ಮಕ್ಕಳನ್ನು ಅವಮಾನಿಸಬೇಡಿ…ಮುಗ್ಧ ಮನಸ್ಸಿನ ಮೇಲೆ ಪರಿಣಾಮ!
ಎಲ್ಲರೆದುರು ಮಕ್ಕಳನ್ನು ಬಯ್ಯುವುದರಿಂದ ಪೋಷಕರು ಮಕ್ಕಳ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ.
Team Udayavani, Nov 28, 2020, 11:45 AM IST
ಮಕ್ಕಳು ತಂಟೆ ತಕರಾರು ಮಾಡುತ್ತಲೇ ಇರುತ್ತಾರೆ. ಹಾಗಂತ ಸಾರ್ವಜನಿಕ ಸ್ಥಳಗಳಲ್ಲಿ, ಮನೆಗೆ ಬಂದ ಅತಿಥಿಗಳ ಎದುರು ಬಯ್ಯುವುದು ಸರಿಯಲ್ಲ. ಇದು ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮ ಬೀರುವುದು.
ಎಲ್ಲರ ಮುಂದೆ ಮಕ್ಕಳನ್ನು ಬೈಯ್ದರೆ ಅವರು ಮುಂದೆ ಆಕ್ರಮಣಕಾರಿ ನಡವಳಿಕೆಯನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದೆ. ಮುಗ್ಧ ಮನಸ್ಸು ಮಣ್ಣಿನಂತೆ. ಅದರ ಮೇಲೆ ನಾಟಿದ ಭಾವನೆಯನ್ನು ಅವರು ಅನುಸರಿಸುತ್ತಾರೆ.
ಎಲ್ಲರೆದುರು ಬೈಯುತ್ತಿದ್ದರೆ ಅಥವಾ ಖಂಡಿಸಿದರೆ ಮಕ್ಕಳು ತಮ್ಮ ಗೆಳೆಯರೊಂದಿಗೂ ಅದೇ ರೀತಿ ವರ್ತಿಸುತ್ತಾರೆ. ಇದು ಅವರ ಮನಸ್ಸಿನ ಹತಾಶೆಯನ್ನು ಹೊರ ಹಾಕುವ ಮಾರ್ಗವಾಗತೊಡಗುತ್ತದೆ. ಎಲ್ಲರೆದುರು ಅವಮಾನ ಮಾಡಿದಾಗ ಮುಜುಗರ ಉಂಟಾಗಿ ಸಾರ್ವಜನಿಕ ಸ್ಥಳಗಳಿಂದ ದೂರವಿರಲು ಬಯಸುತ್ತದೆ.
ಎಲ್ಲರೆದುರು ಮಕ್ಕಳನ್ನು ಬಯ್ಯುವುದರಿಂದ ಪೋಷಕರು ಮಕ್ಕಳ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಪರಿಣಾಮವಾಗಿ ಮುಂದೆ ಮಕ್ಕಳು ಮುಕ್ತ ಮನಸ್ಸಿನಿಂದ ತಮ್ಮ ಭಾವನೆಗಳನ್ನು ಪ್ರಕಟಿಸದೇ ಇರುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ:ಇರಾನ್ ನ ಪ್ರಮುಖ ನ್ಯೂಕ್ಲಿಯರ್ ವಿಜ್ಞಾನಿ ಹತ್ಯೆ: ಇಸ್ರೇಲ್ ಕೈವಾಡ ಶಂಕೆ?
ಎಲ್ಲರೆದುರು ಮಕ್ಕಳನ್ನು ಬಯ್ಯುವುದರಿಂದ ಮುಗ್ಧ ಮನಸ್ಸಿನ ಮೇಲೆ ಅಘಾತವಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಅದಷ್ಟು ಇದನ್ನು ತಪ್ಪಿಸುವುದು ಒಳ್ಳೆಯದು. ಎಲ್ಲರೆದುರು ನಯವಾಗಿ ತಿಳಿಸಿ. ಕೇಳದೇ ಇದ್ದರೆ ಅವರನ್ನು ದೂರ ಕರೆದುಕೊಂಡು ಹೋಗಿ ನಿಧಾನವಾಗಿ ಮನಸ್ಸಿಗೆ ನಾಟುವಂತೆ ಮಾತನಾಡಿ. ಮತ್ತೆ ಈ ತಪ್ಪು ಆಗ ಬಾರದು ಎಂದು ಎಚ್ಚರಿಸಿ. ಆಗ ಮಗು ತನ್ನ ತಪ್ಪನ್ನು ತಿದ್ದಿಕೊಂಡು ಎಲ್ಲರೆದುರು ಸ್ವಾಭಿಮಾನದಿಂದ ಹಾಗೂ ಧೈರ್ಯದಿಂದ ಬಂದು ನಿಲ್ಲುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.