Reunite; 35 ವರ್ಷಗಳ ನಂತರ ತಾಯಿ-ಮಗನನ್ನು ಒಂದುಗೂಡಿಸಿದ ಪ್ರವಾಹ ರಕ್ಷಣಾ ಕಾರ್ಯಾಚರಣೆ!

ಮೊಮ್ಮಗ ಜಗಜಿತ್‌ ಸಿಂಗ್‌ ಗೆ ಆತನ ಪೋಷಕರು ಅಪಘಾತದಲ್ಲಿ ತೀರಿಹೋಗಿದ್ದರೆಂದೇ ಹೇಳಿದ್ದರು.

ನಾಗೇಂದ್ರ ತ್ರಾಸಿ, Jul 28, 2023, 3:43 PM IST

thumb-1

ಧಾರಾಕಾರ ಮಳೆ, ಪ್ರವಾಹದಿಂದಾಗಿ ಪಂಜಾಬ್‌ ಜನರು ತತ್ತರಿಸಿ ಹೋಗಿದ್ದಾರೆ. ನೂರಾರು ಜನರು ತಮ್ಮ ಮನೆಯನ್ನು ತೊರೆಯುವಂತೆ ಮಾಡಿದೆ. ಆದರೆ ರಕ್ಷಣಾ ತಂಡದ ಸ್ವಯಂ ಸೇವಕ ಜಗಜಿತ್‌ ಸಿಂಗ್‌ ಗೆ ಮಾತ್ರ ಪ್ರವಾಹದ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾಗ ಅವರು ಬದುಕನ್ನೇ ಬದಲಾಯಿಸುವ ಅಚ್ಚರಿಯ ಘಟನೆಗೆ ಸಾಕ್ಷಿಯಾದರು…ಅದೇನೆಂದರೆ ಬರೋಬ್ಬರಿ 35 ವರ್ಷಗಳ ನಂತರ ತಾಯಿ ಮತ್ತು ಮಗನ ಪುನರ್ಮಿಲನವಾಗಿದ್ದು!

ಇದೊಂದು ರಿಯಲ್‌ ಸ್ಟೋರಿ:

ಟೈಮ್ಸ್‌ ಆಫ್‌ ಇಂಡಿಯಾದ ವರದಿ ಪ್ರಕಾರ, ಪಂಜಾಬ್‌ ನ ಗುರುದಾಸ್‌ ಪುರದ ಖ್ವಾಡಿಯನ್‌ ಮುಖ್ಯ ಗುರುದ್ವಾರದಲ್ಲಿ ಗಾಯಕ (ಭಕ್ತಿಪ್ರದಾನ ಹಾಡು)ರಾಗಿರುವ ಜಗಜಿತ್‌ ಸಿಂಗ್‌ (37ವರ್ಷ) ಇತ್ತೀಚೆಗೆ ಪ್ರವಾಹ ರಕ್ಷಣಾ ಕಾರ್ಯಕ್ಕಾಗಿ ತಮ್ಮ ಎನ್‌ ಜಿಒ ಭಾಯಿ ಘಾನಾಯಾಜಿ ಜತೆ ಪಟಿಯಾಲಾಕ್ಕೆ ತೆರಳಿದ್ದರು.

ಪಂಜಾಬ್‌ ನಲ್ಲಿ ಸುರಿದ ಭಾರೀ ಮಳೆ, ಪ್ರವಾಹದಿಂದ 43 ಮಂದಿ ಸಾವನ್ನಪ್ಪಿದ್ದರು. ಪ್ರವಾಹದಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ಪಟಿಯಾಲಾಕ್ಕೆ ತೆರಳಿದ್ದ ರಕ್ಷಣಾ ತಂಡದಲ್ಲಿ ಜಗಜಿತ್‌ ಸಿಂಗ್‌ ಕೂಡಾ ಇದ್ದಿದ್ದು, ಈ ವೇಳೆ ಜುಲೈ 20ರಂದು ಬೋರ್ಹಾಪುರ್‌ ಗ್ರಾಮದಲ್ಲಿ ತನ್ನ ತಾಯಿ ಹರ್ಜೀತ್‌ ಕೌರ್‌ ಅವರನ್ನು ಪತ್ತೆ ಹಚ್ಚುವ ಮೂಲಕ 35 ವರ್ಷಗಳ ನಂತರ ತಾಯಿ, ಮಗ ಮತ್ತೆ ಒಗ್ಗೂಡಿರುವ ಅಪರೂಪದ ಘಟನೆಗೆ ಸಾಕ್ಷಿಯಾಯಿತು.

