಲೀಸ್ ಆಯುಕ್ತರ ಉತ್ತೇಜನ ಮತ್ತು ಸಲಹೆ ಈ ಸಾಧನೆಗೆ ಪ್ರೇರಣೆ ಮತ್ತು ಕಾರಣ. 2019ರ ಜುಲೈನಲ್ಲಿ ಅಧಿಕಾರ ಸ್ವೀಕರಿಸಿದ ಕೂಡಲೇ ಅವರು ಇ- ಆಡಳಿತದ ಬಗ್ಗೆ ಸೂಚನೆ ನೀಡಿ ಅಗತ್ಯ ಸಹಕಾರದ ಭರವಸೆ ನೀಡಿದ್ದರು. ಸೆ. 30 ನಮಗೆ ಗಡುವು ವಿಧಿಸಿದ್ದರು. ಸೆ. 29ರಂದು ಪ್ರಾಯೋಗಿಕವಾಗಿ ಇ- ಫೈಲಿಂಗ್ ಆರಂಭಿಸಿದ್ದೆವು. ಅ. 1ರಿಂದ ಸುಸಜ್ಜಿತವಾಗಿ ಇ- ಫೈಲಿಂಗ್ ಫೈಲಿಂಗ್ ವ್ಯವಸ್ಥೆಯನ್ನು ಆರಂಭಿಸಿದ್ದೇವೆ.
-ರವಿಚಂದ್ರ
ಕಚೇರಿಯ ಸಹಾಯಕ ಆಡಳಿತಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.