Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!

ಅಗ್ರ ಸ್ಥಾನದಲ್ಲಿರುವ ಬೆಸ್ಕಾಂ 18,095 ಕೋಟಿ ರೂ., ಹೆಸ್ಕಾಂ 10,332 ಕೋಟಿ ರೂ.ಸಾಲ, ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ ಮಾತ್ರ ಲಾಭದಲ್ಲಿ

Team Udayavani, Dec 25, 2024, 7:39 AM IST

electricity

ಬೆಂಗಳೂರು: ಸಾಲ ಮಾಡಿಯಾದರೂ ತುಪ್ಪ ತಿನ್ನಲು ರಾಜ್ಯದ ವಿದ್ಯುತ್‌ ಸರಬರಾಜು ಕಂಪೆನಿ (ಎಸ್ಕಾಂ)ಗಳು ಪಣತೊಟ್ಟಂತಿವೆ. ಅದರ ಫ‌ಲವಾಗಿ ಅಂದಾಜು 42 ಸಾವಿರ ಕೋಟಿ ರೂ. ಸಾಲದ ಸುಳಿಗೆ ಸಿಲುಕಿದ್ದು, ಆ ಹೊರೆಯನ್ನು ಪರೋಕ್ಷವಾಗಿ ದರ ಪರಿಷ್ಕರಣೆ ಮತ್ತಿತರ ರೂಪದಲ್ಲಿ ಗ್ರಾಹಕರು ಹೊರುವಂತಾಗಿದೆ.

ಸ್ವತಃ ಇಂಧನ ಸಚಿವರು ಈಚೆಗೆ ವಿಧಾನಸಭೆಯಲ್ಲಿ ಇಲಾಖೆಯ ಹಣಕಾಸಿನ ಸ್ಥಿತಿಗತಿ ಕುರಿತು ಲಿಖಿತವಾಗಿ ಮಾಹಿತಿ ನೀಡಿದ್ದಾರೆ. ಅದರಂತೆ ಎಸ್ಕಾಂಗಳು ಸರಿಸುಮಾರು 42 ಸಾವಿರ ಕೋಟಿ ರೂ. ಸಾಲದ ಸುಳಿಯಲ್ಲಿವೆ. ಈ ಪೈಕಿ ಬೆಸ್ಕಾಂ 18,095 ಕೋಟಿಯೊಂದಿಗೆ ಸಿಂಹಪಾಲು ಹೊಂದಿದೆ. ಇದರ ಅನಂತರದ ಸ್ಥಾನದಲ್ಲಿ ಹೆಸ್ಕಾಂ ಇದ್ದು, ಅದರ ಸಾಲದ ಮೊತ್ತ 10,332 ಕೋಟಿ ರೂ. ಆಗಿದೆ. ಇದರಿಂದ ಹೊರಬರಲು ಅಲ್ಲಲ್ಲಿ ತನ್ನ ಆಸ್ತಿಗಳನ್ನೇ ಅಡ ಇಡುತ್ತಿರುವುದು ಕಂಡು ಬರುತ್ತಿದೆ.

11 ಕೆವಿ ಓವರ್‌ಹೆಡ್‌ ಮಾರ್ಗಗಳನ್ನು ನೆಲದಡಿ ತೆಗೆದುಕೊಂಡು ಹೋಗುವುದು, ಹೊಸ ಸಾಫ್ಟ್ವೇರ್‌ಗಳ ಅಳವಡಿಕೆ ಮತ್ತು ಮೇಲ್ದರ್ಜೆಗೇರಿಸುವುದು ಸೇರಿ ಮತ್ತಿತರ ನೆಪದಲ್ಲಿ ಎಸ್ಕಾಂಗಳು ಆಗಾಗ್ಗೆ ಸಾವಿರಾರು ಕೋಟಿ ರೂ. ಹೂಡಿಕೆ ಮಾಡಿಕೊಂಡು ಬಂದಿವೆ. ಇದರ ಪರಿಣಾಮ ಸಾಲ ಬೆಟ್ಟದಂತಾಗಿದೆ. ವಿಚಿತ್ರವೆಂದರೆ, ಗೃಹಜ್ಯೋತಿಯಡಿ ಮಾಸಿಕ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ಗೆ ತಗಲುವ ವೆಚ್ಚವನ್ನು ಸಂಪೂರ್ಣವಾಗಿ ಸರಕಾರ ಭರಿಸುತ್ತಿದ್ದು, ಯಾವುದೇ ಬಾಕಿ ಉಳಿಸಿಕೊಂಡಿಲ್ಲ.

