ಇ-ಶ್ರಮ್ ಯೋಜನೆ : ಯಾರು ಅರ್ಹರು? ನೋಂದಣಿ ಹೇಗೆ? ಇಲ್ಲಿದೆ ಮಾಹಿತಿ
ಉಡುಪಿ ಜಿಲ್ಲೆಯಲ್ಲಿ 1,05,439 ನೋಂದಣಿ
Team Udayavani, Mar 10, 2022, 11:56 AM IST
ಉಡುಪಿ : ಕೇಂದ್ರ ಸರಕಾರದ ಇ-ಶ್ರಮ್ ಪೋರ್ಟಲ್‌ನಲ್ಲಿ ಜಿಲ್ಲೆಯ 1,05,439 ಅಸಂಘಟಿತ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ರಾಜ್ಯ ಸೇವಾ ಕೇಂದ್ರದಲ್ಲಿ 16, ಸಾಮಾನ್ಯ ಸೇವಾ ಕೇಂದ್ರದಲ್ಲಿ ಸಿಎಸ್‌ಸಿ 62,913, ಸ್ವಯಂ ನೋಂದಣಿ 42,510 ಆಗಿದೆ.
ಅಸಂಘಟಿತ ವಲಯದ ಕಾರ್ಮಿಕರ ಎಲ್ಲ ಮಾಹಿತಿ, ಡೇಟಾವನ್ನು ಟ್ರ್ಯಾಕ್ ಮಾಡಲು ಮತ್ತು ಸಂಗ್ರಹಿಸಲು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಈ ಪೋರ್ಟಲ್ ಆರಂಭಸಿದೆ.
ಅಸಂಘಟಿತ ವಲಯದ ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಮನೆ ಕೆಲಸ ಗಾರರು, ಕೃಷಿ ಕಾರ್ಮಿಕರು ಸೇರಿ ವಿವಿಧ ವಲಯ ದಲ್ಲಿರುವ ಅಸಂಘಟಿತ ಕಾರ್ಮಿಕರು ಇ-ಶ್ರಮ್ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.
ನೋಂದಣಿಯಾದ ಅನಂತರ ಸರಕಾರದಿಂದ ಇ-ಶ್ರಮ್ ಕಾರ್ಡ್ ನೀಡಲಾಗುತ್ತದೆ. ಕಾರ್ಮಿಕನು ಸರಕಾರದ ಯೋಜನೆಗಳ ಪ್ರಯೋಜನವನ್ನು ನೇರವಾಗಿ ಪಡೆಯಲು ಸಾಧ್ಯವಾಗುತ್ತದೆ.
ಜಿಲ್ಲೆಯ ವಲಸೆ ಕಾರ್ಮಿಕರ ಸಂಖ್ಯೆ ವಿರಳ
ರಾಜ್ಯದ ಪಟ್ಟಿಯನ್ನು ಗಮನಿಸಿದಾಗ ಇ-ಶ್ರಮ್ ನೋಂದಣಿಯಲ್ಲಿ ಉಡುಪಿ ಜಿಲ್ಲೆ 24ನೇ ಸ್ಥಾನದಲ್ಲಿದೆ. ಇದಕ್ಕೆ ಕಾರಣವೂ ಇದೆ. ಬೆಳಗಾವಿ, ಬಳ್ಳಾರಿ ಸಹಿತ ಅನ್ಯ ಜಿಲ್ಲೆಯ ಮಂದಿ ಉಡುಪಿಯಲ್ಲಿ ನೋಂದಣಿ ಮಾಡಿಸಿದರೂ ಜಿಲ್ಲೆ ನಮೂದಿಸುವಾಗ ಅವರ ಜಿಲ್ಲೆಯ ಹೆಸರು ನಮೂದಿಸುವಾಗ ಜಿಲ್ಲೆಯಲ್ಲಿ ಅದೆಷ್ಟು ನೋಂದಣಿಯಾದರೂ ಅದು ಆಯಾ ಜಿಲ್ಲೆಗಳಿಗೆ ಸಲ್ಲುತ್ತದೆ. ನೋಂದಣಿ ಪ್ರಕ್ರಿಯೆಯಲ್ಲಿ ಬೆಳಗಾವಿ ಪ್ರಥಮ ಸ್ಥಾನದಲ್ಲಿದ್ದರೆ ಬಳ್ಳಾರಿ ದ್ವಿತೀಯ ಸ್ಥಾನದಲ್ಲಿದೆ. ಕೊಡಗು ಕೊನೆಯ ಸ್ಥಾನದಲ್ಲಿದೆ.
