ದೇಶವನ್ನು ಕಾಡುತ್ತಿದೆ ಲಕ್ಷಣರಹಿತ ಸೋಂಕಿನ ಭೀತಿ

ಶೇ.80ರಷ್ಟು ಸೋಂಕುಪೀಡಿತರಲ್ಲಿ ಕೋವಿಡ್-19 ತಥಾಕಥಿತ ಲಕ್ಷಣಗಳೇ ಇಲ್ಲ !

Team Udayavani, Apr 21, 2020, 6:00 AM IST

ದೇಶವನ್ನು ಕಾಡುತ್ತಿದೆ ಲಕ್ಷಣರಹಿತ ಸೋಂಕಿನ ಭೀತಿ

ಹೊಸದಿಲ್ಲಿ: ಕೋವಿಡ್-19 ವಿರುದ್ಧ ದೇಶವು ಯಶಸ್ವಿಯಾಗಿ ಹೋರಾಡುತ್ತಿರುವ ನಡುವೆಯೇ ಹೊಸ ತಲೆನೋವೊಂದು ಆರಂಭ ವಾಗಿದೆ. ಕೋವಿಡ್-19 ಸೋಂಕಿನ ಲಕ್ಷಣಗಳು ಎಂದು ಯಾವುದನ್ನು ವೈದ್ಯರು ಗುರುತಿಸು ತ್ತಿದ್ದಾರೆಯೋ ಅವೇ ಇಲ್ಲದ ಸೋಂಕು ಪೀಡಿತರು ಪತ್ತೆ ಯಾಗುತ್ತಿರುವುದೇ ಈ ಹೊಸ ತಲೆಶೂಲೆ!

ದೇಶದ ಒಟ್ಟಾರೆ ಸೋಂಕುಪೀಡಿತರ ಪೈಕಿ ಶೇ.80ರಷ್ಟು ಮಂದಿಗೆ ಕೋವಿಡ್-19 ರೋಗದ ಯಾವುದೇ ಲಕ್ಷಣ ಕಂಡುಬಂದಿಲ್ಲ ಎಂಬ ಮಾಹಿತಿ ಬಹಿರಂಗವಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಸೋಂಕಿನ ಮೌನ ವಾಹಕರು ಎಂದು ಗುರುತಿಸಬಹುದಾದ ಇವರು ತಮಗರಿ ವಿಲ್ಲದಂತೆಯೇ ಇತರರಿಗೂ ಸೋಂಕು ಪ್ರಸಾರ ಮಾಡುತ್ತ ಸಾಗುತ್ತಿರುವರೇ ಎಂಬ ಆತಂಕವನ್ನು ಇತ್ತೀಚೆಗೆ ಕೆಲವು ತಜ್ಞರು ವ್ಯಕ್ತಪಡಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಮೃತಪಟ್ಟ ಮಹಿಳೆಯ ಸಹಿತ ಹಲವು ಪ್ರಕರಣಗಳ ಬಳಿಕ ಈಗ ಅದು ನಿಜವಾಗಿರುವಂತೆ ತೋರುತ್ತಿದೆ. ಈಕೆಯ 23 ವರ್ಷದ ಪುತ್ರ ವಿದೇಶದಿಂದ ಬಂದವರಾಗಿದ್ದರೂ ಅವರಿಗೆ ರೋಗಲಕ್ಷಣ ಕಂಡುಬಂದಿಲ್ಲ. ಉಪ್ಪಿನಂಗಡಿ ಪ್ರಕರಣದಲ್ಲಿಯೂ ದಿಲ್ಲಿ ಪ್ರವಾಸ ಕೈಗೊಂಡಿದ್ದ ಮಧ್ಯವಯಸ್ಕ ವಕೀಲರಿಗೆ ಆರಂಭಿಕ ಪರೀಕ್ಷೆಯಲ್ಲಿ ಕೋವಿಡ್-19 ನೆಗೆಟಿವ್‌ ಆಗಿತ್ತು.

