ಆರ್ಥಿಕ ಚಿಂತಕ, ಮುತ್ಸದ್ದಿ ಪ್ರಣವ್‌ ದಾ


Team Udayavani, Sep 1, 2020, 10:52 AM IST

ಆರ್ಥಿಕ ಚಿಂತಕ, ಮುತ್ಸದ್ದಿ ಪ್ರಣವ್‌ ದಾ

ಭಾರತ ಕಂಡ ಧೀಮಂತ ರಾಜಕಾರಣಿಗಳಲ್ಲಿ ಪ್ರಣವ್‌ ಮುಖರ್ಜಿ ಕೂಡ ಒಬ್ಬರು. ಕೇಂದ್ರದಲ್ಲಿ ವಿದೇಶಾಂಗ, ವಾಣಿಜ್ಯ, ರಕ್ಷಣಾ ಇಲಾಖೆ ಸೇರಿದಂತೆ ಹಲವಾರು ಪ್ರಮುಖ ಸಚಿವ ಸ್ಥಾನಗಳನ್ನು ಅಲಂಕರಿಸಿದ ಅವರು ಕೆಲಸ ಮಾಡಿದ ಇಲಾಖೆಗಳಲ್ಲೆಲ್ಲಾ ಹೊಸತನ, ಆಡಳಿತ ಸುಧಾರಣೆಗಳನ್ನು ಜಾರಿಗೆ ತಂದವರಾಗಿದ್ದರು. ಅದೆಲ್ಲವನ್ನೂ ಮೀರಿ ಎಲ್ಲರ ಗಮನ ಸೆಳೆದದ್ದು ಅವರು ಕೇಂದ್ರ ಹಣಕಾಸು ಸಚಿವರಾಗಿ. ಸರಕು ಹಾಗೂ ಸೇವಾ ತೆರಿಗೆಯ (ಜಿಎಸ್‌ಟಿ) ಪರಿಕಲ್ಪನೆಯನ್ನು ಮೊದಲು ಜಾರಿಗೆ ತಂದ ಹೆಗ್ಗಳಿಕೆ ಅವರದ್ದು. ಅದರ ಜತೆಗೆ, ವಿತ್ತೀಯ ಕೊರತೆಯನ್ನು ಗಣನೀಯವಾಗಿ ತಗ್ಗಿಸಿ, ಒಟ್ಟಾರೆ ದೇಶೀಯ ಉತ್ಪನ್ನವನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ದರು. ಹಾಗಾಗಿಯೇ ಅವರನ್ನು ಆಧುನಿಕ ಭಾರತದ ಆರ್ಥಿಕತೆಯ ಮೊದಲ ಸುಧಾರಕ ಎಂದೂ ಕರೆಯಲಾಗುತ್ತದೆ.

“”1951ರಿಂದ 1979ರ ವರೆಗೆ ನಾವು ಭಾರತದ ಪ್ರಗತಿಯನ್ನು ಕೇವಲ 3.5ರಷ್ಟೇ ನಿರೀಕ್ಷಿಸುತ್ತಿದ್ದೆವು. ಆನಂತರದ ವರ್ಷಗಳಲ್ಲಿ ನಾವು ಶೇ. 5 ಅಥವಾ ಶೇ. 5.2ರವರೆಗೆ ನಿರೀಕ್ಷಿಸಲು ಆರಂಭಿಸಿದೆವು. ಈಗ, ನಾನು ಭಾರತದ ಪ್ರಗತಿಯನ್ನು ಶೇ. 6.7ಕ್ಕೆ ಮುಟ್ಟಿಸಿದ್ದೇನೆ. ಆದರೆ, ಯಾರೂ ಆ ಬಗ್ಗೆ ಖುಷಿ ಪಡುತ್ತಿಲ್ಲ”

2009ರಲ್ಲಿ ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಂದಿನ ಕೇಂದ್ರ ವಿತ್ತ ಸಚಿವರಾಗಿದ್ದ ಪ್ರಣವ್‌ ಮುಖರ್ಜಿ ಹೀಗೊಂದು ಸಣ್ಣದಾದ ಬೇಸರ ತೋಡಿಕೊಂಡಿದ್ದರು.