ಮಾನದಂಡ ಹಾಗೂ ದಾಖಲೆ
ಇ-ಶ್ರಮ್ ಕಾರ್ಡ್ ನೋಂದಣಿ ಮಾಡಿಸಿ ಕೊಳ್ಳುವವರ ವಯೋಮಿತಿ 16-59 ವರ್ಷಗಳ ನಡುವೆ ಇರಬೇಕು. ಇಪಿಎಫ್ಒ ಅಥವಾ ಇಎಸ್‌ಐಸಿ ಸದಸ್ಯರಾಗಿರಬಾರದು. ಆದಾಯ ತೆರಿಗೆ ಪಾವತಿಸುವವರಾಗಿರಬಾರದು. ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರಬೇಕು. ಇಂತಹ ವರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ವಿದ್ಯುತ್ ಬಿಲ…/ಪಡಿತರ ಚೀಟಿ, ಮೊಬೈಲ್ ಸಂಖ್ಯೆಯನ್ನು ನೀಡಬೇಕು.
ಇದನ್ನೂ ಓದಿ : ಮತಎಣಿಕೆ ದಿನದಂದೇ ಗೋವಾ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದೇಕೆ? ಏನಿದು ಪ್ರಕರಣ
ಯಾರು ಅರ್ಹರು?
ಸಣ್ಣ ಮತ್ತು ಅತಿ ಸಣ್ಣ ರೈತರು, ಕೃಷಿ ಕಾರ್ಮಿಕರು, ಬೆಳೆಗಾರು, ಮೀನುಗಾರರು, ಪಶು ಸಂಗೋಪನೆಯಲ್ಲಿ ತೊಡಗಿರುವವರು, ಬೀಡಿಕಟ್ಟುವವರು, ಲೇಬಲ್ ಮತ್ತು ಪ್ಯಾಕಿಂಗ್, ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು, ಚರ್ಮದ ಕೆಲಸಗಾರರು, ನೇಕಾರರು, ಬಡಗಿ, ಇಟ್ಟಿಗೆ ಹಾಗೂ ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡುವವರು, ಗರಗಸದ ಕಾರ್ಖಾನೆಯಲ್ಲಿ ಕೆಲಸ ಮಾಡುವವರು, ಶುಶ್ರೂಷಕಿಯರು, ಗೃಹ ಕಾರ್ಮಿಕರು, ûೌರಿಕರು, ತರಕಾರಿ ಮತ್ತು ಹಣ್ಣು ಮಾರಾಟಗಾರರು, ಸುದ್ದಿ ಪತ್ರಿಕೆ ಮಾರಾಟಗಾರರು, ಆಟೋ ಚಾಲಕರು, ರೇಷ್ಮೆ ಕೃಷಿ ಕಾರ್ಮಿಕರು, ಗೃಹ ಸೇವಕರು, ಬೀದಿ ಬದಿ ವ್ಯಾಪಾರಿಗಳು, ಆಶಾ ಕಾರ್ಯಕರ್ತೆಯರು, ವಲಸೆ ಕಾರ್ಮಿಕರು.
ನೋಂದಣಿ ಹೇಗೆ?
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಇ-ಶ್ರಮ್ ಪೋರ್ಟಲ್‌ಗೆ ಅರ್ಜಿ ಸಲ್ಲಿಸುವವರಿಗೆ ವಿಶಿಷ್ಟ ಗುರುತು ಸಂಖ್ಯೆ ಕಾರ್ಡ್ ಒದಗಿಸುತ್ತದೆ. ಇ-ಶ್ರಮ್ ಪೋರ್ಟಲ್ ನೋಂದಣಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸಮೀ ಪದ ಸಾಮಾನ್ಯ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆಧಾರ್
ಕಾರ್ಡ್‌ಗೆ ಲಿಂಕ್ ಮಾಡಿದ ಮೊ. ಸಂಖ್ಯೆಯನ್ನು ಬಳಸಿಕೊಂಡು ಇ ಶ್ರಮ್ ಪೋರ್ಟಲ್‌ನಲ್ಲಿ ಸ್ವಯಂ ನೋಂದಣಿ ಮಾಡಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.