Father Muller: ಔಷಧ ವಿಜ್ಞಾನ ಮಹಾವಿದ್ಯಾಲಯ ಬಿ ಫಾರ್ಮ ಕೋರ್ಸ್‌ಗೆ ಅನುಮತಿ
ಫಾದರ್ ಮುಲ್ಲರ್ ಆವರಣದಲ್ಲಿ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಾಣ
Team Udayavani, Sep 14, 2024, 1:57 AM IST
ಮಂಗಳೂರು: ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಸಮೂಹಕ್ಕೆ ಹೊಸ ಸೇರ್ಪಡೆಯಾದ ಫಾದರ್ ಮುಲ್ಲರ್ ಔಷಧ ವಿಜ್ಞಾನಗಳ ಮಹಾ ವಿದ್ಯಾನಿಲಯದಲ್ಲಿ 2024-25ನೇ ಸಾಲಿನಲ್ಲಿ ಬಿ. ಫಾರ್ಮ ವ್ಯಾಸಂಗಕ್ಕೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲು ಅನುಮತಿ ದೊರಕಿದೆ.
ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ ಮಾನ್ಯತೆ ಲಭಿಸುವುದರೊಂದಿಗೆ ಫಾದರ್ ಮುಲ್ಲರ್ ಔಷಧ ವಿಜ್ಞಾನಗಳ ಮಹಾವಿದ್ಯಾಲಯವು ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿ ಅಡಿಯಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲಿದೆ. ಈಗಾಗಲೇ ಶೈಕ್ಷಣಿಕ ಮತ್ತು ಆರೋಗ್ಯ ಸೇವೆಯಲ್ಲಿ ಉತ್ಕೃಷ್ಟತೆಗೆ ಹೆಸರಾಗಿರುವ ಫಾದರ್ ಮುಲ್ಲರ್ ಸಂಸ್ಥೆಗಳ ಸೇವಾ ಜಾಲ ಇದರಿಂದ ಇನಷ್ಟು ವಿಸ್ತರಿಸಲಿದೆ.
ಉನ್ನತ ಮಟ್ಟದ ಸೌಕರ್ಯಗಳು ಪ್ರಥಮ ವರ್ಷದಲ್ಲಿ 60 ವಿದ್ಯಾರ್ಥಿ
ಗಳಿಗೆ ಪ್ರವೇಶ ಪಡೆ ಯುವ ಅವ ಕಾಶವಿದೆ. ಆರು ಮಹಡಿಗಳ ಕಟ್ಟಡದಲ್ಲಿ ಉನ್ನತ ಮಟ್ಟದ ಸೌಕರ್ಯಗಳು, ಪ್ರಯೋಗಾಲಯಗಳು, ಬೋಧನಾ ಕೊಠಡಿಗಳು, ಅತ್ಯಾಧುನಿಕ ಉಪಕರಣ ಗಳು, ಡಿಜಿಟಲ್ ತಂತ್ರಜ್ಞಾನ ಸೌಲಭ್ಯ ಗಳನ್ನು ಕಲ್ಪಿಸಲಾಗಿದೆ. ಡಿಜಿಟಲ್ ಗ್ರಂಥಾ ಲಯ, ಪ್ರತ್ಯೇಕ ವಸತಿ ನಿಲಯ ಹಾಗೂ ಮಹಾವಿದ್ಯಾಲಯದ ಶಾಂತ ಹಸಿರಿನ ಪರಿಸರ ಇವೆಲ್ಲವೂ ದೇರಳ ಕಟ್ಟೆಯ ಫಾದರ್ ಮುಲ್ಲರ್ ಆವರಣದಲ್ಲಿ ಕಲಿಕೆಗೆ ಪೂರಕವಾದ ವಾತಾವರಣ ನಿರ್ಮಿಸಿವೆ. ಅನುಭವಿ ಪ್ರಾಧ್ಯಾಪಕರು ಉತ್ತಮ ಸೌಕರ್ಯಗಳನ್ನು ಹೊಂದಿದ ಆಸ್ಪತ್ರೆ, ಸಂಶೋಧನ ಸೌಲಭ್ಯಗಳು ಉತ್ತಮ ಗುಣಮಟ್ಟದ ಔಷಧ ವಿಜ್ಞಾನ ತಂತ್ರಜ್ಞರನ್ನು ಜಗತ್ತಿಗೆ ಕೊಡುಗೆಯಾಗಿ ನೀಡಲಿವೆ.
ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸ್ಥಾನ
ವಿಜ್ಞಾನ ಆರೋಗ್ಯ ಸೇವೆ ಮತ್ತು ರೋಗಿಗಳೊಂದಿಗೆ ಸಂವಹನ ಹೊಂದಿರುವ ಫಾರ್ಮಸಿಸ್ಟ್ ಕೆಲಸವು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸ್ಥಾನ ಹೊಂದಿದೆ. ಬಿ.ಫಾರ್ಮ ಪದವಿ ಪಡೆದವರಿಗೆ ಮುಂದೆ ವಿದ್ಯಾಭ್ಯಾಸ ಮುಂದುವರಿಸಿ ಸಂಶೋಧನೆ, ಬೋಧನೆ, ಔಷಧ ತಯಾರಿ ಉದ್ಯಮ, ಹೀಗೆ ಹಲವು ಸ್ಥರಗಳಲ್ಲಿ ಬೆಳವಣಿಗೆಗೆ ಅವಕಾಶ ದೊರಕಿಸಿಕೊಡುತ್ತದೆ.
ಬೆಳ್ಳಿಹಬ್ಬದ ಸಂದರ್ಭ ಮಾನ್ಯತೆ
ಔಷಧ ವಿಜ್ಞಾನಗಳ ಮಹಾವಿದ್ಯಾನಿಲ ಯಕ್ಕೆ ದೊರೆತ ಮಾನ್ಯತೆಗಾಗಿ ಸಂತಸ ವ್ಯಕ್ತಪಡಿಸಿರುವ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂ| ಫಾ|ರಿಚರ್ಡ್ ಅಲೋಶಿಯಸ್ ಕುವೆಲ್ಲೊ, ಈ ಮಹಾವಿದ್ಯಾಲಯದಲ್ಲಿ ಉತ್ತಮ ಮಟ್ಟದ ಶಿಕ್ಷಣ ಹಾಗೂ ಸೌಲಭ್ಯಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. ಮಹಾವಿದ್ಯಾಲಯವು ತನ್ನ ಬೆಳ್ಳಿಹಬ್ಬ ಆಚರಿಸುತ್ತಿರುವ ಸಂದರ್ಭದಲ್ಲಿ ಔಷಧ ವಿಜ್ಞಾನ ಮಹಾವಿದ್ಯಾನಿಲಯಕ್ಕೆ ಅನುಮತಿ ದೊರೆತಿರುವುದು ದೇವರ ಅನುಗ್ರಹ ಎಂದು ಅವರು ತಿಳಿಸಿದ್ದಾರೆ. ಇಲ್ಲಿ ಪ್ರವೇಶ ಪಡೆಯಬಯಸುವರು ಇಮೇಲ್ ಸಂಪರ್ಕಿಸ ಬಹುದು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.