Festival Offer: ದೀಪಾವಳಿ ಸಂಭ್ರಮಕ್ಕೆ ಚಿನ್ನಾಭರಣ ಮಳಿಗೆಯಲ್ಲೂ ಸಡಗರ
Team Udayavani, Oct 29, 2024, 6:25 AM IST
ಮಂಗಳೂರು/ಉಡುಪಿ: ದೀಪಾವಳಿ ಸಂಭ್ರಮಕ್ಕೆ ವಿವಿಧ ಮಾರುಕಟ್ಟೆಯಲ್ಲಿ ಸಡಗರ ಆರಂಭವಾಗಿದೆ; ಖರೀದಿ ಪ್ರಕ್ರಿಯೆಯೂ ಜೋರಾಗಿದೆ. ಪೂರಕ ವಾಗಿ ಚಿನ್ನಾಭರಣ ಮಳಿಗೆಯಲ್ಲಿ ಈಗ ಖರೀದಿ ಸಂಭ್ರಮ ದೀಪಾವಳಿ ಖುಷಿಯನ್ನು ಇಮ್ಮಡಿಗೊಳಿಸುತ್ತಿದೆ.
ಅತ್ಯಂತ ಹೆಚ್ಚು ಚಿನ್ನಾಭರಣ ಖರೀದಿಸುವ ನಗರಗಳ ಪೈಕಿ ದೇಶದಲ್ಲೇ ಕರಾವಳಿ ಜಿಲ್ಲೆ ಮುಂಚೂಣಿಯಲ್ಲಿದೆ. ಆಭರಣ ಖರೀದಿಸುವುದು ಇಲ್ಲಿ ಪ್ರತಿಷ್ಠೆ, ಆರ್ಥಿಕ ಲೆಕ್ಕಾಚಾರ ಎಂಬ ಗುಣ ಲಕ್ಷಣಕ್ಕಿಂತಲೂ ಅದು ಭಾವನಾತ್ಮಕ ಬೆಸುಗೆಯ ಕೊಂಡಿ. ಶುಭ ಸಮಾರಂಭದಿಂದ ಆರಂಭವಾಗಿ ಶುಭ ದಿನದಂದು ಚಿನ್ನಾಭರಣ ಖರೀದಿಸುವುದು ಇಲ್ಲಿ ವಾಡಿಕೆ ಯಾಗಿದೆ. ಈ ಪೈಕಿ ದೀಪಾವಳಿಯ ಶುಭ ಸಂದರ್ಭದಲ್ಲಿ ಚಿನ್ನಾಭರಣ ಖರೀದಿ ಸಂಭ್ರಮಕ್ಕೆ ವಿಶೇಷ ಮಹತ್ವವಿದೆ. ದರ ಸ್ವಲ್ಪ ಏರಿದ್ದರೂ ಹಬ್ಬದ ಸಂಭ್ರಮ ಒಳಗೊಂಡ ದೀಪಾವಳಿ ಕಾಲಕ್ಕೆ ಚಿನ್ನಾಭರಣ ಖರೀದಿ ಸಂಭ್ರಮ ಬಹಳಷ್ಟು ಇರುತ್ತದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.
ಮಂಗಳೂರಿನ ಎಸ್.ಎಲ್.ಶೇಟ್ ಜುವೆಲರ್ ಆ್ಯಂಡ್ ಡೈಮಂಡ್ ಹೌಸ್‌ನ ಮಾಲಕ ಪ್ರಶಾಂತ್ ಶೇಟ್ ಅವರ ಪ್ರಕಾರ, “ಹಬ್ಬಕ್ಕೆ ಚಿನ್ನಾಭರಣ ತೆಗೆದುಕೊಳ್ಳುವ ಮನೋಭೂಮಿಕೆ ಹಲವರಲ್ಲಿದೆ. ಬೆಲೆ ಅಧಿಕವಾಗಿದ್ದರೂ ಅವರು ಚಿನ್ನಾಭರಣ ಖರೀದಿಯಿಂದ ಹಿಂದೆ ಸರಿಯುವುದಿಲ್ಲ. ಸಾಂಕೇತಿಕ ವಾಗಿ ಯಾದರೂ ಚಿನ್ನಾಭರಣ ಖರೀದಿಸುತ್ತಾರೆ. ಜತೆಗೆ ಕಾರ್ಯಕ್ರಮಗಳ ಹಿನ್ನೆಲೆ ಯಲ್ಲಿ ಚಿನ್ನಾಭರಣ ಖರೀ ದಿಯೂ ನಡೆಯುತ್ತಿದೆ’ ಎಂದು ಹೇಳಿದರು.
