Editorial: ಅಪಘಾತ ಗಾಯಾಳು ರಕ್ಷಕರಿಗೆ ನೆರವು ಹೆಚ್ಚಳ ಶ್ಲಾಘನೀಯ


Team Udayavani, Jan 15, 2025, 6:00 AM IST

Nithin-gadkari

ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರ ನೆರವಿಗೆ ಧಾವಿಸುವ ಪರೋಪಕಾರಿ­ಗಳಿಗೆ ನೀಡಲಾಗುತ್ತಿರುವ ಪ್ರೋತ್ಸಾಹ ಧನ ಅಥವಾ “ಮೆಚ್ಚುಗೆ ಮೊತ್ತ’ವನ್ನು 5 ಸಾವಿರ ರೂ.ಗಳಿಂದ 25 ಸಾವಿರ ರೂಪಾಯಿಗಳಿಗೆ ಹೆಚ್ಚಿಸುವ ಕೇಂದ್ರ ಸರಕಾರದ ನಿರ್ಧಾರ ಅತ್ಯುತ್ತಮವಾದುದು. ಯಾವುದೇ ರಸ್ತೆ ಅವಘಡ ಸಂಭವಿಸಿದಾಗ ಮೊದಲ ಒಂದು ತಾಸು ಗಾಯಾಳುವನ್ನು ಬದುಕಿಸುವುದಕ್ಕೆ ಅಥವಾ ಗಾಯ ಹಾನಿಯನ್ನು ಸಾಧ್ಯವಾದಷ್ಟು ಕಡಿಮೆಗೊಳಿಸುವುದಕ್ಕೆ ಸುವರ್ಣಾವಕಾಶವಾ­ಗಿರುತ್ತದೆ. ಈ ಅವಧಿಯಲ್ಲಿ ಗಾಯಾಳುಗಳ ಸಹಾಯಕ್ಕೆ ಮುಂದಾಗುವವರಿಗೆ ನೀಡುವ ಪ್ರೋತ್ಸಾಹಧನ ಮೊತ್ತದಲ್ಲಿ ಹೆಚ್ಚಳ ಇನ್ನೊಂದಷ್ಟು ಮಂದಿಯಲ್ಲಿ ಪರೋಪಕಾರ ಗುಣವನ್ನು ಪ್ರೇರೇಪಿಸಿದರೆ ಅದಕ್ಕಿಂತ ದೊಡ್ಡ ಲಾಭ ಇನ್ನೊಂದಿಲ್ಲ.

ದೇಶದಲ್ಲಿ ಅತ್ಯಗತ್ಯ ಮೂಲಸೌಲಭ್ಯವಾಗಿರುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಇತರ ರಸ್ತೆಗಳ ಸಂಪರ್ಕ ಜಾಲ ಸುಧಾರಣೆ ಕಾಣುತ್ತಿರುವಂತೆ ರಸ್ತೆ ಅಪ ಘಾತಗಳು ಕೂಡ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಇದರ ಜತೆಗೆ ವಾಹನಗಳ ಪ್ರಮಾಣ ಕೂಡ ತೀವ್ರವಾಗಿ ಏರುತ್ತಿದೆ. ಹಿಂದೆ ಹೆಚ್ಚೆಂದರೆ ಮನೆಗೊಂದು ವಾಹನ ಎಂಬ ಸ್ಥಿತಿ ಇತ್ತು. “ವಿದೇಶಗಳಲ್ಲಿ ಮನೆಯ ಒಬ್ಬೊಬ್ಬ ಸದಸ್ಯನಿಗೆ ಒಂದೊಂದು ಕಾರು ಅಂತೆ’ ಎಂದೆಲ್ಲ ಬೆರಗಿನಿಂದ ಮಾತನಾಡಿಕೊಳ್ಳುತ್ತಿದ್ದುದಿತ್ತು.

