Financial Policy: ಭದ್ರತೆ ಇಲ್ಲದ ಕೃಷಿ ಸಾಲ ಮಿತಿ 2 ಲಕ್ಷ ರೂ.ಗೆ ಏರಿಕೆ
ಆರ್ಬಿಐ ಹಣಕಾಸು ನೀತಿ ಸಭೆಯಲ್ಲಿ ನಿರ್ಧಾರ
Team Udayavani, Dec 7, 2024, 2:48 AM IST
ಮುಂಬಯಿ: ರೈತರಿಗೆ ಆರ್ಬಿಐ ಸಿಹಿ ಸುದ್ದಿ ನೀಡಿದೆ. ಯಾವುದೇ ಭದ್ರತೆ (ಮೇಲಾಧಾರ) ಇಲ್ಲದೇ ನೀಡಲಾಗುವ ಕೃಷಿ ಸಾಲದ ಮಿತಿಯನ್ನು ಈಗ ಇರುವ 1.6 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗಳಿಗೆ ಏರಿಕೆ ಮಾಡಿರುವುದಾಗಿ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಆರ್ಬಿಐನ 3 ದಿನಗಳ ವಿತ್ತೀಯ ನೀತಿ ಪರಿಶೀಲನ ಸಭೆ ಬಳಿಕ ಅವರು ಮಾತನಾಡಿದರು. ಹಾಲಿ ವಿತ್ತ ವರ್ಷದ ಜಿಡಿಪಿ ಪ್ರಗತಿ ದರದ ನಿರೀಕ್ಷೆಯನ್ನು ಈ ಹಿಂದಿನ ಶೇ.7ರಿಂದ ಶೇ.6.6ಕ್ಕಿಳಿಸಲಾಗಿದೆ.
ಬಡ್ಡಿ ದರ ಬದಲಿಲ್ಲ:
ಸತತ 11ನೇ ಬಾರಿಗೆ ಬಡ್ಡಿ ದರವನ್ನು ಯಥಾಸ್ಥಿತಿ ಯಲ್ಲೇ(ಶೇ.6.5) ಇರಿಸಲು ಆರ್ಬಿಐ ತೀರ್ಮಾನಿಸಿದೆ.
ಡಾಲರ್ ರಹಿತ ವ್ಯಾಪಾರವಿಲ್ಲ: ದಾಸ್ ಸ್ಪಷ್ಟನೆ
ದೇಶದ ವ್ಯಾಪಾರ ಕ್ಷೇತ್ರದಲ್ಲಿ ಅಮೆರಿ ಕದ ಡಾಲರನ್ನು ಹೊರಗಿರಿಸಿ ವಹಿ ವಾಟು ನಡೆಸುವ ಇರಾದೆಯನ್ನು ಭಾರತ ಹೊಂದಿಲ್ಲ. ಆದರೆ ದೇಶದ ವ್ಯಾಪಾರ ಕ್ಷೇತ್ರಕ್ಕೆ ಉಂಟಾಗುವ ಇತರ ಆತಂಕಗಳಿಂದ ಮುಕ್ತಗೊಳಿಸಲು ಆದ್ಯತೆ ನೀಡಲಾಗುತ್ತದೆ ಎಂದು ಆರ್ಬಿಐ ಗವರ್ನರ್ ಹೇಳಿದ್ದಾರೆ. ಬ್ರಿಕ್ಸ್ ರಾಷ್ಟ್ರಗಳು ಡಾಲರ್ಗೆ ಪರ್ಯಾಯ ಕರೆನ್ಸಿ ಹುಡುಕಿದರೆ, ಶೇ.100 ತೆರಿಗೆ ವಿಧಿಸಲಾಗುತ್ತದೆ ಎಂಬ ಅಮೆರಿಕದ ನಿಯೋಜಿತ ಅಧ್ಯಕ್ಷ ಟ್ರಂಪ್ ಬೆದರಿಕೆ ಹಾಕಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
Mangaluru University: ಹೊಸ ಕೋರ್ಸ್ ಆರಂಭಕ್ಕೆ ವಿವಿ ಅನುಮತಿ ಅಗತ್ಯ
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..
Mangaluru: MCC ಬ್ಯಾಂಕ್ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್ಐಆರ್ಗೆ ಹೈಕೋರ್ಟ್ ತಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.