Film Censor: ‘ಎಮರ್ಜೆನ್ಸಿ’ ಸಿನಿಮಾಕ್ಕೆ ಕೊನೆಗೂ ಸಿಕ್ಕಿತು ಸೆನ್ಸಾರ್ ಪ್ರಮಾಣಪತ್ರ!
ಎಕ್ಸ್‌ನಲ್ಲಿ ನಟಿ ಕಂಗನಾ ರಣಾವತ್ ಪೋಸ್ಟ್ ಮಾಡಿ ಹೇಳಿದ್ದೇನು?
Team Udayavani, Oct 17, 2024, 8:28 PM IST
ಹೊಸದಿಲ್ಲಿ: ಚಿತ್ರದ ಆರಂಭದಿಂದಲೂ ಹಲವು ವಿವಾದಗಳಿಂದಲೇ ಸುದ್ದಿಯಾಗಿದ್ದ ಬಾಲಿವುಡ್ ನಟಿ, ಹಾಲಿ ಸಂಸದೆ ಕಂಗನಾ ರಣಾವತ್ ಅಭಿನಯದ ‘ಎಮರ್ಜೆನ್ಸಿ’ ಸಿನಿಮಾಕ್ಕೆ ಕೇಂದ್ರಿಯ ಚಲನಚಿತ್ರ ಪ್ರಮಾಣೀಕೃತ ಮಂಡಳಿ ಸೆನ್ಸಾರ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ)ನಿಂದ ಪ್ರದರ್ಶನಕ್ಕೆ ಗುರುವಾರ ಕೊನೆಗೂ ಅನುಮತಿ ದೊರೆತಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ನಟಿ ಕಂಗನಾ ಪೋಸ್ಟ್ ಮಾಡಿ “ನಮ್ಮ ಚಿತ್ರ ಎಮರ್ಜೆನ್ಸಿಗೆ ಸೆನ್ಸಾರ್ ಪ್ರಮಾಣಪತ್ರ ಸ್ವೀಕರಿಸಿದ್ದೇವೆ ಎಂದು ತಿಳಿಸಲು ಸಂತಸವೆನಿಸಿದೆ. ಶೀಘ್ರದಲ್ಲೇ ಚಿತ್ರ ಬಿಡುಗಡೆಯ ದಿನಾಂಕ ಪ್ರಕಟಿಸುತ್ತವೆ. ತಾಳ್ಮೆಯಿಂದ ಕಾದಿದ್ದಕ್ಕೆ, ಬೆಂಬಲಿಸಿದ್ದಕ್ಕೆ ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಅಕ್ಟೋಬರ್ ತಿಂಗಳಾಂತ್ಯ ಅಥವಾ ನವೆಂಬರ್ ಎರಡನೇ ವಾರದಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.
ಪ್ರಮಾಣ ಪತ್ರ ಮಂಡಳಿಯು ಚಿತ್ರಕ್ಕೆ ಸುಮಾರು 13 ದೃಶ್ಯಗಳಿಗೆ ಕತ್ತರಿ ಹಾಗೂ ಬದಲಾವಣೆಗೆ ಸೂಚಿಸಿ ಯು/ಎ ಪ್ರಮಾಣಪತ್ರ ನೀಡಿತ್ತು. ಪರಿಷ್ಕರಣೆ ಸಮಿತಿಯು ಸೂಚಿಸಿದ ಬದಲಾವಣೆಗಳ ಅನುಸರಿಸಿ ಚಿತ್ರ ಬಿಡುಗಡೆಗೆ ಪ್ರಮಾಣಪತ್ರ ಪಡೆಯಲು ನಿರ್ಮಾಪಕರಿಗೆ ತಿಳಿಸಿದೆ. ಕೆಲವು ಹಿಂಸಾತ್ಮಕ ದೃಶ್ಯಗಳ ತೆಗೆದು ಹಾಕಲು ಸೂಚಿಸಿತ್ತು. ಸಂಭಾಷಣೆಯಲ್ಲಿ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆಯ ‘ಸಂತʼ ಎಂದು ಉಲ್ಲೇಖಿಸಲಾಗಿದೆ. ಈ ಚಿತ್ರವು ಸಿಖ್ ಸಮುದಾಯವನ್ನು ಕೆಟ್ಟದಾಗಿ ತೋರಿಸಿದೆ ಎಂದು ಆರೋಪಿಸಿ ಹಲವಾರು ಸಿಖ್ ಗುಂಪುಗಳು ಅನೇಕ ದೂರುಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
