ಮಹಿಳೆಯರ ಚಿನ್ನದ ಸರ ಸುಲಿಗೆ; ದ್ವಿಚಕ್ರ ವಾಹನಗಳ ಕಳವು-ಇಬ್ಬರ ಸೆರೆ
13.82 ಲ.ರೂ. ಮೌಲ್ಯದ ಸೊತ್ತು ವಶ
Team Udayavani, Jun 27, 2023, 5:39 AM IST
ಮಂಗಳೂರು: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಸುರತ್ಕಲ್ ಪೊಲೀಸರು ಇಬ್ಬರು ಅಂತರ್‌ಜಿಲ್ಲಾ ಚಿನ್ನದ ಸರ ಸುಲಿಗೆಕೋರರು ಮತ್ತು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿದ್ದಾರೆ.
ಕಲ್ಲಡ್ಕ ಮಾರ್ನೆಮಜಲು ಬಾಡಿಗೆ ಮನೆ ನಿವಾಸಿ ಹಬೀಬ್ ಹಸನ್ ಆಲಿಯಾಸ್ ಚೊಂಬುಗುಡ್ಡೆ ಹಬೀಬ್ ಮತ್ತು ಉಳ್ಳಾಲ ಕೋಡಿ ನ್ಯೂ ತೋಟ ಹೌಸ್‌ನ ಮಹಮ್ಮದ್ ಫೈಜಲ್ ಆಲಿಯಾಸ್ ಶಾಕಿರ್ ಬಂಧಿತ ಆರೋಪಿಗಳು. ಆರೋಪಿಗಳಿಂದ 12,48,550 ರೂ. ಅಂದಾಜು ಮೌಲ್ಯದ 240 ಗ್ರಾಂ ಚಿನ್ನ ಮತ್ತು 1.34 ಲ.ರೂ. ಅಂದಾಜು ಮೌಲ್ಯದ ಎರಡು ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಮಂಗಳೂರು ಪೊಲೀಸ್ ಕಮಿಷನರೆಟ್ ಸೇರಿದಂತೆ ದ.ಕ. ಜಿಲ್ಲೆ, ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 8 ಸರಕಳ್ಳತನ, 4 ಬೈಕ್ ಕಳ್ಳತನಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿವೆ. ಆರೋಪಿಗಳು ಹಿರಿಯ ನಾಗರಿಕ ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಸರ ಸುಲಿಗೆ ಕೃತ್ಯ ನಡೆಸುತ್ತಿದ್ದರು ಎಂದು ಆಯುಕ್ತರು ತಿಳಿಸಿದರು.
ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಪೊಲೀಸ್ ಖೆಡ್ಡಾಗೆ
ಜೂ. 2ರಂದು ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯೋರ್ವರು ಮನೆಯ ಕಾಂಪೌಂಡ್ ಒಳಗಿನ ಬಾವಿಯಿಂದ ನೀರು ಸೇದುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿಗಳು ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಆರೋಪಿಗಳ ಪತ್ತೆಗೆ ಪೊಲೀಸ್ ಆಯುಕ್ತರು ಸುರತ್ಕಲ್ ಇನ್‌ಸ್ಪೆಪೆಕ್ಟರ್ ಮಹೇಶ್ ಪ್ರಸಾದ್ ನೇತೃದಲ್ಲಿ ವಿಶೇಷ ತಂಡ ರಚಿಸಿದ್ದರು.
ಜೂ. 23ರಂದು ಆರೋಪಿಗಳು ಮಂಗಳೂರು ನಗರದಲ್ಲಿ ಚಿನ್ನಾಭರಣಗಳನ್ನು ಮಾರಾಟ ಮಾಡಲು ಪ್ರಯತ್ನಿಸಿ ಸಾಧ್ಯವಾಗದ ಕಾರಣ ಸುರತ್ಕಲ್‌ನಲ್ಲಿ ಮಾರಾಟ ಮಾಡಲು ಪ್ರಯತ್ನಿಸುತಿದ್ದಾರೆ ಎಂಬ ಮಾಹಿತಿ ತಂಡಕ್ಕೆ ಲಭಿಸಿತ್ತು. ಮಾಹಿತಿ ಆಧಾರದಲ್ಲಿ ಮಧ್ಯ ಮಾಧವನಗರ ಕೊಡಿಪ್ಪಾಡಿ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಸ್ಕೂಟರ್‌ನಲ್ಲಿ ಬರುತ್ತಿದ್ದ ಇಬ್ಬರನ್ನು ತಡೆದು ನಿಲ್ಲಿಸಿದಾಗ ಅವರು ಸ್ಕೂಟ್‌ನಿಂದ ಇಳಿದು ಓಡತೊಡಗಿದ್ದಾರೆ. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುಲಿಗೆ, ಕಳವು ಕೃತ್ಯಗಳ ಮಾಹಿತಿ ಹೊರಬಿದ್ದಿದೆ.