ಇಂದಿರಾ ಗಾಂಧಿಯವರ ಕಾಲದಲ್ಲಿ ಅಂದರೆ, 80ರ ದಶಕದಲ್ಲಿ ಬಜೆಟ್‌ ಮಂಡಿಸಿದ ನಂತರ ಮುಖರ್ಜಿ ಅವರಿಗೆ ಮತ್ತೆ ಬಜೆಟ್‌ ಮಂಡಿಸುವ ಅವಕಾಶ ಸಿಕ್ಕಿದ್ದು 2009ರಲ್ಲಿ. ಆಗ, ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿತ್ತು. ಪ್ರಧಾನಿ ಸ್ಥಾನದಲ್ಲಿ ಮನಮೋಹನ್‌ ಸಿಂಗ್‌ ಇದ್ದರು. ಹಾಗಾಗಿ, ಹಣಕಾಸು ಸಚಿವರ ಸ್ಥಾನಕ್ಕೆ ಬೇರೊಬ್ಬರನ್ನು ಆರಿಸುವ ತುರ್ತು ಒದಗಿದ್ದ ಹಿನ್ನೆಲೆಯಲ್ಲಿ ಮುಖರ್ಜಿಯವರಿಗೆ ವಿತ್ತ ಸಚಿವರ ಪಟ್ಟ ದೊರಕಿತು. ಆಗ, ಸತತವಾಗಿ 2009, 2010 ಹಾಗೂ 2011ರಲ್ಲಿ ಅವರು ದೇಶದ ಬಜೆಟ್‌ ಮಂಡಿಸಿದರು.

2009ರಲ್ಲಿ ಅವರು ಬಜೆಟ್‌ ಮಂಡಿಸಿದಾಗಲೇ, ಕೆಲವು ಪತ್ರಿಕೆಗಳು “ಮುಖರ್ಜಿಯವರು 25 ವರ್ಷಗಳ ಅನಂತರ ಬಜೆಟ್‌ ಮಂಡಿಸುತ್ತಿದ್ದಾರೆ. ಹೇಗಿರುತ್ತೋ ಏನೋ’ ಎಂಬ ಆತಂಕ ವ್ಯಕ್ತಪಡಿಸಿದ್ದವು. ಆದರೆ, ಎಲ್ಲರ ನಿರೀಕ್ಷೆಯನ್ನೂ ಮುಟ್ಟುವಂಥ ಬಜೆಟ್‌ ಮಂಡಿಸಿದರು ಪ್ರಣವ್‌ ದಾ.