We are glad to announce we have received the censor certificate for our movie Emergency, we will be announcing the release date soon. Thank you for your patience and support 🇮🇳
— Kangana Ranaut (@KanganaTeam) October 17, 2024
ಎಮರ್ಜೆನ್ಸಿ’ ಚಿತ್ರದ ಟ್ರೇಲರ್ ವಿವಾದ
ತುರ್ತು ಪರಿಸ್ಥಿತಿಯ ಟ್ರೇಲರ್ ಬಿಡುಗಡೆಯಾದಾಗ ‘ಎಮರ್ಜೆನ್ಸಿ’ ಚಿತ್ರದ ವಿವಾದವು ಆರಂಭವಾಗಿ ಇದು ಖಲಿಸ್ತಾನ್ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಪ್ರತ್ಯೇಕ ಸಿಖ್ ರಾಜ್ಯಕ್ಕಾಗಿ ಇಂದಿರಾ ಗಾಂಧಿಪಕ್ಷ ಬೆಂಬಲಿಸುವ ಭರವಸೆ ತೋರಿಸುತ್ತದೆ. ಇದರಿಂದ ಕುಪಿತಗೊಂಡ ದೆಹಲಿಯ ಶಿರೋಮಣಿ ಅಕಾಲಿದಳವು ಸಿಖ್ಖರ ಖಳನಾಯಕರಂತೆ ಚಿತ್ರಿಸಲಾಗಿದೆ ಎಂಬ ಕಾರಣದಿಂದ ಸಿನಿಮಾ ನಿಷೇಧಕ್ಕೆ ಸಿಬಿಎಫ್‌ಸಿಗೆ ಲೀಗಲ್ ನೋಟಿಸ್ ಕಳುಹಿಸಿತ್ತು.
ದಿವಂಗತ ರಾಜಕಾರಣಿ ಪಾತ್ರದಲ್ಲಿ ಕಂಗನಾ ನಟಿಸುವ ಜೊತೆಗೆ ಅವರೇ ಚಿತ್ರ ನಿರ್ಮಿಸಿ, ನಿರ್ದೇಶನವನ್ನೂ ಮಾಡಿದ್ದಾರೆ. ಚಿತ್ರದಲ್ಲಿ ಶ್ರೇಯಸ್ ತಲ್ಪಾಡೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಾತ್ರ ನಿರ್ವಹಿಸುತ್ತಿದ್ದಾರೆ. ಜೈಪ್ರಕಾಶ್ ನಾರಾಯಣ್ ಪಾತ್ರದಲ್ಲಿ ಅನುಪಮ್ ಖೇರ್ ಕಾಣಿಸಿಕೊಂಡಿದ್ದಾರೆ. ಮಹಿಮಾ ಚೌಧರಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.
ಇಂದಿರಾ ಗಾಂಧಿ ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯ ದಿನಗಳ ಪ್ರಮುಖ ವಿಷಯವಾಗಿಟ್ಟುಕೊಂಡು ‘ಎಮರ್ಜೆನ್ಸಿʼ ಸಿನಿಮಾ ಮಾಡಲಾಗಿದೆ. ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ ಕಂಗನಾ ರಣಾವತ್ ವೇಷಭೂಷಣ ಗಮನ ಸೆಳೆದಿದೆ. ಸಿನಿಮಾ ಬಿಡುಗಡೆ ಆದ ಬಳಿಕವೂ ವಿವಾದ ಹೆಚ್ಚಾಗುವ ಸಾಧ್ಯತೆ ಇದೆ. ಹಲವು ಕರಣಗಳಿಂದಾಗಿ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಸೃಷ್ಟಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.