ಮಲಪ್ರಭ ನದಿಯಲ್ಲಿ ಕೊಚ್ಚಿಹೋದ ರೈತ : ದೇಹ ಪತ್ತೆಗೆ ರಕ್ಷಣಾ ತಂಡದಿಂದ ಕಾರ್ಯಾಚರಣೆ

Team Udayavani, Oct 11, 2020, 7:15 PM IST

ಮಲಪ್ರಭ ನದಿಯಲ್ಲಿ ಕೊಚ್ಚಿಹೋದ ರೈತ : ದೇಹ ಪತ್ತೆಗೆ ರಕ್ಷಣಾ ತಂಡದಿಂದ ಕಾರ್ಯಾಚರಣೆ

ಕುಳಗೇರಿ ಕ್ರಾಸ್ (ಬಾಗಲಕೋಟೆ) : ಹೊಲದಿಂದ  ಮನೆಗೆ ತೆರಳುತ್ತಿದ್ದ ರೈತನೋರ್ವ ಮಲಪ್ರಭಾ ನದಿ ದಾಟುವ ಸಮಯದಲ್ಲಿ ಕಾಲು ಜಾರಿ ನೀರಿನ ಸೆಳೆತಕ್ಕೆ ನದಿಯಲ್ಲಿ ಕೊಚ್ಚಿಹೋದ ಘಟನೆ ಜಿಲ್ಲೆಯ ಗಡಿ ಭಾಗ ಗೋವನಕೊಪ್ಪ ಗ್ರಾಮದ ಹಳೆ ಸೇತುವೆ ಬಳಿ ನಡೆದಿದೆ.

ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ವೆಂಕನಗೌಡ ರಾಮನಗೌಡ ಸಾಲಿಗೌಡ್ರ ೪೦ ಎಂಬ ರೈತ ನೀರಿನ ರಬಸಕ್ಕೆ ಕೊಚ್ಚಿ  ಹೋಗಿದ್ದಾನೆ  ಎಂದು ತಿಳಿದು ಬಂದಿದೆ. ಬಾಗಲಕೋಟೆ-ಗದಗ ಸಂಪರ್ಕ ಕಲ್ಪಿಸುವ ಹಳೆ ಸೇತುವೆ  ಮೂಲಕ ದಿನಂಪ್ರತಿ ನದಿ ದಾಟಿ  ತನ್ನ  ಮಿನಿಗೆ ತೆರಳಿ ಕಾಯಕ ಮುಗಿಸಿ ಮರಳುತ್ತಿದ್ದ ವೆಂಕನಗೌಡ ಇಂದು ನದಿ ದಾಟುವ ಸಮಯದಲ್ಲಿ ಕಾಲು ಜಾರಿ ಕೊಚ್ಚಿ ಹೋಗಿದ್ದಾನೆ.

ಇದನ್ನೂ ಓದಿ:ರಾಮಾಪುರ ಪೊಲೀಸರ ಭರ್ಜರಿ ಬೇಟೆ : 154ಕೆ.ಜಿ.ತೂಕದ 228 ಗಾಂಜಾ ಗಿಡ ವಶ

ಠಿಕಾಣಿ ಹೂಡಿದ ಅಧಿಕಾರಿಗಳು:
ಸ್ಥಳಕ್ಕೆ ಬಾದಾಮಿ ತಹಸಿಲ್ದಾರ ಸುಹಾಸ ಇಂಗಳೆ ತಮ್ಮ ಅಧಿಕಾರಿಗಳೊಂದಿಗೆ ಆಗಮಿಸಿದ್ದು ಜಿಲ್ಲೆಯ ಅಗ್ನಿ ಶಾಮಕ ದಳ ಅಧಿಕಾಗಳು  ಸೇರಿದಂತೆ ಪೊಲೀಸ್ ಅಧಿಕಾರಿಗಳು ಸಹ ಆಗಮಿಸಿ ಸ್ಥಳದಲ್ಲೇ ಮುಕ್ಕಾಂ ಹೂಡಿದ್ದಾರೆ. ಸದ್ಯ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಿಯರ  ಸಹಾಯ ಪಡೆದು ಬೋಟ್ ಬಳಸಿಕೊಂಡು ವ್ಯಕ್ತಯ ಪತ್ತೆಗಾಗಿ ಶೋಧಕಾರ್ಯಕ್ಕೆ ಮುಂದಾಗಿದ್ದಾರೆ.

