ಎಂಡೋ ಸಂತ್ರಸ್ತರು ಖಾಸಗಿಯಾಗಿ ಔಷಧ ಖರೀದಿಸಿದರೆ ಮರು ಪಾವತಿ
ಪೋಷಕರ ಹೆಗಲಿಗೆ ಪಾಲನ ಕೇಂದ್ರದ ಹೊಣೆ?
Team Udayavani, Mar 8, 2022, 6:10 AM IST
ಪುತ್ತೂರು: ಎಂಡೋಸಲ್ಫಾನ್ ಪೀಡಿತರು ಖಾಸಗಿ ಕೇಂದ್ರಗಳಿಂದ ಹಣ ಕೊಟ್ಟು ಔಷಧ ಖರೀದಿಸುತ್ತಿದ್ದರೆ ಬಿಲ್ ನೀಡಿದಲ್ಲಿ ಆ ಮೊತ್ತವನ್ನು ಸರಕಾರ ಮರು ಪಾವತಿಸಲಿದೆ.
ತುರ್ತು ಸಂದರ್ಭದಲ್ಲಿ ಔಷಧ ಖರೀದಿಸುತ್ತಿರುವ ಎಂಡೋ ಪೀಡಿತರಿಗೆ ಇದರಿಂದ ನೆರವಾಗಲಿದೆ. ಎಂಡೋ ಪೀಡಿತರಲ್ಲಿ ವಿಭಿನ್ನ ಆರೋಗ್ಯ ಸಮಸ್ಯೆಗಳಿದ್ದು, ರೋಗ ಲಕ್ಷಣಕ್ಕೆ ಅನುಗುಣವಾಗಿ ಔಷಧದ ಅಗತ್ಯ ಇರುತ್ತದೆ. ಕೆಲವು ಔಷಧಗಳು ಸರಕಾರಿ ವ್ಯವಸ್ಥೆಯಲ್ಲಿ ಲಭ್ಯವಿಲ್ಲದಿದ್ದರೆ ಖಾಸಗಿ ಕೇಂದ್ರವನ್ನು ಆಶ್ರಯಿಸುವುದು ಅನಿವಾರ್ಯ.
ಮರು ಪಾವತಿ ಹೇಗೆ?
ಖರೀದಿಸಿದ ಬಿಲ್ ಅನ್ನು ಆಯಾ ವ್ಯಾಪ್ತಿಯ ಇಲಾಖಾಧಿಕಾರಿಗಳ ಮೂಲಕ ಸಲ್ಲಿಸಬೇಕು. ಇದಕ್ಕೆ ಯಾವುದೇ ಮಿತಿ ಇರುವುದಿಲ್ಲ. ಗ್ರಾಹಕರಿಗೆ ಸಾಲ ರೂಪದಲ್ಲಿ ಔಷಧ ಪೂರೈಸುತ್ತಿದ್ದರೆ ಅಂಗಡಿಯಾತನೇ ಬಿಲ್ ಅನ್ನ ಎಂಡೋ ಸೆಲ್‌ಗೆ ನೀಡಿ ಹಣ ಪಡೆಯಬಹುದು. ಈ ಮೊತ್ತವು ಜಿಲ್ಲಾ ಖಜಾನೆಯ ಮೂಲಕ ಮರು ಪಾವತಿ ಆಗುತ್ತದೆ.
ಪೋಷಕರಿಂದ ನಿರ್ವಹಣೆ?
ಸಂತ್ರಸ್ತರ ಆರೈಕೆಗೆಂದು ತೆರೆದಿರುವ ಎಂಡೋ ಪಾಲನ ಕೇಂದ್ರ ನಿರ್ವಹಣೆಯ ಹೊಣೆಗಾರಿಕೆಯನ್ನು ಪೋಷಕರಿಗೆ ನೀಡುವ ಬಗ್ಗೆ ಜಿಲ್ಲಾಡಳಿತ ಚಿಂತಿಸಿದೆ. ದ.ಕ. ಜಿಲ್ಲೆಯ ಕೊಕ್ಕಡ, ಉಜಿರೆ, ಕೊçಲದಲ್ಲಿ ಪಾಲನ ಕೇಂದ್ರಗಳಿವೆ. ಅಲ್ಲಿ ನೂರಾರು ಎಂಡೋಪೀಡಿತರು ಇದ್ದು ಪೋಷಕರೇ ನಿರ್ವಹಣೆಯ ಹೊಣೆ ಹೊತ್ತಲ್ಲಿ ಆರೈಕೆ ಕಾಳಜಿ ಹೆಚ್ಚಾಗುತ್ತದೆ ಎನ್ನುವುದು ಇದರ ಹಿಂದಿರುವ ಲೆಕ್ಕಾಚಾರ.
