Editorial: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಪತಾಕೆ ಉತ್ತುಂಗಕ್ಕೇರಲಿ
1896ರಲ್ಲಿ ಆರಂಭಗೊಂಡ ಈ ಕ್ರೀಡಾಕೂಟ ಈಗ ಜಾಗತಿಕ ಮಹೋತ್ಸವವಾಗಿ ವಿಶ್ವವಿಖ್ಯಾತವಾಗಿದೆ.
Team Udayavani, Jul 26, 2024, 12:36 PM IST
ಜಾಗತಿಕ ಕ್ರೀಡಾ ಹಬ್ಬ ಒಲಿಂಪಿಕ್ಸ್‌ನ 33ನೇ ಆವೃತ್ತಿ ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ಜುಲೈ 26ರಂದು ಆರಂಭಗೊಳ್ಳಲಿದೆ. 3ನೇ ಬಾರಿಗೆ ಬೇಸಗೆ ಒಲಿಂಪಿಕ್ಸ್‌ನ ಆಯೋಜನೆಯ ಗೌರವಕ್ಕೆ ಪಾತ್ರವಾಗಿರುವ ಪ್ಯಾರಿಸ್ ನಗರ ಈ ಮೂಲಕ ಲಂಡನ್‌ನ ದಾಖಲೆಯನ್ನು ಸರಿಗಟ್ಟಿದೆ. 128 ವರ್ಷಗಳ ಹಿಂದೆ ಅಂದರೆ 1896ರಲ್ಲಿ ಆರಂಭಗೊಂಡ ಈ ಕ್ರೀಡಾಕೂಟ ಈಗ ಜಾಗತಿಕ
ಮಹೋತ್ಸವವಾಗಿ ವಿಶ್ವವಿಖ್ಯಾತವಾಗಿದೆ.
ಅಥೆನ್ಸ್‌ನಲ್ಲಿ ನಡೆದ ಮೊದಲ ಆಧುನಿಕ ಒಲಿಂಪಿಕ್ಸ್‌ನಲ್ಲಿ 14 ದೇಶಗಳ 214 ಕ್ರೀಡಾಳುಗಳು 10 ಕ್ರೀಡೆಗಳ ಒಟ್ಟು 43 ವಿಭಾಗಗಳ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರೆ ಈಗ 2024ರಲ್ಲಿ ನಡೆಯುತ್ತಿರುವ 33ನೇ ಅವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿಶ್ವದಾದ್ಯಂತದ 206 ದೇಶಗಳ 10,500ಕ್ಕೂ ಅಧಿಕ ಕ್ರೀಡಾಳುಗಳು 32 ಕ್ರೀಡೆಗಳ ಒಟ್ಟು 329 ಉಪವಿಭಾಗಗಳ ಸ್ಪರ್ಧೆಗಳಲ್ಲಿ ಸೆಣಸಾಟ ನಡೆಸಲಿದ್ದಾರೆ. ಈ ಅಂಕಿಅಂಶಗಳೇ ಒಲಿಂಪಿಕ್ಸ್ ಪಂದ್ಯಾವಳಿಯ ಅಗಾಧತೆ, ವೈಶಿಷ್ಟé ಮತ್ತು ಮಹತ್ವವನ್ನು ಸಾರುತ್ತವೆ.
ಇಂತಹ ಜಾಗತಿಕ ಕ್ರೀಡಾ ಮಹೋತ್ಸವದಲ್ಲಿ ಭಾರತ ಶತಮಾನದ ಹಿಂದಿನಿಂದಲೇ ಪಾಲ್ಗೊಳ್ಳುತ್ತ ಬಂದಿದೆಯಾದರೂ ಭಾರತೀಯ ಕ್ರೀಡಾಳುಗಳ ಸಾಧನೆ ಹೇಳಿಕೊಳ್ಳುವಂಥದ್ದೇನಿಲ್ಲ. ವಿಶ್ವದ ಸಣ್ಣಪುಟ್ಟ ಮತ್ತು ಬಡ ರಾಷ್ಟ್ರಗಳು ಕೂಡ ಪದಕ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿಯಾದರೂ ಭಾರತ ಮಾತ್ರ ಕುಂಟುತ್ತಲೇ ಸಾಗಿಬಂದಿದೆ. ಈವರೆಗೆ ಭಾರತ ಒಲಿಂಪಿಕ್ಸ್‌ನಲ್ಲಿ 10 ಚಿನ್ನ, 9 ಬೆಳ್ಳಿ ಮತ್ತು 16 ಕಂಚು ಸಹಿತ ಒಟ್ಟು 35 ಪದಕಗಳನ್ನಷ್ಟೇ ಪಡೆಯಲು ಶಕ್ತವಾಗಿದೆ.