ತಂದೆ-ತಾಯಿ ಸಾವನ್ನಪ್ಪಿರುವುದಾಗಿ ಸುಳ್ಳು ಹೇಳಿದ್ದರು:

ಜಗಜಿತ್‌ ಸಿಂಗ್‌ ಆರು ತಿಂಗಳ ಪುಟ್ಟ ಮಗುವಿದ್ದಾಗಲೇ ತಂದೆ ತೀರಿ ಹೋಗಿದ್ದರು. ಜಗಜಿತ್‌ ಗೆ ಎರಡು ವರ್ಷವಾಗುತ್ತಿದ್ದಂತೆಯೇ ತಾಯಿ ಮತ್ತೊಂದು ವಿವಾಹವಾಗಿ ದೂರ ಹೋಗಿ ಬಿಟ್ಟಿದ್ದರು. ಆ ಸಂದರ್ಭದಲ್ಲಿ ಅಜ್ಜ-ಅಜ್ಜಿ ಮಗುವನ್ನು ತಮ್ಮ ಮನೆಗೆ ಕರೆದುಕೊಂಡು ಬಂದು ಪೋಷಿಸತೊಡಗಿದ್ದರು. ಹೀಗೆ ಬೆಳೆಯುತ್ತಾ ಬಂದ ಮೊಮ್ಮಗ ಜಗಜಿತ್‌ ಸಿಂಗ್‌ ಗೆ ಆತನ ಪೋಷಕರು ಅಪಘಾತದಲ್ಲಿ ತೀರಿಹೋಗಿದ್ದರೆಂದೇ ಹೇಳಿದ್ದರು.

ಹೀಗೆ ಅಜ್ಜ-ಅಜ್ಜಿ(ತಂದೆಯ ಅಪ್ಪ-ಅಮ್ಮ)ಯ ಪೋಷಣೆಯಲ್ಲಿ ಬೆಳೆದ ಜಗಜಿತ್‌ ಸಿಂಗ್‌ ಕಾಲೇಜು ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದ ನಂತರ ಖ್ವಾಡಿಯಾನ್‌ ಗುರುದ್ವಾರದಲ್ಲಿ ಗಾಯಕರಾಗಿ ಹಾಗೂ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಇತ್ತೀಚೆಗೆ ಭಾರೀ ಮಳೆ, ಪ್ರವಾಹ ತಲೆದೋರಿದ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಪಟಿಯಾಲಾಕ್ಕೆ ಹೋಗುತ್ತಿರುವುದಾಗಿ ಜಗಜಿತ್‌ ಸಿಂಗ್‌ ಚಿಕ್ಕಮ್ಮನ ಬಳಿ ಹೇಳಿದ್ದರು. ಆಗ ನಿನ್ನ ಅಜ್ಜಿಯ (ತಾಯಿಯ ಅಮ್ಮ) ಮನೆ ಕೂಡಾ ಪಟಿಯಾಲಾದ ಬೋರ್ಹಾಪುರ್‌ ಗ್ರಾಮದಲ್ಲಿದೆ ಎಂಬ ಸುಳಿವನ್ನು ಬಿಟ್ಟುಕೊಟ್ಟಿದ್ದರು. ಇದೊಂದೇ ಸುಳಿವು ಜಗಜಿತ್‌ ಸಿಂಗ್‌ ಜೀವನದ ಮಹತ್ತರ ಘಟನೆಗೆ ಸಾಕ್ಷಿಯಾಗಲು ಕಾರಣವಾಯ್ತು.

