ಮೆಂತ್ಯೆ ಸೊಪ್ಪು ತಿನ್ನಿ…ರಕ್ತದ ಕೊಲೆಸ್ಟ್ರಾಲ್, ಡಯೆಟ್‌ಗೆ ಸಹಕಾರಿ
ಮೆಂತ್ಯೆ ಸೊಪ್ಪು ಕಹಿ ರುಚಿಯನ್ನು ಹೊಂದಿದ್ದರೂ ಪೋಷಕಾಂಶಗಳಿಂದ ಶ್ರೀಮಂತವಾಗಿದೆ.
Team Udayavani, Aug 10, 2022, 1:08 PM IST
ಮನುಷ್ಯ ಏನೇ ಸಾಧನೆ ಮಾಡಬೇಕಾದರೂ ಅದಕ್ಕೆ ಉತ್ತಮ ಆರೋಗ್ಯ ಅತ್ಯಗತ್ಯ. ನಾವು ಆರೋಗ್ಯವಾಗಿರಬೇಕಾದರೆ ನಾವು ತಿನ್ನುವ ಆಹಾರ ಎಷ್ಟು ಮುಖ್ಯ ಮತ್ತು ಯಾವ ಆಹಾರ ತಿಂದರೆ ಆರೋಗ್ಯಕ್ಕೆ ಪೂರಕ ಎನ್ನುವುದನ್ನು ತಿಳಿದಿರಬೇಕು.
ಆರೋಗ್ಯ ಕಾಪಾಡುವಲ್ಲಿ ಸೊಪ್ಪು ಪ್ರಮುಖ ಪಾತ್ರವಹಿಸುತ್ತದೆ. ಪುದಿನ, ಪಾಲಕ್, ಅರಿವೆ, ಬಸಳೆ ಮೆಂತ್ಯೆ ಎಲ್ಲವು ಆರೋಗ್ಯಕರ. ಇವುಗಳಲ್ಲಿ ಹೆಚ್ಚು ಪೋಷಕಾಂಶಗಳು ತುಂಬಿರುವುದರಿಂದ ಮನುಷ್ಯನನ್ನು ಆಯೋಗ್ಯಕರವಾಗಿರುವಂತೆ ಮಾಡುತ್ತವೆ. ಮೆಂತ್ಯೆ ಸೊಪ್ಪು ಕಹಿ ರುಚಿಯನ್ನು ಹೊಂದಿದ್ದರೂ ಪೋಷಕಾಂಶಗಳಿಂದ ಶ್ರೀಮಂತವಾಗಿದೆ. ದಿನನಿತ್ಯದ ಆಹಾರದಲ್ಲಿ ಮೆಂತ್ಯೆ ಸೊಪ್ಪು ಸೇವನೆ ದೇಹದ ಆರೋಗ್ಯವನ್ನು ಉತ್ತಮವಾಗಿರಿಸುವಲ್ಲಿ ಸಹಕಾರಿ
ಮೆಂತ್ಯೆ ಸೊಪ್ಪು ಆಹಾರವಾಗಿ ಬಳಕೆ ಮಾಡುವುದರಿಂದ ಹಲವಾರು ಉಪಯೋಗಗಳಿದೆ.
1. ರಕ್ತದ ಕೊಲೆಸ್ಟ್ರಾಲ್ ಕಡಿಮೆ
ಮೆಂತ್ಯೆ ಸೊಪ್ಪು ಸೇವನೆಯಿಂದ ರಕ್ತದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.
2. ಹೃದಯ ಸಂಬಂಧಿ ಕಾಯಿಲೆಗೆ ಉತ್ತಮ
ಮೆಂತ್ಯೆ ಸೊಪ್ಪು ಸೇವನೆ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಸಂಭವ ಕಡಿಮೆಯಿಯುತ್ತದೆ.
