Explode in Lebanon: ಪೇಜರ್ ಬಳಿಕ ವಾಕಿಟಾಕಿ ಸ್ಫೋಟ: 14 ಮಂದಿ ಸಾವು
ಲೆಬನಾನ್‌ನ ವಿವಿಧ ಪ್ರದೇಶಗಳಲ್ಲಿ ಸಂಭವಿಸಿದ ಸ್ಫೋಟ, 450 ಮಂದಿಗೆ ತೀವ್ರ ಗಾಯ
Team Udayavani, Sep 19, 2024, 5:50 AM IST
ಬೈರುತ್: ಹೆಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ಲೆಬನಾನ್‌ನಲ್ಲಿ ಒಂದೇ ಬಾರಿಗೆ 1 ಸಾವಿರಕ್ಕೂ ಅಧಿಕ ಪೇಜರ್‌ಗಳನ್ನು ಸ್ಫೋಟಿಸಿದ್ದ ಬೆನ್ನಲ್ಲೇ ಬುಧವಾರ ಮತ್ತೆ 3 ಸಾವಿರ ಹೆಜ್ಬುಲ್ಲಾ ಉಗ್ರರನ್ನು ಗುರಿಯಾಗಿಸಿ ವಾಕಿಟಾಕಿ, ವೈರ್‌ಲೆಸ್ ರೇಡಿಯೋ ಗಳನ್ನು ಸ್ಫೋಟಿಸಲಾಗಿದೆ. ಈ ಘಟನೆಯಲ್ಲಿ 14 ಮಂದಿ ಮೃತಪಟ್ಟಿದ್ದು, 450ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪೇಜರ್‌ಗಳನ್ನು ಖರೀದಿಸಿದ್ದ ಸಂದರ್ಭದಲ್ಲೇ ಈ ವಾಕಿ-ಟಾಕಿ ಮತ್ತು ರೇಡಿಯೋಗಳನ್ನೂ ಖರೀದಿಸಲಾಗಿತ್ತು ಎನ್ನುವ ಮಾಹಿತಿ ಹೊರಬಿದ್ದಿದ್ದು, ಲೆಬನಾನ್ ಜನರಲ್ಲಿ ಘಟನೆ ಆತಂಕ ಹೆಚ್ಚಿಸಿದೆ. ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಬೈರೂತ್, ಬೈಕಾ ವ್ಯಾಲಿ ಹಾಗೂ ದಕ್ಷಿಣ ಲೆಬನಾನ್‌ನಲ್ಲಿ ವಾಕಿ-ಟಾಕಿ ಮತ್ತು ವೈರ್‌ಲೆಸ್ ರೇಡಿಯೋಗಳು ಸ್ಫೋಟಗೊಂಡಿವೆ. ಹಲವು ಪ್ರದೇಶಗಳಲ್ಲಿ ಮನೆಯ ಸೌರಶಕ್ತಿ ವ್ಯವಸ್ಥೆಗಳೂ ಸ್ಫೋಟಗೊಂಡಿವೆ ಎನ್ನಲಾಗಿದೆ. ಮಂಗಳವಾರ ನಡೆದಿದ್ದ ಪೇಜರ್ ಸ್ಫೋಟದಿಂದ 12 ಮಂದಿ ಮೃತಪಟ್ಟಿದ್ದರು. ಈಗ ಈ ಘಟನೆಯನ್ನೂ ಹೆಜ್ಜುಲ್ಲಾ ನಾಯ ಕರು ಇಸ್ರೇಲ್ ನಡೆಸಿದೆ ಎಂದು ಆರೋಪಿಸಿದ್ದಾರೆ.
ಅಂತ್ಯಸಂಸ್ಕಾರದ ವೇಳೆಯೇ ಸ್ಫೋಟ
ಮಂಗಳವಾರ ಪೇಜರ್ ಸ್ಫೋಟ ದಿಂದ ಮೃತಪಟ್ಟ ಹೆಜ್ಬುಲ್ಲಾ ಸಂಘ ಟನೆಯ ನಾಲ್ವರ ಅಂತಿಮ ಸಂಸ್ಕಾರ ಬೈರೂತ್‌ನಲ್ಲಿ ನಡೆಯುತ್ತಿತ್ತು. ಈ ವೇಳೆಯೇ ವಾಕಿ-ಟಾಕಿಗಳು ಸ್ಫೋಟಗೊಂಡಿವೆ. ಹಲವರು ಗಾಯಗೊಂಡಿದ್ದು, ಜಾಲತಾಣಗಳಲ್ಲೂ ಈ ವೀಡಿಯೋ ವೈರಲ್ ಆಗಿದೆ.
ಏನೇನಾಯ್ತು?
* ಬೈರೂತ್, ಬೈಕಾ ವ್ಯಾಲಿ, ದ.ಲೆಬನಾನ್‌ನ ಹಲವೆಡೆ ಕೃತ್ಯ
* ವೈರ್‌ಲೆಸ್ ರೇಡಿಯೋಗಳು ಕೂಡ ಇದ್ದಕ್ಕಿದ್ದಂತೆ ಚೂರು
* ಕೆಲವಡೆ ಮನೆಯ ಸೌರಶಕ್ತಿ ವ್ಯವಸ್ಥೆ ಗಳೂ ಸ್ಫೋಟ
Explosion occurred during the funeral procession of Mahdi Ammar, the son of Lebanese MP Ali Ammar, in Sohmor, Lebanon. pic.twitter.com/VrSFS9YXJ7
— Tehran Times (@TehranTimes79) September 18, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.