ಮುಖರ್ಜಿಯ ಕನಸುಗಳ ಜಾರಿಗೆ ತಂದರು
ಸರಕು ಮತ್ತು ಸೇವಾ ತೆರಿಗೆಯನ್ನು ಜಾರಿಗೆ ತರಲು ಶ್ರಮಿಸಿದರಲ್ಲಿ ಪ್ರಣವ್‌ ಕೂಡ ಒಬ್ಬರು. ಆದರೆ, ಕಾರಣಾಂತರಗಳಿಂದ ಅದು ಅನುಷ್ಠಾನಗೊಂಡಿರಲಿಲ್ಲ. 2008-09ರಲ್ಲಿ ಶೇ. 6.5ರಷ್ಟಿದ್ದ ವಿತ್ತೀಯ ಕೊರತೆಯನ್ನು 2012-13ರ ಬಜೆಟ್‌ ವೇಳೆಗೆ ಶೇ. 4.1ಕ್ಕೆ ತಂದರು. ಫ್ರಿಂಜ್‌ ಬೆನಿಫಿಟ್‌ ತೆರಿಗೆ ಹಾಗೂ ಸರಕುಗಳ ವಹಿವಾಟು ತೆರಿಗೆಯನ್ನು ರದ್ದುಗೊಳಿಸಿ, ಉದ್ಯಮಗಳ ಲಾಭಾಂಶ ಹೆಚ್ಚಿಸಲು ನೆರವಾದರು. ಮೂಲ ಸೌಕರ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು ಅವರ ಮತ್ತೂಂದು ಹೆಗ್ಗಳಿಕೆ. ರಾಷ್ಟ್ರೀಯ ಅಭಿವೃದ್ಧಿ ಯೋಜನೆಗಳು, ವಿದ್ಯುತ್‌ ಸೇವಾ ಯೋಜನೆಗಳ ವಿಸ್ತರಣೆ ಸೇರಿದಂತೆ ಹಲವಾರು ಜನಪರ ಯೋಜನೆಗಳಿಗೆ ಸಾಕಷ್ಟು ಅನುದಾನ ನೀಡಿದರು. 1991ರಿಂದ ಏರುಗತಿಯಲ್ಲೇ ಸಾಗಿದ್ದ ವಿತ್ತೀಯ ಕೊರತೆಗೆ ಲಗಾಮು ಹಾಕಿ ಅದನ್ನು ನಿಯಂತ್ರಣಕ್ಕೆ ತಂದಿದ್ದಲ್ಲದೆ, ಲೈಸನ್ಸ್‌ ರಾಜ್‌ ಪದ್ಧತಿಗೆ ಮೊದಲ ಬಾರಿಗೆ ಅಂತ್ಯ ಹಾಡಿದರು. ವಿತ್ತ ಸಚಿವರಾಗಿ ಅವರು ನೀಡಿದ ಕೊಡುಗೆಗಳನ್ನು ಪರಿಗಣಿಸಿ, ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಬಂದವು. ಆಗಲೇ ಅವರಿಗೆ, ಅವರಿಗೆ ಪಾಶ್ಚಿಮಾತ್ಯ ರಾಷ್ಟ್ರಗಳು ಆಧುನಿಕ ಭಾರತದ ಮೊದಲ ಆರ್ಥಿಕ ಸುಧಾರಕ ಎಂದು ಕರೆದದ್ದು.

ಉತ್ತಮ ಸಂಸತ್‌ ಪಟು
ದೇಶ ಕಂಡ ಕೆಲವೇ ಅತ್ಯುತ್ತಮ ರಾಜಕಾರಣಿಗಳಲ್ಲಿ ಪ್ರಣವ್‌ ದಾ ಕೂಡ ಒಬ್ಬರು. ಅವರೊಬ್ಬ ಉತ್ತಮ ವಾಗ್ಮಿ, ವಿದ್ವಾಂಸ ಹಾಗೂ ಅತ್ಯುತ್ತಮ ಸಂಸತ್‌ ಪಟು. ಹಾಗೂ ದೇಶದ 13ನೇ ರಾಷ್ಟ್ರಪತಿ ಆಗುವ ಮುನ್ನ ತಮ್ಮ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಹಲವಾರು ಜವಾಬ್ದಾರಿಯುತ ಸ್ಥಾನಗಳನ್ನು ಅಲಂಕರಿಸಿದ್ದ ಅವರು ಆ ಸ್ಥಾನಗಳ ಘನತೆ ಹೆಚ್ಚಿಸಿದವರು. ಕಾಂಗ್ರೆಸ್‌ ಸರಕಾರಗಳಲ್ಲಿ, ರಕ್ಷಣೆ, ವಿದೇಶಾಂಗ, ವಾಣಿಜ್ಯ, ಹಣಕಾಸು, ಹಡಗು, ಕೈಗಾರಿಕೆ ಇಲಾಖೆಗಳ ಸಚಿವರಾಗಿ ಕೆಲಸ ಮಾಡಿದ ವೇಳೆ ಸರಕಾರದ ಬಗ್ಗೆ ಬರುತ್ತಿದ್ದ ವಿಪಕ್ಷಗಳ ಟೀಕೆ, ದೂರುಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದರು. ಎಷ್ಟೋ ಬಾರಿ, ವಿಪಕ್ಷಗಳ ವಾಗ್ಧಾಳಿಗೆ ದಿಟ್ಟ ಉತ್ತರಗಳನ್ನು ಕೊಟ್ಟು, ಸರಕಾರವನ್ನು ಮುಜುಗರದ ಪರಿಸ್ಥಿತಿಯಿಂದ ಪಾರು ಮಾಡಿದ್ದೂ ಇದೆ.