ಸಿಸಿ ಕೆಮರಾ ನೆರವು
ಆರೋಪಿಗಳ ಪತ್ತೆಗೆ ಸಿಸಿ ಕೆಮರಾದಿಂದ ಅನುಕೂಲವಾಗಿದೆ. ಸಿಸಿ ಕೆಮರಾ ಅಳವಡಿಕೆಗೆ ಪೊಲೀಸ್ ಇಲಾಖೆ ಹೆಚ್ಚು ಆದ್ಯತೆ ನೀಡುತ್ತಿದೆ. ಖಾಸಗಿಯವರು ಕೂಡ ಅಗತ್ಯ ಸ್ಥಳಗಳಲ್ಲಿ ಸಿಸಿ ಕೆಮರಾ ಅಳವಡಿಸಲು ಸೂಚಿಸಲಾಗಿದೆ. ಪೊಲೀಸ್ ಇಲಾಖೆ ಆ್ಯಪ್ ಮೂಲಕ 24,000 ಸಿಸಿ ಕೆಮರಾಗಳ ಲೊಕೇಷನ್‌ಗಳನ್ನು ಮ್ಯಾಪ್ ಮಾಡಿಕೊಂಡಿದ್ದು, ಈ ಸ್ಥಳಗಳಲ್ಲಿ ಯಾವುದೇ ಘಟನೆಯಾದರೂ ಕೂಡಲೇ ಕಾರ್ಯಾಚರಣೆಗೆ ಅನುಕೂಲವಾಗುತ್ತದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಶು ಕುಮಾರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಬಿ.ಪಿ., ಮಂಗಳೂರು ಉತ್ತರ ವಿಭಾಗದ ಎಸಿಪಿ ಮನೋಜ್ ಕುಮಾರ್ ಉಪಸ್ಥಿತರಿದ್ದರು. ಕಾರ್ಯಾಚರಣೆಯಲ್ಲಿ ಸುರತ್ಕಲ್ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ಎಸ್‌ಐ ಅರುಣ್ ಕುಮಾರ್ ಡಿ., ಎಎಸ್‌ಐ ರಾಧಾಕೃಷ್ಣ, ಎಚ್‌ಸಿ ಅಣ್ಣಪ್ಪ ವಂಡ್ಸೆ, ಪಿಸಿಗಳಾದ ಕಾರ್ತಿಕ್ ಕುಲಾಲ್, ಮಣಿಕಂಠ ಎಚ್.ಎ., ನಾಗರಾಜ, ಶಿವರಾಮ, ಪಣಂಬೂರು ಠಾಣೆಯ ಎಸ್‌ಐ ಜ್ಞಾನಶೇಖರ, ಪಿಸಿ ನಿಂಗಪ್ಪ, ಬಜಪೆ ಠಾಣೆಯ ಎಎಸ್‌ಐ ಕುಶಾಲ್ ಮಣಿಯಾಣಿ, ಕಾವೂರು ಠಾಣೆಯ ಎಚ್‌ಸಿ ಇಸಾಕ್, ಮೂಡುಬಿದಿರೆ ಠಾಣೆಯ ಎಚ್‌ಸಿಗಳಾದ ಅಕೀಲ್ ಅಹ್ಮದ್ ಮತ್ತು ಹುಸೇನ್ ಪಾಲ್ಗೊಂಡಿದ್ದರು. ತಂಡಕ್ಕೆ ಆಯುಕ್ತರು ನಗದು ಬಹುಮಾನ ನೀಡಿದರು.