ರಾಜ್ಯದ ಶೇ.90ರಷ್ಟು ಗೃಹ ಬಳಕೆದಾರರು ಈ ಯೋಜನೆ ವ್ಯಾಪ್ತಿಗೆ ಒಳಪಡುತ್ತಿದ್ದಾರೆ. ಇನ್ನು ಕೃಷಿ ಪಂಪ್‌ಸೆಟ್‌ಗಳಿಗೆ ತಗಲುವ ವೆಚ್ಚವನ್ನೂ ಸರಕಾರವೇ ನಿಯಮಿತವಾಗಿ ಕೊಡುತ್ತಿದೆ. ಇದರ ಹೊರತಾಗಿಯೂ ಸಾಲದ ಜತೆಗೆ ವಿದ್ಯುತ್‌ ಖರೀದಿಗೆ ಪ್ರತಿಯಾಗಿ ಪಾವತಿಸಬೇಕಾದ ಸಾವಿರಾರು ಕೋಟಿ ಮೊತ್ತವನ್ನು ಎಸ್ಕಾಂಗಳು ಬಾಕಿ ಉಳಿಸಿಕೊಂಡಿವೆ.

ಪ್ರತಿ ವರ್ಷ ವಿದ್ಯುತ್‌ ದರ ಪರಿಷ್ಕರಣೆ ಆಗುತ್ತಿದ್ದು, ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ)ವು ಒಂದೂವರೆ ದಶಕದಿಂದ ಹೆಚ್ಚಳ ಮಾಡುತ್ತ ಬಂದಿದೆ. ಮತ್ತೂಂದೆಡೆ ಇತ್ತೀಚಿನ ವರ್ಷಗಳಲ್ಲಿ ಪ್ರತಿ ತಿಂಗಳು ಇಂಧನ ಖರೀದಿ ಹೊಂದಾಣಿಕೆ ಶುಲ್ಕದ ಹೆಸರಿನಲ್ಲಿ ಆಯಾ ತಿಂಗಳು ಪರಿಷ್ಕರಣೆ ಮಾಡಲಾಗುತ್ತದೆ. ಇನ್ನು ಕೈಗಾರಿಕೆಗಳಿಗೆ ನೀಡಲಾಗುವ ವಿದ್ಯುತ್‌ ಸಹಜವಾಗಿ ಎಸ್ಕಾಂಗಳಿಗೆ ಲಾಭ ತಂದುಕೊಡುತ್ತಿದೆ. ಇದರ ಹೊರತಾಗಿಯೂ ಸಾಲದ ಸುಳಿಯಿಂದ ಎಸ್ಕಾಂಗಳು ಹೊರಬಾರದಿರುವುದು ತಜ್ಞರ ಹುಬ್ಬೇರಿಸುವಂತೆ ಮಾಡಿದೆ.

2024ರ ಮಾರ್ಚ್‌ ಅಂತ್ಯಕ್ಕೆ ವಿವಿಧ ವಿದ್ಯುತ್‌ ಉತ್ಪಾದನ ಕಂಪೆನಿಗಳಿಂದ ವಿದ್ಯುತ್‌ ಖರೀದಿ ಮಾಡಿ ಬಾಕಿ ಉಳಿಸಿಕೊಂಡಿರುವ ಕಂಪೆನಿಗಳ ಪೈಕಿ ಬೆಸ್ಕಾಂ 8,360 ಕೋಟಿ ರೂ. ಬಾಕಿ ಉಳಿಸಿಕೊಳ್ಳುವ ಮೂಲಕ ಅಗ್ರಸ್ಥಾನದಲ್ಲಿದೆ. ಹೆಸ್ಕಾಂ 5,434.89 ಕೋಟಿ ರೂ., ಜೆಸ್ಕಾಂ 3,121.16 ಕೋಟಿ ರೂ., ಸೆಸ್ಕ್ 2,634.30 ಕೋಟಿ ರೂ. ಮತ್ತು ಮೆಸ್ಕಾಂ 1,414 ಕೋಟಿ ರೂ. ವಿದ್ಯುತ್‌ ಖರೀದಿ ಬಾಕಿ ಉಳಿಸಿಕೊಂಡಿವೆ ಎಂದು ಸ್ವತಃ ಇಂಧನ ಸಚಿವ ಕೆ.ಜೆ. ಜಾರ್ಜ್‌ ಈಚೆಗೆ ಸದನಕ್ಕೆ ಸಲ್ಲಿಸಿದ ಉತ್ತರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಮೆಸ್ಕಾಂ ಲಾಭದಲ್ಲಿರುವ ಏಕೈಕ ಕಂಪೆನಿ
2024ರ ಮಾರ್ಚ್‌ ಅಂತ್ಯಕ್ಕೆ ರಾಜ್ಯದ ಐದೂ ಎಸ್ಕಾಂಗಳಲ್ಲಿ ಲಾಭದಲ್ಲಿರುವ ಏಕೈಕ ಕಂಪೆನಿ ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಮೆಸ್ಕಾಂ) ಆಗಿದೆ. ಅದು 59.19 ಕೋಟಿ ಲಾಭ ಗಳಿಸಿದೆ. ಉಳಿದಂತೆ ಬೆಸ್ಕಾಂ ಅತಿಹೆಚ್ಚು 8,369 ಕೋಟಿ ನಷ್ಟದಲ್ಲಿದ್ದರೆ, ಹೆಸ್ಕಾಂ 9,898 ಕೋಟಿ ನಷ್ಟದಲ್ಲಿರುವುದು ಕಂಡುಬಂದಿದೆ. ಇದರ ಹೊರತಾಗಿಯೂ ರಾಜ್ಯದ ಎಸ್ಕಾಂಗಳು ರಾಷ್ಟ್ರಮಟ್ಟದಲ್ಲಿ ಉತ್ತಮ ಮಟ್ಟದ ಕಂಪೆನಿಗಳ ಸೂಚ್ಯಂಕ ಪಡೆದಿವೆ!

