Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು

ಟಾಟ್‌ ಭಾಷೆಯು ಕ್ಯಾಸ್ಪಿಯನ್‌ ಸಮುದ್ರದ ಸುತ್ತಲಿನ ಟಾಟ್‌ ಜನರು ಮಾತನಾಡುವ ಪರ್ಷಿಯನ್‌ ಭಾಷೆ

Team Udayavani, Nov 30, 2024, 11:53 AM IST

Fire Temple: ಅಜರ್ಬೈಜಾನ್‌ನಲ್ಲಿದೆ ಪುರಾತನ ಹಿಂದೂ ದೇವಾಲಯ-ಬೆಂಕಿಯುಗುಳುವ ಸಪ್ತರಂಧ್ರಗಳು

ಅಜರ್ಬೈಜಾನ್‌ ಎನ್ನುವ ಮುಸ್ಲಿಂ ದೇಶದಲ್ಲಿ ಪುರಾತನ ಹಿಂದೂ ದೇವಾಲಯವೊಂದಿದೆ. ವಿಶೇಷ ಏನೆಂದರೆ, ಶತಶತಮಾನಗಳಿಂದ ಈ ದೇವಸ್ಥಾನ ಇನ್ನೂ ಹಾಗೆಯೇ ಉಳಿದುಕೊಂಡು ಬಂದಿದೆ. ಇನ್ನೊಂದು ವಿಶೇಷವೇನೆಂದರೆ, ಈ ಪ್ರದೇಶ ಯುನೆಸ್ಕೋದ ವಿಶ್ವದ ಪಾರಂಪಾರಿಕ ತಾಣಗಳ ಪಟ್ಟಿಯಲ್ಲಿ ಸೇರಿರುವುದು.

ಅಜರ್ಬೈಜಾನ್‌ ದೇಶಕ್ಕೆ ಬರುವ ಅತೀಹೆಚ್ಚಿನ ಪ್ರವಾಸಿಗರು ತಪ್ಪದೇ ಭೇಟಿ ನೀಡುವ ಪ್ರದೇಶ ಇದು. ಅತೆಷ್ಗಾ ಎನ್ನುವ ಈ ದೇವಾಲಯವನ್ನು ಅಗ್ನಿ ದೇವಾಲಯ (Fire temple) ಎಂದು ಕರೆಯುತ್ತಾರೆ. ಈ ಸ್ಥಳವನ್ನು ಕೇವಲ ಹಿಂದೂ ಮಾತ್ರವಲ್ಲದೆ, ಸಿಕ್ಖರು, ಜೋರಾಷ್ಟ್ರಿಯನ್‌ ಪಾರ್ಸಿಗಳು ಸಹ ಪವಿತ್ರ ಸ್ಥಳವೆಂದು ಪರಿಗಣಿಸಿ ಅಂದಿನ ಕಾಲದಲ್ಲಿ ಪೂಜಿಸುತ್ತಿದ್ದರು.

ದೇವಾಲಯದ ಪ್ರಾಂಗಣದಲ್ಲಿ ಗಣೇಶ ಮತ್ತು ನಟರಾಜನ ವಿಗ್ರಹವಿದೆ. ವಿಗ್ರಹಗಳ ಜತೆಯಲ್ಲಿ 14 ಸಂಸ್ಕೃತ (ದೇವನಾಗರಿ), ಎರಡು ಪಂಜಾಬಿ (ಗುರುಮುಖಿ) ಮತ್ತು ಒಂದು ಪರ್ಷಿಯನ್‌ ಶಿಲಾ ಶಾಸನಗಳಿವೆ. ಒಂದು ಶಾಸನದಲ್ಲಿ ಮೊದಲ ಸಾಲು ಶ್ರೀ ಗಣೇಶಾಯ ನಮಃ ಎಂದು ಪ್ರಾರಂಭವಾಗುತ್ತದೆ. ಇನ್ನೊಂದು ಶಾಸನದಲ್ಲಿ ಸಂಸ್ಕೃತದಲ್ಲಿ ಭಗವಾನ್‌ ಶಿವನ ಕುರಿತಾಗಿ ಬರೆದ ಸಾಲುಗಳಿವೆ. ಮತ್ತೊಂದು ಶಾಸನವು ಜ್ವಾಲಾದೇವಿ ಕುರಿತಾಗಿ ಬರೆಯಲಾಗಿದೆ.

