Education Revolution: ಪದವಿ, ಪಿಜಿಯಲ್ಲಿ ಇಷ್ಟದ ಕೋರ್ಸ್ ಆಯ್ಕೆ ಅವಕಾಶ: ಯುಜಿಸಿ
ವಿವಿಗಳು ನಡೆಸುವ ಪರೀಕ್ಷೆಯಲ್ಲಿ ಪಾಸಾದರೆ ಯಾವ ಕೋರ್ಸನ್ನಾದರೂ ಆಯ್ದುಕೊಳ್ಳಬಹುದು, ವರ್ಷಕ್ಕೆ 2 ಬಾರಿ ಪ್ರವೇಶ ಲಭ್ಯ
Team Udayavani, Dec 7, 2024, 7:30 AM IST
ಹೊಸದಿಲ್ಲಿ: ಪಿಯುಸಿಯಲ್ಲಿ ಯಾವುದೇ ವಿಷಯ ಓದಿದ್ದರೂ ಪದವಿಯಲ್ಲಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ತಮ್ಮಿಷ್ಟದ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು. ಕಾಲೇಜುಗಳು ಅವಕಾಶ ನೀಡಿದರೆ ವರ್ಷಕ್ಕೆ 2 ಬಾರಿ ಪ್ರವೇಶ ಪಡೆದುಕೊಳ್ಳಬಹುದು. ಒಂದೇ ಬಾರಿ ಒಬ್ಬ ವಿದ್ಯಾರ್ಥಿ 2 ಪದವಿ ಪಡೆಯಬಹುದು.
ಇವೆಲ್ಲಕ್ಕೂ ಅವಕಾಶ ಒದಗಿಸಿಕೊಡಲು ದೇಶದ ಉನ್ನತ ಶಿಕ್ಷಣದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಮುಂದಾಗಿರುವ ಯುಜಿಸಿ, ಹೊಸ ನಿಯಮಗಳ ಕರಡನ್ನು ಗುರುವಾರ ಬಿಡುಗಡೆ ಮಾಡಿದೆ. ಭಾರತದ ಶಿಕ್ಷಣವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿರುವ ಯುಜಿಸಿ ಈ ಹೊಸ ನಿಯಮಗಳ ಜಾರಿಗೆ ಮುಂದಾಗಿದೆ. ಕೇಂದ್ರ, ರಾಜ್ಯ ಸರ್ಕಾರಗಳು, ವಿವಿಗಳಿಂದ ಪ್ರತಿಕ್ರಿಯೆ ಕೇಳಿದೆ.
“ವಿಶ್ವ ವಿದ್ಯಾಲಯಗಳು ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ, ಕಲಿಕಾ ಹಿನ್ನೆಲೆ ಯಾವುದೇ ಇದ್ದರೂ ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ತಮ್ಮಿಷ್ಟದ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ- ಮಾನವಿಕ ವಿಭಾಗದಲ್ಲಿ ಪದವಿ ಪಡೆದ ವಿದ್ಯಾರ್ಥಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ (ಸ್ಟೆಮ್) ವಿಷಯದಲ್ಲಿ ಪಿಜಿ ಮಾಡಬಹುದು.
ವರ್ಷಕ್ಕೆ 2 ಬಾರಿ ಪ್ರವೇಶ ನೀಡಲು ಈಗಾಗಲೇ 6 ವಿಶ್ವವಿದ್ಯಾಲಯಗಳು ಒಪ್ಪಿಗೆ ಕೊಟ್ಟಿವೆ. ಇದು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರುತ್ತದೆ’ ಎಂದು ಯುಜಿಸಿ ಮುಖ್ಯಸ್ಥ ಜಗದೀಶ್ ಕುಮಾರ್ ಹೇಳಿದ್ದಾರೆ.
ಏನೆಲ್ಲಾ ಬದಲಾವಣೆ?:
– ಕಾಲೇಜುಗಳು ಅವಕಾಶ ಕೊಟ್ಟರೆ ವರ್ಷಕ್ಕೆ 2 ಬಾರಿ ಪ್ರವೇಶ
– ಒಂದೇ ಬಾರಿ 2 ಪದವಿ/ಸ್ನಾತಕೋತ್ತರ ಪದವಿ ಗಳಿಸಬಹುದು
– ಕಲಿಕಾ ಹಿನ್ನೆಲೆ ಭಿನ್ನವಾಗಿದ್ದರೂ ಇಷ್ಟದ ಕೋರ್ಸ್ ಆಯ್ಕೆ
– ವಿದ್ಯಾರ್ಥಿಗಳ ಹಾಜರಿ ನಿರ್ಧರಿಸುವ ಅವಕಾಶ ಕಾಲೇಜಿಗೆ
– ಒಂದು ವಿಭಾಗದಲ್ಲಿ ಕನಿಷ್ಠ 50 ಅಂಕಗಳನ್ನು ಪಡೆದರೆ ಸಾಕು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?
Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.