ಈ ಎಲ್ಲ ಬೆಳವಣಿಗೆಗಳ ನಡುವೆ ಎಸ್ಕಾಂಗಳು ಮುಂದಿನ ಮೂರು ವರ್ಷಗಳಿಗಾಗಿ ವಿದ್ಯುತ್‌ ದರ ಹೆಚ್ಚಳಕ್ಕೆ ಈಚೆಗೆ ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿವೆ. ಯೂನಿಟ್‌ಗೆ ಕನಿಷ್ಠ 65 ಪೈಸೆಯಿಂದ ಗರಿಷ್ಠ 95 ಪೈಸೆವರೆಗೆ ಪರಿಷ್ಕರಣೆ ಮಾಡುವಂತೆ ಮನವಿ ಸಲ್ಲಿಸಿದ್ದು, ಶೀಘ್ರದಲ್ಲೇ ಈ ಸಂಬಂಧದ ವಿಚಾರಣೆ ಆರಂಭಗೊಳ್ಳಲಿದೆ.

ಮೂಗಿನ ಜತೆಗೆ ರಾಜ್ಯದ ಎಸ್ಕಾಂಗಳ ಮೂಗುತಿಯೂ ಭಾರವಾಗಿದೆ!
ಹೌದು, ಎಸ್ಕಾಂಗಳ ಮೇಲಿರುವ ಸಾಲದ ಹೊರೆ ಜತೆಗೆ ಕೇಂದ್ರ ಸರಕಾರದ ವಿಳಂಬ ಪಾವತಿ ಸರ್ಚಾರ್ಜ್‌ (ಎಲ್‌ಪಿಎಸ್‌) ಯೋಜನೆ ಅಳವಡಿಸಿಕೊಂಡಿದ್ದು, ಅದಕ್ಕೆ ಅನುಗುಣವಾಗಿ 4,747 ಕೋಟಿ ರೂ. ಅಸಲು ಬಾಕಿ ಇದೆ. ಇದರ ಬಡ್ಡಿ ಮತ್ತು ಸರ್ಚಾರ್ಜ್‌ ಸರಿಸುಮಾರು ಸೇರಿ 8 ಸಾವಿರ ಕೋಟಿ ರೂ. ಆಗಿದೆ. ಅದನ್ನು ವಿವಿಧ ಕಂತುಗಳಲ್ಲಿ ಪಾವತಿಸುವುದಾಗಿ ಇಲಾಖೆ ತಿಳಿಸಿದೆ.

-ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

Uttarakhand: ಕಂದಕಕ್ಕೆ ಬಿದ್ದ ಬಸ್‌ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

YearEnder 2024: ಪ್ರಧಾನಿ ಮೋದಿ ಅವರ ರಾಜಕೀಯ ಜೀವನದಲ್ಲಿ 2024 ಯಾಕೆ ಮಹತ್ವದ ವರ್ಷವಾಗಿದೆ?

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

Kollywood: ಕಾರ್ತಿಕ್‌ ಸುಬ್ಬರಾಜ್‌ ಚಿತ್ರಕ್ಕೆ ʼರೆಟ್ರೋʼ ಆದ ಸೂರ್ಯ; ಮಸ್ತ್‌ ಆಗಿದೆ ಮಾಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

ಗಾಂಧಿ ಭಾರತ್‌ ಕಾರ್ಯಕ್ರಮದ ಬಗ್ಗೆ ಶೆಟ್ಟರ್‌ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ

15-dk

Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ

14-

Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್

Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ

Haveri: ಕಾರುಗಳ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

lorry-bike

Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

2

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.