ಮಂಗಳೂರು : ಜಾರಿ ನಿರ್ದೇಶನಾಲಯದ ಉಪ ವಲಯ ಕಚೇರಿ ಆರಂಭ
Team Udayavani, Sep 4, 2021, 7:30 AM IST
ಮಂಗಳೂರು : ಕೇಂದ್ರ ಆದಾಯ ಇಲಾಖೆಯ ಜಾರಿ ನಿರ್ದೇಶನಾಲಯ (ಇ.ಡಿ.)ದ ಉಪ ವಲಯ ಕಚೇರಿಯು ನಗರದಲ್ಲಿ ಆರಂಭಗೊಂಡಿದೆ.
ಇ.ಡಿ. ವಲಯ ಕಚೇರಿ ಬೆಂಗಳೂರಿನಲ್ಲಿದೆ. ಇದು ಬಿಟ್ಟರೆ ರಾಜ್ಯದಲ್ಲಿ ಇ.ಡಿ.ಯ ಮತ್ತೂಂದು ಪ್ರಮುಖ ಮತ್ತು ಏಕೈಕ ಕಚೇರಿ ಮಂಗಳೂರಿನದು. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಒಟ್ಟು 15 ಜಿಲ್ಲೆಗಳು ಈ ಉಪ ವಲಯ ಕಚೇರಿಯ ವ್ಯಾಪ್ತಿಗೆ ಬರುತ್ತವೆ.
ದೇಶೀಯ – ಅಂತಾರಾಷ್ಟ್ರೀಯ ಅಕ್ರಮ ಹಣ ವರ್ಗಾವಣೆ, ಅವ್ಯವಹಾರ ಪ್ರಕರಣಗಳ ತನಿಖೆಯನ್ನು ಇ.ಡಿ. ನಡೆಸುತ್ತದೆ. ವಿದೇಶಿ ವಿನಿಮಯ ನಿರ್ವಹಣ ಕಾಯಿದೆ ಮತ್ತು ಕಪ್ಪುಹಣ ನಿಯಂತ್ರಣ ಕಾಯಿದೆಯಡಿ ಪ್ರಕರಣಗಳನ್ನು ನಿರ್ವಹಿಸಲಿದೆ.
ಕಂಕನಾಡಿಯ “ಸೆಂಟ್ರಲ್ ಎಕ್ಸೆ„ಸ್ ಸ್ಟಾಫ್ ಕ್ವಾರ್ಟರ್ ಇ-7′ ವಿಳಾಸದಲ್ಲಿ ಕಚೇರಿ ಆರಂಭಗೊಂಡಿದ್ದು, ಬೆಂಗಳೂರು ವಲಯ ಕಚೇರಿ ಅಧೀನದಲ್ಲಿ ಕಾರ್ಯನಿರ್ವಹಿಸಲಿದೆ.
ಉಪನಿರ್ದೇಶಕರು ಈ ಕಚೇರಿಯ ಮುಖ್ಯಸ್ಥರಾಗಿದ್ದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್, ಬಿಜಾಪುರ, ಗದಗ, ಹಾವೇರಿ, ದಾವಣಗೆರೆ, ಧಾರವಾಡ, ಗುಲ್ಬರ್ಗಾ, ಕೊಪ್ಪಳ ಮತ್ತು ರಾಯಚೂರು ಜಿಲ್ಲಾ ವ್ಯಾಪ್ತಿ ಹೊಂದಿದೆ.
ಎನ್‌ಐಎ ಕಚೇರಿ ಬೇಡಿಕೆಗೆ ಬಲ
ಇ.ಡಿ. ಕಚೇರಿ ಆರಂಭದಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ.) ಕಚೇರಿಯನ್ನು ಮಂಗಳೂರಿನಲ್ಲಿ ಆರಂಭಿಸಬೇಕು ಎನ್ನುವ ಬೇಡಿಕೆಗೆ ಬಲ ಬಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.