ಲಕ್ಷ್ಮೀದಾಸ್ ಜುವೆಲರ್ಸ್‌ನ ಪಾಲುದಾರರಾದ ವಿಷ್ಣು ಆಚಾರ್ಯ ಅವರ ಪ್ರಕಾರ, “ಚಿನ್ನಾಭರಣ ಮಾರುಕಟ್ಟೆಯಲ್ಲಿ ಉತ್ತಮ ಟ್ರೆಂಡ್ ಇದೆ. ದರ ಏರಿಕೆ ಆಗಿದ್ದರೂ ಗ್ರಾಹಕರು ಅದನ್ನು ಪಾಸಿಟಿವ್ ಆಗಿ ಪರಿಗಣಿಸಿ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿ ವರ್ಷವೂ ಉತ್ತಮ ವ್ಯವಹಾರ ಇರುತ್ತದೆ. ಇಂದು ಪಡೆಯುವ ಚಿನ್ನಾಭರಣ ನಾಳೆಯ ಭವಿಷ್ಯಕ್ಕೆ ಭದ್ರತೆ ಎಂಬ ಬಗ್ಗೆಯೂ ಕೆಲವರು ಯೋಚಿಸಿ ಖರೀದಿಸುತ್ತಾರೆ. ಹೀಗಾಗಿ ದರ ಏರಿಕೆಯನ್ನು ಅವರು ಪರಿಗಣಿಸುವುದಿಲ್ಲ’ ಎನ್ನುತ್ತಾರೆ.
ಉಡುಪಿಯಲ್ಲೂ ಗ್ರಾಹಕರು ಹೆಚ್ಚು ಆಸಕ್ತಿ
ಉಡುಪಿ ಜಿಲ್ಲೆಯ ಪ್ರಮುಖ ಚಿನ್ನಾಭರಣ ಮಳಿಗೆಗಳೂ ಹಬ್ಬದ ನಿಮಿತ್ತ ಹಲವು ಕೊಡುಗೆಗಳನ್ನು ಘೋಷಿಸಿವೆ. ಹೀಗಾಗಿ ಗ್ರಾಹಕರು ಹಬ್ಬದ ಸಂದರ್ಭದಲ್ಲಿಯೇ ಮುಂದಿನ ದಿನಗಳಲ್ಲಿ ನಡೆಯಲಿರುವ ಶುಭಕಾರ್ಯಗಳಿಗೆ ಬೇಕಿರುವ ಜುವೆಲರಿಯನ್ನು ಖರೀದಿಸುತ್ತಿದ್ದಾರೆ. ಹಬ್ಬಕ್ಕೆ ಅಗತ್ಯವಿರುವ ಚಿನ್ನಾಭರಣ ಗಳೊಂದಿಗೆ ಬೆಳ್ಳಿಯ ಪರಿಕರಗಳನ್ನು ಖರೀದಿಸುವ ಗ್ರಾಹಕರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಚಿನ್ನಾಭರಣ ಮಳಿಗೆಗಳಲ್ಲೂ ಚಿನ್ನ ಬೆಳ್ಳಿ, ವಜ್ರ ಹೀಗೆ ಪ್ರತ್ಯೇಕ ವಿಭಾಗದ ಜತೆಗೆ ಒಂದೊಂದು ವಿಭಾಗದಲ್ಲಿ ವಿವಿಧ ವಿನ್ಯಾಸದ ಆಭರಣಗಳನ್ನು ಪ್ರತ್ಯೇಕವಾಗಿ ಜೋಡಿಸಿ, ಗ್ರಾಹಕರಿಗೆ ಆಭರಣಗಳನ್ನು ನೋಡಿ ಖರೀದಿಸಲು ಇನ್ನಷ್ಟು ಅನುಕೂಲ ಮಾಡಿಕೊಡುತ್ತಿದ್ದಾರೆ.