ಈ ದೇವಾಲಯವನ್ನು ಅಗ್ನಿ ದೇವಾಲಯ (Fire temple) ಎಂದು ಯಾಕೆ ಕರೆಯುತ್ತಾರೆ ಎಂದರೆ, ಇಲ್ಲಿರುವ ಸಪ್ತ ರಂಧ್ರಗಳಲ್ಲಿ ಸಹಸ್ರಾರು ವರ್ಷಗಳಿಂದ ಸತತವಾಗಿ ಬೆಂಕಿಯುರಿಯುತ್ತಿದೆ. ಜೋರಾಷ್ಟ್ರಿಯನ್‌ ಪಾರ್ಸಿಗಳು ಮತ್ತು ಹಿಂದೂಗಳು ಪವಿತ್ರವೆಂದು ಭಾವಿಸಿರುವ ಅಗ್ನಿಯನ್ನು ಇವರು ಶತಮಾನಗಳಿಂದ ಪೂಜಿಸಿಕೊಂಡು ಬಂದಿದ್ದಾರೆ. ಬೆಂಕಿಯುಗುಳುವ ಈ ರಂಧ್ರಗಳಿರುವ ಜಾಗವನ್ನು ಇಲ್ಲಿನ ಭಾಷೆಯಲ್ಲಿ ಬಾಕು ಅತೆಷ್ಗಾ (Ateshgah of Baku) ಎಂದು ಹೇಳುತ್ತಾರೆ.

ಪರ್ಷಿಯನ್‌ ಭಾಷೆಯಲ್ಲಿ “ಅತೇಶ್‌’ ಎಂದರೆ ಬೆಂಕಿ ಮತ್ತು “ಗಾಹ್‌’ ಎಂದರೆ ಹಾಸಿಗೆ ಎಂದರ್ಥ. ಅತೇಷ್ಗಾ ಒಂದು ಕಾಲದಲ್ಲಿ ನೈಸರ್ಗಿಕ ಅನಿಲ ಕ್ಷೇತ್ರವನ್ನು ಹೊಂದಿತ್ತು, ಈ ನೈಸರ್ಗಿಕ ಅನಿಲವೇ ಈ ಬೆಂಕಿಗೆ ಕಾರಣವಾಗಿದೆ. ಈ ಸ್ಥಳವನ್ನು ಪವಿತ್ರವೆಂದು ಪರಿಗಣಿಸಲಾಗಿದೆ ಎಂದು 7ನೇ ಶತಮಾನದ ಅರ್ಮೇನಿಯನ್‌ ಭೂಗೋಳಶಾಸ್ತ್ರಜ್ಞ ಅನನಿಯಾ ಶಿರಕಾಟ್ಸೆ ಅವರ ಪುಸ್ತಕ ಅಶ್ಗರತ್‌ ಸುಯಟ್ಸ್‌ ದಾಖಲಿಸಿದ್ದಾರೆ. ದೇವಾಲಯವಿರುವ ಪಟ್ಟಣವನ್ನು ಸುರಖಾನಿ ಎಂದು ಕರೆಯಲಾಗುತ್ತದೆ, ಟಾಟ್‌ ಭಾಷೆಯಲ್ಲಿ ಇದರರ್ಥ “ರಂಧ್ರವಿರುವ ಕಾರಂಜಿ’ ಎಂದು. ಟಾಟ್‌ ಭಾಷೆಯು ಕ್ಯಾಸ್ಪಿಯನ್‌ ಸಮುದ್ರದ ಸುತ್ತಲಿನ ಟಾಟ್‌ ಜನರು ಮಾತನಾಡುವ ಪರ್ಷಿಯನ್‌ ಭಾಷೆಯಾಗಿದೆ.