ಟ್ರಬಲ್‌ ಶೂಟರ್‌
ಸಾಮಾನ್ಯವಾಗಿ, ಸಮ್ಮಿಶ್ರ ಸರಕಾರ ಎಂದರೆ ಅಂಗಪಕ್ಷಗಳ ಹತ್ತಾರು ಸಮಸ್ಯೆಗಳು ಇದ್ದೇ ಇರುತ್ತವೆ. ಯುಪಿಎ ಸರಕಾರ ಕೂಡ ಅದರಿಂದ ಹೊರತಾಗಿರಲಿಲ್ಲ. ಹಾಗಾಗಿ, ಯುಪಿಎ ಅಂಗಪಕ್ಷಗಳ 32 ಸಚಿವರನ್ನು ಒಗ್ಗೂಡಿಸಿ ಉನ್ನತ ಅಧಿಕಾರವುಳ್ಳ ಸಚಿವರ ಸಮಿತಿಯನ್ನು (ಎಂಪವರ್ಡ್‌ ಗ್ರೂಪ್‌ ಆಫ್ ಮಿನಿಸ್ಟರ್ಸ್‌) ರಚಿಸಿ, ಅದಕ್ಕೆ ಪ್ರಣವ್‌ ಮುಖರ್ಜಿಯವರನ್ನು ಅಧ್ಯಕ್ಷರನ್ನಾಗಿಸಲಾಗಿತ್ತು. ಅಷ್ಟೂ ಪಕ್ಷಗಳ ದೂರು-ದುಮ್ಮಾನಗಳು, ಕುಂದು-ಕೊರತೆಗಳು, ತರಲೆ-ತಾಪತ್ರಯಗಳನ್ನು ಕೂಲಂಕಷವಾಗಿ ಸರಿದೂಗಿಸುವ ಛಾತಿ ಇರುವ ಏಕೈಕ ವ್ಯಕ್ತಿಯಾಗಿದ್ದಿದ್ದು ಮತ್ತದೇ ಪ್ರಣವ್‌ ದಾ. ಆ ಜವಾಬ್ದಾರಿಯನ್ನು ಅವರು ದಕ್ಷತೆಯಿಂದ ನಿಭಾಯಿಸಿದರು. ತೆಲಂಗಾಣದ ದಳ್ಳುರಿ ಭುಗಿಲೆದ್ದಿದ್ದಾಗ, ಇಂಡೋ-ಅಮೆರಿಕ ಪರಮಾಣು ಒಪ್ಪಂದದ ವಿವಾದ ತಾರಕಕ್ಕೇರಿದ್ದಾಗ ಇದೇ ಪ್ರಣವ್‌ ಮುಖರ್ಜಿಯವರು ಹರಸಾಹಸ ನಡೆಸಿ ಅಂಗಪಕ್ಷಗಳನ್ನು ವಿಶ್ವಾಸಕ್ಕೆ ಪಡೆದು ಉದ್ವಿಗ್ನತೆ ಶಾಂತಗೊಳಿಸಿದ್ದರು.

