ಪ್ರಧಾನಿ ಮೋದಿ, ಹಿಟ್ಲರ್ ನಕಲಿ ಫೋಟೋ ಟ್ವೀಟ್; ರಮ್ಯಾಗೆ ಮತ್ತೆ ಮುಖಭಂಗ
Team Udayavani, Apr 29, 2019, 4:37 PM IST
ನವದೆಹಲಿ:ಸ್ಯಾಂಡಲ್ ವುಡ್ ನಟಿ, ಕಾಂಗ್ರೆಸ್ ಮಾಜಿ ಸಂಸದೆ ರಮ್ಯಾ ಸದಾ ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರನ್ನು ಟೀಕಿಸುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣದ ರಮ್ಯಾ ಸೋಮವಾರ ಸರ್ವಾಧಿಕಾರಿ ಹಿಟ್ಲರ್ ಹೆಣ್ಣು ಮಗುವಿನ ಕಿವಿ ಹಿಂಡುತ್ತಿರುವ ಚಿತ್ರ ಹಾಗೂ ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು ಬಾಲಕನೊಬ್ಬನ ಕಿವಿ ಹಿಂಡುತ್ತಿರುವ ಫೋಟೋ ಫೋಟೋ ಹಾಕಿ ಈ ಫೋಟೋ ನೋಡಿ ನಿಮಗೆ ಏನನ್ನಿಸುತ್ತಿದೆ ಎಂದು ಟ್ವೀಟ್ ಮಾಡಿದ್ದರು. ಆದರೆ ಪ್ರಧಾನಿ ಮೋದಿ ಅವರ ಕಾಲೆಳೆಯಲು ಹೋದ ರಮ್ಯಾಗೆ ಟ್ವೀಟಿಗರು ಭರ್ಜರಿಯಾಗಿಯೇ ಟಾಂಗ್ ನೀಡಿದ್ದು, ಇದರಿಂದ ರಮ್ಯಾ ಮುಖಭಂಗ ಅನುಭವಿಸುವಂತಾಗಿದೆ.
What are your thoughts? pic.twitter.com/b8GcgKL2ih
— Divya Spandana/Ramya (@divyaspandana) April 29, 2019
ರಮ್ಯಾ ಯಡವಟ್ಟು!
ಪ್ರಧಾನಿ ನರೇಂದ್ರ ಮೋದಿ ಅವರು ಕ್ಯೂಟೋ ಬೌದ್ಧ ದೇವಾಲಯ ಗೋಲ್ಡನ್ ಪವಿಲ್ಲಿಯೋನ್ ಗೆ ಭೇಟಿ ನೀಡಿದ್ದ ವೇಳೆ ಬಾಲಕನೊಬ್ಬನ ಕಿವಿ ಹಿಂಡುತ್ತಿರುವ ಫೋಟೋ ಭಾರತದ ಪಿಟಿಐ ಫೋಟೋಗ್ರಾಫರ್ ಸೆರೆಹಿಡಿದಿದ್ದರು. ಈ ಫೋಟೋವನ್ನು ಬಳಸಿಕೊಂಡು ರಮ್ಯಾ ಹಿಟ್ಲರ್ ಬಾಲಕನೊಬ್ಬನ ಕಿವಿ ಹಿಂಡುತ್ತಿರುವ ಫೋಟೋವನ್ನು ಜೋಡಿಸಿ…ಈ ಫೋಟೋ ನೋಡಿ ಏನು ಅನ್ನಿಸುತ್ತೆ ಎಂದು ಟ್ವೀಟ್ ಮಾಡಿದ್ದರು.
ಆದರೆ ನಿಜಕ್ಕೂ ಹಿಟ್ಲರ್ ಬಾಲಕಿಯ ಭುಜವನ್ನು ಹಿಡಿದುಕೊಂಡಿದ್ದ ಫೋಟೋವನ್ನು ತಿರುಚಿ, ಆಕೆಯ ಕಿವಿಯನ್ನು ಹಿಂಡುತ್ತಿರುವಂತೆ ಮಾಡಲಾಗಿತ್ತು. ಈ ಫೋಟೋವನ್ನು ಅಂದು ದಿ ಸನ್ ಪತ್ರಿಕೆ ಪ್ರಕಟಿಸಿತ್ತು. ಅದರಲ್ಲಿ ಹಿಟ್ಲರ್ ಬಾಲಕಿಯ ಎರಡು ಭುಜವನ್ನು ಹಿಡಿದಿರುವಂತೆ ಪ್ರಕಟಿಸಲಾಗಿತ್ತು. ಆ ನಿಟ್ಟಿನಲ್ಲಿ ಹಿಟ್ಲರ್ ಮತ್ತು ಬಾಲಕಿಯ ಫೋಟೋವನ್ನು ತಿರುಚಿ ಕಿವಿ ಹಿಂಡುತ್ತಿರುವಂತೆ ಮಾಡಿ ಟ್ವೀಟ್ ಮಾಡಿದ್ದ ರಮ್ಯಾಗೆ ಬಿಜೆಪಿ ಹಾಗೂ ನಟ ಬುಲೆಟ್ ಪ್ರಕಾಶ್ ಸೇರಿದಂತೆ ನೆಟ್ಟಿಗರು ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.