ಭಾರತೀಯರ ಜೀವನಾಡಿ ಅಷ್ಟ ನದಿಗಳು


Team Udayavani, Sep 26, 2021, 6:40 AM IST

ಭಾರತೀಯರ ಜೀವನಾಡಿ ಅಷ್ಟ ನದಿಗಳು

ಭಾರತದಲ್ಲಿ  ಪ್ರತಿಯೊಂದೂ ನದಿಗೂ ಪೌರಾಣಿಕ ಹಿನ್ನೆಲೆ ಇದೆ. ಹೀಗಾಗಿ ಬಹುತೇಕ ನದಿಗಳನ್ನು ದೇವತೆಗಳೆಂದೇ ಪರಿಗಣಿಸಲಾಗಿದ್ದು ಪೂಜಿಸಲಾಗುತ್ತದೆ. ಭೌಗೋಳಿಕತೆಯ ಆಧಾರದಲ್ಲಿ ಭಾರತೀಯ ನದಿಗಳನ್ನು ಹಿಮಾಲಯನ್‌ ಮತ್ತು ಪರ್ಯಾಯ ದ್ವೀಪದ ನದಿಗಳೆಂದು ವಿಂಗಡಿಸಲಾಗಿದೆ. ಹಿಮಾಲಯನ್‌ ನದಿಗಳಲ್ಲಿ ಸಿಂಧೂ, ಗಂಗಾ, ಯಮುನಾ, ಬ್ರಹ್ಮಪುತ್ರಾ ಹಾಗೂ ಪರ್ಯಾಯ ದ್ವೀಪ ನದಿಗಳಲ್ಲಿ ಮಹಾನದಿ, ಗೋದಾವರಿ, ಕೃಷ್ಣಾ ಮತ್ತು ಕಾವೇರಿ.

ಗಂಗಾ ನದಿ

ಹಿಂದೂಗಳಿಗೆ ಅತ್ಯಂತ ಪವಿತ್ರವಾದ ನದಿಯಾಗಿರುವ ಗಂಗೆಯನ್ನು ದೇವತೆ ಎಂದೇ ಪೂಜಿಸಲಾಗುತ್ತದೆ. ಈ ನದಿಯ ತಟದಲ್ಲಿ ಹಲವಾರು ದೇವಾಲಯಗಳು, ಧಾರ್ಮಿಕ ತಾಣಗಳಿವೆ. ಈ ಸ್ಥಳಗಳಲ್ಲಿ ಗಂಗಾ ನದಿಯಲ್ಲಿ ತೀರ್ಥಸ್ನಾನ ಮಾಡಿದರೆ ಪಾಪಮುಕ್ತರಾಗುತ್ತೇವೆ ಎಂಬ ಜನರ ನಂಬಿಕೆಗೆ ಶತಮಾನಗಳ ಐತಿಹ್ಯ. ಆದರೆ  ದೇಶದಲ್ಲಿ ಅತೀ ಹೆಚ್ಚು ಕಲುಷಿತಗೊಂಡಿರುವ ನದಿ ಎಂಬ ಕುಖ್ಯಾತಿ ಈ ಪುಣ್ಯನದಿ ಪಾತ್ರವಾಗಿರುವುದು ಮಾತ್ರ ದುರಂತವೇ ಸರಿ.

ಮೂಲ- ಹಿಮಾಲಯದ ಗಂಗೋತ್ರಿ ಉದ್ದ- 2,525 ಕಿ.ಮೀ. ಆಳ- 17 ಮೀ. (56 ಅಡಿ)

