ಪರಿಸರ ಸಂರಕ್ಷಣೆ: ವೈಯಕ್ತಿಕ ಜವಾಬ್ದಾರಿಗಳು


Team Udayavani, Jun 5, 2021, 6:45 AM IST

ಪರಿಸರ ಸಂರಕ್ಷಣೆ: ವೈಯಕ್ತಿಕ ಜವಾಬ್ದಾರಿಗಳು

ಮಾನವ ಪರಿಸರ ಜೀವಿ. ಮನುಷ್ಯ ಬದುಕಲು ಅನಿವಾರ್ಯ ವಾಗಿರುವ ಮೂಲ ಆವಶ್ಯಕಗಳು ಸಿಗುವುದೇ ಪರಿಸರದಿಂದ. ಹೀಗಾಗಿ ಸುಸ್ಥಿರ ಬದುಕಿಗೆ ಪರಿಸರವನ್ನು ಸಂಕ್ಷಿಸುವುದು ಅಗತ್ಯ. ಪರಿಸರ ಸಂರಕ್ಷಣೆ ಎನ್ನುವುದು ಸಾಮೂಹಿಕ ಜವಾಬ್ದಾರಿ ಮಾತ್ರವಲ್ಲದೆ ಪ್ರತಿಯೋರ್ವರ ಹೊಣೆಗಾರಿಕೆಯೂ ಆಗಿದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆಗೆ ವೈಯಕ್ತಿಕವಾಗಿ ನಾವು ಏನು ಮಾಡಬಹುದು ಎಂದು ಕೇಳಿಕೊಂಡಾಗ ನಮ್ಮ ಕರ್ತವ್ಯಗಳ ಬಲುದೊಡ್ಡ ಪಟ್ಟಿಯೇ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ.

ಮನೆಗೊಂದು ಮರ, ಊರಿಗೊಂದು ವನ
ಪರಿಸರ ಸಂರಕ್ಷಣೆಗೆ ನಾವು ಸ್ವಯಂಪ್ರೇರಿತರಾಗಿ ಗಿಡ, ಮರಗಳನ್ನು ಬೆಳೆಸಬೇಕಿದೆ. ಇದು ಸದ್ಯ ಆಗಬೇಕಾದ ತುರ್ತು ಕಾರ್ಯವಾಗಿದೆ. ಆಪ್ತರ ಸಂತೋಷದ ಕ್ಷಣಗಳಿಗೆ ಕಾರಣ ರಾಗಲು ನಾವು ಸವಿನೆನಪಿಗಾಗಿ ಲಕ್ಷಾಂತರ ಮೌಲ್ಯದ ಉಡುಗೂರೆ ನೀಡುತ್ತೇವೆ. ಇದರ ಜತೆಗೆ ಪರಿಸರಕ್ಕೆ ಪೂರಕವಾಗು ವಂತೆ ಒಂದು ಗಿಡ ನೆಟ್ಟು ಪೋಷಿಸಿದಾಗ ಪರಿಸರ ಸಂರಕ್ಷಣೆಗೆ ವೈಯಕ್ತಿಕ ಜವಾಬ್ದಾರಿ ಮೆರೆದಂತೆ ಆಗುತ್ತದೆ. ಜತೆಗೆ ನಮ್ಮ ಸುಸ್ಥಿರ ಬದುಕಿಗೂ ಅನುಕೂಲವಾಗುತ್ತದೆ. ಪ್ರತೀ ಮನೆಗಳಲ್ಲಿ ಒಂದು ಗಿಡ ನೆಟ್ಟರೆ ಸಾಕು, ತನ್ನಿಂತಾನೆ ಊರಿನಲ್ಲಿ ವನ ಸೃಷ್ಟಿಯಾಗುತ್ತದೆ.

ಬಳಕೆ, ಪುನರ್‌ ಬಳಕೆಯ ಮಂತ್ರ
ವಸ್ತುಗಳನ್ನು ನಾವು ಒಂದು ಬಾರಿ ಬಳಸಿ, ಅದನ್ನು ಎಸೆ ಯುವುದರಿಂದ ಅದು ಕಸವಾಗಿ ಮಾರ್ಪಟ್ಟು ಪರಿಸರ ದೃಷ್ಟಿಯಲ್ಲಿ ಹಾನಿಯಾಗುತ್ತದೆ. ಹೀಗಾಗಿ ಒಂದು ವಸ್ತುವನ್ನು ಸಾಧ್ಯವಾದಷ್ಟು ಬಾರಿ ಅಂದರೆ ಎರಡು ಅಥವಾ ಮೂರು ಬಾರಿ ಬಳಕೆ ಮಾಡಲು ಮುಂದಾಗಬೇಕು. ಪರಿಸರ ತಜ್ಞರ ಪ್ರಕಾರ, ಬಳಕೆ ಮಾಡಿದ ವಸ್ತುವನ್ನು ಪುನರ್‌ ಬಳಕೆ ಮಾಡಿದಾಗ ಪರಿಸರ ಹಾನಿಯನ್ನು ಆಂಶಿಕವಾಗಿ ಕಡಿಮೆ ಮಾಡಬಹುದಾಗಿದೆ.

