Earthquake Strikes: ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲಿ ಭೂಕಂಪ
5.3 ರಿಕ್ಟರ್ ತೀವ್ರತೆ ದಾಖಲು, 1969ರಲ್ಲಿ ಭದ್ರಾಚಲಂನಲ್ಲಿ 5.7 ಪ್ರಮಾಣದ ಭೂಕಂಪ
Team Udayavani, Dec 5, 2024, 3:45 AM IST
ಹೈದರಾಬಾದ್/ನಾಗಪುರ: ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಹಲವು ಸ್ಥಳಗಳಲ್ಲಿ ಬುಧವಾರ ಬೆಳಗ್ಗೆ ಭೂಕಂಪ ಸಂಭವಿಸಿದೆ. ರಿಕ್ಟರ್‌ಮಾಪಕದಲ್ಲಿ ಅದರ ಪ್ರಮಾಣ 5.3 ಎಂದು ದಾಖಲಾಗಿದೆ. ಅದರ ಕೇಂದ್ರ ಬಿಂದು ತೆಲಂಗಾಣ ರಾಜಧಾನಿ ಹೈದರಾಬಾದ್‌ನಿಂದ 200 ಕಿ.ಮೀ. ದೂರದಲ್ಲಿರುವ ಮುಲುಗು ಎಂಬ ಸ್ಥಳದಲ್ಲಿತ್ತು.
ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ 5ಕ್ಕಿಂತ ಹೆಚ್ಚು ಭೂಕಂಪನದ ತೀವ್ರತೆ ಇರುವುದು ವಿರಳ. 1969ರಲ್ಲಿ ಭದ್ರಾಚಲಂನಲ್ಲಿ 5.7 ತೀವ್ರತೆಯ ಭೂಕಂಪ ದಾಖಲಾಗಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ತೆಲಂಗಾಣದಲ್ಲಿ 5.3 ಪ್ರಮಾಣದ ಭೂಕಂಪ ದಾಖಲಾಗಿದೆ. 1969ರ ಬಳಿಕ ಸಣ್ಣ ಪ್ರಮಾಣದ ಭೂಕಂಪನಗಳು ದಾಖಲಾಗಿದ್ದವು ಎಂದು ರಾಷ್ಟ್ರೀಯ ಭೂಗೋಳಿಕ ಸಂಶೋಧನ ಸಂಸ್ಥೆಯ (ಎನ್‌ಜಿಆರ್‌ಐ) ನಿವೃತ್ತ ವಿಜ್ಞಾನಿ ಪೂರ್ಣಚಂದ್ರ ರಾವ್ ಪ್ರತಿಕ್ರಿಯಿಸಿದ್ದಾರೆ.
ಮುಲುಗುವಿನಲ್ಲಿ ಬೆಳಗ್ಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಈ ವೇಳೆ ಎಲ್ಲರೂ ಭಯಗೊಂಡಿದ್ದಾರೆ. ಸೀಲಿಂಗ್ ಫ್ಯಾನ್‌ಗಳು ಅಲ್ಲಾಡಿವೆ. ಇನ್ನು ಟೇಬಲ್, ಕಬೋರ್ಡ್ ಗಳಲ್ಲಿಡಲಾಗಿದ್ದ ವಸ್ತುಗಳು ನೆಲಕ್ಕೆ ಬಿದ್ದು ನಾಶವಾಗಿವೆ ಎಂದು ಸ್ಥಳೀಯರು ಹೇಳಿದ್ದಾರೆ. ತೆಲಂಗಾಣಕ್ಕೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಗಡಿcರೋಲಿ, ಚಂದ್ರಾಪುರ, ನಾಗಪುರಗಳಲ್ಲಿಯೂ ಅಲ್ಪ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ.
ದಕ್ಷಿಣ ಭಾರತದಲ್ಲೇಕೆ ಭೂಕಂಪ ಕಡಿಮೆ?
ದಕ್ಷಿಣ ಭಾರತದಲ್ಲಿರುವ ಭೂಫಲಕಗಳ ರಚನೆಯಲ್ಲಿ ಹೆಚ್ಚಿನ ಬಿರುಕುಗಳು ಇಲ್ಲದಿರುವುದರಿಂದ ಹಾಗೂ ಇದು ಸಾಕಷ್ಟು ಗಟ್ಟಿಯಾಗಿರುವುದರಿಂದ ಇಲ್ಲಿ ಭೂಕಂಪಗಳ ಪ್ರಮಾಣ ಕಡಿಮೆ ಇದೆ. ಅಲ್ಲದೆ, ದಖನ್ ಪ್ರಸ್ಥಭೂಮಿ ಗಟ್ಟಿಯಾದ ಕಲ್ಲುಗಳಿಂದ ರಚನೆಯಾಗಿದ್ದು, ಇವು ಭೂಮಿ ಕಂಪಿಸುವುದನ್ನು ತಡೆಯುವುದರಿಂದ ಇಲ್ಲಿ ಭೂಕಂಪನ ಸಾಧ್ಯತೆ ಕಡಿಮೆ ಎಂದು ತಜ್ಞರು ಹೇಳಿದ್ಧಾರೆ. ಒಂದು ವೇಳೆ ಇಲ್ಲಿ ಭೂಮಿ ಕಂಪಿಸಿದರೂ ಅಪಾಯಗಳ ಸಾಧ್ಯತೆಯೂ ಕಡಿಮೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Car Crash: ಕಾರು ರೇಸ್ ತರಬೇತಿ ವೇಳೆ ನಟ ಅಜಿತ್ ಕುಮಾರ್ ಕಾರು ಅಪಘಾತ!
Ayodhya: ಕನ್ನಡಕದಲ್ಲಿ ರಹಸ್ಯ ಕ್ಯಾಮರಾ ಬಳಸಿ ರಾಮಮಂದಿರದ ಒಳದೃಶ್ಯಗಳ ಸೆರೆಹಿಡಿದ ಯುವಕ!
Girl Trapped: 24 ಗಂಟೆಗಳ ಕಾಲ 540 ಅಡಿ ಆಳದ ಕೊಳವೆ ಬಾವಿಯಲ್ಲಿ ಸಿಲುಕಿದ್ದ ಯುವತಿ ಮೃತ್ಯು
Hunger Strike: ಹದಗೆಟ್ಟ ಅರೋಗ್ಯ… ಪ್ರಶಾಂತ್ ಕಿಶೋರ್ ಆಸ್ಪತ್ರೆಗೆ ದಾಖಲು
Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.