ಸದ್ಯ ಬಾದಾಮಿ ತಹಸಿಲ್ದಾರ ಸುಹಾಸ ಇಂಗಳೆ ಸ್ಥಳಿಯ ನಿಪುನ ಇಜುಗಾರರ 6 ತಂಡಗಳನ್ನ ರಚಿಸಿ ನದಿಯ ಕೆಳಭಾಗದ  ನಾಲ್ಕೈದು ಕಿಮೀ ದೂರದಲ್ಲಿಯೂ ಕೊಚ್ಚಿಹೋದ ವ್ಯಕ್ತಿ ಹುಡುಕಾಟ ನಡೆಸಿದ್ದಾರೆ.

ಕೊಚ್ಚಿಹೋದ ವ್ಯಕ್ತಿ ಸಾಮಾನ್ಯನಲ್ಲ ಈ ಹಿಂದೆ ಇದೆ ನದಿಯಲ್ಲಿ ಕೊಚ್ಚಿ ಹೋಗಿದ್ದ ಸುಮಾರು ಜನರನ್ನ ಸಾಕಷ್ಟುಬಾರಿ ರಕ್ಷಿಸಿದ್ದಾನೆ, ನೀರಲ್ಲಿ ಮುಳುಗಿ ಸತ್ತ ಹೆಣಗಳನ್ನ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾನೆ. ಆದರೆ ಅದೃಷ್ಟ ವಶಾತ್ ಈ ನದಿಯ ದಡದಲ್ಲಿ ಜೀವ ರಕ್ಷಕನಾಗಿದ್ದ  ವೆಂಕನಗೌಡ ಸಾಲಿಗೌಡ್ರ ಇಂದು ಅದೆ ನದಿಯಲ್ಲಿ ಕೊಚ್ಚಿಹೋಗಿದ್ದು ಜನರಲ್ಲಿ ಆತಂಕ ಹುಟ್ಟಿಸಿದೆ.

ನೀರಿನ ಮಟ್ಟ: ಮಳೆ ಪ್ರಾರಂಭವಾದಾಗಿನಿಂದ ಪ್ರತಿದಿನ ೫೦೦೦ ಕ್ಯೊಸೆಕ್ ನೀರು ಸತತ ಹರಿಯುತ್ತಿರುವುದರಿಂದ ಹಳೆ ಸೇತುವೆ ಸೇರಿದಂತೆ ಜಮಿನುಗಳು ಸಹ ಜಲಾವೃತಗೊಂಡಿವೆ. ಹರಿಯುತ್ತಿರುವ ನೀರು ಹೆಚ್ಚು ಕಡಿಮೆ ಯಾಗುತ್ತಿರುವುದರಿಂದ ಸದ್ಯ ನದಿ ಪಕ್ಕದಲ್ಲಿರುವ ರೈತರಿಗೆ ಭಯದ ವಾತಾವರಣ ನಿರ್ಮಾನವಾಗಿದೆ.

ಗದಗ ಜಿಪಂ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ಮುದಕಣ್ಣ ಹೆರಕಲ್, ಪ್ರವೀಣ ಮೇಟಿ, ಆನಂದ ನರಗುಂದ, ಕಂದಾಯ  ನೀರಿಕ್ಷಕ ಎ.ಡಿ. ಸಾರವಾಡ, ಗ್ರಾಮಲೆಕ್ಕಾಧಿಕಾರಿ ಎಸ್ ಜೆ ದ್ಯಾಪೂರ, ಎಎಸ್‌ಐ ಎ ಎಲ್ ಗೊರವರ, ಸೇರಿದಂತೆ ಸಿಬ್ಬಂದಿ ಇದ್ದರು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.