ಪರಸ್ಪರ ಆತ್ಮೀಯ ಗೌರವ
ಪ್ರಣವ್‌ ಮುಖರ್ಜಿ ಮತ್ತು ಮೋದಿ ಪರಸ್ಪರ ಗೌರವ ಹೊಂದಿದ್ದರು. ರಾಷ್ಟ್ರಪತಿಯಾಗಿ ನಿವೃತ್ತಿ ಹೊಂದಿದ ಬಳಿಕ ನೀಡಿದ ಸಂದರ್ಶನವೊಂದರಲ್ಲಿ ಪ್ರಣವ್‌, ಮೋದಿಯ ಬಗ್ಗೆ ಬಹಳ ಗೌರವ ವ್ಯಕ್ತಪಡಿಸಿದ್ದರು. ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ನೇರವಾಗಿ ದೆಹಲಿಗೆ ಬಂದು ಅಧಿಕಾರ ನಿಭಾಯಿಸುವುದು ಸುಲಭದ ಮಾತಲ್ಲ. ಮೋದಿಯ ಬಳಿ ಬದ್ಧತೆ, ಕಠಿನ ಪರಿಶ್ರಮ, ಸ್ಪಷ್ಟ ದೃಷ್ಟಿಕೋನವಿದೆ ಎಂದು ಪ್ರಣವ್‌ ಹೇಳಿದ್ದರು. ಪ್ರಣವ್‌ ಬರೆದ ಪುಸ್ತಕ ಬಿಡುಗಡೆಯಲ್ಲಿ ಮಾತನಾಡಿದ್ದ ಮೋದಿ, ಪ್ರಣವ್‌ ದಾ ಅವರ ಆಶೀರ್ವಾದ, ಮಾರ್ಗದರ್ಶನದಿಂದಲೇ ದೆಹಲಿಯಲ್ಲಿ ನನಗೆ ಸಮರ್ಪಕವಾಗಿ ನೆಲೆಯೂರಲು ಸಾಧ್ಯವಾಯಿತು ಎಂದಿದ್ದರು. ಎರಡನೇ ಬಾರಿ ಪ್ರಧಾನಿಯಾದಾಗ ಮೋದಿ, ಆಗ ನಿವೃತ್ತರಾಗಿದ್ದ ಪ್ರಣವ್‌ರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗಲೇ, 2019ರಲ್ಲಿ ಪ್ರಣವ್‌ಗೆ ದೇಶದ ಪರಮೋಚ್ಚ ಭಾರತರತ್ನ ಗೌರವ ಲಭಿಸಿತು.

ಪ್ರಬುದ್ಧತೆ ಮೆರೆದ ರಾಷ್ಟ್ರಪತಿ
ಕಾಂಗ್ರೆಸ್‌ನ ಅತಿ ಪ್ರಮುಖ ನಾಯಕರಾಗಿ, ಪ್ರಧಾನಿಯಾಗಲು ಎಲ್ಲ ಅರ್ಹತೆಯಿರುವ ನಾಯಕ ಎನಿಸಿಕೊಂಡಿದ್ದ ಪ್ರಣವ್‌ ಮುಖರ್ಜಿ ಪ್ರಧಾನಿ ಸ್ಥಾನದ ಬದಲು ರಾಷ್ಟ್ರಪತಿ ಹುದ್ದೆಗೇರಿದರು. ಆದರೆ ಅಲ್ಲಿ ಅವರು ಒಮ್ಮೆಯೂ ರಾಜಕಾರಣಿಯಂತೆ ವರ್ತಿಸದೇ ಪ್ರಬುದ್ಧತೆ ತೋರಿದರು.

ಕ್ಷಮಾದಾನ ಅರ್ಜಿ ತಿರಸ್ಕಾರದಲ್ಲೂ ದಾಖಲೆ
ಪ್ರಣವ್‌ ಅವರು ರಾಷ್ಟ್ರಪತಿಯಾಗಿದ್ದಾಗ 30 ಕ್ಷಮಾದಾನ ಅರ್ಜಿಗಳನ್ನು ತಿರಸ್ಕರಿಸಿದರು. ಆರ್‌. ವೆಂಕಟರಾಮನ್‌ ಅವರ ನಂತರ ಅತಿಹೆಚ್ಚು ಕ್ಷಮಾದಾನ ಅರ್ಜಿಗಳನ್ನು ತಿರಸ್ಕರಿಸಿದ ಗರಿಮೆ ಪ್ರಣವ್‌ ಅವರಿಗಿದೆ. 1987-92ರವರೆಗೆ ರಾಷ್ಟ್ರಪತಿಗಳಾಗಿದ್ದ ವೆಂಕಟರಾಮನ್‌ 45 ಕ್ಷಮಾದಾನ ಅರ್ಜಿಗಳನ್ನು ತಿರಸ್ಕರಿಸಿದ್ದರು. ಇನ್ನು ಪ್ರಣವ್‌ ಅವಧಿಯಲ್ಲಿ 26 ಅಧ್ಯಾಧೇಶಗಳು ಜಾರಿಯಾದವು ಅಥವಾ ಮರುಜಾರಿಯಾದವು. ಭಯೋತ್ಪಾದಕರಾದ ಅಫ‌jಲ್‌ ಗುರು, ಯಾಕುಬ್‌ ಮೆಮನ್‌ ಮತ್ತು ಕಸಬ್‌ನನ್ನು ಗಲ್ಲಿಗೇರಿಸಲು ಅನುಮೋದಿಸಿದ್ದು ಇವರ ಹೆಗ್ಗಳಿಕೆ.