ಪಟಿಯಾಲಾದ ಪ್ರವಾಹ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದ ಜಗಜಿತ್‌ ಸಿಂಗ್‌ ಚಿಕ್ಕಮ್ಮ ನೀಡಿದ ಮಾಹಿತಿಯ ಸುಳಿವಿನ ಮಾಹಿತಿಯಂತೆ ಬೋರ್ಹಾಪುರ್‌ ನಲ್ಲಿ ಅಜ್ಜಿ ಪ್ರೀತಮ್‌ ಕೌರ್‌ ಅವರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದ. ಆಗ ಜಗಜಿತ್‌ ಸಿಂಗ್‌ ಅಜ್ಜಿಯ ಬಳಿಯ ಪ್ರಶ್ನೆಗಳ ಸುರಿಮಳೆಗೈದಿದ್ದ, ಕೊನೆಗೆ ಅಜ್ಜಿ ತಾಯಿ ಹರ್ಜಿತ್‌ ಕೌರ್‌ ಬಗ್ಗೆ ಬಾಯ್ಬಿಟ್ಟಿದ್ದರು. ಈ ವಿಷಯ ಕೇಳಿ ಖುಷಿಯಿಂದ ಜಗಜಿತ್‌ ಸಿಂಗ್‌ ಕಣ್ಣಲ್ಲಿ ಅಶ್ರುಧಾರೆ ಇಳಿಯತೊಡಗಿತ್ತು. ತಾಯಿ ಹರ್ಜಿತ್‌ ಕೌರ್‌ ಮುಖಾಮುಖಿಯಾದಾಗ ಇಬ್ಬರೂ ತಬ್ಬಿಕೊಂಡು ಗಳಗಳನೆ ಅತ್ತು ಬಿಟ್ಟು ನಿರಾಳರಾಗಿದ್ದರು.

ತನ್ನ ತಾಯಿಯನ್ನು ಜಗಜಿತ್‌ ಸಿಂಗ್‌ ಭೇಟಿಯಾದ ಸಂದರ್ಭದಲ್ಲಿ ಪತ್ನಿ ಹಾಗೂ 14 ವರ್ಷದ ಮಗಳು, 8 ವರ್ಷದ ಪುತ್ರ ಜತೆಗಿದ್ದರು. ಈ ಭಾವನಾತ್ಮಕ ಕ್ಷಣದ ಸಂದರ್ಭವನ್ನು ಜಗಜಿತ್‌ ಸಿಂಗ್‌ ತಮ್ಮ ಫೇಸ್‌ ಬುಕ್‌ ನಲ್ಲಿ ಹಂಚಿಕೊಳ್ಳುವ ಮೂಲಕ ವೈರಲ್‌ ಆಗಿತ್ತು.

ಟಾಪ್ ನ್ಯೂಸ್

Air-Delhi

Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ‌ ಇಚ್ಛಾಶಕ್ತಿ ಪ್ರದರ್ಶಿಸಲಿ

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Donald Trump Salry: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

Donald Trump Salary: ಅಮೆರಿಕದ ಅಧ್ಯಕ್ಷರಿಗೆ ಸಿಗುವ ಸಂಬಳ ಎಷ್ಟು? ಏನೇನು ಸೌಲಭ್ಯಗಳಿವೆ

Trump: ಗುಜರಾತ್‌ ಮೂಲದ ಪಟೇಲ್‌ CIA ನೂತನ ಮುಖ್ಯಸ್ಥ: ಡೊನಾಲ್ಡ್‌ ಟ್ರಂಪ್‌ ಒಲವು

Trump: ಗುಜರಾತ್‌ ಮೂಲದ ಪಟೇಲ್‌ CIA ನೂತನ ನಿರ್ದೇಶಕ: ಡೊನಾಲ್ಡ್‌ ಟ್ರಂಪ್‌ ಒಲವು

voter

Maharashtra Polls; ಹರಿಯಾಣದಂತೆ ಬಂಡಾಯ ಸ್ಪರ್ಧಿಗಳು ಲೆಕ್ಕಾಚಾರ ತಲೆಕೆಳಗಾಗಿಸುತ್ತಾರೆಯೇ?

5

Chocolate ಕೇವಲ ಸಸ್ಯಾಹಾರವೇ? ಸಸ್ಯಾಹಾರಿಗಳೇ ಗಮನಿಸಿ…

Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?

Guruprasad: ಲಾಟರಿ ಮಾರುತ್ತಿದ್ದ ಹುಡುಗ ʼಮಠʼ ಕಟ್ಟಿ ʼರಂಗನಾಯಕʼನಾಗಿ ಬೆಳೆದಿದ್ದೇಗೆ?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Air-Delhi

Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ‌ ಇಚ್ಛಾಶಕ್ತಿ ಪ್ರದರ್ಶಿಸಲಿ

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Dinesh-gundurao

Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.