ಇನ್ನು ಶಾಸನಗಳ ಬಗ್ಗೆ ಹೇಳುವುದಾದರೆ, ಅಬ್ರಹಾಂ ವ್ಯಾಲೆಂಟೈನ್‌ ವಿಲಿಯಮ್ಸ… ಜಾಕ್ಸನ್‌ ಅವರ ಪುಸ್ತಕವಾದ “ಫ್ರಮ್‌ ಕಾನ್‌ಸ್ಟಾಂಟಿನೋಪಲ್‌ ಟು ದ ಹೋಮ್‌ ಆಫ್‌ ಓಮರ್‌ಖಯ್ನಾಮ್‌’ (From Constantinople to the home of Omar Khayyam) ಪ್ರಕಾರ, ಶಾಸನಗಳನ್ನು 1668 ಮತ್ತು 1816 AD ನಡುವೆ ಕೆತ್ತಿಸಲಾಗಿದೆ. ಆರ್ಮೇನಿಯನ್‌ ವಿದ್ವಾಂಸರ ಪ್ರಕಾರ ಈ ದೇವಾಲಯ ಪ್ರಾಕಾರವು ಎರಡನೇ ಶತಮಾನದಲ್ಲಿ ಪರ್ಶಿಯನ್‌ ದೊರೆಗಳ ಕಾಲಮಾನದಲ್ಲಿ ನಿರ್ಮಿಸಿರಬಹುದು ಎಂದು ಹೇಳಲಾಗಿದೆ. ಪರ್ಶಿಯನ್‌ ಸಸಾನಿಯನ್‌ ಸಾಮ್ರಾಜ್ಯದ ಸ್ಥಾಪಕ ಮೊದಲನೇ ಅರ್ದಾಶಿರ್‌(180-242 AD) ಈ ಕಟ್ಟಡವನ್ನು ನಿರ್ಮಿಸಿರಬಹುದೆಂದು ಹೇಳಿದ್ದಾರೆ.

ಅಜರ್ಬೈಜಾನ್‌ ದೇಶವು ಅಂದಿನ ಸಿಲ್ಕ್‌ ರೋಡ್‌ನ‌ ಭಾಗವಾಗಿದ್ದರಿಂದ ದಕ್ಷಿಣ ಏಶಿಯಾದ ಹಿಂದೂ ವ್ಯಾಪಾರಿಗಳು ಮುಂದೆ ಇದನ್ನ ಅಭಿವೃದ್ಧಿ ಪಡಿಸಿ ಜ್ವಾಲಾದೇವಿಯನ್ನು ಆರಾಧಿಸುತ್ತಿದ್ದರು. ಜ್ವಾಲಾ ದೇವಿಯೆಂದು ಕರೆಯಲು ಕಾರಣವೇನೆಂದರೆ, ಶತಮಾನಗಳಿಂದ ಇಲ್ಲಿನ ಸಪ್ತ ರಂಧ್ರಗಳು ಸತತವಾಗಿ ಬೆಂಕಿಯುಗುಳುತ್ತಿವೆ. ಇಲ್ಲಿ ದೊರೆಯುತ್ತಿರುವ ನೈಸರ್ಗಿಕ ಅನಿಲದಿಂದ ಒಂದು ದಿನವೂ ಈ ಬೆಂಕಿ ಆರುವುದಿಲ್ಲ.

ಇಸ್ಲಾಂ ಧರ್ಮ ಪರ್ಶಿಯಾಗೆ ಏಳನೇ ಶತಮಾನದಲ್ಲಿ ಆಗಮಿಸಿತು, ಅಲ್ಲಿಯವರೆಗೂ ಈ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಾರ್ಸಿಗಳು ವಾಸಿಸುತ್ತಿದ್ದರು. ಕ್ರಮೇಣ ಇಸ್ಲಾಂ ಧರ್ಮದ ಪ್ರಾಬಲ್ಯ ಹೆಚ್ಚುತ್ತಿದ್ದಂತೆ ಪಾರ್ಸಿಗಳು ಕಡಿಮೆಯಾದರೂ ಸಹ ಹತ್ತನೇ ಶತಮಾನದವರೆಗೂ ಈ ಸ್ಥಳದ ಸುತ್ತಮುತ್ತ ವಾಸಿಸುತ್ತಿದ್ದರು ಎಂದು ಇಲ್ಲಿನ ಅನೇಕ ದಾಖಲೆಗಳಲ್ಲಿ ಪ್ರಸ್ತಾವಿಸಲಾಗಿದೆ. ಈ ಪ್ರಾಂತದಲ್ಲಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಿದಂತೆ, ಅಳಿದುಳಿದ ಜೋರಾಷ್ಟ್ರಿಯನ್‌ ಪಾರ್ಸಿಗಳು ಭಾರತದ ಕಡೆ ವಲಸೆ ಬಂದರು. ಏಳೆಂಟು ಶತಮಾನಗಳು ಪಾರ್ಸಿಗಳು ಈ ಕಡೆ ಮರಳಿ ಬಂದ ಬಗ್ಗೆ ಯಾವುದೇ ದಾಖಲೆಗಳು ಇಲ್ಲದೆ ಇದ್ದರೂ, ಹದಿನೇಳನೇ ಶತಮಾನದ ಅಂತ್ಯ ಭಾಗದಲ್ಲಿ ಮತ್ತೆ ಈ ಪ್ರಾಂತಕ್ಕೆ ಬರಲಾರಂಭಿಸಿದರು.