ಪ್ರಸ್ತುತ ಸರಕಾರವು ಎನ್‌ಜಿಒಗಳ ಮೂಲಕ ನಿರ್ವಹಿಸುತ್ತಿದೆ. ಮಾಸಿಕ ಕೇಂದ್ರವೊಂದಕ್ಕೆ 2.40 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ನಿರ್ವಹಣೆಯ ಹೊಣೆ ಹೊತ್ತವರು ಪ್ರತೀ ನಿತ್ಯ ಎಂಡೋ ಪೀಡಿತರ ಮನೆಗೆ ತೆರಳಿ ಕರೆದುಕೊಂಡು ಬಂದು ಸಂಜೆ 4 ಗಂಟೆಗೆ ಮನೆಗೆ ತಲುಪಿಸಬೇಕು. ಅಲ್ಲಿನ ಎಲ್ಲ ಚಟುವಟಿಕೆಗಳನ್ನು ಸಂತ್ರಸ್ತರ ಪೋಷಕರು ನಿಭಾಯಿಸಬಹುದೇ? ನಿಭಾಯಿಸಬಹುದಾದರೆ ಹೇಗೆ? ಎಂಬ ಬಗ್ಗೆ ಸಮಗ್ರ ವರದಿ ತಯಾರಿಸುವಂತೆ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮೌಖೀಕ ಸೂಚನೆ ನೀಡಿರುವುದಾಗಿ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ದಾಖಲಾತಿ ಕುಸಿತ
ಕೋವಿಡ್ ಪೂರ್ವದಲ್ಲಿ ಪ್ರತೀ ಪಾಲನ ಕೇಂದ್ರದಲ್ಲಿ ಸರಾಸರಿ 60 ಮಂದಿ ದಾಖಲಾಗುತ್ತಿದ್ದರು. ಕೋವಿಡ್ ಬಳಿಕ ಆ ಸಂಖ್ಯೆ 20ರಿಂದ 22ಕ್ಕೆ ಇಳಿದಿದೆ. ಆರೋಗ್ಯ ಸುರಕ್ಷೆ ದೃಷ್ಟಿಯಿಂದ ಪೋಷಕರು ಮಕ್ಕಳನ್ನು ಕಳಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ.
ಇನ್ನೂ 4 ಕೇಂದ್ರ
ಸಂತ್ರಸ್ತರ ಅನುಕೂಲಕ್ಕಾಗಿ ಬೆಳ್ಳಾರೆ, ವಿಟ್ಲ, ಪಾಣಾಜೆ, ಕಾಣಿಯೂರಿನಲ್ಲಿ ಹೊಸದಾಗಿ ಕೇಂದ್ರ ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಬೆಳ್ಳಾರೆ ಹೊರತುಪಡಿಸಿ ಉಳಿದ ಮೂರು ಕಡೆ ಕಟ್ಟಡ ಸಿದ್ಧವಾಗಿದೆ. ಇದರಿಂದ ಪುತ್ತೂರು, ಸುಳ್ಯ ಭಾಗದಿಂದ ಕೊಕ್ಕಡ, ಉಜಿರೆ ಅಥವಾ ಕೊçಲ ಕೇಂದ್ರಕ್ಕೆ ಹೋಗುವ ಪ್ರಮೇಯ ತಪ್ಪಲಿದೆ.
ಎಂಡೋ ಪೀಡಿತರು ಔಷಧವನ್ನು ಖಾಸಗಿಯಾಗಿ ಹಣ ಕೊಟ್ಟು ಖರೀದಿಸುತ್ತಿದ್ದರೆ ಆ ಬಿಲ್ ಅನ್ನು ನೀಡಿದರೆ ಹಣವನ್ನು ಸರಕಾರದಿಂದ ಮರು ಪಾವತಿಸಲು ಅವಕಾಶ ಇದೆ. ಈ ಸೌಲಭ್ಯವನ್ನು ಎಂಡೋಪೀಡಿತರು ಪಡೆದುಕೊಳ್ಳಬೇಕು.
– ಡಾ| ನವೀನ್ ಕುಮಾರ್,
ಜಿಲ್ಲಾ ನೋಡೆಲ್ ಅಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.