ಟೀಚರ್‌ ಪ್ರಣವ್‌
ರಾಷ್ಟ್ರಪತಿಯಾಗಿರುವಾಗಲೇ ಶಿಕ್ಷಕರಾಗಿಯೂ ದುಡಿದ ಗರಿಮೆ ಪ್ರಣವ್‌ ಅವರಿಗಿದೆ. ತಮ್ಮ ರಾಷ್ಟ್ರಪತಿ ಹುದ್ದೆಯ ಕೊನೆಯ ಎರಡು ವರ್ಷ, ರಾಷ್ಟ್ರಪತಿ ಎಸ್ಟೇಟ್‌ನಲ್ಲಿರುವ ರಾಜೇಂದ್ರ ಪ್ರಸಾದ್‌ ಸರ್ವೋದಯ ವಿದ್ಯಾಲಯದಲ್ಲಿ 11 ಮತ್ತು 12ನೇ ತರಗತಿಯ 80ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಭಾರತೀಯ ರಾಜಕಾರಣದ ಇತಿಹಾಸವನ್ನು ಬೋಧಿಸುತ್ತಿದ್ದರು. ಅಲ್ಲದೇ, ಭಾರತ ಮತ್ತು ವಿಶ್ವಾದ್ಯಂತ ಹೆಚ್ಚುತ್ತಿರುವ ಉಗ್ರವಾದದ ಉಪಟಳದ ಬಗ್ಗೆಯೂ ಪಾಠ ಮಾಡುತ್ತಿದ್ದರು.

ಜಿಎಸ್‌ಟಿಗೆ ಅನುಮತಿ, ಹೊಗಳಿಕೆ
2017ರಲ್ಲಿ ಮೋದಿ ಸರಕಾರ ಜಿಎಸ್‌ಟಿ ಕಾಯ್ದೆ ಜಾರಿ ಮಾಡಿತು. ವಾಸ್ತವವಾಗಿ ಕಾಂಗ್ರೆಸ್‌ ಸರಕಾರ ಈ ಕಾಯ್ದೆ ಜಾರಿಗೆ ಬಹಳ ಮುತುವರ್ಜಿ ವಹಿಸಿತ್ತು. ಆದರೆ ಜಾರಿಯಾಗಿದ್ದು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ. ಈ ವೇಳೆ ಸೂಕ್ತ ಸಲಹೆ ಸಹಕಾರ ನೀಡಿದ್ದ ಪ್ರಣವ್‌, ಇಂತಹ ಕ್ರಮ ತೆಗೆದುಕೊಂಡಿದ್ದಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ರಾಷ್ಟ್ರಪತಿಯಾಗಿ ಪ್ರಣವ್‌ ವಿಶಿಷ್ಟ ಹೆಜ್ಜೆ
ರಾಷ್ಟ್ರಪತಿ ಹುದ್ದೆಯೆನ್ನುವುದು ಕೇವಲ ರಬ್ಬರ್‌ ಸ್ಟ್ಯಾಂಪ್‌ ಎನ್ನುವ ಅಸಮಾಧಾನವನ್ನು ಸುಳ್ಳುಮಾಡಿದ ಬೆರಳೆಣಿಕೆಯ ರಾಷ್ಟ್ರಪತಿಗಳಲ್ಲಿ ಪ್ರಣವ್‌ ಮುಖರ್ಜಿಯವರೂ ಪ್ರಮುಖರು. ರಾಷ್ಟ್ರಪತಿಯಾಗಿ ತಮ್ಮ ಕಾರ್ಯಕಾಲದಲ್ಲಿ ಅವರು ಅನೇಕ ಸುಧಾರಣೆ, ಬದಲಾವಣೆಗಳಿಗೆ ಮುನ್ನುಡಿ ಬರೆದಿದ್ದಾರೆ.

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.