ಪಾಶ್ಚಾತ್ಯ ದೇಶಗಳಿಗೆ ಸಂಪರ್ಕಿಸುವ ಸಿಲ್ಕ್ ರೂಟ್‌ನ ಭಾಗವಾಗಿದ್ದ ಈ ಪ್ರದೇಶಕ್ಕೆ ಹಿಂದೂ ಮತ್ತು ಸಿಕ್ಖ್ ವ್ಯಾಪಾರಿಗಳು ವ್ಯಾಪಾರಕ್ಕಾಗಿ ಬರಲಾರಂಭಿಸಿದರು. 1683ರಿಂದ 1880ರ ವರೆಗೂ ದೊರೆತ ಹಲವಾರು ದಾಖಲೆಗಳಲ್ಲಿ ಈ ಉಲ್ಲೇಖವಿದೆ. ಭಾರತದಲ್ಲಿದ್ದ ಪಾರ್ಸಿಗಳು 1880ರ ವರೆಗೆ ಭಾರತದಿಂದ ಪಾರ್ಸಿ ಪುರೋಹಿತರನ್ನು ಈ ಪ್ರದೇಶಕ್ಕೆ ಕಳುಹಿಸಿದ್ದರು ಎನ್ನುವ ಪುರಾವೆ ದೊರೆತಿದೆ. 1925ರಲ್ಲಿ ಡಾ| ಸರ್‌ಜೀವಂಜಿ ಜಮ್ಶೆಡ್ಜಿ ಮೋದಿ ಎಂಬ ಪಾರ್ಸಿ ಪಾದ್ರಿಯು ಅತೇಷ್ಗಾಗೆ ಭೇಟಿ ನೀಡಿ, ಈ ದೇವಾಲಯವು ಹಿಂದೂ ಧಾರ್ಮಿಕ ಲಕ್ಷಣಗಳನ್ನು ಹೊಂದಿದೆ ಎಂದು ತೀರ್ಮಾನಿಸಿದ್ದರು.

ಇಲ್ಲಿ ಯಥೇಚ್ಚವಾಗಿ ದೊರೆಯುತ್ತಿದ್ದ ನೈಸರ್ಗಿಕ ಅನಿಲಕ್ಕಾಗಿ, ಅಂದಿನ ರಷ್ಯಾ ಒಕ್ಕೂಟವು ಇಲ್ಲಿ ನೈಸರ್ಗಿಕ ಅನಿಲ ಸ್ಥಾವರವನ್ನು ನಿರ್ಮಿಸಿ ದಶಕಗಳ ಕಾಲ ಸತತವಾಗಿ ಅನಿಲವನ್ನು ಹೊರತೆಗೆದರು. 1969ರ ವರೆಗೆ ನೈಸರ್ಗಿಕವಾಗಿ ಉರಿಯುತ್ತಿದ್ದ ಜ್ವಾಲೆಯು ಸೋವಿಯತ್‌ ರಷ್ಯಾದ ಅತಿರೇಕದಿಂದ ಬರಿದಾಯಿತು. ಈಗ ಬಾಕು ನಗರದಿಂದ ಗ್ಯಾಸ್‌ ಪೈಪ್‌ಲೈನ್‌ ಮುಖಾಂತರ ಉರಿಯುತ್ತಿರುವ ಬೆಂಕಿಗೆ ಇಂಧನವನ್ನು ಸರಬರಾಜು ಮಾಡಲಾಗುತ್ತಿದೆ. ಅತೇಷ್ಗಾವನ್ನು 1998ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವನ್ನಾಗಿ ಪಟ್ಟಿಮಾಡಿದೆ.