ಪ್ರಮುಖ ಉಪನದಿಗಳು– ಗೋಮತಿ, ಘಾಗ್ರ, ತಮ್ಸಾ, ಯಮುನಾ, ಕೋಶಿ ವಿಲೀನ– ಬಂಗಾಲಕೊಲ್ಲಿ

ಖ್ಯಾತಿ- ವಿಶ್ವದ ಮೂರನೇ ದೊಡ್ಡ ನದಿ. ಪಶ್ಚಿಮ ಬಂಗಾಲದಲ್ಲಿ ವಿಶ್ವದ ಅತೀ ದೊಡ್ಡ ಮುಖಜಭೂಮಿಯನ್ನು ಸೃಷ್ಟಿಸಿ ವಿಶ್ವದ ಅತೀ ವಿಸ್ತಾರವಾದ ಮ್ಯಾಂಗ್ರೋವ್‌ ಅರಣ್ಯಗಳಲ್ಲಿ ಒಂದಾದ ಸುಂದರ ಬನ್ಸ್‌ ರಾಷ್ಟ್ರೀಯ ಉದ್ಯಾನ ಇದರ ದಂಡೆಯ ಮೇಲಿದೆ.

ಸಿಂಧೂ ನದಿ

ಐತಿಹಾಸಿಕ ಮೌಲ್ಯ ಹೊಂದಿರುವ ಸಿಂಧೂ ನದಿಯು ಅತ್ಯಂತ  ಪ್ರಾಚೀನ ಎಂದು ಪರಿಗಣಿಸಲ್ಪಟ್ಟಿರುವ ಸಿಂಧೂ ಕಣಿವೆಯ ನಾಗರಿಕತೆ ಹುಟ್ಟಿಗೆ ಕಾರಣವಾಯಿತು. ಇದನ್ನು ಇಂಡಸ್‌ ನದಿ ಎಂದೂ ಕರೆಯಲಾಗುತ್ತದೆ. ಭಾರತಕ್ಕೆ ಇಂಡಿಯಾ ಎನ್ನುವ ಹೆಸರೂ ಈ ನದಿಯಿಂದಾಗಿಯೇ ಬಂದಿದೆ.

ಮೂಲ- ಟಿಬೇಟಿಯನ್‌ ಪ್ರಸ್ಥಭೂಮಿ ಹರಿವು– ಲಡಾಖ್‌ ಉದ್ದ- 3,180 ಕಿ.ಮೀ.

ಪ್ರಮುಖ ಉಪನದಿಗಳು- ಬಲರಾಮ್‌ ನದಿ, ಬಿಯಾಸ್‌, ಚೆನಾಬ್‌, ಡ್ರಾಸ್‌, ಗಿಲಿಟ್‌,ಝೇಲಮ್‌, ರವಿ, ಸತ್ಲೆಜ್‌

ವಿಲೀನ– ಅರಬಿ ಸಮುದ್ರ

ಯಮುನಾ

ಯಮುನಾ ಎಂಬ ಹೆಸರು ಸಂಸ್ಕೃತ ಪದ ಯಮದಿಂದ ಬಂದಿದೆ. ಇದರ ಅರ್ಥ ಅವಳಿ. ಇದು ಗಂಗೆಗೆ ಸಮಾನಾಂತರವಾಗಿ ಹರಿಯುವುದರಿಂದ ಇದಕ್ಕೆ ಈ ಹೆಸರನ್ನು ನೀಡಿರುವ ಸಾಧ್ಯತೆ ಇದೆ.  ಇದು ಭಾರತದ ಅತೀ ಉದ್ದ ಮತ್ತು ವಿಶ್ವದ ಎರಡನೇ ಅತೀ ದೊಡ್ಡ ಉಪನದಿ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಇದಕ್ಕೆ ಜಮುನಾ ಎನ್ನುವ ಇನ್ನೊಂದು ಹೆಸರೂ ಇದೆ.

ಮೂಲ- ಹಿಮಾಲಯದ ಯಮುನೋತ್ರಿಯ ಹಿಮನದಿಗಳು. ಪ್ರಮುಖ ಉಪನದಿಗಳು: ಹನುಮಾನ್‌ ಗಂಗಾ, ಶಾರದಾ, ಚಂಬಲ್‌

ವಿಲೀನ- ಅಲಹಾಬಾದ್‌ನಲ್ಲಿ ಗಂಗಾ ನದಿಯನ್ನು ಸೇರುತ್ತದೆ.

