ಯೂರೋ ಕಪ್: ರೊನಾಲ್ಡೊ ಅವಳಿ ದಾಖಲೆ, ಪೋರ್ಚುಗಲ್ ಶುಭಾರಂಭ
Team Udayavani, Jun 16, 2021, 11:53 PM IST
ಬುಡಾಪೆಸ್ಟ್ (ಹಂಗೇರಿ) : ಯೂರೋ ಕಪ್ ಫುಟ್‌ಬಾಲ್ ಪಂದ್ಯಾ ವಳಿಯಲ್ಲಿ ಪೋರ್ಚುಗಲ್ ಪ್ರಶಸ್ತಿ ಉಳಿಸಿಕೊಳ್ಳುವ ಹಾದಿಯಲ್ಲಿ ಭರ್ಜರಿ ಆರಂಭ ಪಡೆದಿದೆ. ಆತಿಥೇಯ ಹಂಗೇರಿಯನ್ನು 3-0 ಗೋಲುಗಳಿಂದ ಮಣಿಸಿ ಶುಭಾರಂಭ ಮಾಡಿದೆ.
ಎರಡು ಗೋಲು ಕ್ರಿಸ್ಟಿಯನ್ ರೊನಾಲ್ಡೊ ಅವರಿಂದ ಸಿಡಿಯಿತು. ಜತೆಗೆ ಅವರು ಅವಳಿ ದಾಖಲೆಯನ್ನೂ ಸ್ಥಾಪಿಸಿದರು.
ಈ ಸಾಧನೆಯೊಂದಿಗೆ ರೊನಾಲ್ಡೊ ಯುರೋ ಕಪ್ ಚಾಂಪಿಯನ್‌ಶಿಪ್‌ನಲ್ಲಿ ಸರ್ವಾಧಿಕ 11 ಗೋಲು ಬಾರಿಸಿದ ದಾಖಲೆ ನಿರ್ಮಿಸಿದರು.
ಈ ಪಂದ್ಯಕ್ಕೂ ಮುನ್ನ ರೊನಾಲ್ಡೊ ಮತ್ತು ಫುಟ್‌ಬಾಲ್ ದಂತಕತೆ ಮೈಕಲ್ ಪ್ಲಾಟಿನಿ ಜಂಟಿ ದಾಖಲೆ ಹೊಂದಿದ್ದರು. ರೊನಾಲ್ಡೊ ಅವರ ಅಂತಾರಾಷ್ಟ್ರೀಯ ಗೋಲುಗಳ ಸಂಖ್ಯೆ 106ಕ್ಕೆ ಏರಿತು. ಅವರೀಗ ಇರಾನಿನ ಅಲಿ ದಾಜಿ ಅವರ ಸಾರ್ವಕಾಲಿಕ 109 ರನ್ನುಗಳ ದಾಖಲೆಯನ್ನು ಸಮೀಪಿಸಿದ್ದಾರೆ. ಹಾಗೆಯೇ ಸರ್ವಾಧಿಕ 5 ಯುರೋ ಕಪ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಆಡಿದ ವಿಶ್ವದ ಮೊದಲ ಆಟಗಾರನೆಂಬ ದಾಖಲೆಗೂ ರೊನಾಲ್ಡೊ ಪಾತ್ರರಾದರು.
ಇದನ್ನೂ ಓದಿ :ಆರೋಗ್ಯದಲ್ಲಿ ಸ್ಥಿರ : ಐಸಿಯುನಿಂದ ಹೊರಬಂದ ಮಿಲ್ಕಾ ಸಿಂಗ್
ಕೊನೆಯ 8 ನಿಮಿಷದಲ್ಲಿ…
84ನೇ ನಿಮಿಷದ ತನಕವೂ ಈ ಪಂದ್ಯ ಗೋಲು ಕಂಡಿರಲಿಲ್ಲ. ಆದರೆ ಕೊನೆಯ 8 ನಿಮಿಷಗಳಲ್ಲಿ ಒಮ್ಮೆಲೇ 3 ಗೋಲು ಸಿಡಿಯಲ್ಪಟ್ಟಿತು. 84ನೇ ನಿಮಿಷದಲ್ಲಿ ರಫೆಲ್ ಗ್ಯುರೀರೊ ಖಾತೆ ತೆರೆದರೆ, 87 ಮತ್ತು 90 ಪ್ಲಸ್ 2ನೇ ನಿಮಿಷದಲ್ಲಿ ರೊನಾಲ್ಡೊ ಅವಳಿ ಗೋಲು ಬಾರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.