ದೇಶದ ಭೌಗೋಳಿಕ ವಿವರ:
ಈ ರಾಷ್ಟ್ರವನ್ನು ಅಧಿಕೃತವಾಗಿ ಅಜೆರ್ಬೈಜಾನ್‌ ಗಣರಾಜ್ಯ ( Republic of Azerbaijan) ಎಂದು ಕರೆಯಲಾಗುತ್ತದೆ. ಅಜರ್ಬೈಜಾನ್‌ ಪಶ್ಚಿಮ ಏಷ್ಯಾ ಮತ್ತು ಪೂರ್ವ ಯುರೋಪ್‌ ಗಳ ಸಮ್ಮಿಲನದ ಜಾಗದಲ್ಲಿ ಇರುವ ಒಂದು ದೇಶ. ಪೂರ್ವಕ್ಕೆ ಕ್ಯಾಸ್ಪಿಯನ್‌ ಸಮುದ್ರ, ಉತ್ತರಕ್ಕೆ ರಷ್ಯಾ, ಪಶ್ಚಿಮಕ್ಕೆ ಟರ್ಕಿ ಮತ್ತು ಅರ್ಮೇನಿಯ, ಈಶಾನ್ಯಕ್ಕೆ ಜಾರ್ಜಿಯ ಮತ್ತು ದಕ್ಷಿಣಕ್ಕೆ ಇರಾನ್‌ ದೇಶದೊಂದಿಗೆ ಗಡಿಯನ್ನು ಹೊಂದಿದೆ.

ಸೋವಿಯತ್‌ ರಷ್ಯಾದ ಒಂದು ಭಾಗವಾಗಿದ್ದ ಈ ರಾಷ್ಟ್ರ 1991ರಲ್ಲಿ ಸ್ವತಂತ್ರವಾಯಿತು. ಈ ದೇಶದ ವಿಸ್ತೀರ್ಣ ಹೇಳಬೇಕೆಂದರೆ, ಉತ್ತರ ದಕ್ಷಿಣವಾಗಿ 385 ಕಿ.ಮೀ. ಪೂರ್ವ ಪಶ್ಚಿಮವಾಗಿ 475 ಕಿ.ಮೀ. ಇರುವ ಇದರ ಒಟ್ಟು ವಿಸ್ತೀರ್ಣ 86,600 ಚ.ಕಿ.ಮೀ. ಭೌಗೋಳಿಕವಾಗಿ ರಷ್ಯಾ, ಟರ್ಕಿ ಮತ್ತು ಇರಾನ್‌ ದೇಶಗಳಿಂದ ಆವರಿಸಲ್ಪಟ್ಟಿರುವ ಈ ದೇಶವು, ಸಾಂಸ್ಕೃತಿಕವಾಗಿ ಈ ದೇಶಗಳ ಸಂಸ್ಕೃತಿಯನ್ನು ಮೇಳೈಸಿಕೊಂಡಿದೆ. ಅಂದಾಜು ಒಂದು ಕೋಟಿ ಜನಸಂಖ್ಯೆಯನ್ನು ಈ ದೇಶಹೊಂದಿದೆ, ದೇಶದ ಬಹುಪಾಲು ಜನರು ಇಸ್ಲಾಂ ಧರ್ಮವನ್ನ ಪಾಲಿಸುತ್ತಾರೆ. ಬಹಳಷ್ಟು ಜನರು ಟರ್ಕಿ ಮೂಲದವರು, ತಲಾ ಶೇ.8ರಷ್ಟು ಜನರು ರಷ್ಯಾ ಮತ್ತು ಆರ್ಮೇನಿಯ ಮೂಲದವರು. ಜನಸಂಖ್ಯೆಯಲ್ಲಿ ಶೇ.52 ಗ್ರಾಮೀಣ ಭಾಗದವರು. ಈ ದೇಶವು ಅರೆ ಮರುಭೂಮಿಯ ವಾಯುಗುಣವನ್ನು ಹೊಂದಿದೆ. ಬೇಸಿಗೆ ಅತೀ ಉಷ್ಣದಿಂದ ಕೂಡಿದ್ದು ಚಳಿಗಾಲವು ತಂಪಾಗಿರುತ್ತದೆ. ಕುವೈಟ್‌, ಇರಾಕ್‌, ಇರಾನ್‌ ದೇಶಗಳು ಇಂತಹದ್ದೇ ವಾಯುಗುಣವನ್ನು ಹೊಂದಿವೆ. ಕುರಾ ಮತ್ತು ಅರಾಸ್‌ ನದಿಗಳು ಇಲ್ಲಿನ ಪ್ರಮುಖ ನದಿಗಳು.