ಬ್ರಹ್ಮಪುತ್ರಾ

ಬ್ರಹ್ಮಪುತ್ರಾ ನದಿ ದಡದಲ್ಲಿ ಅನೇಕ ಭಾರತೀಯರು, ಬಾಂಗ್ಲಾದೇಶೀಯರೂ ವಾಸಿಸುತ್ತಿದ್ದಾರೆ. ಇದರ ದಂಡೆಯಲ್ಲಿ 130 ಮಿಲಿಯನ್‌ ಜನರು ಮತ್ತು ನದಿಯ ದ್ವೀಪ ಪ್ರದೇಶಗಳಲ್ಲಿ 6 ಲಕ್ಷಕ್ಕಿಂತಲೂ ಅಧಿಕ ಮಂದಿ ವಾಸಿಸುತ್ತಿದ್ದಾರೆ.

ಮೂಲ- ಟಿಬೆಟ್‌ನ ಆಂಗ್ಸಿ ಹಿಮನದಿ -ಭಾರತದಲ್ಲಿ ಅರುಣಾಚಲ ಪ್ರದೇಶದಿಂದ ಅಸ್ಸಾಂವರೆಗೆ ಹರಿಯುತ್ತದೆ.

ಉದ್ದ- 2,900 ಕಿ.ಮೀ.

ವಿಲೀನ- ಬಾಂಗ್ಲಾದೇಶದ ಪದ್ಮಾ ನದಿ

ಮಹಾನದಿ

ಮಹಾನದಿ ಎನ್ನುವ ಹೆಸರು ಸಂಸ್ಕೃತ ಪದವಾದ ಮಹಾ (ಶ್ರೇಷ್ಠ) ಮತ್ತು ನದಿ ಎಂಬುದರಿಂದ ಬಂದಿದೆ. ಇದು ಛತ್ತೀಸ್‌ಗಢ, ಒಡಿಶಾದ ಪ್ರಮುಖ ನದಿ. ಇದರ ನೀರನ್ನು ಮುಖ್ಯವಾಗಿ ನೀರಾವರಿ ಮತ್ತು ಕುಡಿಯಲು ಬಳಸಲಾಗುತ್ತದೆ. ಇದನ್ನು ಒಡಿಶಾದ ಅವಶೇಷ ಎಂದೂ ಕರೆಯುತ್ತಾರೆ. ಹಿರಾಕುಂಡ್‌ ಡ್ಯಾಮ್‌ ನಿರ್ಮಾಣಕ್ಕೂ ಮೊದಲು ಇದರಿಂದ ವಿನಾಶಕಾರಿ ಪ್ರವಾಹ ಉಂಟಾಗಿತ್ತು.

ಮೂಲ- ಛತ್ತೀಸ್‌ಗಢದ ದಂಡಕಾರಣ್ಯ ಧಮ್ತಾರಿಯ ಸಿಹಾವಾ. ಉದ್ದ- 858 ಕಿ.ಮೀ. ವಿಲೀನ- ಬ್ರಾಹ್ಮಣಿ ನದಿಯೊಂದಿಗೆ ಸಂಗಮಗೊಳ್ಳುತ್ತದೆ.

ಗೋದಾವರಿ

ಗಂಗಾ ನದಿಯ ಅನಂತರ ಗೋದಾವರಿ ಭಾರತದ ಎರಡನೇ ಅತೀ ಉದ್ದದ ನದಿಯಾಗಿದೆ. ಹಿಂದೂ ಧರ್ಮಗ್ರಂಥಗಳಲ್ಲಿ ಹಲವು ಸಹಸ್ರಮಾನಗಳಿಂದ ಗೌರವಿಸಲ್ಪಟ್ಟ ಗೋದಾವರಿಯನ್ನು ದಕ್ಷಿಣ ಗಂಗಾ ಎಂದೂ ಕರೆಯುತ್ತಾರೆ.