ಕಸದಿಂದ ರಸ
ಮರುಬಳಕೆ ಜತೆಗೆ ಮನೆಯಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಕಾಂಪೋಸ್ಟ್‌ ಮಾಡುವ ಮೂಲಕ ಪರಿಸರ ಪ್ರಜ್ಞೆ ಮೆರೆಯಬಹುದಾಗಿದೆ. ಕಾಂಪೋಸ್ಟ್‌ ಪ್ರಕ್ರಿಯೆಯೂ ಪರಿಸರಕ್ಕೆ ಪೂರಕ. ಮನೆಯ ಮುಂದೆ ಗುಂಡಿ ತೋಡಬೇಕು. ಅದಕ್ಕೆ ಬೇರ್ಪಡಿಸಿದ ಹಸಿ, ಒಣ ಕಸವನ್ನು ತ್ಯಾಜ್ಯ ಗುಂಡಿಯಲ್ಲಿ ಹಾಕು ವುದರಿಂದ ಅದು ಕೆಲವು ದಿನಗಳ ಬಳಿಕ ಗೊಬ್ಬರವಾಗುತ್ತದೆ. ಅದನ್ನು ಉದ್ಯಾನ, ಕೃಷಿಗೆ ಬಳಕೆ ಮಾಡಬಹುದು.

ನೈಸರ್ಗಿಕ ಸಂಪನ್ಮೂಲಗಳ ಬಳಕೆಯಲ್ಲಿ ನಿಯಂತ್ರಣ
ನೈಸರ್ಗಿಕ ಸಂಪನ್ಮೂಲಗಳನ್ನು ಎಷ್ಟು ಕಡಿಮೆ ಬಳಕೆ ಮಾಡು ತ್ತೇವೆಯೋ ಅಷ್ಟು ಪರಿಸರಕ್ಕೆ ಒಳ್ಳೆಯದು. ಜಲ, ವಿದ್ಯುತ್‌ ನಂತಹ ಅತ್ಯಮೂಲ್ಯ ಸಂಪನ್ಮೂಲಗಳನ್ನು ನಾವು ಯೋಚಿಸಿ, ಯೋಜಿಸಿ ಬಳಕೆ ಮಾಡಬೇಕು. ಯಾವುದೇ ಕಾರಣಕ್ಕೂ ವ್ಯರ್ಥ ಮಾಡಬಾರದು. ಪ್ರತಿಯೊಂದೂ ನೈಸರ್ಗಿಕ ಸಂಪನ್ಮೂಲವೂ ಕೂಡ ನಮ್ಮ ಜೀವನದಲ್ಲಿ ಮಹತ್ವದ್ದಾಗಿದ್ದು ಇವುಗಳ ಮಿತಬಳಕೆ ನಮ್ಮ ಮತ್ತು ಪರಿ ಸರದ ಸುಸ್ಥಿರ ಬದುಕಿಗೆ ಪೂರಕ.

ವೈಯಕ್ತಿಕ ಕಾನೂನು ರೂಪಿಸಿಕೊಳ್ಳಿ
ನಮ್ಮ ದೈನಂದಿನ ಬದುಕಿ ನಲ್ಲಿ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಇದೇ ರೀತಿ ಪರಿಸರ ಸಂರಕ್ಷಣೆಗಾಗಿ ನಾವು ವೈಯಕ್ತಿಕ ಕಾನೂನುಗಳ ಪಾಲನೆಗೆ ಮುಂದಾಗಬೇಕು. ಮರ ಕಡಿಯುವುದಿಲ್ಲ, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದಿಲ್ಲ, ನೈಸರ್ಗಿಕ ಸಂಪನ್ಮೂಲಗಳನ್ನು ವ್ಯರ್ಥ ಮಾಡುವುದಿಲ್ಲ ಇವೇ ಮೊದಲಾದ ಸಂಕಲ್ಪಗಳು ನಮ್ಮದಾಗಲಿ. ಇದು ಕೇವಲ ಬಾಯಿಮಾತಿನಲ್ಲಿ ಉಳಿಯದೇ ಕಾರ್ಯರೂಪಕ್ಕೆ ಬರಲಿ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.