ತುರ್ತು ರಕ್ಷಣೆ: ಕರಾವಳಿಯಲ್ಲಿಲ್ಲ ಹೆಲಿಕಾಪ್ಟರ್!
Team Udayavani, May 19, 2021, 7:30 AM IST
ಮಂಗಳೂರು: ರಾಜ್ಯ ಕರಾವಳಿಯ ಭದ್ರತೆಗಾಗಿ ವಿವಿಧ ಭದ್ರತ ಸಂಸ್ಥೆಗಳು ಇದ್ದರೂ ತುರ್ತು ರಕ್ಷಣೆಗೆ ಹೆಲಿಕಾಪ್ಟರ್ ಮಾತ್ರ ಇಲ್ಲಿಲ್ಲ. ಅನಿವಾರ್ಯ ಸಂದರ್ಭಗಳಲ್ಲಿ ಗೋವಾ ಅಥವಾ ಕೇರಳದ ಕೊಚ್ಚಿಯನ್ನು ಅವಲಂಬಿಸಬೇಕಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆ ಸಹಿತ 320 ಕಿ.ಮೀ. ಉದ್ದದ ಕರಾವಳಿಯಲ್ಲಿ ವಿವಿಧ ಚಟುವ ಟಿಕೆಗಳು ನಡೆಯುತ್ತವೆ. ಹಡಗು ಗಳು, ನೂರಾರು ಮೀನುಗಾರಿಕೆ ಬೋಟ್ ದಿನನಿತ್ಯ ಸಂಚರಿಸುತ್ತವೆ. ಕಡಲಿನಲ್ಲಿ ದುರ್ಘಟನೆ ಗಳು ಸಂಭವಿಸಿದಾಗ ತತ್‌ಕ್ಷಣ ರಕ್ಷಣೆಗೆ ಹೆಲಿಕಾಪ್ಟರ್ ಅನಿವಾರ್ಯ. ಆದರೆ ನಮ್ಮ ಕರಾವಳಿಯಲ್ಲಿ ಒಂದೂ ಇಲ್ಲ!
ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೋಸ್ಟ್ ಗಾರ್ಡ್ ವಾಯುನೆಲೆ ಇದ್ದರೂ ಹೆಲಿಕಾಪ್ಟರ್ ಇಲ್ಲದೆ ತುರ್ತು ಸಂದರ್ಭಗಳಲ್ಲಿ ತೊಡಕಾಗುತ್ತಿದೆ.
ಗೋವಾ, ಕೊಚ್ಚಿ: ಒಂದು ದಿನ ತಡ!
ಶನಿವಾರ ಟಗ್ ದುರಂತ ಅರಿವಿಗೆ ಬಂದ ಕೂಡಲೇ ರಕ್ಷಣ ಕಾರ್ಯಾಚರಣೆ ಆರಂಭ ವಾಗಿತ್ತು. ಆದರೆ ಯಶಸ್ವಿಯಾಗಿರಲಿಲ್ಲ. ಹೆಲಿ ಕಾಪ್ಟರ್ ಅನಿವಾರ್ಯವೆನಿಸಿದಾಗ ಸೇನೆಯಿಂದ ತರಿಸಲು ಜಿಲ್ಲಾಡಳಿತ ತೀರ್ಮಾನಿಸಿತು. ರವಿವಾರ ಸಂಜೆ 4ಕ್ಕೆ ಗೋವಾದಿಂದ ಅದು ಮಂಗಳೂರಿಗೆ ಬರಬೇಕಿತ್ತು. ಆದರೆ ಮಳೆಯಿಂದ ಸಾಧ್ಯವಾಗಿಲ್ಲ. ಕೊಚ್ಚಿಯಿಂದ ತರಿಸುವ ಬಗ್ಗೆಯೂ ಮಾತುಕತೆ ನಡೆಯಿತು. ಮಳೆ ಅದಕ್ಕೂ ಕಲ್ಲು ಹಾಕಿತು. ದ.ಕ. ಕರಾವಳಿಯಲ್ಲೇ ಹೆಲಿಕಾಪ್ಟರ್ ಇರುತ್ತಿದ್ದರೆ ಘಟನೆ ಸಂಭವಿಸಿದ ತತ್‌ಕ್ಷಣ ರಕ್ಷಿಸಬಹುದಿತ್ತು.
ವರ್ಷದೊಳಗೆ 2 ಹೆಲಿಕಾಪ್ಟರ್ ?
ಮರವೂರಿನಲ್ಲಿ ಅತ್ಯುನ್ನತ ಕೋಸ್ಟ್‌ಗಾರ್ಡ್ ಅಕಾಡೆಮಿ ಸ್ಥಾಪನೆಯಾಗಲಿದೆ. ಅದಕ್ಕಾಗಿ ವರ್ಷ ದೊಳಗೆ 2 ಹೆಲಿಕಾಪ್ಟರ್ ಆಗಮಿಸಲಿವೆ ಎಂಬ ಮಾಹಿತಿ ಇದೆ. ಅದುವರೆಗೆ ಕೊಚ್ಚಿ, ಗೋವಾ ಅವ ಲಂಬನೆ ಅನಿವಾರ್ಯ ಎಂದು ದ.ಕ. ಜಿಲ್ಲಾ ಉಸ್ತು ವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸಾಮಾನ್ಯವಾಗಿ ಇಂಥ ಸಂದರ್ಭಗಳಲ್ಲಿ ನೌಕಾಪಡೆ ಅಥವಾ ವಾಯು ಪಡೆ ಹೆಲಿಕಾಪ್ಟರ್ ಬಳಸಿಕೊಳ್ಳುತ್ತೇವೆ. ಕರಾವಳಿಗೆ ಹೆಲಿಕಾಪ್ಟರ್ ಅಗತ್ಯವಿರುವ ಕುರಿತು ಸರಕಾರದ ಗಮನಕ್ಕೆ ತರುತ್ತೇವೆ.
– ಜಿ. ಜಗದೀಶ್, ಉಡುಪಿ ಜಿಲ್ಲಾಧಿಕಾರಿ
ಸಮುದ್ರದಲ್ಲಿ ಅವಘಡ ಸಂಭವಿಸಿದಾಗ ರಕ್ಷಣೆಗೆ ಹೆಲಿಕಾಪ್ಟರ್‌ನ ತುರ್ತು ಅಗತ್ಯವಿದೆ. ರಾಜ್ಯ ಸರಕಾರಕ್ಕೆ ಪತ್ರ ಬರೆದು ಅಲ್ಲಿಂದ ರಕ್ಷಣ ಇಲಾಖೆಗೆ ಮನವಿ ಸಲ್ಲಿಸಲು ವಿನಂತಿಸಲಾಗುವುದು.
– ಡಾ| ಕೆ.ವಿ. ರಾಜೇಂದ್ರ, ದ.ಕ. ಜಿಲ್ಲಾಧಿಕಾರಿ
– ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.