ಕರ್ನಾಟಕದ ಶೇ.50 ಪ್ರಕರಣಗಳ ಸಹಿತ 10 ಪ್ರಮುಖ ರಾಜ್ಯಗಳ 3ನೇ 2ರಷ್ಟು ಸೋಂಕು ಪೀಡಿತರಲ್ಲಿ ರೋಗ ಲಕ್ಷಣವೇ ಕಂಡುಬಂದಿಲ್ಲ ಎಂದು ಸ್ವತಃ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್‌)ಯ ವಿಜ್ಞಾನಿ ಡಾ| ರಮಣ್‌ ಆರ್‌. ಗಂಗಾಖೇಡ್ಕರ್‌ ತಿಳಿಸಿದ್ದಾರೆ. ಇಂಥವ ಪತ್ತೆ ಸವಾಲಾಗಿದ್ದು, ಸೋಂಕುಪೀಡಿತ ವ್ಯಕ್ತಿಗಳ ಸಂಪರ್ಕ ಹೊಂದಿ ದವರನ್ನು ಕ್ಷಿಪ್ರಗತಿಯಲ್ಲಿ ಕಂಡುಹಿಡಿದು ಪರೀಕ್ಷೆ ಗೊಳಪಡಿಸುವುದೇ ಏಕೈಕ ದಾರಿ ಎಂದಿದ್ದಾರೆ.

ಲಕ್ಷಣರಹಿತರು 45ರ ಒಳಗಿನವರು
ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯ ನಿರ್ದೇಶಕ ಡಾ| ಸಿ.ನಾಗರಾಜ್‌ ಪ್ರಕಾರ, ಉತ್ತಮ ರೋಗ ನಿರೋಧಕ ಶಕ್ತಿ ಇರುವ ಯುವ ಜನರಲ್ಲಿ ಹೆಚ್ಚಾಗಿ ಕೋವಿಡ್-19 ಸೋಂಕಿನ ಲಕ್ಷಣ ಕಂಡುಬರುವುದಿಲ್ಲ. ಅಲ್ಲದೆ, ಲಕ್ಷಣ ರಹಿತ ರೋಗಿಗಳು ಬಹುತೇಕ 20ರಿಂದ 45ರೊಳಗಿನ ವಯೋಮಾನದವರಾಗಿರುತ್ತಾರೆ. ಕೆಲವರು ಇದಕ್ಕಿಂತ ಹೆಚ್ಚು ವಯಸ್ಕರಾಗಿದ್ದರೂ ಕೆಲವು ನಿರ್ದಿಷ್ಟ ಔಷಧಗಳನ್ನು ಸೇವಿಸುವವರಾಗಿದ್ದರೆ, ಅಂಥ ವರಲ್ಲೂ ರೋಗ ಲಕ್ಷಣ ಕಂಡುಬಾರದು.

53 ಪತ್ರಕರ್ತರಿಗೆ ಸೋಂಕು
ಮಹಾರಾಷ್ಟ್ರದಲ್ಲಿ 53 ಪತ್ರಕರ್ತರಿಗೆ ಸೋಂಕು ತಗಲಿದೆ. ವಿಚಿತ್ರವೆಂದರೆ,ಇವರಲ್ಲಿ ಯಾರಿಗೂ ರೋಗ ಲಕ್ಷಣ ಕಾಣಿ ಸಿರಲಿಲ್ಲ.ದಿಢೀರನೇ ಪರೀಕ್ಷೆ ನಡೆಸಿದಾಗ ಇದು ಬಯ ಲಾಗಿದೆ. ಇದೂ ಆತಂಕಕ್ಕೆ ಕಾರಣವಾಗಿದೆ.

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ

Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ

Maharashtra: ಕಾಂಗ್ರೆಸ್‌ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್‌ ರೆಡ್ಡಿ

Maharashtra: ಕಾಂಗ್ರೆಸ್‌ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್‌ ರೆಡ್ಡಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.