ಭಾಷೆ
ಅಜೆರ್ಬೈಜಾನ್‌ನ ಪ್ರಾಥಮಿಕ ಮತ್ತು ಅಧಿಕೃತ ಭಾಷೆ ಅಜೆರ್ಬೈಜಾನಿ ಆಗಿದೆ, ಇದು ತುರ್ಕಿಶ್‌ ಭಾಷೆ ಎಂದೇ ಹೇಳಬಹುದು ಅಷ್ಟರ ಮಟ್ಟಿಗೆ ಇದು ಆಧುನಿಕ ತುರ್ಕಿಕ್‌ ಭಾಷೆಗೆ ಬಹುತೇಕ ಹೋಲುತ್ತದೆ. ಟರ್ಕಿ ದೇಶದ ಜತೆಗೆ ನಿಕಟ ಸಂಬಂಧವನ್ನು ಈ ದೇಶ ಹೊಂದಿದೆ. ಈ ಅಜೆರ್ಬೈಜಾನಿ ಭಾಷೆಯು ಟರ್ಕಿಶ್‌, ತುರ್ಕಮೆನ್‌ ಮತ್ತು ಗಗೌಜ್‌ ಸೇರಿದಂತೆ ನೈಋತ್ಯ ತುರ್ಕಿಕ್‌ ಭಾಷಾ ಕುಟುಂಬದ ಒಗುಜ್‌ ಶಾಖೆಯ ಒಂದು ಕುಡಿ ಎಂದು ಹೇಳಬಹುದು.

ಹಿಂದೂ ದೇವಾಲಯದ ಜತೆಗೆ ಅಜೆರ್ಬೈಜಾನ್‌ ತನ್ನ ಇನ್ನಿತರ ತಾಣಗಳಿಗೂ ಹೆಸರುವಾಸಿ. ವಿವಿಧ ದೇಶಗಳಿಂದ ಹಲವು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿನ ಪ್ರವಾಸಿ ತಾಣಗಳ ವಿಶೇಷತೆಯ ಬಗ್ಗೆ ಮುಂದಿನ ಸಂಚಿಕೆಯಲ್ಲಿ.

* ಪಿ.ಎಸ್‌.ರಂಗನಾಥ, ಮಸ್ಕತ್‌

ಟಾಪ್ ನ್ಯೂಸ್

Rural-india-utsat

ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ

CKB-Sudhakar

Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್‌

BYv-SMG

ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್‌ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ

CHN-Social

Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು

Priyank-Kharghe

ನಾವು ಬೀದಿಗಿಳಿದರೆ ಬಿಜೆಪಿಯವರು ಮನೆ ಖಾಲಿ ಮಾಡಬೇಕು: ಸಚಿವ ಪ್ರಿಯಾಂಕ್‌

SMG-Meggan

Shivamogga: ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬಾಣಂತಿ ಸಾವು

letter-Gove

Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya:ಹಲವು ರೋಗ ನಿವಾರಕ; ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kejiriwal

Delhi Election: ಆಪ್‌ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್‌ ಮೈತ್ರಿ: ಕೇಜ್ರಿವಾಲ್‌

Rural-india-utsat

ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ

CKB-Sudhakar

Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್‌

BYv-SMG

ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್‌ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ

CHN-Social

Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.