ನವೆಂಬರ್ ಸಹಿತ ಮುಂದಿನ ತಿಂಗಳುಗಳಲ್ಲಿ ಶುಭ ಮುಹೂರ್ತ ಹೆಚ್ಚಿರುವುದರಿಂದ ಅನೇಕರು ಹಬ್ಬದ ಶುಭ ಸಂದರ್ಭದಲ್ಲಿ ಚಿನ್ನಾಭರಣ ಖರೀದಿಸುತ್ತಾರೆ. ಗ್ರಾಹಕರ ಸ್ಪಂದನೆಯೂ ಚೆನ್ನಾಗಿದೆ ಎನ್ನುತ್ತಾರೆ ಗುಜ್ಜಾಡಿ ಸ್ವರ್ಣ ಜುವೆಲರ್ ಪ್ರೈ.ಲಿ.ನ ಪಾಲುದಾರ ರಾಮದಾಸ್ ನಾಯಕ್. ಅನೇಕರು ಹಬ್ಬದಂದೇ ಚಿನ್ನಾಭರಣ ಖರೀದಿಸುತ್ತಾರೆ. ವಿಶೇಷವಾಗಿ ಹಲವರು ಪೂಜೆಗೆ ಬೇಕಿರುವ ಬೆಳ್ಳಿ ಸಾಮಗ್ರಿಗಳನ್ನು ಹಬ್ಬದ ದಿನದಂದೇ ಖರೀದಿಸುತ್ತಾರೆ. ಹಬ್ಬ ಒಂದು ರೀತಿಯ ಖರೀದಿ ಸಂಭ್ರಮ ತರುತ್ತದೆ ಎಂದು ನೋವೆಲ್ಟಿ ಜುವೆಲರ್ನ ಮ್ಯಾನೇಜಿಂಗ್ ಪಾರ್ಟನರ್ ಜಿ. ಜಯ ಆಚಾರ್ಯ ತಿಳಿಸಿದರು.
ಹಬ್ಬದ ನಿಮಿತ್ತ ಚಿನ್ನಾಭರಣ ಖರೀದಿ ಪ್ರಕ್ರಿಯೆ ಚೆನ್ನಾಗಿ ನಡೆಯುತ್ತಿದೆ. ಗ್ರಾಹಕರ ಸ್ಪಂದನೆಯೂ ಉತ್ತಮವಾಗಿದೆ ಎನ್ನುತ್ತಾರೆ ಉಡುಪಿ ಆಭರಣ ಜುವೆಲರಿಯ ಅಕೌಂಟ್ ಮ್ಯಾನೇಜರ್ ವಿನೋದ್ ಕಾಮತ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ಕೇಂದ್ರ ಸರಕಾರದ ಯೋಜನೆ ಫಲಾನುಭವಿಗಳಿಗೆ ಸಾಲ ನೀಡಲು ಸತಾಯಿಸಬೇಡಿ: ಸಂಸದ ಕೋಟ
Udupi; ಗೀತಾರ್ಥ ಚಿಂತನೆ 132: ತಣ್ತೀವಿರುವುದು ಉಪದೇಶಕ್ಕಲ್ಲ, ಅಭ್ಯಾಸಕ್ಕೆ
Udupi: ವಿಶ್ವಶಾಂತಿಗೆ ಭಗವದ್ಗೀತೆಯೇ ಮೂಲಾಧಾರ: ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ
Padubidri: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ; ಸಹ ಸವಾರ ಸಾವು
Udupi: ಕುದ್ರು ನೆಸ್ಟ್ ರೆಸಾರ್ಟ್‌ನಲ್ಲಿ ಬೆಂಕಿ ಅವಘಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.