ಆದರೆ ಆ ಸುಧಾರಣೆ ಈಗ ದೇಶದಲ್ಲಿಯೂ ಆಗಿದೆ. ಹೆಚ್ಚಿನ ಮನೆಗಳಲ್ಲಿ ಎರಡು ಕಾರು, ಒಂದೆರಡಾದರೂ ದ್ವಿಚಕ್ರ ವಾಹನ ಮಾಮೂಲು ಎಂಬಂತಿದೆ. ಆರ್ಥಿಕ ಸ್ಥಿತಿ ಸುಧಾರಣೆಯ ಜತೆಗೆ ವಿವಿಧ ಉದ್ದೇಶಗಳಿಗೆ ಸ್ವಾವಲಂಬಿಯಾಗಿ ಪ್ರಯಾಣಿಸಬೇ ಕಾದ ಅನಿವಾರ್ಯ ಇದಕ್ಕೆ ಕಾರಣ. ವಾಹನಗಳು ಇಷ್ಟು ಪ್ರಮಾಣದಲ್ಲಿ ಹೆಚ್ಚಿದಂತೆ ರಸ್ತೆ ಅವಘಡಗಳು ಕೂಡ ಹೆಚ್ಚುತ್ತಿವೆ. ಅವುಗಳನ್ನು ಸಂಪೂರ್ಣವಾಗಿ ತಡೆಗಟ್ಟುವುದು ವಾಸ್ತವಿಕವಾಗಿ ಪ್ರಾಯಃ ಅಸಾಧ್ಯ; ಪ್ರಮಾಣವನ್ನು ಕಡಿಮೆ ಮಾಡಬಹುದು ಅಷ್ಟೇ.

ಈ ಹಿನ್ನೆಲೆಯಲ್ಲಿ ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರ ನೆರವಿಗೆ ಯಾರಾ ದರೂ ಕೂಡಲೇ ಧಾವಿಸುವುದು ಅತ್ಯವಶ್ಯವಾಗಿದೆ. ಆದರೆ ಹೆಚ್ಚಿನ ಇಂತಹ ಪ್ರಕರಣ ಗಳಲ್ಲಿ ಸಾರ್ವಜನಿಕರು ಗಾಯಾಳು ನರಳುತ್ತ ರಸ್ತೆಯಲ್ಲಿ ಬಿದ್ದಿದ್ದರೂ ನೋಡುತ್ತ, ಬಿಟ್ಟಿ ಸಲಹೆಗಳನ್ನು ನೀಡುತ್ತ ಇರುತ್ತಾರೆಯೇ ವಿನಾ ತತ್‌ಕ್ಷಣ ಪ್ರಥಮೋಪಚಾರ ನೀಡುವ, ಆಸ್ಪತ್ರೆಗೆ ಕರೆದೊಯ್ಯುವಂತಹ ಕ್ರಮಗಳಿಗೆ ಮುಂದಾಗುವುದು ಕಡಿಮೆ.

ಇಲ್ಲದ ಉಸಾಬರಿ ತನಗೇಕೆ ಎಂಬ ಭಾವನೆ, ಪೊಲೀಸರು ವಿಚಾರಣೆಗೆ ಕರೆದರೆ ಹೋಗಬೇಕೆಂಬ ಅಂಜಿಕೆ ಇತ್ಯಾದಿ ಇದಕ್ಕೆ ಕಾರಣ. ಇದರಿಂದಾಗಿ ಎಷ್ಟೋ ಮಂದಿ ಗಾಯಾಳುಗಳು ಪ್ರಾಣ ಕಳೆದುಕೊಳ್ಳುವಂತಾದರೆ, ಎಷ್ಟೋ ಮಂದಿ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುತ್ತಿದ್ದಾರೆ. ಅಪಘಾತ ಸಂಭವಿಸಿದ ಕೂಡಲೇ ಪ್ರಥಮ ಚಿಕಿತ್ಸೆ, ಆಸ್ಪತ್ರೆಗೆ ಕರೆದೊಯ್ದರೆ ಎಷ್ಟೋ ಜೀವಗಳನ್ನು ರಕ್ಷಿಸಬಹುದಾಗಿದೆ. ಅದಕ್ಕಾಗಿಯೇ ಅಪಘಾತ ನಡೆದ 1 ತಾಸು ಅವಧಿಯನ್ನು ಸುವರ್ಣ ಸಮಯ ಎನ್ನಲಾಗುತ್ತದೆ.

