Test Cricket: ಪ್ರವಾಸಿ ಐರ್ಲೆಂಡ್ ತಂಡದ ಎದುರು ಲಂಕೆಗೆ ಇನ್ನಿಂಗ್ಸ್ ಜಯ
Team Udayavani, Apr 19, 2023, 7:50 AM IST
ಗಾಲೆ: ಪ್ರವಾಸಿ ಐರ್ಲೆಂಡ್ ತಂಡದೆದುರಿನ ಮೊದಲ ಟೆಸ್ಟ್ ಪಂದ್ಯವನ್ನು ಶ್ರೀಲಂಕಾ ಇನ್ನಿಂಗ್ಸ್ ಹಾಗೂ 280 ರನ್ನುಗಳಿಂದ ಗೆದ್ದುಕೊಂಡಿದ್ದು ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಶ್ರೀಲಂಕಾದ 6 ವಿಕೆಟಿಗೆ 591 ರನ್ ಡಿಕ್ಲೇರ್xಗೆ ಉತ್ತರವಾಗಿ ಐರ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಪಂದ್ಯದ ಮೂರನೇ ದಿನವಾದ ಮಂಗಳವಾರ 7 ವಿಕೆಟಿಗೆ 117 ರನ್ನಿನಿಂದ ಆಟ ಆರಂಭಿಸಿ ಕೇವಲ 143 ರನ್ನಿಗೆ ಆಲೌಟಾಗಿತ್ತು. ಪ್ರಭತ್ ಜಯಸೂರ್ಯ 52 ರನ್ನಿಗೆ 7 ವಿಕೆಟ್ ಕಿತ್ತು ಐರ್ಲೆಂಡಿನ ಕುಸಿತಕ್ಕೆ ಕಾರಣರಾದರು. ಮೊದಲ ಇನ್ನಿಂಗ್ಸ್‌ನಲ್ಲಿ 448 ರನ್ ಹಿನ್ನಡೆ ಪಡೆದ ಐರ್ಲೆಂಡ್ ಫಾಲೋ ಆನ್ ಪಡೆಯಿತು.
ಐರ್ಲೆಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಬ್ಯಾಟಿಂಗ್ ಕುಸಿತಕ್ಕೆ ಒಳಗಾಯಿತು. ಪ್ರಭತ್ ಜಯಸೂರ್ಯ ಮತ್ತು ರಮೇಶ್ ಮೆಂಡಿಸ್ ನಿಖರ ದಾಳಿಗೆ ಐರ್ಲೆಂಡ್ ತತ್ತರಿಸಿ 163 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು. ಜಯಸೂರ್ಯ ಮತ್ತೆ 3 ವಿಕೆಟ್ ಕಿತ್ತರೆ ಮೆಂಡಿಸ್ 76 ರನ್ನಿಗೆ 4 ವಿಕೆಟ್ ಹಾರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.