ಲಾಕ್ ಡೌನ್ ನಲ್ಲಿ ನಕಲಿ ಐಡಿ ತಯಾರಿಸುತ್ತಿದ್ದ ಅಂಗಡಿ ಮೇಲೆ ದಾಳಿ: ಇಬ್ಬರ ಸೆರೆ
Team Udayavani, May 10, 2021, 11:22 PM IST
ಬೆಳಗಾವಿ: ಲಾಕ್‌ಡೌನ್ ಅವಧಿಯಲ್ಲಿ ಇಲ್ಲಿನ ಕಡೋಲ್ಕರ ಗಲ್ಲಿಯ ಅಂಗಡಿಯಲ್ಲಿ ನಕಲಿ ಗುರುತಿನ ಚೀಟಿಗಳನ್ನು ತಯಾರಿಸುತ್ತಿದ್ದ ವೇಳೆ ಡಿಸಿಪಿ ವಿಕ್ರಮ್ ಆಮಟೆ ನೇತೃತ್ವದಲ್ಲಿ ಸೋಮವಾರ ರಾತ್ರಿ ದಿಢೀರ್ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ವಿಶ್ವನಾಥ ಮುಚ್ಚಂಡಿ ಹಾಗೂ ರೋಹಿತ್ ಸುನೀಲ್ ಕುಟರೆ ಎಂಬಾತರನ್ನು ಬಂಧಿಸಲಾಗಿದೆ. ಲಾಕ್ ಡೌನ್ ಇದ್ದರೂ ‘ಮುಚ್ಚಂಡಿ ಪ್ರಿಂಟರ್ಸ್’ ಎನ್ನುವ ಅಂಗಡಿ ತೆರೆದಿದ್ದರು. ಬಂಧಿತರಿಂದ ಕಂಪ್ಯೂಟರ್, ಪ್ರಿಂಟರ್ ಸೇರಿದಂತೆ ಇತರೆ ಸಾಮಗ್ರಿಗಳು ಮತ್ತು ನಕಲಿ ಗುರುತಿನ ಚೀಟಿಗಳನ್ನು ವಶಕ್ಕೆ ಪಡೆಯಲಾಗಿದೆ.
ಲಾಕ್ ಡೌನ್ ವೇಳೆಯಲ್ಲಿ ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವವರಿಗೆ ಮಾತ್ರ ವಾಹನಗಳ ಸಂಚಾರಕ್ಕೆ ಅವಕಾಶ ಎಂಬುದನ್ನೇ ಬಳಸಿಕೊಂಡು, ನಕಲಿ ಗುರುತಿನ ಚೀಟಿಗಳನ್ನು ಇವರು ತಯಾರಿಸಿ ಕೊಡುತ್ತಿದ್ದರು. ಈಗಾಗಲೇ ಅನೇಕ ಗುರಿತಿನ ಚೀಟಿಗಳನ್ನು ತಯಾರಿಸಿ ಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ :ಅನಗತ್ಯವಾಗಿ ಓಡಾಡಿದವರಿಗೆ ಪೊಲೀಸರಿಂದ ಲಾಠಿ ಬಿಸಿ
ಇನ್ಸಪೆಕ್ಟರ್ ಧೀರಜ ಶಿಂಧೆ, ಪಿಎಸ್ಐ ಸೌದಾಗಾರ, ಎಎಸ್ಐ ಹುಂಡೇಕರ ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಈ ಕುರಿತು. ಖಡೇಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.