ನಾಗಪುರದಲ್ಲಿ ಸೋಮವಾರ ರಸ್ತೆ ಸುರಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಗಾಯಾಳುಗಳಿಗೆ ತತ್‌ಕ್ಷಣ ನೆರವಾಗುವ ಪರೋಪಕಾರಿಗಳಿಗೆ ನೀಡಲಾಗುವ ಬಹುಮಾನ ಮೊತ್ತವನ್ನು ಈಗಿರುವ ಐದು ಸಾವಿರ ರೂ.ಗಳಿಂದ 25 ಸಾವಿರ ರೂ.ಗಳಿಗೆ ಏರಿಸುವುದಾಗಿ ಹೇಳಿದ್ದಾರೆ. ರಸ್ತೆ ಅವಘಡ ಗಾಯಾಳುಗಳ ರಕ್ಷಣೆಯ ದೃಷ್ಟಿಯಿಂದ ಇದೊಂದು ದೂರಗಾಮಿ ಪರಿಣಾಮ ಬೀರಬಹುದಾದ ಸ್ವಾಗತಾರ್ಹ ಕ್ರಮ.

ಇನ್ನು ಆಗಬೇಕಿರುವುದು ಈ ಪ್ರೋತ್ಸಾಹಧನವು ಅರ್ಹರಿಗೆ ಸರಿಯಾದ ರೀತಿಯಲ್ಲಿ ಕೈಸೇರುವುದನ್ನು ಖಾತರಿಪಡಿಸುವ ಕ್ರಮ. ಇದು ಆಗದೆ ಇದ್ದರೆ ಕ್ರಮ ಕೇವಲ ಘೋಷಣೆಯಾಗಿ ಮಾತ್ರ ಉಳಿಯುವಂತಾದೀತು. ಇಂತಹ ಪ್ರೋತ್ಸಾಹ ಧನದಂತಹ ವಿಷಯಗಳಲ್ಲಿ ಅದನ್ನು ಪಡೆಯಲು ಹತ್ತು ಹಲವು ಅಡಚಣೆಗಳು, ಸುತ್ತು ಬಳಸುಗಳು ಇದ್ದು, ಅರ್ಹರ ಕೈಗೆಟಕುವುದೇ ಇಲ್ಲ. ಇಂತಹ ಪರಿಸ್ಥಿತಿ ನಿರ್ಮಾಣವಾಗದೆ ಈ ಬಹುಮಾನ ಮೊತ್ತ ಸುಲಭವಾಗಿ ಅರ್ಹರ ಕೈಸೇರುವಂತಾದರೆ ಮಾತ್ರ ಯೋಜನೆ ಯಶಸ್ವಿಯಾಗಿ ಅದಕ್ಕೊಂದು ಅರ್ಥ ಬಂದೀತು.

ಟಾಪ್ ನ್ಯೂಸ್

Army Day 2025:ಜನವರಿ 15ರಂದು ಯಾಕೆ ಸೇನಾ ದಿನ?: ಭಾರತೀಯ ಸೇನೆಯ 77 ವರ್ಷಗಳ ಹಾದಿ

Army Day 2025: ಜನವರಿ 15ರಂದು ಯಾಕೆ ಸೇನಾ ದಿನ?: ಭಾರತೀಯ ಸೇನೆಯ 77 ವರ್ಷಗಳ ಹಾದಿ

Sandalwood: ಛೂ ಮಂತರ್‌ ಮ್ಯಾಜಿಕ್‌; ಚಿತ್ರತಂಡದ ಸಂತಸ

Sandalwood: ಛೂ ಮಂತರ್‌ ಮ್ಯಾಜಿಕ್‌; ಚಿತ್ರತಂಡದ ಸಂತಸ

1-vijayapura

Vijayapura: ಕಾಲುವೆಗೆ ಮಕ್ಕಳೊಂದಿಗೆ ತಾಯಿ ಹಾರಿದ ಪ್ರಕರಣ; ನಾಲ್ಕನೇ ಮಗುವಿನ ಶವ ಪತ್ತೆ

Actor Darshan: 7 ತಿಂಗಳ ಬಳಿಕ ಮೊದಲ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡ ʼದಾಸʼ