ಖತರ್‌ನಾಕ್ ಕಳ್ಳರಿವರು
ವಿವಿಧ ರೀತಿಯ ಅಪರಾಧಗಳಿಗೆ ಸಂಬಂಧಿಸಿದಂತೆ ಹಬೀಬ್ ವಿರುದ್ಧ 35 ಪ್ರಕರಣಗಳು, ಫೈಝಲ್ ವಿರುದ್ಧ 15 ಪ್ರಕರಣ ದಾಖಲಾಗಿವೆ. ಹಬೀಬ್ ವಿರುದ್ಧ ಬಜಪೆ, ಉಳ್ಳಾಲ, ಮಂಗಳೂರು ದಕ್ಷಿಣ, ಕೊಣಾಜೆ, ಸುರತ್ಕಲ್, ಮೂಲ್ಕಿ, ಮಂಗಳೂರು ಉತ್ತರ, ಕಾರ್ಕಳ ನಗರ, ಕಾರ್ಕಳ ಗ್ರಾಮಾಂತರ, ಮಲ್ಪೆ, ಮಣಿಪಾಲ, ಉಡುಪಿ ನಗರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಫೈಜಲ್ ವಿರುದ್ಧ ಬೆಳ್ತಂಗಡಿ, ವಿಟ್ಲ, ಮೂಲ್ಕಿ, ಸುರತ್ಕಲ್, ಉಳ್ಳಾಲ, ಉಡುಪಿ ನಗರ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆ, ಪುತ್ತೂರು, ಕೊಣಾಜೆ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಹಬೀಬ್‌ಪ್ರಕರಣವೊಂದಕ್ಕೆ ಸಂಬಂಧಿಸಿ ಇದೇ ವರ್ಷದ ಮಾ. 9ರಂದು ಮಂಗ ಳೂರು ಕಾರಾಗೃಹದಿಂದ ಬಿಡುಗಡೆಗೊಂಡಿದ್ದ ಎಂದು ಆಯುಕ್ತರು ತಿಳಿಸಿದರು.
ಎಲ್ಲೆಲ್ಲಿ ಕೃತ್ಯ?
ಆರೋಪಿಗಳು ಕಾರ್ಕಳ ಕುಕ್ಕೂಂದೂರಿನಲ್ಲಿ ವೃದ್ಧ ಮಹಿಳೆಯಿಂದ ಲಕ್ಷ್ಮೀತಾಳಿ ಮತ್ತು ಮಾಂಗಲ್ಯ ಸರ, ಶಿರ್ವ ಠಾಣೆಯ ತುಂಡುಬಲ್ಲಿ ಎಂಬಲ್ಲಿ ಚಿನ್ನದ ಸರ, ಮಣಿಪಾಲ ಠಾಣಾ ವ್ಯಾಪ್ತಿಯ ಪರ್ಕಳ ಬಬ್ಬರ್ಯ ದೈವಸ್ಥಾನದ ಬಳಿ ಚಿನ್ನದ ಸರ, ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಮಾರ್ನಾಡು ಎಂಬಲ್ಲಿ ಚಿನ್ನದ ಕರಿಮಣಿಸರ, ಬಂಟ್ವಾಳ ನಗರ ಪೊಲೀಸ್ ಠಾಣೆಯ ಪಚ್ಚಿನಡ್ಕ ಎಂಬಲ್ಲಿ ಚಿನ್ನದ ಕರಿಮಣಿಸರ, ಸುರತ್ಕಲ್ ಠಾಣಾ ವ್ಯಾಪ್ತಿಯ ತಡಂಬೈಲು ಎಂಬಲ್ಲಿ ವೃದ್ಧ ಮಹಿಲೆಯಿಂದ ಚಿನ್ನದ ಕೊತ್ತಂಬರಿ ಡಿಸೈನ್ ಸರ, ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮುಂಡ್ಕೂರು ಎಂಬಲ್ಲಿಂದ ಚಿನ್ನದ ಸರ ಸುಲಿಗೆ ಮಾಡಿದ್ದಾರೆ. ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೀರ್ತಿನಗರದಲ್ಲಿ ಬೈಕ್, ಕಾವೂರು ಪೊಲೀಸ್ ಠಾಣಾ ವ್ಯಾಪ್ತಿ ಮಾಲೆಮಾರ್‌ನಿಂದ ಬೈಕ್ ಕಳವು, ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಮಲ್ಲಿಕಟ್ಟೆಯಿಂದ ಬೈಕ್ ಕಳವು, ಮಣಿಪಾಲ ಪೊಲೀಸ್ ಠಾಣೆಯ ಸರಹದ್ದಿನ ಶಿವಳ್ಳಿ ಗ್ರಾಮದ ಅಪಾರ್ಟ್‌ಮೆಂಟ್‌ನಿಂದ ಸ್ಕೂಟರ್ ಕಳವು ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.