Election 2023: ದ.ಕ. ಜಿಲ್ಲೆಯ 3 ಕ್ಷೇತ್ರದ ಪಟ್ಟಿ ಇನ್ನೂ 2-3 ದಿನ ವಿಳಂಬ
ಮುಗಿಯದ ಮನವೊಲಿಕೆ, ಜಾತಿ ಲೆಕ್ಕಾಚಾರ
Team Udayavani, Apr 7, 2023, 8:03 AM IST
ಮಂಗಳೂರು: ಕಾಂಗ್ರೆಸ್ ಎರಡನೇ ಪಟ್ಟಿಯೂ ಬಿಡುಗಡೆಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂರು ಕ್ಷೇತ್ರಗಳ ಹೆಸರಿಲ್ಲದಾಗಿದೆ. ಈ ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿಯೇ ಮುಂದುವರಿದಿದೆ.
ಲಭ್ಯ ಮಾಹಿತಿ ಪ್ರಕಾರ ಹಲವರ ಮನವೊಲಿ ಸುವಿಕೆ, ಒಂದಷ್ಟು ಜಾತಿ ಲೆಕ್ಕಾಚಾರ, ವಿವಿಧ ಕ್ಷೇತ್ರಗಳಲ್ಲಿ ಜಾತಿ ಸಂಯೋಜನೆ ಇತ್ಯಾದಿ ಇರುವ ಕಾರಣ ಕನಿಷ್ಠ 3 ದಿನಗಳ ಬಳಿಕ 3ನೇ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ.
ತೀವ್ರ ಕುತೂಹಲದ ನಡುವೆ ಎರಡು ದಿನ ಕಾಲ ಮುಂದೂಡಲ್ಪಟ್ಟ ಅಭ್ಯರ್ಥಿಗಳ ಎರಡನೇ ಪಟ್ಟಿ ಗುರುವಾರ ಬಹಿರಂಗ ಗೊಂಡಿತು. ಆದರೆ ಕರಾವಳಿಯಲ್ಲಿ ಉಡುಪಿ ಕ್ಷೇತ್ರ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಅದೇ ಜಿಲ್ಲೆಯ ಕಾರ್ಕಳ ಕ್ಷೇತ್ರಕ್ಕೂ ಅಭ್ಯರ್ಥಿ ಘೋಷಿಸಿಲ್ಲ.
ಕುಮಟಾದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕಿ ಮಾರ್ಗರೆಟ್ ಆಳ್ವ ಅವರ ಪುತ್ರ ನಿವೇ ದಿತ್ ಆಳ್ವ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಈ ಬಾರಿ ಮಂಗಳೂರು ದಕ್ಷಿಣ ದಲ್ಲಿ ಕ್ರೈಸ್ತ ಅಭ್ಯರ್ಥಿಗಳಿಗೆ ಅವಕಾಶ ತಪ್ಪುವ ಸಾಧ್ಯತೆ ಇದ್ದು, ಈ ಕುರಿತಂತೆ ಆಕಾಂಕ್ಷಿಗಳಾದ ಜೆ.ಆರ್. ಲೋಬೊ, ಐವನ್ ಡಿ’ಸೋಜ ಅವರ ಮನವೊಲಿಸುವ ಪ್ರಯತ್ನ ಚಾಲ್ತಿಯಲ್ಲಿದೆ ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ಆ ಸಮುದಾಯದ ಧಾರ್ಮಿಕ ಮುಖಂಡರಿಗೂ ಅನಿವಾರ್ಯತೆ ಯನ್ನು ಮನದಟ್ಟು ಮಾಡಿಕೊಡಲು ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ. ಸಮುದಾಯಕ್ಕೆ ವಿಧಾನ ಪರಿಷತ್ ಸ್ಥಾನ ಕಲ್ಪಿಸುವ ಭರವಸೆಯೂ ಇರುವ ಸಾಧ್ಯತೆ ಇದೆ. ಈ ಕ್ಷೇತ್ರದಲ್ಲಿ ಪದ್ಮರಾಜ್ ಆರ್. ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.