Actor Darshan: 7 ತಿಂಗಳ ಬಳಿಕ ಮೊದಲ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡ ʼದಾಸʼ

1-koragajja

C.T.Ravi ಪರವಾಗಿ ಸ್ವಾಮಿ ಕೊರಗಜ್ಜನ ಮೊರೆ ಹೋದ ಬಿಜೆಪಿ ಕಾರ್ಯಕರ್ತರು

rajnath 2

PoK ಇಲ್ಲದೆ ಜಮ್ಮು ಮತ್ತು ಕಾಶ್ಮೀರವು ಅಪೂರ್ಣ: ಪಾಕ್ ಗೆ ರಾಜನಾಥ್ ಎಚ್ಚರಿಕೆ

siddaramaiah

Congress; ಗೊಂದಲಗಳ ಮಧ್ಯೆ ದೆಹಲಿ ಪ್ರವಾಸ ಕೈಗೊಂಡ ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Editorial: ಸಾರಿಗೆ ವ್ಯವಸ್ಥೆ ಮತ್ತಷ್ಟು ಜನೋಪಯೋಗಿಯಾಗಲಿ

5

Editorial: ಇಂಟರ್‌ನೆಟ್‌-ನೆಟ್‌ವರ್ಕ್‌ ಸುಧಾರಣೆಗೆ ಸರಕಾರ ಮುಂದಾಗಲಿ

3

Editorial: ಕುಡಿಯುವ ನೀರಿನ ಪರಿಶುದ್ಧತೆಯ ಪ್ರಶ್ನೆ ಬಾರದಿರಲಿ

1

Editorial: ಪಂಚಾಯತ್‌ ತೆರಿಗೆ ಸಂಗ್ರಹಕ್ಕೆ ಕಾನೂನು ರೂಪುಗೊಳ್ಳಲಿ

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

ಯಾತ್ರಾ ಸ್ಥಳಗಳಲ್ಲಿ ಭಕ್ತರ ಸುರಕ್ಷೆಗಿರಲಿ ಮೊದಲ ಆದ್ಯತೆ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Army Day 2025:ಜನವರಿ 15ರಂದು ಯಾಕೆ ಸೇನಾ ದಿನ?: ಭಾರತೀಯ ಸೇನೆಯ 77 ವರ್ಷಗಳ ಹಾದಿ

Army Day 2025: ಜನವರಿ 15ರಂದು ಯಾಕೆ ಸೇನಾ ದಿನ?: ಭಾರತೀಯ ಸೇನೆಯ 77 ವರ್ಷಗಳ ಹಾದಿ

Rishab Shetty: ಬದಲಾದ ಹೇರ್‌ ಸ್ಟೈಲ್‌: ಹೊಸ ಲುಕ್‌ನಲ್ಲಿ ರಿಷಬ್‌ ಶೆಟ್ಟಿ

Rishab Shetty: ಬದಲಾದ ಹೇರ್‌ ಸ್ಟೈಲ್‌: ಹೊಸ ಲುಕ್‌ನಲ್ಲಿ ರಿಷಬ್‌ ಶೆಟ್ಟಿ

Sandalwood: ಛೂ ಮಂತರ್‌ ಮ್ಯಾಜಿಕ್‌; ಚಿತ್ರತಂಡದ ಸಂತಸ

Sandalwood: ಛೂ ಮಂತರ್‌ ಮ್ಯಾಜಿಕ್‌; ಚಿತ್ರತಂಡದ ಸಂತಸ

Bengaluru: ಬಿಬಿಸಿಯಲ್ಲಿ ಬೆಂಕಿ ಅವಘಡ: 152 ಕೋಟಿ ನಷ್ಟ

Bengaluru: ಬಿಬಿಸಿಯಲ್ಲಿ ಬೆಂಕಿ ಅವಘಡ: 152 ಕೋಟಿ ನಷ್ಟ

2

Bengaluru: ಮಗು ಮೇಲೆ ಲೈಂಗಿಕ ದೌರ್ಜನ್ಯ, ಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.