ಅಂಧಕಾರದ ಆತಂಕ: ಬರಿದಾಗಿವೆ ಜಲಾಶಯಗಳು- ಕೆಲವೇ ದಿನ ವಿದ್ಯುತ್ ಉತ್ಪಾದನೆ ಸಾಧ್ಯ
Team Udayavani, Jun 18, 2023, 7:31 AM IST
ಬೆಂಗಳೂರು: ಕನ್ನಡಿಗರೇ ಎಚ್ಚರ! ಮಿತವಾಗಿ ವಿದ್ಯುತ್ ಬಳಸಿ. ಇಲ್ಲವಾದರೆ ವಿದ್ಯುತ್ ಕ್ಷಾಮ ಖಚಿತ. ಮುಂಗಾರು ನಿರೀಕ್ಷೆಯಂತೆ ಬಿರುಸುಗೊಂಡಿಲ್ಲ. ಹೀಗಾಗಿ ರಾಜ್ಯದಲ್ಲಿ ಕುಡಿಯುವ ನೀರಿನ ಕೊರತೆಯ ಜತೆಗೆ ವಿದ್ಯುತ್ ಉತ್ಪಾದನೆಯ ಮೇಲೂ ಕರಿಛಾಯೆ ಬೀಳುವ ಆತಂಕ ಎದುರಾಗಿದೆ. ವಿಶೇಷವಾಗಿ ರಾಜ್ಯದ ವಿದ್ಯುತ್ ಬೇಡಿಕೆಯನ್ನು ಪ್ರಧಾನವಾಗಿ ಪೂರೈ ಸುವ ಶರಾವತಿ ಕಣಿವೆಯ ವಿದ್ಯುತ್ ಉತ್ಪಾದನ ಕೇಂದ್ರಗಳಲ್ಲಿ ಇನ್ನು ಕೇವಲ 20 ದಿನ ವಿದ್ಯುತ್ ಉತ್ಪಾ ದನೆ ಮಾಡುವಷ್ಟು ಮಾತ್ರ ನೀರು ಇದೆ.
ರಾಜ್ಯದ ವಿವಿಧ ಜಲವಿದ್ಯುತ್ ಘಟಕಗಳಲ್ಲಿ “ಉದಯವಾಣಿ’ ರಿಯಾಲಿಟಿ ಚೆಕ್ ನಡೆಸಿದ್ದು, ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಆತಂಕ ಸ್ಪಷ್ಟಗೊಂಡಿದೆ. ಏಷ್ಯಾದ ಮೊದಲ ಜಲವಿದ್ಯುತ್ ಉತ್ಪಾದನ ಕೇಂದ್ರವಾಗಿರುವ ಶಿವನಸಮುದ್ರ ಜಲ ವಿದ್ಯುದಾಗಾರದ ಆರು ಘಟಕಗಳಲ್ಲಿ ಈಗ ನಾಲ್ಕು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಆಲಮಟ್ಟಿಯಲ್ಲಿ ಜಲವಿದ್ಯುತ್ ಉತ್ಪಾದನೆ ಕುಸಿತ ಕಾಣಲಾರಂಭಿಸಿದೆ. ಹಿಡಕಲ್ ಜಲಾಶಯದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ.
ತುಂಗ-ಭದ್ರಾದಲ್ಲೂ ಇಲ್ಲ
ತುಂಗ-ಭದ್ರಾ ಜಲಾಶಯ ಪೂರ್ಣ ಪ್ರಮಾಣದಲ್ಲಿ ತುಂಬಿದಾಗ ಮಾತ್ರ ಹೆಚ್ಚುವರಿ ನೀರನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡಲಾಗು ತ್ತದೆ. ಕಳೆದ ಬಾರಿ ಜುಲೈಯಲ್ಲೇ ತುಂಬಿದ್ದ ತುಂಗೆಯಲ್ಲಿ ಈ ಬಾರಿ ಜೂನ್ ಮುಗಿಯುತ್ತ ಬಂದರೂ ನೀರಿನ ಹರಿವೇ ಕಾಣುತ್ತಿಲ್ಲ. ಕಳೆದ ವರ್ಷ ಮಳೆಗಾಲ ಆರಂಭಕ್ಕೂ ಮುನ್ನವೇ ಜಲಾಶಯದಲ್ಲಿ 150 ಅಡಿ (ಗರಿಷ್ಠ ಸಾಮರ್ಥ್ಯ 186 ಅಡಿ) ನೀರಿತ್ತು. ಈ ಬಾರಿ 137.2 ಅಡಿಗೆ ಕುಸಿದಿದೆ. ಭದ್ರಾ ಜಲಾಶಯದಿಂದ ಒಂದು ಲಕ್ಷ ಹೆಕ್ಟೇರ್‌ಗೂ ಅ ಧಿಕ ಪ್ರದೇಶದ ಬೆಳೆಗಳಿಗೆ ನೀರು ಕೊಡಲಾಗುತ್ತಿದೆ.