ಮೂಲ- ಮಹಾರಾಷ್ಟ್ರದ ತ್ರ್ಯಂಬಕೇಶ್ವರ ಉದ್ದ- 1,465 ಕಿ.ಮೀ. ವಿಲೀನ- ಬಂಗಾಲಕೊಲ್ಲಿ

ಖ್ಯಾತಿ- ಕೃಷ್ಣಾ-ಗೋದಾವರಿ ಜಲಾನಯನ ಪ್ರದೇಶವು ಅಳಿವಿನಂಚಿನಲ್ಲಿರುವ ಆಲಿವ್‌ ರಿಡ್ಲೆ ಸಮುದ್ರ ಆಮೆಯ ಗೂಡುಕಟ್ಟುವ ಪ್ರಮುಖ ತಾಣಗಳಲ್ಲಿ ಒಂದಾಗಿದೆ.

ಕೃಷ್ಣಾ

ಇದನ್ನು ಕೃಷ್ಣ ವೇಣಿ ಎಂದೂ ಕರೆಯುತ್ತಾರೆ. ನೀರಿನ ಒಳ ಹರಿವು, ನದಿ ಜಲಾನಯನ ಪ್ರದೇಶದ ನಾಲ್ಕನೇ ಅತೀ ದೊಡ್ಡ ನದಿ ಕೃಷ್ಣಾ. ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶಕ್ಕೆ ಮುಖ್ಯ ನೀರಿನ ಮೂಲವಾಗಿದೆ.

ಮೂಲ- ಮಹಾರಾಷ್ಟ್ರದ ಮಹಾಬಲೇಶ್ವರ ಉದ್ದ- 1,400 ಕಿ.ಮೀ. ವಿಲೀನ- ಬಂಗಾಲಕೊಲ್ಲಿ

ಕಾವೇರಿ

ದಕ್ಷಿಣ ಪ್ರದೇಶಗಳಲ್ಲಿ ಬರಗಾಲ ಎದುರಾದ ಸಂದರ್ಭದಲ್ಲಿ ಅಗಸ್ತ್ಯ ಋಷಿಯು ಶಿವನ ಬಳಿ ಇದ್ದ ಗಂಗೆಯಿಂದ ಕೊಂಚ ನೀರನ್ನು ಪಡೆದು ಕಮಂಡಲದಲ್ಲಿ ತುಂಬಿಸಿ  ಸಂಚರಿಸುತ್ತಿದ್ದರು. ಒಂದು ಬಾರಿ ಅವರು ವಿಶ್ರಾಂತಿ ಪಡೆಯುತ್ತಿದ್ದಾಗ ಪಾರ್ವತಿ ನಂದನ ಶ್ರೀಗಣೇಶನಿಗೆ ಕಮಂಡಲದಲ್ಲಿ ಏನಿರಬಹುದು ಎನ್ನುವ ಅಚ್ಚರಿ ಕಾಡಿತ್ತು. ಅದಕ್ಕಾಗಿ ಕಾಗೆಯ  ವೇಷ ಧರಿಸಿ ಕಮಂಡಲದ ಮೇಲೆ ಕುಳಿತಾಗ ಕಮಂಡಲ ಕೆಳಗೆ ಬಿದ್ದು  ಅದರಿಂದ ನೀರು ಪ್ರವಹಿಸಲು ಪ್ರಾರಂಭವಾಗುತ್ತದೆ. ಹೀಗೆ ಕಾವೇರಿಯ ಉದ್ಭವವಾಗುತ್ತದೆ ಎನ್ನುವ ಪೌರಾಣಿಕ ಹಿನ್ನಲೆ ಇದೆ.

ಮೂಲ- ತಲಕಾವೇರಿ ಪ್ರಮುಖ ಉಪನದಿಗಳು– ಅಮರಾವತಿ, ಶೇಷ, ಹೇಮಾವತಿ ಉದ್ದ- 765 ಕಿ.ಮೀ. ವಿಲೀನ– ಬಂಗಾಲಕೊಲ್ಲಿ

ಟಾಪ್ ನ್ಯೂಸ್

Mangalore-Taxi-meet

Mangaluru: ಪ್ಯಾನಿಕ್‌ ಬಟನ್‌, ಜಿಪಿಎಸ್‌ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ

Tiger-Hunasuru

Nagarhole Park Tiger Fight: ಹುಲಿಗಳ ಕಾದಾಟ ಗಂಡು ಹುಲಿಗೆ ಗಾಯ!

