ಮೂರು ತ್ತೈಮಾಸಿಕ: ಸಹಜ…ಸುರಕ್ಷಿತ ಹೆರಿಗೆಗೆ ಸುಲಭ ಯೋಗ
ಉತ್ಕಟಾಸನ ಮಾಡುವುದರಿಂದ ಗರ್ಭಿಣಿಯರ ಸ್ನಾಯುಗಳು ಬಲಗೊಳ್ಳುತ್ತವೆ.
Team Udayavani, Jan 1, 2021, 4:32 PM IST
ಗರ್ಭಾವಸ್ಥೆಯಲ್ಲಿ ಮಹಿಳೆಯರು ಅನೇಕ ವಿಧದ ಆರೋಗ್ಯ, ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉದಾಹರಣೆಗೆ ಕಾಲು ಸೆಳೆತ, ಉಸಿರಾಟದ ತೊಂದರೆಗಳು, ಆತಂಕ, ಖಿನ್ನತೆ ಇತ್ಯಾದಿ. ಆದರೆ ಯೋಗದ ಮೂಲಕ ಇದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಿದೆ. ಜತೆಗೆ ತಮ್ಮ ದೇಹ ಮತ್ತು ಮನಸ್ಸು ಮಾತ್ರವಲ್ಲ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯವನ್ನೂ ಕಾಪಾಡಬಹುದು ಹಾಗೂ ಸುಲಭ ಹಾಗೂ ಸುರಕ್ಷಿತ ಹೆರಿಗೆಗೆ ಇದು ಸಹಕಾರಿಯಾಗುತ್ತದೆ.
ಗರ್ಭಿಣಿಯಾದ ತತ್‌ಕ್ಷಣ ಯೋಗ ಪ್ರಯೋಗ ಮಾಡಬಾರದು. ಮಗು ಪಡೆಯುವ ಯೋಜನೆ ಇದ್ದರೆ ಕೂಡಲೇ ಮಾರ್ಗದರ್ಶಕರ ಸಹಾಯದಿಂದ ಯೋಗ ಪ್ರಾರಂಭಿಸಬಹುದು. ಗರ್ಭಧಾರಣೆಯ ಅನಂತರ ಮಾಡಬಹುದಾದ ಯೋಗ ಭಂಗಿಗಳ ಬಗ್ಗೆ ಮೊದಲೇ ತಜ್ಞರಿಂದ ಕೇಳಿ ತಿಳಿಯಿರಿ. ಹೊಸ ಭಂಗಿಗಳನ್ನು
ಪ್ರಯೋಗ ಮಾಡಿ ನೋಡುವುದು ಸರಿಯಲ್ಲ. ಪ್ರತೀ ಮೂರು ತ್ತೈಮಾಸಿಕದಲ್ಲಿ ಅಭ್ಯಾಸ ಮಾಡುವ ಭಂಗಿಗಳು ಬೇರೆಬೇರೆ ಇರುತ್ತವೆ.
ಜತೆಗೆ ತನ್ನ ಆರೋಗ್ಯದ ಇತಿಹಾಸವನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಆರಂಭದ ಮೂರು ತಿಂಗಳು ಹೆಚ್ಚು ಎಚ್ಚರಿಕೆಯಿಂದ ಇರುವುದು ಅತ್ಯಗತ್ಯ. ಕೆಲವೊಂದು ಯೋಗ ಭಂಗಿಗಳನ್ನು ಹೆಚ್ಚಾಗಿ ತಜ್ಞರು ಗರ್ಭಿಣಿಯರಿಗೆ ಶಿಫಾರಸು ಮಾಡುತ್ತಾರೆ. ಅವುಗಳ ಕುರಿತ ಮಾಹಿತಿ ಇಲ್ಲಿದೆ. ಈ ಭಂಗಿಗಳು ಭ್ರೂಣದ ಆರೋಗ್ಯಕರ ಬೆಳವಣಿಗೆಗೆ, ಗರ್ಭಾಶಯದ ಜಾಗ ಹೆಚ್ಚಿಸಲು, ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅಲ್ಲದೇ ನಿಯಮಿತ ವ್ಯಾಯಾಮ ಮಾಡುವುದರಿಂದ ಮನಸ್ಸು ಶಾಂತವಾಗಿರುತ್ತದೆ.
*ವೃಕ್ಷಾಸನವನ್ನು ಗರ್ಭಿಣಿಯರು ಮಾಡಬಹುದು. ಇದರಿಂದ ಕಿಬ್ಬೊಟ್ಟೆಯ ಅಂಗಗಳಿಗೆ ಮಸಾಜ್ ದೊರೆತು ಬೆನ್ನು, ಕಾಲು, ಕುತ್ತಿಗೆ ಮೇಲಿನ ಒತ್ತಡ ನಿವಾರಣೆಯಾಗುವುದು.
*ಉತ್ಕಟಾಸನ ಮಾಡುವುದರಿಂದ ಗರ್ಭಿಣಿಯರ ಸ್ನಾಯುಗಳು ಬಲಗೊಳ್ಳುತ್ತವೆ. ಇದು ಸಹಜ ಹೆರಿಗೆಗೆ ಸಹಕಾರಿಯಾಗುತ್ತದೆ.
*ಸಾಮಾನ್ಯವಾಗಿ ಗರ್ಭಿಣಿಯರು ಹೆಚ್ಚು ತಿನ್ನುವ ಪರಿಪಾಠವಿದೆ. ಇದರ ಅಗತ್ಯವಿಲ್ಲದಿದ್ದರೂ ಪದೇಪದೇ ಕಾಡುವ ಸುಸ್ತು, ಹಸಿವಿನಿಂದಾಗಿ ಏನಾದರೂ
ತಿನ್ನುವ ಬಯಕೆಯಾಗುವುದು ಸಹಜ. ಇದರಿಂದ ದೇಹದಲ್ಲಿ ಹೆಚ್ಚಿನ ಕೊಬ್ಬು ಶೇಖರಣೆಯಾಗುವುದು. ಕೋನಾಸನವು ಸೊಂಟ ಮತ್ತು ದೇಹದ ಕೊಬ್ಬನ್ನು ನಿಯಂತ್ರಣದಲ್ಲಿರಿಸುತ್ತದೆ.
* ಪ್ರಾಯಾಂಕಾಸನ, ಹಸ್ತ ಪಾದಾಂಗುಷ್ಟಾಸನ ಕಿಬ್ಬೊಟ್ಟೆ ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ.
*ದೇಹದೊಳಗಿನ ಅಂಗಾಂಗಗಳಿಗೆ ಬಲ ಒದಗಿಸುವ ಭದ್ರಾಸನವು ಸಹಜ ಹೆರಿಗೆಗೆ ಸಹಕಾರಿಯಾಗುತ್ತದೆ.
*ಪರ್ವತಾಸನವು ದೇಹಕ್ಕೆ ಶಕ್ತಿ ತುಂಬುತ್ತದೆ ಮತ್ತು ಬೆನ್ನು ನೋವು ನಿವಾರಣೆಗೆ ಸಹಕಾರಿ.
*ಯಷ್ಠಿಕಾಸಾನವು ದೇಹದ ಭಂಗಿಯನ್ನು ಸರಿಪಡಿಸಿ ದೇಹ ಹಿಗ್ಗಲು, ಒತ್ತಡವನ್ನೂ ನಿವಾರಿಸಲು ಸಹಕಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.