ಮಂಗಳೂರು ನಗರ ಉತ್ತರದಲ್ಲಿ ಟಿಕೆಟ್ ವಿಳಂಬಕ್ಕೆ ಕಾರಣ ಇನಾಯತ್ ಅಲಿ ಹಾಗೂ ಮೊದಿನ್ ಬಾವ ಅವರ ತೀವ್ರ ಮೇಲಾಟ ನಡೆದಿದೆ. ಹೈಕಮಾಂಡ್ ಗಮನ ಸದ್ಯ ಡಿ.ಕೆ.ಶಿವಕುಮಾರ್ ಆಪ್ತರಾದ ಇನಾಯತ್ ಅವರ ಕಡೆಗೆ ತುಸು ವಾಲಿದಂತಿದೆ.
ಪುತ್ತೂರಿನಲ್ಲೂ ಇತರ ಕ್ಷೇತ್ರಗಳ ಅಭ್ಯರ್ಥಿ ಗಳ ಆಯ್ಕೆಯನ್ನು ಆಧರಿಸಿದೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಕೈ ಹಿಡಿದ ಡಿ.ವಿ. ಸದಾನಂದ ಗೌಡರ ಆಪ್ತ ಅಶೋಕ್ ರೈ ಅವರಿಗೆ ಅವಕಾಶ ಸಿಗುತ್ತದೆಂಬ ಮಾಹಿತಿ ಇತ್ತು. ಆದರೆ ಈಗ ಶಕುಂತಳಾ ಶೆಟ್ಟಿ, ಡಾ| ರಾಜಾರಾಂ, ಸತೀಶ್ ಕೆದಿಂಜ ಮುಂತಾದವರ ಮುನ್ನೆಲೆಗೆ
ಬಂದಿವೆ.
ಲೋಬೊಗೆ ಭರವಸೆ?
ಮಾಜಿ ಶಾಸಕ ಜೆ.ಆರ್. ಲೋಬೊ ಅವರ ಆಪ್ತ ಮೂಲಗಳ ಪ್ರಕಾರ ಅವರು ಬೆಂಗಳೂರಿಗೆ ಕೆಲವು ದಿನಗಳ ಹಿಂದೆ ತೆರಳಿದ್ದು ಉನ್ನತ ನಾಯಕರಿಂದ ಟಿಕೆಟ್ ಭರವಸೆ ಸಿಕ್ಕಿದ ಹಿನ್ನೆಲೆಯಲ್ಲಿ ಸದ್ಯ ಮನೆಗಳಿಗೆ ತೆರಳಿ ಗ್ಯಾರೆಂಟಿ ಕಾರ್ಡ್ ವಿತರಿಸುತ್ತಿದ್ದಾರೆ.
ಇನ್ನೋರ್ವ ಆಕಾಂಕ್ಷಿ ಐವನ್ ಡಿ’ಸೋಜ ಸದ್ಯ ದಿಲ್ಲಿಯಲ್ಲಿದ್ದು, ಗುಡ್ ಫ್ತೈಡೇ ಹಿನ್ನೆಲೆಯಲ್ಲಿ ಊರಿಗೆ ಮರಳು ತ್ತಿದ್ದಾರೆ. ಬಹಳ ವರ್ಷ ಕ್ರೈಸ್ತರು ಪ್ರತಿನಿಧಿ ಸುತ್ತಿದ್ದ ಕ್ಷೇತ್ರ ಮಂಗಳೂರು ದಕ್ಷಿಣ, ಹಾಗಾಗಿ ನಮಗೇ ಕೊಡಬೇಕು ಎಂಬ ಒತ್ತಾಯವನ್ನು ಹೈಕಮಾಂಡ್ ಮುಂದಿಟ್ಟಿ ದ್ದೇವೆ ಎಂದು ಅವರು “ಉದಯವಾಣಿ’ಗೆ ತಿಳಿಸಿದರು. ಒಟ್ಟಿನಲ್ಲಿ ಗುಡ್‌ಫ್ತೈಡೇ, ವಾರಾಂತ್ಯ ಮುಗಿದೇ ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆಯಾಲಿದೆ ಎನ್ನು ವುದು ಸದ್ಯದ ಮಾಹಿತಿ.
~ ವೇಣುವಿನೋದ್ ಕೆ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.