ಆದರೆ ಇಲ್ಲೊಂದು ಸಮಾಧಾನಕರ ವಿಷಯವೆಂದರೆ ಕಳೆದ ಅಂದರೆ 2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಳುಗಳು ಒಂದು ಚಿನ್ನ, 2 ಬೆಳ್ಳಿ ಮತ್ತು 4 ಕಂಚಿನ ಪದಕಗಳ ಸಹಿತ ಒಟ್ಟು 7 ಪದಕಗಳನ್ನು ತಮ್ಮದಾಗಿಸಿಕೊಂಡು ದೇಶದ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿದಿದ್ದರು.
ಟೋಕಿಯೊ ಒಲಿಂಪಿಕ್ಸ್ ಮುಗಿಯುತ್ತಿದ್ದಂತೆಯೇ ಕೇಂದ್ರ ಸರಕಾರ ಮತ್ತು ವಿವಿಧ ರಾಜ್ಯ ಸರಕಾರಗಳು ಹಾಗೂ ವಿವಿಧ ಕಾರ್ಪೊರೇಟ್ ಸಂಸ್ಥೆಗಳು ಕ್ರೀಡಾಳುಗಳಿಗೆ ಆರ್ಥಿಕ ನೆರವನ್ನು ನೀಡುವ ಮೂಲಕ ಅವರನ್ನು ಜಾಗತಿಕ ಕ್ರೀಡಾ ಸ್ಪರ್ಧೆಗೆ ಅಣಿಗೊಳಿಸಲು ಮುಕ್ತ ಸಹಕಾರ ನೀಡಿವೆ. ಕೇಂದ್ರ ಸರಕಾರವಂತೂ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಂನಡಿ 470 ಕೋ. ರೂ.ವೆಚ್ಚ ಮಾಡಿ ದೇಶದ ಕ್ರೀಡಾಳುಗಳಿಗೆ ದೇಶ-ವಿದೇಶಗಳಲ್ಲಿ ತರಬೇತಿ, ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿಕೊಟ್ಟಿದೆ.
ಇವೆಲ್ಲರದ ಪರಿಣಾಮವಾಗಿ ಟೋಕಿಯೊ ಒಲಿಂಪಿಕ್ಸ್‌ನಿಂದೀಚೆಗೆ ಭಾರತದ ಕ್ರೀಡಾ ಕ್ಷೇತ್ರದಲ್ಲಿ ಒಂದಿಷ್ಟು ಹೊಳಪು ಮೂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ವಿವಿಧ ಕ್ರೀಡಾ ಪಂದ್ಯಾವಳಿಗಳಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ನಿರ್ವಹಣೆ
ತೋರುತ್ತಲೇ ಬಂದಿರುವುದರಿಂದ ಸಹಜವಾಗಿಯೇ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್‌ನತ್ತ ದೇಶದ ಜನತೆ ಕುತೂಹಲದ ದೃಷ್ಟಿ ಬೀರಿದ್ದಾರೆ.
ಹಾಲಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 117 ಮಂದಿ ಭಾರತೀಯ ಕ್ರೀಡಾಳುಗಳು ವಿವಿಧ ಕ್ರೀಡೆಗಳ ಒಟ್ಟು 16 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಜಾವೆಲಿನ್, ವೇಟ್ ಲಿಫ್ಟಿಂಗ್, ಕುಸ್ತಿ, ಬ್ಯಾಡ್ಮಿಂಟನ್, ಶೂಟಿಂಗ್, ಗಾಲ್ಫ್, ಹಾಕಿ, ಬಾಕ್ಸಿಂಗ್, ಆರ್ಚರಿ, ಸ್ವಿಮ್ಮಿಂಗ್‌ನಲ್ಲಿ ಭಾರತೀಯ ಕ್ರೀಡಾಳುಗಳು ಪದಕದ ನಿರೀಕ್ಷೆಯನ್ನು ಹುಟ್ಟುಹಾಕಿದ್ದಾರೆ.
ಈ ಬಾರಿ ಭಾರತೀಯ ಕ್ರೀಡಾಪಟುಗಳು ಪದಕಗಳ ಗಳಿಕೆಯಲ್ಲಿ ಹಿಂದಿನ ದಾಖಲೆಯನ್ನು ಮುರಿಯುವುದರ ಜತೆಯಲ್ಲಿ ಅತ್ಯಮೋಘ ನಿರ್ವಹಣೆ ಯನ್ನು ತೋರಿ ದೇಶದ ಕ್ರೀಡಾಜ್ಯೋತಿಯನ್ನು ಮತ್ತಷ್ಟು ಉತ್ತುಂಗಕ್ಕೇರಿಸಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ ದೇಶದ ಕ್ರೀಡಾಭಿಮಾನಿಗಳು. ಸರಕಾರ ಮತ್ತು ಸಂಘಸಂಸ್ಥೆಗಳ ಪ್ರೋತ್ಸಾಹ, ಕ್ರೀಡಾಳುಗಳ ಪರಿಶ್ರಮ ಫಲಪ್ರದವಾಗಿ ಪ್ಯಾರಿಸ್ ಒಲಿಂಪಿಕ್ಸ್ ಭಾರತೀಯರಿಗೆ ಸದಾ ನೆನಪಿನಲ್ಲಿ ಉಳಿಯುವಂತಾಗಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.