ಸ್ಥಾಗಿತ್ಯದತ್ತ ಲಿಂಗನಮಕ್ಕಿ ಜಲವಿದ್ಯುದಾಗಾರ
ರಾಜ್ಯದ ಶೇ. 25ರಷ್ಟು ವಿದ್ಯುತ್ ಬೇಡಿಕೆ ಪೂರೈಸುವ ಶರಾವತಿ ಕಣಿವೆ ಜಲ ವಿದ್ಯುದಾಗಾರಗಳು ಮಳೆ ಬಾರದಿದ್ದಲ್ಲಿ 20 ದಿನಗಳಲ್ಲಿ ಸಂಪೂರ್ಣ ಸ್ಥಗಿತಗೊಳ್ಳಲಿವೆ. ಈಗಾಗಲೇ ಅನೇಕ ಘಟಕಗಳು ಸ್ಥಗಿತ ಗೊಂಡಿವೆ. ಲಿಂಗನಮಕ್ಕಿ ಜಲಾಶಯ ವ್ಯಾಪ್ತಿಯ ಶರಾವತಿ, ಮಹಾತ್ಮಾ ಗಾಂಧಿ , ಲಿಂಗನಮಕ್ಕಿ, ಗೇರುಸೊಪ್ಪದಲ್ಲಿ ವಿದ್ಯುತ್ ಉತ್ಪಾದನೆ ಘಟಕಗಳಿವೆ. ಎಲ್ಲ ಘಟಕಗಳು ಪ್ರತಿದಿನ 20 ಮಿಲಿಯನ್ ಯುನಿಟ್‌ಗೂ ಅ ಧಿಕ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿವೆ. ನೀರಿನ ಮಟ್ಟ ಕುಸಿದಿರುವ ಕಾರಣ ಲಿಂಗನಮಕ್ಕಿ ಪವರ್‌ಹೌಸ್ ಸ್ಥಗಿತಗೊಳಿಸಲಾಗುತ್ತಿದೆ. ಉಳಿದ ಮೂರು ಕಡೆ ನೀರಿನ ಲಭ್ಯತೆ-ಬೇಡಿಕೆ ನೋಡಿಕೊಂಡು ಘಟಕ ನಡೆಸಲಾಗುತ್ತಿದೆ. ಪ್ರಸ್ತುತ ವಿದ್ಯುತ್ ಉತ್ಪಾದನೆ 6 ಮಿಲಿಯನ್ ಯುನಿಟ್‌ಗೆ ಕುಸಿದಿದೆ. 151.2 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 12.32 ಟಿಎಂಸಿ ನೀರಿದೆ. ಕುಡಿಯುವ ನೀರು ಬಿಟ್ಟು ಉಳಿದ 4.7 ಟಿಎಂಸಿ ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡಬೇಕಿದೆ.
ದೇಶದ ಶೇ. 80 ಪ್ರದೇಶದಲ್ಲಿ ಶುಷ್ಕ ಸ್ಥಿತಿ
ಪುಣೆ/ಮಂಗಳೂರು: ಪ್ರಸಕ್ತ ವರ್ಷದ ಮುಂಗಾರು ಯಾವಾಗ ಸಕ್ರಿಯವಾಗಬಹುದು ಎಂಬ ಪ್ರಶ್ನೆಗಳ ನಡುವೆಯೇ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತನ್ನ ಹೊಸ ವರದಿಯಲ್ಲಿ ದೇಶದ ಶೇ. 80 ಪ್ರದೇಶದಲ್ಲಿ ಶುಷ್ಕ ಹವೆ ಇದೆ. ಇದು ಆಹಾರ ಉತ್ಪಾದನೆ, ವಾಣಿಜ್ಯ ಬೆಳೆ ಸೇರಿದಂತೆ ಒಟ್ಟಾರೆಯಾಗಿ ಕೃಷಿ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದಿದೆ.
ಜೂ. 8ರಂದು ಕೇರಳ ಪ್ರವೇಶಿಸಿದ ಮುಂಗಾರು ಜೂ. 10ರಂದು ಕರ್ನಾಟಕದ ಕರಾವಳಿಯನ್ನು ಪ್ರವೇಶಿಸಿ, ಜೂ. 11ರ ವೇಳೆಗೆ ಇನ್ನಷ್ಟು ಭಾಗಗಳಿಗೆ ವಿಸ್ತರಿಸಿತ್ತು. ಆದರೆ ಅಲ್ಲಿಂದ ಮುಂದಕ್ಕೆ ಚಲಿಸಿಲ್ಲ. ಈಗಲೂ ಪೂರ್ತಿಯಾಗಿ ರಾಜ್ಯವನ್ನು ವ್ಯಾಪಿಸಿಲ್ಲ. ಬಿಪರ್‌ಜಾಯ್ ಚಂಡಮಾರುತ ಮುಂಗಾರು ಬಿರುಸುಗೊಳ್ಳದಂತೆ ತಡೆದಿದೆ.
ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಢ, ಝಾರ್ಖಂಡ್, ಒಡಿಶಾ, ಬಿಹಾರ, ಉತ್ತರ ಪ್ರದೇಶ, ಉತ್ತರಾಖಂಡಗಳಲ್ಲಿ ಶುಷ್ಕ ಹವೆ ಇದೆ. ದೇಶದ ಶೇ. 32 ಭೂಪ್ರದೇಶ ಜೂ. 21ರ ವರೆಗೆ ಶುಷ್ಕವಾಗಿ ಇರಲಿದೆ ಎಂದು ಐಎಂಡಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.