ಹೇರಳ ಪೋಷಕಾಂಶ: ಅಂಜೂರ ಸೇವಿಸಿ ಆರೋಗ್ಯ ವೃದ್ಧಿಸಿ
ಹೆಚ್ಚು ಸೋಡಿಯಂ ಸೇವನೆಯಿಂದಾಗಿ ಉಂಟಾಗುವ ರಕ್ತದೊತ್ತಡದ ನಿವಾರಣೆಗೆ ಅಂಜೂರ ಸಹಾಯಕ.
Team Udayavani, Sep 5, 2022, 2:05 PM IST
ಪ್ರಕೃತಿದತ್ತವಾಗಿ ಸಿಗುವ ಎಲ್ಲ ಹಣ್ಣು, ಹಂಪಲುಗಳಲ್ಲಿ ಆರೋಗ್ಯ ವೃದ್ಧಿಸುವ, ಸುಧಾರಿಸುವ ಅಂಶಗಳಿವೆ. ಹೇರಳ ಪೋಷಕಾಂಶ ಹೊಂದಿರುವ ಅಂಜೂರ ಹಣ್ಣು ವಿಟಮಿನ್ ಎ, ವಿಟಮಿನ್ ಬಿ 1, ವಿಟಮಿನ್ ಬಿ 2 , ಕ್ಯಾಲ್ಸಿಯಂ, ಕಬ್ಬಿಣ ಅಂಶವನ್ನು ಹೊಂದಿದೆ. ಹೆಚ್ಚಾಗಿ ಒಣ ಹಣ್ಣುಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ.
ಮಲಬದ್ಧತೆಯಿಂದ ಮುಕ್ತಿ
ಅಂಜೂರದಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶ ಇರುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುವುದು.ಒಣ ಅಥವಾ ಹಸಿಯಾಗಿ ಇದನ್ನು ಸೇವಿಸಬಹುದು.
ಕೆಮ್ಮು ನಿವಾರಣೆ
ಕಫದಿಂದ ಉಂಟಾಗುವ ಕೆಮ್ಮಿನ ನಿವಾರಣೆಗೂ ಇದು ಸಹಕಾರಿ. ಕಫ ಕರಗಿಸುವ ಶಕ್ತಿ ಅಂಜೂರಕ್ಕೆ ಇದೆ.
ತೂಕ ಇಳಿಸಲು ನೆರವು
ಕಡಿಮೆ ತೂಕ ಹೊಂದಿರ ಬೇಕು ಎನ್ನುವ ಹಂಬಲವಿರುವವರು ಅಂಜೂರವನ್ನು ನಿಯಮಿತವಾಗಿ ಸೇವಿಸಬಹುದು. ಇದರಲ್ಲಿರುವ ನಾರಿನಂಶ ಅತಿಯಾದ ತೂಕವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ.
ಇದನ್ನೂ ಓದಿ:ನಿಮ್ಮ ಗ್ರಹಬಲ: ಈ ರಾಶಿಯ ನಿರುದ್ಯೋಗಿಗಳಿಗೆ ನಿರೀಕ್ಷಿತ ಉದ್ಯೋಗಲಾಭದ ಸೂಚನೆ
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
ಅಂಜೂರದಲ್ಲಿ ಪೆಕ್ಟಿನ್ ಎಂಬ ಕರಗುವ ನಾರಿನಂಶವಿದ್ದು, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
ರಕ್ತದೊತ್ತಡ ನಿಯಂತ್ರಣ
ಕಡಿಮೆ ಪೊಟ್ಯಾಶಿಯಂ ಆಹಾರ ಸೇವನೆ ಮತ್ತು ಹೆಚ್ಚು ಸೋಡಿಯಂ ಸೇವನೆಯಿಂದಾಗಿ ಉಂಟಾಗುವ ರಕ್ತದೊತ್ತಡದ ನಿವಾರಣೆಗೆ ಅಂಜೂರ ಸಹಾಯಕ. ಅಂಜೂರದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಪೊಟ್ಯಾಶಿಯಂ ಅಂಶವಿದ್ದು ಇದು ರಕ್ತದೊತ್ತಡ ನಿವಾರಣೆಗೆ ಸಹಕಾರಿ.
ಮೂತ್ರಪಿಂಡದ ಸಮಸ್ಯೆ ನಿವಾರಣೆ
ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿರುವವರು ನಿಯಮಿತ ಅಂಜೂರ ಸೇವನೆಯಿಂದ ನಿವಾರಣೆ ಪಡೆಯಬಹುದು. ಇದರಲ್ಲಿರುವ ಆಕ್ಸಲೇಟ್ ಅಂಶವೂ ಮೂತ್ರಪಿಂಡದ ಸಮಸ್ಯೆಯನ್ನು ಪರಿಹರಿಸುತ್ತದೆ.
ಸೌಂದರ್ಯ ವರ್ಧಕ
ಅಂಜೂರವನ್ನು ಸೌಂದರ್ಯ ವರ್ಧಕವಾಗಿ ಕೂಡ ಬಳಸಬಹುದು. ಅಂಜೂರವನ್ನು ಒಂದು ಗಂಟೆ ನೆನೆಸಿಟ್ಟು ರುಬ್ಬಿ ಪೇಸ್ಟ್ ತಯಾರಿಸಿ ಅದಕ್ಕೆ ಎರಡು ಹನಿ ಬಾದಾಮಿ ಎಣ್ಣೆ ಹಾಕಿ ಮುಖಕ್ಕೆ ಹಚ್ಚಿದರೆ ತ್ವಚೆಯ ಕಾಂತಿ ವೃದ್ಧಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Melioidosis:ನಿರ್ಲಕ್ಷಿತ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ಮೆಲಿಯೊಡೋಸಿಸ್
World Osteoporosis Day: ಆಸ್ಟಿಯೊಪೊರೋಸಿಸ್ ಅಥವಾ ಮೂಳೆ ಸವಕಳಿ ಎಂದರೇನು?
Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್ 16
Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ
Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.