3. ಡಯೆಟ್‌ಗೆ ಸಹಕಾರಿ
ಡಯೆಟ್ ಮಾಡುವವರಿಗೆ ಮೆಂತ್ಯೆ ಸೇವನೆ ಹೆಚ್ಚು ಉಪಕಾರಿ. ಇದರಿಂದ ಅನಗತ್ಯ ಕೊಬ್ಬನ್ನು ಕಡಿಮೆಯಾಗುತ್ತದೆ.
4. ಮಹಿಳೆಯರಿಗೆ ಉಪಕಾರಿ
ಮೆಂತ್ಯೆ ಸೊಪ್ಪು ಸೇವನೆಯಿಂದ ಗರ್ಭಿಣಿ ಮಹಿಳೆಯರಿಗೆ ಸುಲಭ ಹೆರಿಗೆಗೆ ಸಹಕಾರಿ. ಆದರೆ ಅತಿಯಾದ ಸೇವನೆ ಅಪಾಯಕಾರಿಯೂ ಹೌದು.
ಹೇಗೆ ಸೇವಿಸಬಹುದು?
ಮೆಂತ್ಯೆಯನ್ನು ಪಲ್ಯ, ತಂಬುಳಿ ಅಥವಾ ಮೆಂತ್ಯೆ ರೈಸ್ ಬಾತ್ ಹೀಗೆ ನಾನಾ ರೀತಿಯ ಖಾದ್ಯಗಳನ್ನು ತಯಾರಿಸುವ ಮೂಲಕ ಸೇವಿಸಬಹುದು. ಇದರೊಂದಿಗೆ ಮೆಂತ್ಯೆ ಕಾಳು, ಮೆಂತ್ಯೆ ಹುಡಿ ಕೂಡ ಆರೋಗ್ಯ ವೃದ್ದಿಗೆ ಸಹಕಾರಿಯಾಗಿದೆ. ಇವುಗಳನ್ನು ಅಡುಗೆಯಲ್ಲಿ ಬಳಸುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು.
ವಾಟರ್‌ಮೈಂಡರ್
ದೇಹದ ಆರೋಗ್ಯ ಸುಸ್ಥಿರದಲ್ಲಿರಬೇಕಾದರೆ ದೇಹಕ್ಕೆ ಅಗತ್ಯವಿರುವ ನೀರು ಸೇರಬೇಕು. ಆದರೆ ಇಂದು ಅನೇಕರು ದೇಹಕ್ಕೆ ಎಷ್ಟು ಅಗತ್ಯವಿದೆಯೋ ಅಷ್ಟು ನೀರನ್ನು ಕುಡಿಯುವುದಿಲ್ಲ. ದೇಹದ ಅಂಗಾಂಗಗಳ ಕಾರ್ಯ ಸುಗಮವಾಗಿ ಸಾಗಲು ಪ್ರತಿದಿನ 2-3 ಲೀ ನೀರು ಕುಡಿಯುವ ಅಗತ್ಯವಿದೆ. ಆದರೆ ಇದನ್ನು ಅನುಸರಿಸಲು ಕಷ್ಟ. ಪ್ರತಿದಿನ ನೀರು ಕುಡಿಯಲು ನೆನಪಿಸುವ ಆ್ಯಪ್ ವಾಟರ್‌ಮೈಂಡರ್. ದೇಹದ ತೂಕ ಅಥವಾ ವೈಯಕ್ತಿಕ ಗುರಿಯ ಆಧಾರದ ಮೇಲೆ ಎಷ್ಟು ನೀರಿನ ಆವಶ್ಯಕತೆ ಇದೆ ಎಂಬುದನ್ನು ತಿಳಿಸುತ್ತದೆ. ದಿನಪೂರ್ತಿ ಸಂದೇಶಗಳನ್ನು ಕಳಿಸುವ ಮೂಲಕ ನೀರು ಕುಡಿಯುವಂತೆ ಇದು ಎಚ್ಚರಿಸುತ್ತದೆ.
- ರಂಜಿನಿ ಮಿತ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.