Vijayapura-Sainik

Vijayapura: ನೌಕಾಪಡೆ ಅನೇಕ ಕಾರ್ಯಾಚರಣೆಯಲ್ಲಿದ್ದ ಹೆಲಿಕಾಪ್ಟರ್ ಸೈನಿಕ ಶಾಲೆಯಲ್ಲಿ ಸ್ಥಾಪನೆ

police

Davanagere; ಏಕಾಏಕಿ ಬಾರ್ ಗೆ ನುಗ್ಗಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯ ಇರಿದು ಹ*ತ್ಯೆ

1-ammi

J&K Assembly polls; ಈಗ ಪಾಕಿಸ್ಥಾನವು ಮೋದಿಗೆ ಹೆದರುತ್ತಿದೆ: ಅಮಿತ್ ಶಾ ವಾಗ್ದಾಳಿ

Achraya-das

Tirupati laddoo: ʼಅಯೋಧ್ಯೆ ರಾಮಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಲಡ್ಡು ಪ್ರಸಾದ ಹಂಚಿದ್ದೆವುʼ

1-ewqewqe

AtishiAAP; ದೆಹಲಿಯ ಮೂರನೇ ಮಹಿಳಾ ಸಿಎಂ ಆದ ಆತಿಷಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

laTirumala Tirupa ಲಡ್ಡು ಪ್ರಸಾದ ಪ್ರಮಾದ!

Tirumala Tirupati: ಲಡ್ಡು ಪ್ರಸಾದ ಪ್ರಮಾದ!

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

Election: ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

ಒತ್ತುವರಿ ತೆರವು ಎಂಬ ಜೇನುಗೂಡಿಗೆ ಕೈಹಾಕುವಾಗ…

Yaksha

Yakshagana ಆಯುಧ ವೇಷದ ಲಕ್ಷಣ ಸೂಚಕ; ಪರಾಮರ್ಶೆ ಇಂದಿನ ಅಗತ್ಯ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Mangalore-Taxi-meet

Mangaluru: ಪ್ಯಾನಿಕ್‌ ಬಟನ್‌, ಜಿಪಿಎಸ್‌ ರದ್ದುಪಡಿಸಿ; ಸಾರಿಗೆ ಸಚಿವ ರೆಡ್ಡಿಗೆ ಮನವಿ

R Ashok (2)

BJP; ವಿಪಕ್ಷ ನಾಯಕ ಆರ್‌. ಅಶೋಕ್‌ ನಡೆಗೆ ಕಾಂಗ್ರೆಸ್‌ ಖಂಡನೆ

Tiger-Hunasuru

Nagarhole Park Tiger Fight: ಹುಲಿಗಳ ಕಾದಾಟ ಗಂಡು ಹುಲಿಗೆ ಗಾಯ!

Vijayapura-Sainik

Vijayapura: ನೌಕಾಪಡೆ ಅನೇಕ ಕಾರ್ಯಾಚರಣೆಯಲ್ಲಿದ್ದ ಹೆಲಿಕಾಪ್ಟರ್ ಸೈನಿಕ ಶಾಲೆಯಲ್ಲಿ ಸ್ಥಾಪನೆ

Arrested: ಬಜಪೆ ಪೊಲೀಸರ ಕಾರ್ಯಾಚರಣೆ; ಗಾಂಜಾ ಸೇವನೆ ಆರೋಪಿಗಳ ಬಂಧನ

Arrested: ಬಜಪೆ ಪೊಲೀಸರ ಕಾರ್ಯಾಚರಣೆ; ಗಾಂಜಾ ಸೇವನೆ ಆರೋಪಿಗಳ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.